Breaking News

ಕುಕನೂರ್ :ಅಂಬೇಡ್ಕರ್‌ ಭಾವಚಿತ್ರಕ್ಕೆ ಅವಮಾನ; 11 ಜನರ ವಿರುದ್ಧ ದೂರು ದಾಖಲು!

ಕವಳಕೇರಿ ಗ್ರಾಮದ ಬಸ್ ನಿಲ್ದಾಣದ ಸಮೀಪದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಸೋಮವಾರ ರಾತ್ರಿ ಚಪ್ಪಲಿ ಹಾರ ಹಾಕಿ ಅವಮಾನ ಎಸಗಿದ ಆರೋಪದ ಮೇಲೆ 11 ಜನರ ವಿರುದ್ಧ ದೂರು ದಾಖಲಾಗಿದೆ.ಅಂಬೇಡ್ಕರ್‌ ಅವರ ಭಾವಚಿತ್ರವಿರುವ ಸಮೀಪದ ಸ್ಥಳದಲ್ಲಿ ಭಗೀರಥ ಸಮಾಜದ ಕಟ್ಟೆ ಕಟ್ಟುವ ವಿಷಯವಾಗಿ ಹಿಂದೆ ಜಟಾಪಟಿಯಾಗಿತ್ತು. ಈ ಜಾಗದಲ್ಲಿ ಕಟ್ಟೆ ಕಟ್ಟಿದರೆ ಯಾರಿಗೂ ತೊಂದರೆಯಾಗುವುದಿಲ್ಲ. ನಾವು ಕಟ್ಟೆ ಕಟ್ಟುತ್ತೇವೆ ಎಂದು ಭಗೀರಥ ಸಮಾಜದವರು ಹೇಳಿದ್ದರು. ಬಳಿಕ ಇದೇ ವಿಷಯ ಮನಸ್ಸಿನಲ್ಲಿಟ್ಟುಕೊಂಡು ಮಾದಿಗ ಸಮುದಾಯದ ಜನರನ್ನು ನಿಂದಿಸಲಾಗಿದೆ. ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಅವಮಾನ ಎಸಗಲಾಗಿದೆ ಎಂದು ಅದೇ ಗ್ರಾಮದ ಈರಪ್ಪ ನರೇಗಲ್‌ ಎನ್ನುವವರು ಕುಕನೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *