Breaking News

Crime

ಮಂಡ್ಯ: ಮನೆ ಕಳ್ಳತನ ₹48 ಲಕ್ಷ ಮೌಲ್ಯದ ಚಿನ್ನಾಭರಣ ವಶ.

ಮಹಿಳೆಯರಿಂದ ಚಿನ್ನಾಭರಣ ದೋಚಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿ, ಅಂದಾಜು ₹48 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳು, ಕಾರು, ಸ್ಕೂಟರ್‌ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.ಮನೆಯಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ವಿಜಯನಗರದ ಜೆ.ಸಯ್ಯದ್‌ ಅಹಮದ್‌ (43) ಮತ್ತು ಬೆಂಗಳೂರಿನ ಕೆ.ಆರ್‌.ಪುರಂ, ದೇವಸಂದ್ರದ ತಸ್ಲೀಂ ಪಾಷಾ (43) ಈ ಇಬ್ಬರನ್ನು ಮಳವಳ್ಳಿ ಗ್ರಾಮಾಂತರ ಠಾಣೆಯ …

Read More »

ಬೆಳ್ತಂಗಡಿ :ಠೇವಣಿ ಇಟ್ಟಿದ್ದ 40 ಕೋಟಿ ರೂ. ನಷ್ಟು ಹಣ ವಾಪಸ್‌ ನೀಡದೆ ವಂಚನೆ!

ಸಂತೆಕಟ್ಟೆ ಸಮೀಪ ಮುಖ್ಯ ಶಾಖೆ ಹೊಂದಿರುವ ಶ್ರೀ ರಾಮ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯಲ್ಲಿ ಗ್ರಾಹಕರು ಠೇವಣಿ ಇಟ್ಟಿದ್ದ ಸುಮಾರು 40 ಕೋಟಿ ರೂ. ನಷ್ಟು ಹಣವನ್ನು ವಾಪಸ್‌ ನೀಡದೆ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು. ಈ ಬಗ್ಗೆ 2021ರಿಂದ 2024ರ ವರೆಗೆ ಸೊಸೈಟಿಯಲ್ಲಿ ಜವಾಬ್ದಾರಿ ವಹಿಸಿಕೊಂಡಿದ್ದ 14 ಜನರ ಮೇಲೆ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದೊಡ್ಡ ಮೊತ್ತದ ಹಗರಣ ವಾಗಿರುವ ಕಾರಣ ತನಿಖೆಯ ಹೊಣೆಗಾರಿಕೆ ಸಿಐಡಿ ವಿಭಾಗಕ್ಕೆ …

Read More »

ಬೆಂಗಳೂರು : ಪತ್ನಿಯ ಮೇಲೆ ಟಾಯ್ಲೆಟ್ ಆಸಿಡ್ ಸುರಿದ ಪತಿ!!

ಫೋನ್ ವಾಲ್ಯೂಮ್ ಕಡಿಮೆ ಮಾಡಲು ಹೇಳಿದ್ದಕ್ಕೆ ಕುಡಿದ ಮತ್ತಿನಲ್ಲಿದ್ದ ಗಂಡನ ಮೇಲೆ ಮಹಿಳೆಯೊಬ್ಬಳ ಸುರಿದ ಘಟನೆ ಮೇ 19 ರಂದು ನಡೆದಿದ್ದು, ಬೆಂಗಳೂರಿನ ಎನ್‌ಎಂಎಚ್ ಲೇಔಟ್ ಪ್ರದೇಶದಲ್ಲಿ ನಡೆದಿತ್ತು.ಸಂತ್ರಸ್ತೆ ನೋವಿನಿಂದ ಕಿರುಚಿದಾಗ ಆತ ಸ್ಥಳದಿಂದ ಪರಾರಿಯಾಗಿದ್ದಾನೆ. ನೆರೆಹೊರೆಯವರು ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು. ಅವರ ಸ್ಥಿತಿ ಪ್ರಸ್ತುತ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆಕೆಯ ಪತಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ‘ವಿವರವಾದ ತನಿಖೆ ನಡೆಯುತ್ತಿದೆ. ಆರೋಪಿಗಳನ್ನು ಶೀಘ್ರದಲ್ಲೇ …

Read More »

ಬೈಂದೂರು: 200 ಚೀಲ ಅಡಿಕೆ ಕಳವು!

ಮಸೂದ್ ಪಟೇಲ್ ಎಂಬವರು ಸುಮಾರು 200 ಚೀಲ ಒಣಗಿಸಿದ ಸಿಪ್ಪೆಅಡಿಕೆಯನ್ನು ಪ್ಯಾಸ್ಟಿಕ್ ಚೀಲದಲ್ಲಿ ಹಾಕಿ ಚೀಲ ಮಾಡಿ ಗೋಡೌನ್‌ನಲ್ಲಿ ಇಟ್ಟಿದ್ದು, ಮೇ 15ರಿಂದ ಮೇ 22ರ ಮಧ್ಯಾವದಿಯಲ್ಲಿ ಗೋಡೌನ್ ಬೀಗ ಮುರಿದು ಒಳನುಗ್ಗಿದ ಕಳ್ಳರು, 200 ಚೀಲ ಒಣಗಿಸಿದ ಸಿಪ್ಪೆಅಡಿಕೆಯನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ.ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಹೈದ್ರಾಬಾದ್ :ಮೂರು ವರ್ಷದ ಬಾಲಕಿ ಮೇಲೆ ಅತ್ಯಾಚಾರ!

