BigTv News
June 2, 2025
Breaking News, Crime
ಕಾರು ನಿಲ್ಲಿಸಿ ಮಿಕ್ಸಿ ರಿಪೇರಿ ಮಾಡಿಸಲು ಹೋದಾಗ, ಕಾರಿನ ಗ್ಲಾಸ್ ಒಡೆದು 11.5 ಲಕ್ಷ ರೂ. ನಗದು ಹಣ ಕದ್ದು ಪರಾರಿಯಾಗಿದ್ದಾರೆ.ಹಣ ಕಳೆದುಕೊಂಡ ವ್ಯಕ್ತಿ ಅತೀಕ್ ರೆಹಮಾನ್ ಆಗಿದ್ದಾರೆ. ಅತೀಕ್ ರೆಹಮಾನ್ ದಾಬಸ್ ಪೇಟೆಯಲ್ಲಿ ಲಾಜಿಸ್ಟಿಕ್ಸ್ ವ್ಯವಹಾರ ನಡೆಸುತ್ತಿದ್ದು, ತಮ್ಮ ಅಣ್ಣನ ಸೂಚನೆಯಂತೆ ಬ್ಯಾಂಕ್‌ನಿಂದ ಹಣವನ್ನು ತೆಗೆದು ತಂದಿದ್ದರು.ಪೊಲೀಸರು ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ವಿಸ್ತೃತವಾಗಿ ಪರಿಶೀಲಿಸುತ್ತಿದ್ದು, ಕಳ್ಳರನ್ನು ಪತ್ತೆ ಹಚ್ಚಲು ವಿಶೇಷ ತಂಡ ರಚಿಸಲಾಗಿದೆ. ನಗರದಲ್ಲಿ ಈ ರೀತಿಯ ಧೈರ್ಯದ …
Read More »
BigTv News
June 2, 2025
Breaking News, Crime
ದೊಡ್ಡಪನ್ನಾಂಡಹಳ್ಳಿಯಲ್ಲಿ ನಡೆದಿದ್ದ ಎರಡು ಸೀಮೆ ಹಸು ಮತ್ತು ನಾಲ್ಕು ಕುರಿ ಕಳವು ಪಕರಣವನ್ನು ಡಿವೈಎಸ್‌ಪಿ ಎಸ್.ಪಾಂಡುರಂಗ ಮತ್ತು ಕಾಮಸಮುದ್ರ ಸಿಪಿಐ ಜಿ.ಸಿ.ನಾರಾಯಣಸ್ವಾಮಿ ಮಾರ್ಗದರ್ಶನದಲ್ಲಿ ಪಿಎಸ್‌ಐ ಕಿರಣ್‌ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.ಆಂದ್ರಪ್ರದೇಶ ಚಿತ್ತೂರು ಜಿಲ್ಲೆಯ ಸುರೇಶ್ (34), ತಮಿಳುನಾಡು ಕೃಷ್ಣಗಿರಿ ಜಿಲ್ಲೆಯ ಸತೀಶ್ (34), ರೂಪೇಶ್ (28), ವೆಂಕಟರಮಣಪ್ಪ(34)ಎಂಬುವವರನ್ನು ಕಳವು ಪ್ರಕರಣದಲ್ಲಿ ಬಂಧಿಸಲಾಗಿದೆ. ಬಂಧಿತರಿಂದ ಮೂರು ಸೀಮೆ ಹಸು, ನಾಲ್ಕು ಕುರಿ, 23 ಹಂದಿ ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನ ವಶಪಡಿಸಿಕೊಳ್ಳಲಾಗಿದೆ.
