ಉಡುಪಿ: ಇಂದು ಬೆಳ್ಳಂಬೆಳಿಗ್ಗೆ ದುಷ್ಟ್ಕರ್ಮಿಗಳು ಮಗುವನ್ನು ಅಪಹರಣ ಮಾಡಿದ ಘಟನೆ ಕುಂದಾಪುರ ತಾಲ್ಲೂಕಿನ ಎಡಮೊಗೆ ಕುಮ್ಟಿ ಬೇರಿನಲ್ಲಿ ನಡೆದಿದೆ.ಇವತ್ತು ಮುಂಜಾನೆ ಸಂತೋಷ್ ನಾಯ್ಕ್ ಎಂಬುವರ ಎರಡು ವರ್ಷ ಪ್ರಾಯದ ಹೆಣ್ಣು ಮಗು “ಸಾನ್ವಿಕಾ” ತಾಯಿಯೊಂದಿಗೆ ಮಲಗಿರುವಾಗ ಮುಸುಕು ಧಾರಿ ವ್ಯಕ್ತಿಯೊಬ್ಬ ಮಗುವನ್ನು ಅಪಹರಿಸಿಕೊಂಡು ತುಂಬಿ ಹರಿಯುವ ಕುಮ್ಜಾ ನದಿಯನ್ನು ದಾಟಿ ಕಾಡಿನ ಮೂಲಕ ಹೊಸಂಗಡಿಯತ್ತಾ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಮಗುವನ್ನು ಅಪಹರಿಸಿಕೊಂಡು ಹೋಗುವಾಗ ತಾಯಿಗೆ ಎಚ್ಚರವಾಗಿ ಕೂಡಲೇ ಆ ವ್ಯಕ್ತಿಯ ಹಿಂದೆ ಓಡಿದ್ದಾರೆ , ಆದರೆ ನದಿಯ ನೀರು ತುಂಬಾ ಇರುವ ಕಾರಣ ಹಾಗೂ ಕತ್ತಲೆ ಇರುವ ಕಾರಣ ಆತನನ್ನು ಹಿಂಬಾಲಿಸಲು ಸಾಧ್ಯವಾಗಲಿಲ್ಲ.ಇವರ ಮನೆಗೆ ಬರಲು ಮೂರ್ನಾಲ್ಕು ದಾರಿಗಳಿದ್ದರೂ ನದಿಯ ದಾರಿಯಲ್ಲೇ ಹೋಗಿದ್ದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.ಮಕ್ಕಳ ಕಳ್ಳತನ ಮಾಡಿ ಸಾಗಿಸುವ ಮಾಫಿಯಾದ ಕೈವಾಡನೋ ಅಥವಾ ಕೌಂಟುಬಿಕ ಮನಸ್ತಾಪದಿಂದ ಆಗಿರುವ ಘಟನೆಯೋ ಎಂದು ಪೋಲಿಸರು ಪತ್ತೆಹಚ್ಚಬೇಕಿದೆ.ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ,ಶಂಕರನಾರಾಯಣ ಪೋಲಿಸರು ಸ್ಥಳಕ್ಕೆ ಬಂದು ಪರೀಶಿಲನೆ ನಡೆಸುತ್ತಿದ್ದಾರೆ.ಹಾಗೆಯೇ ಘಟನೆಯ ಬಗ್ಗೆ ವಿಚಾರ ತಿಳಿಯುತ್ತಿದ್ದಂತೆ ಉಡುಪಿ ಎಸ್.ಪಿ ನಿಶಾ ಜೇಂಸ್ ಮತ್ತು ಡಿ ಎಸ್.ಪಿ ದಿನೇಶ್ ಕುಮಾರ ಸ್ಥಳಕ್ಕೆ ಬಂದು ಆ ಮಗುವಿನ ಮನೆಯವರ ಹತ್ತಿರ ಮಾತನಾಡಿ ಮಾಹಿತಿ ಕಲೆಹಾಕುತ್ತಿದ್ದಾರೆ.ಉತ್ತರ ಪ್ರದೇಶದಲ್ಲಿ ,ಬೆಂಗಳೂರಿನಲ್ಲಿ ನಡೆಯುತ್ತಿದ್ದ ಘಟನೆಯು ಈಗ ಹಳ್ಳಿಗೂ ಬಂತಾ ಎಂದು ಕರಾವಳಿ ಜನ ಆತಂಕಗೊಂಡಿದ್ದಾರೆ.ಮೇಲಿನ ಚಿತ್ರದಲ್ಲಿರುವ ಹೆಣ್ಣುಮಗುವನ್ನು ಯಾರಾದರು ಕಂಡಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಕರೆಮಾಡಿ ಮಾಹಿತಿ ನೀಡಬೇಕಾಗಿ ಉಡುಪಿ ಜಿಲ್ಲಾ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