ಪೋಷಕರೊಂದಿಗೆ ಬಾಲಕಿ ಸಂಬಂಧಿಕರ ಮನೆಗೆ ಹೋಗಿದ್ದಾಗ ಈ ಘಟನೆ ನಡೆದಿದೆ. ಬಾಲಕಿ ಮನೆಯ ಹೊರಗೆ ಆಟವಾಡುತ್ತಿದ್ದಾಗ ಆಕೆಯನ್ನು ನಂಬಿಸಿ ಕರೆದೊಯ್ದ ದುರುಳ, ಅತ್ಯಾಚಾರವೆಸಗಿ ಬಳಿಕ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದ.ಪೋಷಕರು ಬಾಲಕಿ ಕಾಣದಿದ್ದಾಗ ಆತಂಕಗೊಂಡು ಹುಡುಕಾಟ ನಡೆಸಿದಾಗ ಮನೆಯಬಳಿ ಪೊದೆಯಲ್ಲಿ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ಪ್ರಕರಣ ಸಂಬಂಧ ರಹಮತ್ ಉಲ್ಲಾ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸಿದ್ದಾರೆ.

Read More »

ಹೊಸದಿಲ್ಲಿ :ಬಸ್ ಚಲಾಯಿಸುತ್ತಿದ್ದಾಗ ಚಾಲಕನಿಗೆ ಹೃದಯಾಘಾತ!!

ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ಬಸ್ ಚಲಾಯಿಸುತ್ತಿದ್ದಾಗ ಚಾಲಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ವೇಳೆ ನಿರ್ವಾಹಕ ಬಸ್‌ ನಿಲ್ಲಿಸಿ ಸಂಭಾವ್ಯ ಅಪಘಾತವನ್ನು ತಪ್ಪಿಸಿದ್ದಾರೆ.ಬಸ್ ಕನಕಂಪಟ್ಟಿ ದಾಟುತ್ತಿದ್ದಂತೆ ಚಾಲಕ ಪ್ರಭು ಕಂಡಕ್ಟರ್‌ಗೆ ಕರೆ ಮಾಡಿ ನನಗೆ ಜೋರಾಗಿ ಎದೆ ನೋಯುತ್ತಿದೆ ಎಂದು ಹೇಳಲು ಪ್ರಯತ್ನಿಸಿದರು. ಆದರೆ ಕಂಡೆಕ್ಟರ್ ಪ್ರತಿಕ್ರಿಯಿಸುವ ಮೊದಲೇ ಪ್ರಭು ಕುಸಿದು ಬಿದ್ದರು. ಹೃದಯಾಘಾತವಾಗಿ ಕುಸಿದು ಬಿದ್ದ ಚಾಲಕನಿಗೆ ಕಂಡಕ್ಟರ್ ಮತ್ತು ಪ್ರಯಾಣಿಕರು ಸಹಾಯಕ್ಕೆ ಧಾವಿಸುವುದು. ಕಂಡೆಕ್ಟರ್ ಬ್ರೇಕ್ ಹಿಡಿದು ಬಸ್‌ …

Read More »

ಬೆಳಗಾವಿ: 17 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ, ಸ್ವಾಮೀಜಿ ಬಂಧನ!

ಸ್ವಾಮೀಜಿಯಿಂದ 17 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪ ಹಿನ್ನಲೆ ಜಿಲ್ಲೆಯ ರಾಯಬಾಗ ತಾಲೂಕಿನ ಮೇಖಳಿಯ ರಾಮಮಂದಿರ ಲೋಕೇಶ್ವರ ಮಹಾರಾಜ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ.ಬಾಲಕಿಯ ತಂದೆ-ತಾಯಿಯೇ ಬಾಲಕಿಯನ್ನು ವಾರಗಟ್ಟಲೇ ಮಠದಲ್ಲೇ ಬಿಟ್ಟು ಹೋಗುತ್ತಿದ್ದರು. ಅದನ್ನೇ ಸ್ವಾಮೀಜಿ ದುರುಪಯೋಗ ಪಡಿಸಿಕೊಂಡಿದ್ದಾರೆ. ಮಠದಲ್ಲಿ ಸಾಕಷ್ಟು ಕಾನೂನು ಬಾಹಿರ ಚಟುವಟಿಕೆ ಮಾಡುತ್ತಿದ್ದ ಆರೋಪ ಕೂಡ ಇದೆ. 2021ರಲ್ಲಿ ಸ್ವಾಮೀಜಿಗೆ ಧರ್ಮದೇಟು ನೀಡಿ ಗ್ರಾಮಸ್ಥರು ಬುದ್ಧಿವಾದ ಹೇಳಿದ್ದರು. ಇದೀಗ ಅತ್ಯಾಚಾರ ಆರೋಪ ಹಿನ್ನಲೆಸ್ವಾಮೀಜಿಯಿಂದ 17 ವರ್ಷದ …

Read More »

ಬೆಳಗಾವಿ: ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸಾಂಗ್ಲಿಯಲ್ಲಿ ಗ್ಯಾಂಗ್ ರೇಪ್!

