Breaking News

Crime

ದೊಡ್ಡಬಳ್ಳಾಪುರ: ಬಸ್ ಡಿಕ್ಕಿ, ಬೈಕ್ ಸವಾರ ಸಾವು!!

ರಾಷ್ಟ್ರೀಯ ಹೆದ್ದಾರಿ-648ರ ಕೂಗೋನಹಳ್ಳಿ ಕಾಲೊನಿ ಸಮೀಪ ಬುಧವಾರ ಖಾಸಗಿ ಬಸ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಮೃತಪಟ್ಟಿದ್ದಾರೆ.ಮೃತ ಮುನಿರಾಜು ಬುಧವಾರ ಬೆಳಗ್ಗೆ ಬೈಕ್‌ನಲ್ಲಿ ದೊಡ್ಡಬೆಳವಂಗಲಕ್ಕೆ ಬಂದು ಚುಂಚೇಗೌಡನಹೊಸಹಳ್ಳಿಗೆ ತೆರಳುವ ವೇಳೆ ಕೂಗೋನಹಳ್ಳಿ ಕಾಲೋನಿ ಸಮೀಪ ಖಾಸಗಿ ಬಸ್ ಡಿಕ್ಕಿ ಹೊಡೆದಿದ.ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮುನಿರಾಜು ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ದೊಡ್ಡಬೆಳವಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಹಾವೇರಿ: ಲಾರಿಗೆ ಕಾರು ಡಿಕ್ಕಿಯಾಗಿ, 6 ಜನ ಸ್ಥಳದಲ್ಲೇ ದುರ್ಮರಣ!

ರಾಜ್ಯದಲ್ಲಿ ಮತ್ತೊಂದು ಭೀಕರವಾದ ಅಪಘಾತ ಸಂಭವಿಸಿದ್ದು, ಲಾರಿಗೆ ಹಿಂದಿನಿಂದ ವೇಗವಾಗಿ ಬಂದಂತಹ ಕಾರು ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ 6 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೂಟೆಬೆನ್ನೂರು ಗ್ರಾಮದಲ್ಲಿ ನಡೆದಿದೆ.ಮೃತರನ್ನು ಹರಿಯಾಣ ಮೂಲದ ಆಡಿ ಎ6 ಕಾರಿನಲ್ಲಿದ್ದ ಆರು ಜನರು ಸಾವನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮೋಟೆಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು …

Read More »

ಬೆಂಗಳೂರು : ಕರ್ನಾಟಕ ಗಡಿಯಲ್ಲಿ ಕಟ್ಟೆಚ್ಚರ, ಪೊಲೀಸರಿಂದ ಚೆಕಿಂಗ್!

ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ವಾತಾವರಣವಿರುವ ಹಿನ್ನಲೆಯಲ್ಲಿ ರಾಜ್ಯದ ಗಡಿ ಭಾಗಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ರಾಜ್ಯದ ಗಡಿಭಾಗಗಳಲ್ಲಿ ಪೊಲೀಸರು ಪ್ರತೀ ವಾಹನಗಳನ್ನು ಚೆಕಿಂಗ್ ಮಾಡುತ್ತಿದ್ದಾರೆ. ನಿನ್ನೆ ತಡರಾತ್ರಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ಅಡಗುದಾಣಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದೆ.ಹೀಗಾಗಿ ನಿನ್ನೆಯಿಂದ ಕೇರಳ-ಕರ್ನಾಟಕ, ಕರ್ನಾಟಕ-ಮಹಾರಾಷ್ಟ್ರ, ಕರ್ನಾಟಕ-ತಮಿಳುನಾಡು ಗಡಿಭಾಗಗಳಲ್ಲಿ ಪೊಲೀಸರು ತೀವ್ರ ತಪಾಸಣೆ ನಡೆಸುತ್ತಿದ್ದರು. ಪ್ರತೀ ವಾಹನಗಳನ್ನೂ ತಪಾಸಣೆ ಮಾಡಿ ಕಳುಹಿಸಲಾಗುತ್ತಿದೆ. ಕೇಂದ್ರದ ಸೂಚನೆಯಂತೆ ನಾವು …

Read More »

ಬೆಂಗಳೂರು : ಯುವಕನನ್ನು ಕೊಂದ ಬಳಿಕ ಶವಕ್ಕೆ ಬೆಂಕಿ ಹಚ್ಚಿ ದುಷ್ಕರ್ಮಿಗಳು ಪರಾರಿ!

