Breaking News

ಹುಬ್ಬಳ್ಳಿ ಸುದ್ದಿ

ಕನ್ನಡ ವಿರೋಧಿಗಳ ವಿರುದ್ದ ಸೆಟೆದು ನಿಂತಿದ್ದು ನಂಜೇಗೌಡ- ಶೋಭಾ ಕರಂದ್ಲಾಜೆ

ಹುಬ್ಬಳ್ಳಿ: ಉರಿಗೌಡ ನಂಜೇಗೌಡ ಧರ್ಮದ ಉಳುವಿಗಾಗಿ ಮತ್ತು ಹಿಂದೂಗಳ ನರಮೇಧ ಖಂಡಿಸಿ ಹೋರಾಟ ಮಾಡಿದವರು. ಉರಿಗೌಡ ನಂಜೇಗೌಡ ಬಗ್ಗೆ ನಮ್ಮ ಕರ್ನಾಟಕಕ್ಕೆ ಹಾಗೂ ನಮ್ಮ ಸಮಾಜಕ್ಕೆ ಹೆಮ್ಮೆ ಇದೆ. ಕೊಡವರ ನರಮೇಧ ಮಾಡಿದ ಮತ್ತು ಹಿಂದೂಗಳನ್ನ ಕೊಂದು ಹಾಕಿದ ಕನ್ನಡ ವಿರೋಧಿ ಟಿಪ್ಪು. ಅಂತವರ ವಿರುದ್ದ ಸೆಟೆದು ನಿಂತಿದ್ದು ಉರಿಗೌಡ ನಂಜೇಗೌಡ ‌‌ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಇನ್ನೂ ಸುಮರ್ಣ ಮಂಡ್ಯ ಪುಸ್ತಕವನ್ನು 2006 ರಲ್ಲಿ …

Read More »

ಮೋದಿ ಅವರಿಂದ ಭಾರತ ಅಭಿವೃದ್ಧಿ ಹೊಂದಿದ್ದು -ಪಿಯೋಷ ಗೋಹಲ್

ಹುಬ್ಬಳ್ಳಿ: ಪ್ರಣಾಳಿಕೆ ಸಲಹಾ ಅಭಿಯಾನ ಅಂಗವಾಗಿ ನಗರದ ಹೆಬಸೂರು ಭವನದಲ್ಲಿ ನಡೆದ ಕೈಗಾರಿಕೋದ್ಯಮಿಗಳ ಸಮಾವೇಶದಲ್ಲಿ ಕೈಗಾರಿಕಾ, ವಾಣಿಜ್ಯ ಹಾಗೂ ಆಹಾರ ಮತ್ತು ನಾಗರಿಕ ಸಚಿವ ಪಿಯೋಷ ಗೋಹಲ್ ಭಾಷಣ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಕ್ರಾಂತಿ ಆಗಿದೆ. ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವಷ್ಟು ಅಭಿವೃದ್ಧಿ ಆಗಿದೆ ಎಂದರು.

Read More »

ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತೇನೆ- ಲಿಂಬಿಕಾಯಿ

ಹುಬ್ಬಳ್ಳಿ: ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದು, ನಾನು ಯಾವುದೇ ಕರಾರು ಇಲ್ಲದೇ ಕಾಂಗ್ರೆಸ್ ಸೇರಿದ್ದೇನೆ. ರಾಜ್ಯದಲ್ಲಿ ಮೂರು ವರ್ಷದಿಂದ ಜನ ವಿರೋಧಿ ಸರ್ಕಾರ ಇದೆ. ನನಗೆ ಬಹಳ ನೋವಾಗಿದೆ ಈ ನಿಟ್ಟಿನಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೇನೆ ಎಂದು ಮೋಹನ್ ಲಿಂಬಿಕಾಯಿ ಹೇಳಿದರು. 2008 ರಲ್ಲಿ ನಾನು ಪದವೀಧರ ಕ್ಷೇತ್ರದಿಂದ ಗೆದ್ದಿದ್ದೆ. ಭಾರತೀಯ ಜನತಾ ಪಾರ್ಟಿ ಮುಖಂಡರು ಎಲ್ಲರೂ ಸೇರಿ ನನ್ನ ಚುನಾವಣೆಗೆ ನಿಲ್ಲಿಸಿದ್ದರು. 2013 ರಲ್ಲಿ ಯಡಿಯೂರಪ್ಪ ಕೆಜೆಪಿ …

