ಬಂಧಿತ ಆರೋಪಿ ಶುಭಂ ಮಧುಕರ ಹುಬ್ಬಳ್ಳಿ: ಮದುವೆಯಾಗುವುದಾಗಿ ನಂಬಿಸಿ ಯುವತಿಯ ನಗ್ನ ಫೋಟೋ ವಾಟ್ಸಾಫ್ ಸ್ಟೇಟಸ್ಗೆ ಇಟ್ಟು ವಿಕೃತಿ ಮೆರೆದಿದ್ದ ಯುವಕನನ್ನು ಹುಬ್ಬಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಾರಾಷ್ಟ್ರದ ಶಿರಡಿ ಮೂಲದ ಶುಭಂ ಮಧುಕರ ಕೂಲೆ ಬಂಧಿತ ಯುವಕ. ನರ್ಸಿಂಗ್ ವ್ಯಾಸಂಗ ಮಾಡುತ್ತಿರುವ ಶುಭಂ ಅದೇ ಕಾಲೇಜಿನ ಜೂನಿಯರ್ ವಿದ್ಯಾರ್ಥಿನಿ (20 ವರ್ಷದ ಯುವತಿಯ) ಸ್ನೇಹ ಸಂಪಾದಿಸಿದ್ದ. ಬಳಿಕ ಪ್ರೀತಿಸುವುದಾಗಿ ನಂಬಿಸಿ ವಾಟ್ಸಾಪ್ ನಂಬರ್ ಪಡೆದಿದ್ದ. ಚಾಟಿಂಗ್ ಮೂಲಕ ಸಲುಗೆ …
Read More »ಮೈಸೂರಲ್ಲಿ ಬ್ರೇಕ್ ಬದಲು ಎಕ್ಸಲೇಟರ್ ಒತ್ತಿದ್ದಕ್ಕೆ ಮಹಿಳೆ ಮೇಲೆ ಹರಿದ ಕಾರು – ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಮೈಸೂರು: ಚಾಲಕನ ಅಚಾತುರ್ಯದಿಂದ ಕಾರೊಂದು ಫುಟ್ಪಾತ್ಗೆ ನುಗ್ಗಿ ಇಬ್ಬರು ಮಹಿಳೆಯರ ಮೇಲೆ ಹರಿದಿದೆ (Car hits on a woman). ಈ ವೇಳೆ ಮಹಿಳೆ ಗಾಯಗೊಂಡ ಘಟನೆ ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.ಮೈಸೂರಿನ ದೇವರಾಜ ಅರಸು ರಸ್ತೆಯ ಯಶಸ್ವಿನಿ ಸಿಲ್ಕ್ ಮಳಿಗೆ ಮುಂಭಾಗದ ಪಾರ್ಕಿಂಗ್ನಿಂದ ಹೊರಟಿದ್ದ ಕಾರೊಂದು ಚಾಲಕನ ಅಜಾಗರೂಕತೆಯಿಂದ ಏಕಾಏಕಿ ಫುಟ್ಪಾತ್ ಮೇಲೆ ನುಗ್ಗಿದೆ. ಈ ವೇಳೆ ಎದುರಿಗಿದ್ದ ಭಾಗ್ಯ ಮತ್ತು ಲಕ್ಷ್ಮೀ ಎಂಬುವರಿಗೆ …
Read More »ಯುವತಿಯ ನಗ್ನ ಫೋಟೋ ಸ್ಟೇಟಸ್ಗಿಟ್ಟ ನರ್ಸಿಂಗ್ ವಿದ್ಯಾರ್ಥಿ.!