ಆನೇಕಲ್ ತಾಲೂಕಿನ ಶೀಲಿಂದ್ರದೊಡ್ಡಿ ಎಂಬಲ್ಲಿ ಘಟನೆ ನಡೆದಿದೆ. ಶಿಲೀಂದ್ರದೊಡ್ಡಿ ಬಳಿ ಸುಮಾರು 25 ವರ್ಷದ ಯುವಕನ ಶವ ಪತ್ತೆಯಾಗಿದ್ದು, ಯುವಕನನ್ನು ಕೊಲೆಗೈದು ಬಳಿಕ ಬೆಂಕಿ ಹಚ್ಚಿ ಹಂತಕರು ಪರಾರಿ ಆಗಿದ್ದಾರೆ. ಮೃತದೇಹ ಪತ್ತೆಯಾದ ಸಮೀಪ ಟಿವಿಎಸ್ ಬೈಕ್ ಸಹ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಯಾವ ಕಾರಣಕ್ಕೆ ಕೊಲೆ ಆಗಿದೆ ಎಂಬುದರ ಕುರಿತು ಮಾಹಿತಿ ಇಲ್ಲ. ಮೃತರ ಗುರುತು ಕೂಡ ಪತ್ತೆಯಾಗಿಲ್ಲ. ವಿವಿಧ ಆಯಾಮಗಳಲ್ಲಿ …

Read More »

ಬೆಂಗಳೂರು: ಮೊಬೈಲ್‌ ಜಗಳ ಕೊಲೆಯಲ್ಲಿ ಅಂತ್ಯ!!

ಕಳ್ಳತನ ಮಾಡಿದ್ದ ಮೊಬೈಲ್‌ ಹಿಂದಿರುಗಿಸುವ ವಿಚಾರಕ್ಕೆ ನಡೆದ ಜಗಳ ಮೆಕ್ಯಾನಿಕ್‌ ಎಂಜಿನಿಯರ್‌ವೊಬ್ಬರ ಕೊಲೆಯಲ್ಲಿ ಅಂತ್ಯವಾಗಿದೆ.ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯ ರಾಜಾಜಿನಗರ ಕೈಗಾರಿಕಾ ಪ್ರದೇಶದಲ್ಲಿ ನಡೆದ ಜಗಳದಲ್ಲಿ ಅಬ್ದುಲ್‌ ಮಲೀಕ್‌ ಮೃತಪಟ್ಟಿದ್ದಾನೆ. ಅವರ ಸಹಾಯಕ ಜೈನುಲ್‌ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಬ್ದುಲ್ ಮಲೀಕ್‌ ಮತ್ತು ಜೈನುಲ್‌ ಅವರು ಐದು ವರ್ಷಗಳಿಂದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು’ ಎಂದು ಹೇಳಿದರು.ಅಬ್ದುಲ್‌ ಮಲೀಕ್‌ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಜೈನುಲ್‌ಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ …

Read More »

ಬೆಂಗಳೂರು :ಪಕ್ಕದ ಮನೆಯವರ ಜಗಳಕ್ಕೆ 8 ವರ್ಷದ ಬಾಲಕನ ಕೊಲೆ!

ಆರೋಪಿ ಮತ್ತೂರು ಎಂಬಾತನಿಂದ ಕೃತ್ಯ ನಡೆದಿದೆ. ಬಾಲಕ ರಮಾನಂದ ಕುಟುಂಬ ಮತ್ತು ಮತ್ತೂರು ಕುಟುಂಬ್ ಮಧ್ಯೆ ಗಲಾಟೆ ಆಗ್ತಿತ್ತು. ಇದರಿಂದ ಬಾಲಕನ ಕಿಡ್ನಾಪ್ ಮಾಡಿ ಕೊಲೆ ಮಾಡಲಾಗಿದೆ. ಕೊಲೆ ಮಾಡಿ ಮೃತದೇಹ ಚೀಲದಲ್ಲಿ ಕಟ್ಟಿ ಆರೋಪಿ ಬಿಸಾಡಿದ್ದ. ನಿನ್ನೆ ರಾತ್ರಿ ರಾಯಸಂದ್ರ ಕೆರೆ ಬಳಿ ಮೃತದೇಹ ಪತ್ತೆಯಾಗಿದೆ. ಆರೋಪಿಯನ್ನು ಮತ್ತೂರು ಬಂಧಿಸಿ ವಿಚಾರಣೆ ಮಾಡಿದ್ದಾರೆ.ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಬಾಗಪಾತ್ :ಪತ್ನಿಯ ಕತ್ತು ಸೀಳಿ ಅತ್ತೆಗೆ ಕರೆ ಮಾಡಿದ ಅಳಿಯ!!

ಆಟೋ ಚಾಲಕ ಪ್ರಶಾಂತ್ ಪತ್ನಿ ನೇಹಾಳ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಬಾಗ್​ಪತ್​ನಲ್ಲಿ ನಡೆದಿದೆ. ನೇಹಾ ತನ್ನ ತಾಯಿಯ ಮನೆಯಲ್ಲಿ ಒಂಟಿಯಾಗಿರುವಾಗ ಘಟನೆ ನಡೆದಿದೆ.ಅಕ್ಕಪಕ್ಕದ ಮನೆಯವರು ಹೇಳುವ ಪ್ರಕಾರ ಇಬ್ಬರ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದವು. ಪ್ರಶಾಂತ್ ತನ್ನ ಪತ್ನಿಗೆ ವಿವಾಹೇತರ ಸಂಬಂಧವಿದೆ ಎಂದು ಅನುಮಾನಿಸುತ್ತಿದ್ದ. ನಿರಂತರ ಜಗಳದಿಂದ ಬೇಸತ್ತ ನೇಹಾ ಇತ್ತೀಚೆಗೆ ತನ್ನ ತಾಯಿ ರಂಜಿತಾ ಅವರೊಂದಿಗೆ ಅದೇ ಪ್ರದೇಶದಲ್ಲಿ ಮತ್ತೊಂದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.ನಾವು ಮದುವೆಯಾದ …

Read More »

ಕುಕನೂರ್ :ಅಂಬೇಡ್ಕರ್‌ ಭಾವಚಿತ್ರಕ್ಕೆ ಅವಮಾನ; 11 ಜನರ ವಿರುದ್ಧ ದೂರು ದಾಖಲು!

ಕವಳಕೇರಿ ಗ್ರಾಮದ ಬಸ್ ನಿಲ್ದಾಣದ ಸಮೀಪದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಸೋಮವಾರ ರಾತ್ರಿ ಚಪ್ಪಲಿ ಹಾರ ಹಾಕಿ ಅವಮಾನ ಎಸಗಿದ ಆರೋಪದ ಮೇಲೆ 11 ಜನರ ವಿರುದ್ಧ ದೂರು ದಾಖಲಾಗಿದೆ.ಅಂಬೇಡ್ಕರ್‌ ಅವರ ಭಾವಚಿತ್ರವಿರುವ ಸಮೀಪದ ಸ್ಥಳದಲ್ಲಿ ಭಗೀರಥ ಸಮಾಜದ ಕಟ್ಟೆ ಕಟ್ಟುವ ವಿಷಯವಾಗಿ ಹಿಂದೆ ಜಟಾಪಟಿಯಾಗಿತ್ತು. ಈ ಜಾಗದಲ್ಲಿ ಕಟ್ಟೆ ಕಟ್ಟಿದರೆ ಯಾರಿಗೂ ತೊಂದರೆಯಾಗುವುದಿಲ್ಲ. ನಾವು ಕಟ್ಟೆ ಕಟ್ಟುತ್ತೇವೆ ಎಂದು ಭಗೀರಥ ಸಮಾಜದವರು ಹೇಳಿದ್ದರು. …