Read More »

ಹುಬ್ಬಳ್ಳಿಯಲ್ಲಿ ಗ್ರಾಮದೇವತೆಯರ ಪಲ್ಲಕ್ಕಿ ಉತ್ಸವ

ಹುಬ್ಬಳ್ಳಿ: ನಗರದ ಯಲ್ಲಾಪುರ ದೇಸಾಯಿ ಓಣಿಯಲ್ಲಿರುವ ದ್ಯಾಮವ್ವದೇವಿ ಮತ್ತು ಮರಿಯಮ್ಮ ದೇವಿ ಗ್ರಾಮದೇವತೆಯರ ಮರು ಪ್ರಾಣ ಪ್ರತಿಷ್ಠಾಪನೆಯನ್ನು ಅಲ್ಲಿನ ಗುರು ಹಿರಿಯರು ಮತ್ತು ಶ್ರೀ ಗ್ರಾಮದೇವತೆ ಉತ್ಸವ ಸಮಿತಿ ಅತಿ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದಾರೆ. ಶ್ರೀ ದುರ್ಗವ್ವದೇವಿ, ದ್ಯಾಮವ್ವದೇವಿ, ಮರಿಯಮ್ಮದೇವಿಯವರ ಪುರ ಪ್ರವೇಶ ಪಲ್ಲಕ್ಕಿ ಉತ್ಸವದಲ್ಲಿ ದೇವತೆಯರನ್ನು ಅಲಂಕರಿಸಿ ಮೆರವಣಿಗೆ ಮಾಡಿದ್ದು, ಈ ಮೆರವಣಿಗೆಯಲ್ಲಿ ಜೋಡೆತ್ತು, ಚಂಡವಾದ್ಯ ಬಳಗ, ಡೊಳ್ಳು ಕುಣಿತ, ಕರಡಿ ಮಜಲು, ಸಾವಿರಾರು ಮಹಿಳೆಯರು ಯುವತಿಯರಿಂದ ಬೃಹತ್ …

Read More »

ಬೆಳಗಾವಿಯಲ್ಲಿ ಬೃಹತ್ ಯುವ ಕ್ರಾಂತಿ ಸಮಾವೇಶ- ರಾಹುಲ್ ಗಾಂಧಿ ಆಗಮನ

ಹುಬ್ಬಳ್ಳಿ : 20 ರಂದು ರಾಹುಲ್ ಗಾಂಧಿ ಬೆಳಗಾವಿಗೆ ಬೃಹತ್ ಯುವ ಕ್ರಾಂತಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಜೊತೆಗೆ ಸಮಾವೇಶದಲ್ಲಿ ಸುರ್ಜೇವಾಲಾ,ವೇಣುಗೋಪಾಲ, ಸಿದ್ದರಾಮಯ್ಯ ಡಿಕೆಶಿವಕುಮಾರ್, ಪರಮೇಶ್ವರ,ಮುನಿಯಪ್ಪ,ಎಮ್ ಬಿ ಪಾಟೀಲ್ ಭಾಗಿಯಾಗಲಿದ್ದಾರೆ. ಸುಮಾರು 2 ಲಕ್ಷ ಜನ ಕಾರ್ಯಕ್ರಮದಲ್ಲಿ ಸೇರಲಿದ್ದು,ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ. ರಾಹುಲ್ ಗಾಂಧಿ ಅವರು ರಾಜ್ಯದ ಯುವ ಜನತೆಗೆ ಸಂದೇಶ ಕೊಡಲಿದ್ದಾರೆ. ಮತ್ತು ಭಾರತ ಜೋಡೋ ಯಾತ್ರೆ ವೇಳೆ ಯುಕವರು ಅನ್ಯಾಯದ ಬಗ್ಗೆ ರಾಹುಲ್ ಗಾಂಧಿಗೆ …

Read More »

