BigTv News
March 11, 2023
ಕರ್ನಾಟಕ, ಧಾರವಾಡ
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಹೃದಯಾಘಾತದಿಂದ ವಿಧಿವಶರಾಗಿದ್ದು ವಿಧಾನ ಸಭಾ ಚುನಾವಣೆ ಆರಂಭವಾಗುವ ಹೊತ್ತಲ್ಲೇ ಕಾಂಗ್ರೆಸ್ ಗೆ ಆಘಾತವಾಗಿದೆ. ಧ್ರುವನಾರಾಯಣ ಅವರಿಗೆ ಇದ್ದಕ್ಕಿದ್ದಂತೆ ರಕ್ತವಾಂತಿ ಆರಂಭವಾದ ಕಾರಣ ತೀವ್ರ ರಕ್ತಸ್ರಾವದಿಂದ ಕೋಮಾಸ್ಥಿತಿ ತಲುಪಿದ್ದರು ಎನ್ನಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಧ್ರುವನಾರಾಯಣ ಅವರು ತೀವ್ರ ರಕ್ತಸ್ರಾವದಿಂದ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ ಎಂದು ಅವರಿಗೆ ಚಿಕಿತ್ಸೆ ನೀಡಿದ್ದ ಡಾ.ಮಂಜುನಾಥ್ ತಿಳಿಸಿದ್ದಾರೆ. ಧ್ರುವನಾರಾಯಣ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. …
Read More »
admin
March 10, 2023
ಕರ್ನಾಟಕ, ಧಾರವಾಡ, ಹುಬ್ಬಳ್ಳಿ ಸುದ್ದಿ
ಹುಬ್ಬಳ್ಳಿ: ನಾಳೆ ಹುಬ್ಬಳ್ಳಿ ನಗರದಲ್ಲಿ ಹೋಳಿ ಹಬ್ಬ ಇರುವುದರಿಂದ ಅಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಹುಬ್ಬಳ್ಳಿ ಧಾರವಾಡ ಮಧ್ಯದಲ್ಲಿ ಬಿಆರ್ ಟಿಎಸ್ ಬಸ್ ಗಳ ಕಾರ್ಯಾಚರಣೆ ಇರುವುದಿಲ್ಲ. ಬಣ್ಣದ ಕಾರ್ಯಕ್ರಮ ಮುಗಿದ ಬಳಿಕ ಬಿಆರ್ ಟಿಎಸ್ ಬಸ್ ಗಳನ್ನು ಪ್ರಯಾಣಿಕರ ದಟ್ಟನೆಗೆ ಅನುಗುಣವಾಗಿ ಕಾರ್ಯಾಚರಣೆ ಮಾಡಲಾಗುವುದು. ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಧಾರವಾಡ ನಾನ್ ಬಿಆರ್ ಟಿಎಸ್ ಬಸ್ ಗಳಲ್ಲಿ ಬಿಆರ್ ಟಿಎಸ್ ಮಾಸಿಕ ಪಾಸ್ ಸ್ಮಾರ್ಟ್ …
Read More »
admin
March 10, 2023
ಕರ್ನಾಟಕ, ಧಾರವಾಡ, ಹುಬ್ಬಳ್ಳಿ ಸುದ್ದಿ, ಹುಬ್ಬಳ್ಳಿ-ಧಾರವಾಡ
ಧಾರವಾಡ: ನಾಲೈದು ಜನ ಶಾಸಕರಿಗೆ ಈ ಬಾರಿ ಟಿಕೆಟ್ ತಪ್ಪಬಹುದು ಎಂಬ ಯಡಿಯೂರಪ್ಪನವರ ಹೇಳಿಕೆಗೆ ಶಾಸಕ ಅರವಿಂದ ಬೆಲ್ಲದ ಕೂಡ ಪುಷ್ಠಿ ನೀಡಿದ್ದಾರೆ .ಧಾರವಾಡದಲ್ಲಿ ಮಾತನಾಡಿದ ಅವರು, ಹಳೆಯ ಹಾಗೂ ವಯಸ್ಸಾದ ಶಾಸಕರು ಕೂಡ ಇದ್ದಾರೆ. ವಯಸ್ಸಾದ ಕಾರಣ ಅವರು ಟಿಕೆಟ್ ಬೇಡ ಎನ್ನಬಹುದು ಅಥವಾ ಪಕ್ಷ ಅವರಿಗೆ ಟಿಕೆಟ್ ನೀಡದೇ ಇರಬಹುದು. ತಾವಾಗಿಯೇ ಅವರು ಟಿಕೆಟ್ ಬೇಡ ಎನ್ನಬಹುದು. ಅಂತಹವರು 121 ಕ್ಷೇತ್ರದಲ್ಲಿ ನಾಲೈದು ಜನ ಇದ್ದೇ ಇರುತ್ತಾರೆ. …
Read More »
BigTv News
March 9, 2023
Breaking News, ಕರ್ನಾಟಕ, ಧಾರವಾಡ, ಹುಬ್ಬಳ್ಳಿ ಸುದ್ದಿ