Read More »
BigTv News
June 2, 2025
Breaking News, Crime
ರಸ್ತೆ ಬದಿಯಲ್ಲಿ ನಿಂತಿದ್ದ ದ್ವಿಚಕ್ರ ವಾಹನಕ್ಕೆ ಲಾರಿಯೊಂದು ಢಿಕ್ಕಿ ಹೊಡೆದು ಪರಾರಿಯಾಗಿದ್ದು, ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ಶನಿವಾರ ಮಧ್ಯರಾತ್ರಿ ಬಂಟರ ಭವನದ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದೆ. ಹಾಸನ ಮೂಲದ ಅರುಣ್ ಕುಮಾರ್ ಮತ್ತು ಸ್ಥಳೀಯರಾದ ಸುನಿಲ್ ಕುಮಾರ್ ಗಾಯಗೊಂಡವರು.ಬಳಿಕ ಲಾರಿಯನ್ನು ಪತ್ತೆಹಚ್ಚಲಾಗಿದ್ದು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »
BigTv News
June 2, 2025
Breaking News, Crime
ನನ್ನ ಎರಡನೇ ಮಗನಾದ ಕೃಷ್ಣ ಪ್ರಸಿದ್ಧ ಕೀರ್ತನಕಾರ ಆಗಿದ್ದು, ಕುಟುಂಬದಲ್ಲಿ ನಡೆದ ಸಣ್ಣ ಘಟನೆಗೆ ಆಕ್ರೋಶಗೊಂಡು ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾನೆ’ ಎಂದು ವಿಶ್ವನಾಥ ಹೇಳಿದ್ದಾರೆ.ಭಾಲ್ಕಿ ತಾಲ್ಲೂಕಿನ ಕೆಸರ ಜವಳಗಾ ಗ್ರಾಮದ ವಿಶ್ವನಾಥ ಮೇತ್ರೆ ಅವರು ಮಗ ಹಾಗೂ ಕೀರ್ತನಕಾರ ಕೃಷ್ಣ ಮಹಾರಾಜ ರಾಮಯಣಿ ವಿರುದ್ಧ ಧನ್ನೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Read More »
BigTv News
June 2, 2025
Breaking News, Crime
ಬಾಲಕಿಯ ಕಾಲು ಮುರಿತವಾಗಿತ್ತು. ಉತ್ತಮ ಚಿಕಿತ್ಸೆ ಸಿಗುತ್ತದೆ ಎಂಬ ನಿರೀಕ್ಷೆಯೊಂದಿಗೆ ಪೋಷಕರು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಮೂಳೆ ಸರಿಯಾಗಬೇಕು ಎಂದರೆ ಆಪರೇಷನ್ ಮಾಡಲೇಬೇಕು ಎಂದು ವೈದ್ಯರು ಸಲಹೆ ನೀಡಿದ್ದರು. ಅದರಂತೆ ಸಾನ್ವಿಗೆ 29ರ ರಾತ್ರಿಯೇ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ನಂತರ ಬಾಲಕಿ ಚೇತರಿಸಿಕೊಂಡಿದ್ದು, ಪೋಷಕರ ಜೊತೆಯೂ ಮಾತನಾಡಿದ್ದಳು. ತಾನು ಬೇಗ ಚೇತರಿಸಿಕೊಳ್ಳುವುದಾಗಿ ಪೋಷಕರಿಗೂ ಧೈರ್ಯ ಹೇಳಿದ್ದಾಳೆ. ಆದರೆ, ಶನಿವಾರ ರಾತ್ರಿ ಇದ್ದಕ್ಕಿದ್ದಂತೆ ಬಾಲಕಿ ಮೃತಪಟ್ಟಿದ್ದಾಳೆ. ಬಾಲಕಿ ಪೋಷಕರ …
Read More »
BigTv News
June 2, 2025
Breaking News, Crime
ಟ್ರಾಫಿಕ್ನಲ್ಲಿ ಸ್ಕೂಟಿಗೆ ಹಿಂಬದಿಯಿಂದ ಆಟೋ ಟಚ್ ಆಗುತ್ತಿದ್ದಂತೆ ಚಾಲಕ ಮತ್ತು ಮಹಿಳೆ ನಡುವೆ ಗಲಾಟೆ ಶುರುವಾಗಿದೆ. ಈ ವೇಳೆ ಇಬ್ಬರ ನಡುವೆ ಜಗಳ ಅತಿರೇಕಕ್ಕೆ ತಿರುಗಿದ್ದು ಮಾತಿಗೆ ಮಾತು ಬೆಳೆದು ಆಟೋ ಚಾಲಕನಿಗೆ ಮಹಿಳೆ ಚಪ್ಪಲಿಯಿಂದ ಹೊಡೆದಿದ್ದಾಳೆ.ಮಹಿಳೆ ವಿರುದ್ಧ FIR ದಾಖಲಾಗಿದೆ. ಈಗ ಮಹಿಳೆಯನ್ನ ಪೊಲೀಸರು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸುತ್ತಿದ್ದಾರೆ.
Read More »
BigTv News
June 2, 2025
Breaking News, Crime
ಮದ್ಯ ಸೇವನೆ ಚಟದಿಂದ ಕೋಟ ಪರಿವರ್ತನಾ ಪುನರ್ ವಸತಿ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಕೋಟೇಶ್ವರದ ಕುಮಾರ(48) ಎಂಬವರು ಮಾನಸಿಕ ಖಿನ್ನತೆಗೆ ಒಳಗಾಗಿ ರಾತ್ರಿ ಆಸ್ಪತ್ರೆಯ ವಾರ್ಡ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »
BigTv News
June 2, 2025
Breaking News, Crime
ಶಿರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಕುರ್ಕಾಲು ಗ್ರಾಮದ ಶಂಕರಪುರ ಅಶ್ವತ್ಥಕಟ್ಟೆಯ ಬಳಿ ಮಟ್ಕಾ ಹಣ ಸಂಗ್ರಹಿಸುತ್ತಿದ್ದ ವಿಟಲ ದೇವಾಡಿಗನನ್ನು ಪೊಲೀಸರು ಮೇ 31ರಂದು ಬಂಧಿಸಿ ಆತನ ವಶದಲ್ಲಿದ್ದ ಚೀಟಿ ಮತ್ತು ನಗದು 1,200 ರೂ.ಗಳನ್ನು ವಶಕ್ಕೆ ಪಡೆದಿದ್ದಾರೆ.
Read More »
BigTv News
June 2, 2025
Breaking News, Crime
ಬಿಎಂಟಿಸಿ ಚಾಲಕನೊಬ್ಬ ಎದುರು ನಿಂತ ಯುವತಿ ಮೇಲೆ ಬಸ್ ಹತ್ತಿಸಿಕೊಂಡು ಹೋಗಲು ಮುಂದಾದ ಘಟನೆ ಬೆಳಕಿಗೆ ಬಂದಿದ್ದು, ದುರ್ವರ್ತನೆ ತೋರಿದ ಚಾಲಕನನ್ನು ಅಮಾನತು ಮಾಡಲಾಗಿದೆ. ಚಂದ್ರಾ ಲೇಔಟ್ ಡಿಪೋ ನಂಬರ್ 17 ಡಿಪೋಗೆ ಸೇರಿದ ಬಸ್ (ಕೆಎ 57 ಎಫ್2046) ಚಾಲಕ ಪ್ರಶಾಂತ್ ಅಮಾನತುಗೊಂಡಿದ್ದಾರೆ.
Read More »
BigTv News
June 2, 2025
Breaking News, Crime
ಟ್ಯಾಂಕರ್ ವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ದುರಸ್ತಿ ಮಾಡುತ್ತಿದ್ದ ಕಾರ್ಮಿಕರಿಗೆ ಢಿಕ್ಕಿ ಹೊಡೆದು ಉರುಳಿಬಿದ್ದ ಪರಿಣಾಮ ಮೂವರು ಕಾರ್ಮಿಕರು ಮೃತಪಟ್ಟ ಘಟನೆ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರ ಕಿತ್ತೂರು ತಾಲೂಕಿನ ಇಟಗಿ ಕ್ರಾಸ್ ನಲ್ಲಿ ನಡೆದಿದೆ.ಕಲಬುರಗಿ ಜಿಲ್ಲಯ ಚಿಂಚೋಳಿ ತಾಲೂಕಿನ ಶಿರೋಳಿ ಗ್ರಾಮದ ರಾಮಚಂದ್ರ ಜಾಧವ್ (45), ಅವರ ಪುತ್ರ ಮಹೇಶ್ (18) ಹಾಗೂ ರಾಮಣ್ಣ (38) ಎಂಬವರು ಮೃತಪಟ್ಟವರು. ಲಕ್ಷ್ಮೀಬಾಯಿ, ಅನುಶ್ರೀ, ಭೀಮಾಬಾಯಿ ಎಂಬವರು ಗಾಯಗೊಂಡಿದ್ದಾರೆ. ಟ್ಯಾಂಕರ್ …
Read More »