ಬಿಜೆಪಿ ಸರ್ಕಾರ ದೇಶವನ್ನು ಗೂಂಡಾ ರಾಜ್ಯವನ್ನಾಗಿ ಮಾಡುವ ಸರ್ಕಾರ -ಸಲೀಂ ಅಹ್ಮದ

ಹುಬ್ಬಳ್ಳಿ: ಡಬಲ್ ಇಂಜಿನ್ ಬಿಜೆಪಿ ಸರ್ಕಾರ ರೌಡಿಗಳನ್ನು ಪೋಷಿಸುವ ಹಾಗೂ ದೇಶವನ್ನು ಗೂಂಡಾ ರಾಜ್ಯವನ್ನಾಗಿ ಮಾಡುವ ಸರ್ಕಾರ. ಕ್ರಿಮಿನಲ್ ಗಳನ್ನು ಪ್ರಧಾನಮಂತ್ರಿ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿಯವರು ಕೈ ಮುಗಿಯುವಂತೆ ಮಾಡಿರುವುದು ನಿಜಕ್ಕೂ ವಿಪರ್ಯಾಸಕರ ಸಂಗತಿಯಾಗಿದೆ. ಬಿಜೆಪಿ ಸುಮಾರು 23 ಸಾವಿರ ರೌಡಿಗಳಿಗೆ ಕ್ಲೀನ್ ಚೀಟ್ ಕೊಡುವ ಮ‌ೂಲಕ ದೇಶವನ್ನು ಹಾಳು ಮಾಡಲು ಹೊರಟಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ ಹೇಳಿದರು. ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, …

Read More »

ಜ್ಯುವೇಲರಿ ಪ್ರದರ್ಶನ ಮತ್ತು ಮಹಿಳೆಯರಿಗೂ ಇಷ್ಟವಾಗುವಂತಹ.

ಹುಬ್ಬಳ್ಳಿ: ಓರ್ರಾ‌ ಫೈನ್ ಜ್ಯುವೇಲರಿ ವತಿಯಿಂದ ನಗರದ ಕೊಪ್ಪಿಕರ ರಸ್ತೆಯಲ್ಲಿರುವ ಮೆಟ್ರೋಪಾಲಿಸ್ ಹೊಟೇಲ್ ನಲ್ಲಿ ಆಯೋಜಿಸಲಾಗಿದ್ದ ಜ್ಯುವೇಲರಿ ಪ್ರದರ್ಶನ ಹಾಗೂ ಮಾರಾಟ ಮೇಳ ಉದ್ಘಾಟನೆಯನ್ನು ಫ್ಯಾಶನ್ ಡಿಸೈನರ್ ಫಿರಡೋಸ್ ಹನ್ಸಿ ಹಾಗೂ ಕಿಮ್ಸ್ ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕಿ ಡಾ. ವೀಣಾ ಕಾರಟಗಿ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ಓರ್ರಾ ಫೈನ್ ಜ್ಯುವೇಲರಿ ಅವರು ಹುಬ್ಬಳ್ಳಿಯಲ್ಲಿ ಆಕರ್ಷಕ ಆಭರಣಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಹಮ್ಮಿಕೊಂಡಿದ್ದು ಖುಷಿಯ ಸಂಗತಿಯಾಗಿದೆ. ವೈವಿಧ್ಯಮಯ …

Read More »

ಹುಬ್ಬಳ್ಳಿಯಲ್ಲಿ ಅಪ್ಪು ಹುಟ್ಟು ಹಬ್ಬ ಆಚರಣೆ :ಪುನೀತ್ ಪುತ್ಥಳಿ ನಿರ್ಮಿಸಲು ಆಗ್ರಹ

ಹುಬ್ಬಳ್ಳಿ: ಇಂದು ಕರ್ನಾಟಕದ ಯುವ ರತ್ನ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಹುಟ್ಟು ಹಬ್ಬದ ಅಂಗವಾಗಿ ಹುಬ್ಬಳ್ಳಿಯ ನಗರದ ಚನ್ನಮ್ಮ ಸರ್ಕಲ್ ಬಳಿ ಆಟೋ ಚಾಲಕರು ಬೃಹತ್ ಕೇಕ್ ಕತ್ತರಿಸಿ ಆಚರಣೆ ಮಾಡಿದರು. ಉತ್ತರ ಕರ್ನಾಟಕದ ಆಟೋ ಚಾಲಕರ ಸಂಘ ಅಪ್ಪು ಹುಟ್ಟು ಹಬ್ಬ ಆಚರಣೆ ಮಾಡಿ,ಆಟೋದಲ್ಲಿ ಪುನೀತ್ ರಾಜ್‍ಕುಮಾರ್ ಅವರ ಭಾವಚಿತ್ರದ ಕಟೌಟ್ ಹಾಕಿ, ಚನ್ನಮ್ಮ ಸರ್ಕಲ್ ನಿಂದ ಪಾಲಿಕೆ ವರೆಗೆ ಮೆರವಣಿಗೆ ಮಾಡಿದರು. ಹುಬ್ಬಳ್ಳಿಯಲ್ಲಿ ಪುನೀತ್ …

Read More »

ಯುವಕನ ಮೇಲೆ ಹಲ್ಲೆ: ಆರೋಪಿಗಳನ್ನು ಏಕೆ ಅರೆಸ್ಟ್ ಮಾಡ್ತಿಲ್ಲ

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನ ಮೇಲೆ ಯುವಕರ ಗುಂಪೊಂದು ಹಲ್ಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಡೆದಿದೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಹುಬ್ಬಳ್ಳಿಯ ಲಿಡಕರ್ ಕಾಲೋನಿ ನಿವಾಸಿಯಾಗಿರೋ ವಿಠಲ್ ಎಂಬ ಯುವಕನ ಮೇಲೆ ಮಾರ್ಚ್ 12 ರಾತ್ರಿ ಯುವಕರ ಗ್ಯಾಂಗ್ ಹಲ್ಲೆ ಮಾಡಿದೆ. ಇಂಡಸ್ಟ್ರೀಸ್ ಏರಿಯಾದಲ್ಲಿ ಮದ್ಯಪಾನ ಮಾಡುತ್ತಾ ಕುಳತಿದ್ದ ಯುವಕರ ಗ್ಯಾಂಗ್. ಈ ವೇಳೆ ಅವಾಚ್ಯ ಶಬ್ದಗಳಿಂದ ಮಾತನಾಡುತ್ತಿದ್ದಾಗ ವಿಠಲ ಇಲ್ಲಿ ಯಾಕೆ ಬಾಯಿ …

Read More »

ನಿವೃತ್ತ ನೌಕರರ ಜೀವನದ ಜೊತೆ ಸರ್ಕಾರದ ಚೆಲ್ಲಾಟ

ಹುಬ್ಬಳ್ಳಿ: ಸರ್ಕಾರ ಸಾರಿಗೆ ಇಲಾಖೆ ನೌಕರರ ಬೇಡಿಕೆ ಇಡೇರಿಸುದಿರಲಿ, ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತರಾದವರಿಗೂ ಗ್ರ್ಯಾಚುಟಿ ಹಣ ಕೊಟ್ಟಿಲ್ಲ. ಸಾರಿಗೆ ಇಲಾಖೆಯ ನಡುವಳಿಕೆಯಿಂದ ಬೇಸತ್ತು ಸಾರಿಗೆ ನಿವೃತ್ತ ನೌಕರನೋರ್ವ ಇದೀಗ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದಾನೆ‌. ಒಂದು ಕಡೆ ಸರ್ಕಾರಕ್ಕೆ ಶಾಪ ಹಾಕ್ತಿರೋ ನಿವೃತ್ತ ಸಾರಿಗೆ ನೌಕರ.. ಇನ್ನೊಂದು ಕಡೆ ನಿವೃತ್ತಿ ನಂತರದ ಗ್ರ್ಯಾಚುಟಿ ಹಣಕ್ಕಾಗಿ ಮೋದಿಗೆ ಬರೆದಿರೋ ಪತ್ರ. ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು ಹುಬ್ಬಳ್ಳಿಯಲ್ಲಿ. ಗೋಕುಲ್ ರಸ್ತೆಯ …

Read More »