ಹುಬ್ಬಳ್ಳಿ – ಈದ್ಗಾ ಮೈದಾನದಲ್ಲಿ ಕಾಮಣ್ಣ ಪ್ರತಿಷ್ಠಾಪನೆ ವಿಚಾರವಾಗಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ರಮನ್ ಗುಪ್ತಾ ಮಾತನಾಡಿದ್ದಾರೆ. ಆಯೋಜಕರು ಕನಿಷ್ಠ 10 ದಿನ ಮೊದಲೇ ಮನವಿ ಕೊಡಬೇಕಿತ್ತು. ಏಕಾಏಕಿ ಕೊಟ್ಟಿರೋದ್ರಿಂದ ದೊಡ್ಡ ನಗರವಾದ ಕಾರಣ ಬಂದೋ ಬಸ್ತ ಗೆ ಅನಿವಾರ್ಯವಾಗಿರುವುದರಿಂದಾ ಸಮಸ್ಯೆಯಾಗುತ್ತದೆ. ಮೊದಲೇ ಮನವಿ ಕೊಟ್ಟಿದ್ರೆ, ಎಲ್ಲೆಲ್ಲಿ ಪೊಲೀಸ್ ನಿಯೋಜನೆ ಸಿಸಿ ಕ್ಯಾಮೆರಾ ಅಳವಡಿಕೆ ಮಾಡ್ತಿದ್ವಿ. ಈಗಾಗಲೇ ನಗರದಲ್ಲಿ 472 ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.ಆದ್ರೆ ಇವೆಲ್ಲ ಒಂದೇ …
Read More »
admin
February 9, 2023
Breaking News, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಶ್ರೀ ಜಗಜ್ಯೋತಿ ಬಸವೇಶ್ವರ ವಿಮಾನ ನಿಲ್ದಾಣವೆಂದು ನಾಮಕರಣ ಮಾಡಬೇಕು ಎಂದು ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟದ ರಾಜ್ಯಾಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಡಾ. ಶರಣಪ್ಪ ಕೊಟಗಿ ಒತ್ತಾಯಿಸಿದರು.ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯ ಗುಲಾಬಿ ವನದಲ್ಲಿದ್ದ ಶ್ರೀ ಜಗಜ್ಯೋತಿ ಬಸವಣ್ಣನವರ ಪುತ್ಥಳಿಯನ್ನು ತೆರವುಗೊಳಿಸಿದ್ದು, ಗುಲಾಬಿ ವನದಲ್ಲಿದ್ದ ಪುತ್ಥಳಿಯನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದ ಗೇಟ್ ಬಳಿ ಸ್ಥಾಪಿಸಬೇಕು, ಅಲ್ಲದೇ ಗುಲಾಬಿ ವನದಲ್ಲಿ ಅತೀ ವಿಸ್ತಾರವಾದ ಬಸವಣ್ಣನವರ …
Read More »
BigTv News
January 19, 2023
Breaking News, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಬಿಜೆಪಿ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನಪರವಾದ ಸರ್ಕಾರ ಬಂದೆ ಬರುತ್ತದೆ ಎಂದು ಯೂಥ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಹಮ್ಮದ್ ನಲಪಾಡ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2013 ರಿಂದ 2018 ರ ವರೆಗೆ ಕಾಂಗ್ರೆಸ್ ಉತ್ತಮ ಆಡಳಿತ ಮಾಡಿದೆ. ಈಗಿನ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಜನಪರವಾದ ಸರ್ಕಾರ 2023 ಕ್ಕೆ ಬಂದೆ ಬರುತ್ತದೆ ಎಂದರು. ಪಕ್ಷಾಂತರ ಮಾಡುವವರೆಗೆ ಬಿ.ಕೆ.ಹರಿಪ್ರಸಾದ ಸರಿಯಾಗಿ ಹೇಳಿದ್ದಾರೆ. …
Read More »
BigTv News
January 9, 2023
Breaking News, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿಯವರನ್ನು ಮೆಚ್ಚಿಸಲು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ನಗರದಲ್ಲಿ ಕಳಪೆ ಕಾಮಗಾರಿ ನಡೆಸುವ ಮೂಲಕ ಜನರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಇದೇ 12 ರಂದು ಯುವ ಜನೋತ್ಸವ ಉದ್ಘಾಟನೆಗೆಂದು ಅವಳಿ ನಗರಗಳಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಬರ ಮಾಡಿಕೊಳ್ಳಲು ರಸ್ತೆಗುಂಡಿ ಮತ್ತು ದೂಳಿನಿಂದ ಕಂಗಾಲಾಗಿದ್ದ ಹುಬ್ಬಳ್ಳಿ ಧಾರವಾಡ ಮಂದಿಗೆ ಆಸರೆಯಾಗಲು ಪ್ರಧಾನಿ ಮೋದಿಯೇ ಬರಬೇಕಾಯಿತು. ಹು-ಧಾ ಪಾಲಿಕೆಯಿಂದ ರಾತ್ರೋರಾತ್ರಿ …
Read More »
Shaikh BigTv
January 2, 2023
Breaking News, ಅಪರಾಧ, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಕಾಂಗ್ರೆಸ್ ನನಮ್ಮ ಜಲ ನಮ್ಮ ನೀರು ಕಾರ್ಯಕ್ರಮ ನಡೆಯುವ ವೇಳೆಯಲ್ಲಿ ಮೈದಾನದ ಹತ್ತಿರ ಭಾರಿ ಅವಘಡ ಸಂಭವಿಸಿದೆ.. ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯ ಅಶೋಕ ಹೊಟೇಲ್ ಹತ್ತಿರ ಸಾರಿಗೆ ಸಂಸ್ಥೆಯ ಬಸ್ಸ ಅಡ್ಡಾದಿಡ್ಡಿ ಹರಿದು ಒಬ್ಬ ಸ್ಥಳದಲ್ಲೆ ಮೃತ ಪಟ್ಟಿದ್ದು ಇನ್ನೊಬ್ಬನ ಸ್ಥಿತಿ ಚಿಂತಾಜನಕವಾಗಿದೆ ಸಮಾವೇಶ ನಡೆಯುವ 100 ಮೀಟರ್ ಅಳತೆಯ ಅಂತರದಲ್ಲಿ ಈ ಘಟನೆ ನಡೆದಿದ್ದು ಗಾಯಾಳುವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಸಮಾವೇಶ …
Read More »
BigTv News
September 23, 2022
Breaking News, ಅಪರಾಧ, ಕರ್ನಾಟಕ, ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಯುವಕನೊಬ್ಬ ಪೊಲೀಸ್ ಠಾಣೆಯಲ್ಲಿಯೇ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ನಿನ್ನೆ ಗುರುವಾರ ಸಾಯಂಕಾಲ ನಡೆದಿದೆ. ಹಳೇ ಹುಬ್ಬಳ್ಳಿಯ ಇಂಡಿ ಪಂಪ್ ಸರ್ಕಲ್ ಬಳಿಯಲ್ಲಿನ ಬಿರಿಯಾನಿ ಹೌಸ್ ಮಾಲೀಕರ ಜೊತೆ ರಾಘವೇಂದ್ರ ಎಂಬ ಯುವಕನ ನಡುವೆ ಮಾತಿಗೆ ಮಾತು ಬೆಳೆದು ಅತಿರೇಕಕ್ಕೆ ಹೋದ ಪರಿಣಾಮ ಬಿರಿಯಾನಿ ಹೌಸ್ ಮಾಲೀಕರು ರಾಘವೇಂದ್ರನನ್ನು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಆಗ ಪೊಲೀಸರು …
Read More »
BigTv News
September 14, 2022
Breaking News, ಕರ್ನಾಟಕ, ಧಾರವಾಡ, ಸುದ್ದಿ, ಹುಬ್ಬಳ್ಳಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಕಾರು ಪಲ್ಟಿಯಾಗಿ ಮೂವರು ದುರ್ಮರಣಕ್ಕೀಡಾದ ಘಟನೆ ಹುಬ್ಬಳ್ಳಿ ತಾಲೂಕಿನ ವರೂರ ಗ್ರಾಮದ ಗಣೇಶ ಹೋಟೆಲ್ ಬಳಿ ಮಂಗಳವಾರ ತಡರಾತ್ರಿ ನಡೆದಿದೆ. ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ದಾವಣಗೆರೆಯಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣತಪ್ಪಿ ಪಲ್ಟಿಯಾಗಿದೆ. ದಾವಣಗೆರೆ ಮೂಲದ ಚಾಲಕ ಶಾರೂಖ್ (27), ಸೋಹೆಲ್(26) ಮತ್ತು ಚಿಕ್ಕಮಗಳೂರು ಜಿಲ್ಲೆ ಆಲ್ದೂರಿನ ಎಚ್.ಕೆ. ಸುಶೀಲಾ (38) ಮೃತರು. ಅವಲಕ್ಕಿ ವ್ಯಾಪಾರ ಮಾಡಿಕೊಂಡಿದ್ದ ಇವರು ದಾವಣಗೆರೆಯಿಂದ ಮಂಗಳವಾರ ರಾತ್ರಿ ಹುಬ್ಬಳ್ಳಿ …
Read More »