Breaking News

ಮಳೆಯ ಆರ್ಭಟಕ್ಕೆ ವಾಹನ ಸಂಚಾರಕ್ಕೂ ಅಡ್ಡಿ

ರಾಮನಗರ :- ನಗರದಾದ್ಯಂತ ಸುರಿದ ದಾರಾಕಾರ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿತ್ತು.ಇಂದು ಸುರಿದ ಬಿರುಗಾಳಿ ಸಹಿತ ಮಳೆಯಿಂದಾಗಿ‌ ರಸ್ತೆಯಲ್ಲಿಯೇ ನೀರು ಹರಿಯಲಾರಂಬಿಸಿದ್ದಿರಂದ ಕೆಲಕಾಲ ಬಸ್ ಸಂಚಾರ ಕೂಡ ಅಸ್ತವ್ಯಸ್ತವಾಗಿತ್ತು. ನಗರ ಪ್ರದೇಶದಲ್ಲಿಯೇ ಬಿರುಗಾಳಿಗೆ ಎರಡು ಮರಗಳು ನೆಲಕ್ಕುರುಳಿದವು. ಇನ್ನೂ ಕೆಂಗಲ್ ಬಳಿ ಬಿದ್ದ ಮಳೆಗೆ ವಿದ್ಯುತ್ ಕಂಬ ನೆಲಕ್ಕುರುಳಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಇಂದು ವಾಹನ ದಟ್ಟಣೆ ಹೆಚ್ಚಾಗಿದ್ದು ಮಳೆಯ ಆರ್ಭಟಕ್ಕೆ ವಾಹನ ಸಂಚಾರಕ್ಕೂ ಅಡ್ಡಿಯಾದ ಘಟನೆ ನಡೆದಿದೆ. ಇನ್ನು ಬೈಕ್ ಸವಾರರು ಸೇರಿದಂತೆ ವಾಹನ ಸವಾರರು ಮಳೆಯಲ್ಲಿ ವಾಹನ ಚಲಾಯಿಸಲಾಗದೆ ಅಲ್ಲಲ್ಲಿ ವಾಹನ ನಿಲ್ಲಿಸಿದ್ದು ಸರ್ವೆ ಸಾಮಾನ್ಯವಾಗಿತ್ತು.

Share News

About admin

Check Also

ಭೀಕರ ಅಪಘಾತ : ಒಂದೇ ಕುಟುಂಬದ ನಾಲ್ವರು ಸಾವು

ಗದಗ:-ಬೆಳ್ಳಂಬೆಳಗ್ಗೆ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ಹೊರವಲಯದಲ್ಲಿ ಸಾರಿಗೆ ಬಸ್- ಕಾರು ನಡುವೆ ಅಪಘಾತ ಸಂಭವಿಸಿ ಒಂದೇ ಕುಟುಂಬದ ನಾಲ್ವರು …

Leave a Reply

Your email address will not be published. Required fields are marked *