ಹುಬ್ಬಳ್ಳಿ : ಆಶ್ರಯ ಮನೆಗಳಿಗಾಗಿ ಶಾಸಕ ಅರವಿಂದ್ ಬೆಲದ ಮನೆ ಮುಂದೆಯೇ ಸಾರ್ವಜನಿಕರು ಪ್ರತಿಭಟನೆ ಮಾಡಿದರು.
.ಶಾಸಕ ಅರವಿಂದ ಬೆಲ್ಲದ ಮನೆ ಮುಂದುಗಡೆ ಜಗದೀಶನಗರದ ನಿವಾಸಿಗಳು ಹುಬ್ಬಳ್ಳಿಯ ಅಕ್ಷಯ ಪಾರ್ಕ್‌ನಲ್ಲಿರುವ ಶಾಸಕರ ನಿವಾಸದ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
ಮನೆಗಳನ್ನು ಹಸ್ತಾಂತರಿಸಿ, ಹಕ್ಕುಪತ್ರ ನೀಡುವಂತೆ ಪ್ರತಿಭಟನೆ ನಡೆಸುತ್ತಿರುವ ಜಗದೀಶ ನಗರ ನಿವಾಸಿಗಳು ಈ ಹಿಂದೆ ಸುಮಾರು ಸಾರಿ ಮನವಿ ಮಾಡಿದರು ಕ್ಯಾರೆ ಎನ್ನದ ಜನಪ್ರತಿನಿಧಿಗಳ ನಡೆಯನ್ನು ಖಂಡಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ.
ಇನ್ನೂ 2015 ರಲ್ಲಿ ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ಮನೆ ಕಳೆದುಕೊಂಡ 188 ಕುಟುಂಬಗಳು ಆಶ್ರಯ ಮನೆಯ ನಿರೀಕ್ಷೆಯಲ್ಲಿದ್ದರೂ ಸುಮಾರು ವರ್ಷಗಳೇ ಕಳೆದರೂ ಇದುವರೆಗೂ ಮನೆ ಸಿಗದೇ ಇರುವುದು ಜಗದೀಶ್ ನಗರ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