ಹುಬ್ಬಳ್ಳಿ: ವಿದ್ಯಾರ್ಥಿಯೋರ್ವ ಯುವತಿಯ ನಗ್ನ ಫೋಟೋವನ್ನು ವಾಟ್ಸಾಪ್ ಸ್ಟೇಟಸ್ಗೆ ಇಟ್ಟಿದ್ದ ಅಮಾನವೀಯ ಘಟನೆ ನಗರದಲ್ಲಿ ನಡೆದಿದೆ. ಮಹಾರಾಷ್ಟ್ರದ ಶಿರಡಿ ಮೂಲದ ಶುಭಂ ಮಧುಕರ ಕೂಲೆ ಕೃತ್ಯ ಎಸಗಿದ ವಿದ್ಯಾರ್ಥಿ. ನರ್ಸಿಂಗ್ ವ್ಯಾಸಂಗ ಮಾಡುತ್ತಿರುವ ಶುಭಂ ಅದೇ ಕಾಲೇಜಿನ ಜೂನಿಯರ್ ವಿದ್ಯಾರ್ಥಿನಿ (20 ವರ್ಷದ ಯುವತಿಯ) ಸ್ನೇಹ ಸಂಪಾದಿಸಿದ್ದ. ಬಳಿಕ ಪ್ರೀತಿಸುವುದಾಗಿ ನಂಬಿಸಿ ವಾಟ್ಸಾಪ್ ನಂಬರ್ ಪಡೆದಿದ್ದ. ಚಾಟಿಂಗ್ ಮೂಲಕ ಸಲುಗೆ ಬೆಳೆಸಿಕೊಂಡು ಮದುವೆಯಾಗುವುದಾಗಿ ನಂಬಿಸಿದ್ದ. ಯುವತಿಯ ನಗ್ನ ವಿಡಿಯೋ ಕಾಲ್ …
Read More »ಅಪರಿಚಿತ ವಾಹನ ಡಿಕ್ಕಿ- ಬೈಕ್ ಸವಾರ ಸಾವು
ಹುಬ್ಬಳ್ಳಿ: ತಾಲೂಕಿನ ಹೊರವಲಯ ಕುಂದಗೋಳ ಕ್ರಾಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಬೈಕ್ ಸವಾರನೋರ್ವ ಮೃತಪಟ್ಟಿದ್ದಾರೆ. ತಾಲೂಕಿನ ಕರಡಿಕೊಪ್ಪ ಗ್ರಾಮದ ಲಕ್ಷಣ ಬಸಪ್ಪ ಜಾಧವ (29) ಮೃತಪಟ್ಟ ಬೈಕ್ ಸವಾರ. ಲಕ್ಷ್ಮಣ ಕರಡಿಕೊಪ್ಪದಿಂದ ಹುಬ್ಬಳ್ಳಿ ಕಡೆಗೆ ಬೈಕ್ನಲ್ಲಿ ಬರುತ್ತಿದ್ದರು. ಈ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಲಕ್ಷ್ಮಣ ಅವರನ್ನು ಕಿಮ್ಸ್ಗೆ ರವಾನಿಸಲಾಯಿತಾದರೂ ಚಿಕಿತ್ಸೆಗೆ ಫಲಿಸದೆ ಮೃತಪಟ್ಟಿದ್ದಾರೆ. ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ …
Read More »ದೆಹಲಿಯಲ್ಲಿ ಯುವತಿ ಕೊಂದು ಅಂಗಾಂಗ ಸುಟ್ಹಾಕಿದ ಕೀಚಕರು.. ಮತ್ತೊಂದು ಅತ್ಯಾಚಾರ-ಕೊಲೆ ಶಂಕೆ
ನವದೆಹಲಿ : ಇಲ್ಲಿನ ದಾಬ್ರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಯುವತಿಯನ್ನು ಕೊಲೆ ಮಾಡಿ ಚರಂಡಿಗೆ ಬಿಸಾಡಿದ್ದಲ್ಲದೇ ಮುಖ ಮತ್ತು ಗುಪ್ತಾಂಗಗಳನ್ನು ಸುಟ್ಟು (Girl private parts burnt) ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಅತ್ಯಾಚಾರ ಮತ್ತು ಕೊಲೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಯುವತಿಯನ್ನು ಕೊಲೆ ಮಾಡಿದ ಬಳಿಕ ದೇಹವನ್ನು ಚರಂಡಿಯಲ್ಲಿ ಬಿಸಾಡಲಾಗಿದೆ. ಅಲ್ಲದೇ, ಯುವತಿಯ ಗುರುತು ಪತ್ತೆ ಆಗಬಾರದೆಂದು ದುಷ್ಕರ್ಮಿಗಳು ಮುಖವನ್ನು ಜಜ್ಜಿದ್ದಲ್ಲದೇ, ಬೆಂಕಿ ಹಚ್ಚಿ ಸುಟ್ಟಿದ್ದಾರೆ. ಇಷ್ಟು ಮಾತ್ರವಲ್ಲದೇ, …
Read More »ಉದ್ಯೋಗ ಹೆಸರಿನಲ್ಲಿ ವ್ಯಕ್ತಿಗೆ 1.99 ಲಕ್ಷ ರೂ ಧೋಖಾ-ಎಚ್ಚರ ಸಾರ್ವಜನಿಕರೇ !
