Breaking News

ದಾವಣಗೆರೆ : ರೌಡಿಶೀಟರ್​ ಸಂತೋಷ್​ ​ಹತ್ಯೆ ಪ್ರಕರಣ ಆರೋಪಿಗಳು ಪೊಲೀಸರ ಮುಂದೆ ಶರಣು!!

ರೌಡಿಶೀಟರ್​ ಸಂತೋಷ್​ ಕುಮಾರ್​ ಹತ್ಯೆ ಪ್ರಕರಣದ 10 ಮಂದಿ ಆರೋಪಿಗಳು ಹೊಳಲ್ಕೆರೆ ಠಾಣೆ ಪೊಲೀಸರ ಎದುರು ಶರಣಾಗಿದ್ದಾರೆ. ಪ್ರಕರಣ ಸಂಬಂಧ 12 ಜನರ ವಿರುದ್ಧ ದಾವಣಗೆರೆಯ ವಿದ್ಯಾನಗರ ಠಾಣೆಯಲ್ಲಿ ಎಫ್​ಐಆರ್​​ ದಾಖಲಾಗಿದೆ. ಮೃತ ಸಂತೋಷ್​ ಕುಮಾರ್ ಪತ್ನಿ ಶ್ರುತಿ ದೂರಿನ ಮೇರೆಗೆ ಆರೋಪಿಗಳಾದ ಕಾರ್ತಿಕ್​, ಚವಳಿ ಸಂತು, ನವೀನ್, ಗುಂಡಪ್, ಬಸವರಾಜ್, ಹನುಮಂತಪ್ಪ, ಗಿಡ್ಡ ವಿಜಿ, ಚಿಕ್ಕಮ್ಮನಹಳ್ಳಿ ಶಿವು, ಕಡ್ಡಿ ರಾಘು, ಪ್ರಶಾಂತ್ ಮತ್ತು ನಿಟ್ಟುವಳ್ಳಿಯ ಗಣಿ ಸೇರಿದಂತೆ ಇತರರ ವಿರುದ್ಧ ಎಫ್​ಐಆರ್ ದಾಖಲಾಗಿದೆ.ಕೊಲೆಯಾದ ರೌಡಿಶೀಟರ್ ಕಣುಮ​ ಸಂತೋಷ್​ ಕುಮಾರ್ ಮೂಲತಃ ಚಿತ್ರದುರ್ಗ ಜಿಲ್ಲೆಯ ಹಿರಿಯೂರ ಬಳಿಯ ಮಾರಿ ಕಣವಿ ನಿವಾಸಿಯಾಗಿದ್ದನು. ಸಂತೋಷ ಕುಮಾರ್​ ತಾಯಿಯ ತವರು ದಾವಣಗೆರೆಯಾದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ನೆಲೆಸಿದ್ದರು. ಕಣುಮ ಬೆಳೆಯುವುದರ ಜೊತೆಗೆ ಸೊಪ್ಪು ಮಾರುತ್ತಿದ್ದನು. ನಂತರ, ರೌಡಿಸಂಗೆ ಇಳಿದ ಕಣುಮ ಸಂತೋಷ ಕುಮಾರ್​ ದಾವಣಗೆರೆ ಜಿಲ್ಲೆಯಲ್ಲಿನ ರೌಡಿಶೀಟರ್ ಗಳಾದ ಬುಳ್ಳ್ ನಾಗಾ, ಜೈಮ್ ಯೋಗಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದನು.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *