ದೊಡ್ಡಪನ್ನಾಂಡಹಳ್ಳಿಯಲ್ಲಿ ನಡೆದಿದ್ದ ಎರಡು ಸೀಮೆ ಹಸು ಮತ್ತು ನಾಲ್ಕು ಕುರಿ ಕಳವು ಪಕರಣವನ್ನು ಡಿವೈಎಸ್‌ಪಿ ಎಸ್.ಪಾಂಡುರಂಗ ಮತ್ತು ಕಾಮಸಮುದ್ರ ಸಿಪಿಐ ಜಿ.ಸಿ.ನಾರಾಯಣಸ್ವಾಮಿ ಮಾರ್ಗದರ್ಶನದಲ್ಲಿ ಪಿಎಸ್‌ಐ ಕಿರಣ್‌ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.ಆಂದ್ರಪ್ರದೇಶ ಚಿತ್ತೂರು ಜಿಲ್ಲೆಯ ಸುರೇಶ್ (34), ತಮಿಳುನಾಡು ಕೃಷ್ಣಗಿರಿ ಜಿಲ್ಲೆಯ ಸತೀಶ್ (34), ರೂಪೇಶ್ (28), ವೆಂಕಟರಮಣಪ್ಪ(34)ಎಂಬುವವರನ್ನು ಕಳವು ಪ್ರಕರಣದಲ್ಲಿ ಬಂಧಿಸಲಾಗಿದೆ. ಬಂಧಿತರಿಂದ ಮೂರು ಸೀಮೆ ಹಸು, ನಾಲ್ಕು ಕುರಿ, 23 ಹಂದಿ ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನ ವಶಪಡಿಸಿಕೊಳ್ಳಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