ಹುಬ್ಬಳ್ಳಿ: ಉದ್ಯೋಗಕ್ಕಾಗಿ ಆನ್ಲೈನ್ನಲ್ಲಿ ಹೆಸರು ನೋಂದಾಯಿಸಿದ ವ್ಯಕ್ತಿಯೊಬ್ಬರನ್ನು ಸಂಪರ್ಕಿಸಿ ಅವರ ಬ್ಯಾಂಕ್ ಖಾತೆಯಿಂದ 1,99,998 ರೂಪಾಯಿ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ನಡೆದಿದೆ. ಹಳೇ ಹುಬ್ಬಳ್ಳಿಯ ಎ.ಬಿ. ಯಾದವಾಡ (42) ವಂಚನೆಗೆ ಒಳಗಾದವರು. ಇವರು ನೌಕರಿ ಗಿಟ್ಟಿಸಲು ಹಲವು ವೆಬ್ಸೈಟ್ಗಳಲ್ಲಿ ಹೆಸರು ನೋಂದಾಯಿಸಿದ್ದರು. ನ. 12ರಂದು ಆದಿತ್ಯ ಶರ್ಮಾ ಎಂದು ಹೆಸರು ಹೇಳಿಕೊಂಡು ಕರೆ ಮಾಡಿದ ವ್ಯಕ್ತಿಯೋರ್ವ, ಯಾದವಾಡ ಅವರ ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸಿ ಅದನ್ನು ಓಪನ್ ಮಾಡಿ 10 …
Read More »ವ್ಯಕ್ತಿಯೋರ್ವ ಆತ್ಮಹತ್ಯೆ-ಧಾರವಾಡದ ಕವಲಗೇರಿ ಕ್ರಾಸ್ ಬಳಿ ಘಟನೆ
ಗಿಡಗಳ ಸಂದಿಯಲ್ಲಿ ವ್ಯಕ್ತಿಯೊರ್ವ ನೇಣಿಗೆ ಶರಣಾಗಿರುವುದು. ಧಾರವಾಡ: ವ್ಯಕ್ತಿಯೋರ್ವ ಗಿಡದ ಸಂದಿಯಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ಧಾರವಾಡ ಕವಲಗೇರಿ ಕ್ರಾಸ್ ಬಳಿಯಲ್ಲಿ ನಡೆದಿದೆ. ಸ್ಥಳಕ್ಕೆ ಧಾವಿಸಿದ ಧಾರವಾಡ ಉಪನಗರ ಪೋಲಿಸರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಹಾಗೂ ಆತ್ಮಹತ್ಯೆ ಮಾಡಿಕೊಂಡಿರುವ ಕಾರಣ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. ಗಿಡಗಳ ಸಂದಿಯಲ್ಲಿ ಹೋಗಿ ಯಾರು ಇಲ್ಲದ ಸಮಯದಲ್ಲಿ ಆತ್ಮಹತ್ಯೆಗೆ ವ್ಯಕ್ತಿ ಶರಣಾಗಿದ್ದು ವ್ಯಕ್ತಿಯ ಹೆಸರು ಹಾಗೂ ಎಲ್ಲಿಯವರು ಎಂಬುವ ಕುರಿತು ಇನ್ನೂ ಮಾಹಿತಿ …
Read More »ಕೌಟುಂಬಿಕ ಕಲಹ: ಮೈಸೂರಲ್ಲಿ ನೇಣಿಗೆ ಶರಣಾದ ASI.