Read More »

ಮೈಸೂರು : ಮುಖ್ಯಮಂತ್ರಿಗೆ ನಿಂದನೆ, ಕಾರಾಗೃಹ ವಾರ್ಡರ್‌ ಬಂಧನ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಹರಿಬಿಟ್ಟ ಆರೋಪದ ಮೇರೆಗೆ ಇಲ್ಲಿನ ಕೇಂದ್ರ ಕಾರಾಗೃಹದ ವಾರ್ಡರ್‌, ಸಾಲಿಗ್ರಾಮ ನಿವಾಸಿ ಎಚ್.ಎನ್. ಮಧುಕುಮಾರ್‌ ಅವರನ್ನು ಮಂಗಳವಾರ ಬೆಟ್ಟದಪುರ ಪೊಲೀಸರು ಮೈಸೂರಿನಲ್ಲಿ ಬಂಧಿಸಿದ್ದಾರೆ.ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಮುಖ್ಯಮಂತ್ರಿಯು ಎಎಸ್‌ಪಿ ವಿರುದ್ಧ ಕೈ ಎತ್ತಿದ್ದನ್ನು ಖಂಡಿಸಿ ಏ.28ರಂದು ಮಧುಕುಮಾರ್‌ ವಿಡಿಯೊ ಮಾಡಿದ್ದರು. ಈ ಬಗ್ಗೆ ಕಾಂಗ್ರೆಸ್‌ ಕಾರ್ಯಕರ್ತರು ವಾಟ್ಸಪ್‌ ಮೂಲಕ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದೇವೆ’ …

Read More »

ದಾವಣಗೆರೆ : ರೌಡಿಶೀಟರ್​ ಸಂತೋಷ್​ ​ಹತ್ಯೆ ಪ್ರಕರಣ ಆರೋಪಿಗಳು ಪೊಲೀಸರ ಮುಂದೆ ಶರಣು!!

ರೌಡಿಶೀಟರ್​ ಸಂತೋಷ್​ ಕುಮಾರ್​ ಹತ್ಯೆ ಪ್ರಕರಣದ 10 ಮಂದಿ ಆರೋಪಿಗಳು ಹೊಳಲ್ಕೆರೆ ಠಾಣೆ ಪೊಲೀಸರ ಎದುರು ಶರಣಾಗಿದ್ದಾರೆ. ಪ್ರಕರಣ ಸಂಬಂಧ 12 ಜನರ ವಿರುದ್ಧ ದಾವಣಗೆರೆಯ ವಿದ್ಯಾನಗರ ಠಾಣೆಯಲ್ಲಿ ಎಫ್​ಐಆರ್​​ ದಾಖಲಾಗಿದೆ. ಮೃತ ಸಂತೋಷ್​ ಕುಮಾರ್ ಪತ್ನಿ ಶ್ರುತಿ ದೂರಿನ ಮೇರೆಗೆ ಆರೋಪಿಗಳಾದ ಕಾರ್ತಿಕ್​, ಚವಳಿ ಸಂತು, ನವೀನ್, ಗುಂಡಪ್, ಬಸವರಾಜ್, ಹನುಮಂತಪ್ಪ, ಗಿಡ್ಡ ವಿಜಿ, ಚಿಕ್ಕಮ್ಮನಹಳ್ಳಿ ಶಿವು, ಕಡ್ಡಿ ರಾಘು, ಪ್ರಶಾಂತ್ ಮತ್ತು ನಿಟ್ಟುವಳ್ಳಿಯ ಗಣಿ ಸೇರಿದಂತೆ ಇತರರ …

Read More »