ಮಹಾರಾಷ್ಟ್ರದ ಸಾಂಗ್ಲಿ ನಗರದಲ್ಲಿ ಬೆಳಗಾವಿ ಮೂಲದ ವೈದ್ಯಕೀಯ ವಿದ್ಯಾರ್ಥಿನಿಗೆ ತಂಪು ಪಾನೀಯದಲ್ಲಿ ಮತ್ತು ಬರುವ ಮಾತ್ರೆ ನೀಡಿ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ನಡೆದಿದೆ.ಸೊಲ್ಲಾಪುರದ ವಿನಯ ವಿಶ್ವೇಶ ಪಾಟೀಲ(22, ಪುಣೆಯ ಸರ್ವಜ್ಞ ಸಂತೋಷ ಗಾಯಕವಾಡ (20) ಹಾಗೂ ಸಾಂಗಲಿಯ ತನ್ಮಯ ಸುಕುಮಾರ ಪೆಡ್ನೇಕರ (30) ಎಂಬಾತರನ್ನು ಬಂಧಿಸಲಾಗಿದೆ.ಯುವತಿಗೆ ತಂಪು ಪಾನೀಯಲ್ಲಿ ಮತ್ತು ಬರುವ ಮಾತ್ರೆ ಕೊಟ್ಟು ಕುಡಿಸಿದ್ದಾರೆ. ನಂತರ ಮೂವರು ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಸ್ವಲ್ಪ ಸಮಯದ …

Read More »

ಮೈಮೇಲೆ ಕಸದ ರಾಶಿ ಸುರಿದ ಪೌರ ಸಿಬ್ಬಂದಿ; ಮರದಡಿ ನಿದ್ದೆ ಮಾಡುತ್ತಿದ್ದ ವ್ಯಕ್ತಿ ಸಾವು!

ಮರದಡಿ ನಿದ್ದೆ ಮಾಡುತ್ತಿದ್ದ 45 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರ ಮೇಲೆ ಪೌರ ಸಿಬ್ಬಂದಿ ಕಸದ ರಾಶಿ ಸುರಿದ ಪರಿಣಾಮ ನಿದ್ರಿಸುತ್ತಿದ್ದ ವ್ಯಕ್ತಿ ಕಸದ ರಾಶಿಯಡಿ ಸಿಲುಕಿ ಮೃತಪಟ್ಟ ಅಪರೂಪದ ಘಟನೆ ಉತ್ತರ ಪ್ರದೇಶದ ಬರೇಲಿ ನಗರದಲ್ಲಿ ನಡೆದಿದೆ.ಬರೇಲಿ ನಗರದ ಬರದಾರಿ ಪ್ರದೇಶದಲ್ಲಿ ಈ ದುರಂತ ಸಂಭವಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇದು ಅಸಹಜ ಸಾವು ಎನ್ನುವುದನ್ನು ಅಟಾಪ್ಸಿ ವರದಿ ದೃಢಪಡಿಸಿದೆ. ಇದು ನಿರ್ಲಕ್ಷ್ಯದ ಪ್ರಕರಣ ಎಂದು ಸರ್ಕಲ್ ಅಧಿಕಾರಿ …

Read More »

ತುಮಕೂರು : ಜಮೀನಿಗಾಗಿ ದೊಡ್ಡಪ್ಪನ್ನೇ ಚಾಕುವಿನಿಂದ ಕೊಂದ ಯುವಕ!

ಜಮೀನು ವಿಚಾರವಾಗಿ ಜಗಳ ನಡೆದು ಈ ಒಂದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ. ಸದ್ಯ ಘಟನಾ ಸ್ಥಳಕ್ಕೆ ತುಮಕೂರು ಎಸ್ ಪಿ ಅಶೋಕ ವೆಂಕಟ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಒಂದು ಕೊಲೆಯು ಸಿಎಸ್ ಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.ಕೊಲೆಯಾದ ವ್ಯಕ್ತಿಯನ್ನು ಕರೀಂ (50) ಎಂದು ತಿಳಿದುಬಂದಿದ್ದು, ಕರೀಂನನ್ನು ಕೊಲೆಗೈದು ತಮ್ಮನ ಮಗ ಆಫ್ರಿದ್ (25) ಪರಾರಿಯಾಗಿದ್ದಾನೆ.

Read More »