ಆತ್ಮಹತ್ಯೆಗೆ ಶರಣಾದ ಎಎಸ್ ಐ ಶಿವಕುಮಾರಸ್ವಾಮಿ ಮೈಸೂರು: ನಗರದ ವಿವಿ ಪುರಂ ಟ್ರಾಫಿಕ್ ಪೊಲೀಸ್ ಠಾಣೆಯ ಎಎಸ್ಐವೊಬ್ಬರು ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ(ASI Suicide) ಶರಣಾಗಿರುವ ಘಟನೆ ನಡೆದಿದೆ.ಶಿವಕುಮಾರಸ್ವಾಮಿ (54) ಆತ್ಮಹತ್ಯೆಗೆ ಶರಣಾದ ಎಎಸ್ಐ. ಇವರು ಗೌರಿಶಂಕರ ಬಡಾವಣೆಯಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕೌಟುಂಬಿಕ ಕಲಹದ ಹಿನ್ನೆಲೆ ಬೇಸತ್ತು ಶಿವಕುಮಾರಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಈ ಕುರಿತು ಕೆ.ಆರ್. ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.
Read More »BRTS ಬಸ್ ಡಿಕ್ಕಿ ಪಾದಚಾರಿಗೆ ಗುದ್ದಿದ ಚಿಗರಿ
ಸಾಂದರ್ಭಿಕ ಚಿತ್ರ ಧಾರವಾಡ: ರಸ್ತೆ ದಾಟಿ ಹೊರಟಿದ್ದ ಪಾದಚಾರಿಯೊಬ್ಬರಿಗೆ ಬಿಆರ್ಟಿಎಸ್ ಬಸ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಧಾರವಾಡದ ಕೋರ್ಟ್ ವೃತ್ತದ ಬಳಿ ನಡೆದಿದೆ.ಮಲ್ಲಣ್ಣ ಎಂಬಾತನೇ ಈ ಘಟನೆಯಲ್ಲಿ ಗಾಯಗೊಂಡ ವ್ಯಕ್ತಿ. ಬಿಆರ್ಟಿಎಸ್ ಬಸ್ ನಿಲ್ದಾಣದಿಂದ ಈ ವ್ಯಕ್ತಿ ಇಳಿದು ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Read More »ಹಳೆ ವೈಷಮ್ಯದಿಂದ ಹರಿಯಿತು ನೆತ್ತರು-ಹಾಡಹಗಲೇ ವ್ಯಕ್ತಿಯ ಬರ್ಬರ ಹತ್ಯೆ
ಬೆಂಗಳೂರು: ಹಾಡಹಗಲೇ ನಡು ರಸ್ತೆಯಲ್ಲಿ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹೆಣ್ಣೂರು ಪೊಲೀಸ್ (Hennur Police station) ಠಾಣಾ ವ್ಯಾಪ್ತಿಯ ನಾಗವಾರದಲ್ಲಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ (Bangalore Rural District) ಮೂಲದ ಶ್ರೀಧರ್ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ನಾಗವಾರದಲ್ಲಿ ಹೋಗುವಾಗ ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದ ನಾಲ್ಕೈದು ಮಂದಿ ದುಷ್ಕರ್ಮಿಗಳ ಗುಂಪು ಏಕಾಏಕಿ ಶ್ರೀಧರ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಕುತ್ತಿಗೆ ಹಾಗೂ ತಲೆಭಾಗಕ್ಕೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





