Breaking News

ಕರ್ನಾಟಕ

ಪಾದಯಾತ್ರೆಯಿಂದ ನೀರಿಗಿಂತ, ಕುರ್ಚಿಗಾಗಿ ಹೋರಾಟ ನಡೆಸುತ್ತಿದ್ದಾರೆ

ಚಿತ್ರದುರ್ಗ: ಪಾದಯಾತ್ರೆ ಮೂಲಕ ಸಿದ್ದರಾಮಯ್ಯ, ಬಿಜೆಪಿ ಹಾಗೂ ಕುಮಾರಸ್ವಾಮಿ ಅವರನ್ನು ಹಣಿಯುವ ತಂತ್ರ ಮಾಡಿದ್ದಾರೆ .ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಕೆದಾಟು ಪಾದಯಾತ್ರೆ ಮೂಲಕ ಒಂದೇ ಕಲ್ಲಿನಿಂದ ಮೂರು ಹಕ್ಕಿ ಹೊಡೆಯುವ ತಂತ್ರ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿದರು. ಚಿತ್ರದುರ್ಗದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಪಾದಯಾತ್ರೆಯಿಂದ ನೀರಿಗಿಂತ, ಕುರ್ಚಿಗಾಗಿ ನಡೆಸುತ್ತಿದ್ದಾರೆ. ಇದೊಂದು ರೀತಿಯಲ್ಲಿ ಅಸ್ತಿತ್ವ ಉಳಿಸಿಕೊಳ್ಳುವ ಪಾದಯಾತ್ರೆ ಎಂದು ಕುಟಕಿದರು.

Read More »

ಹತ್ತು ಜನ ಪೊಲೀಸರಿಗೆ ಅಂಟಿದ ಕೊರೊನಾ

ಧಾರವಾಡ: ಜಿಲ್ಲೆಯಾದ್ಯಂತ ದಿನೇ ದಿನೇ ಕೊರೊನಾ ಸೋಂಕು ಹೆಚ್ಚಳವಾಗುತ್ತಿದ್ದು, ಶಾಲಾ ಮಕ್ಕಳಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿದೆ. ಇದೀಗ ಕೊರೊನಾ ವಾರಿಯರ್ಸ್‌ಗಳಾದ ಪೊಲೀಸರಲ್ಲೂ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಧಾರವಾಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಹತ್ತು ಜನ ಪೊಲೀಸರಿಗೆ ಸೋಂಕು ತಾಕಿದೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ, ಸದ್ಯ ಹತ್ತು ಜನ ಪೊಲೀಸ್ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದು. ಸೋಂಕು …

Read More »

ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಶಿವಶಂಕರರೆಡ್ಡಿಗೆ ಕೊರೊನಾ ದೃಢ

ಮೇಕೆದಾಟು ಯೋಜನೆ ಪಾದಯಾತ್ರೆಯ ಮೂರನೇ ದಿನ ಯಶಸ್ವಿಯಾಗಿ ಮುಗಿದಿದೆ. ಸಾಕಷ್ಟು ಆರೋಪ ಮತ್ತು ಪ್ರತ್ಯಾರೋಪಗಳಿಂದ ನಡೆಯುತ್ತಿರುವ ಮೇಕೆದಾಟು ಯೋಜನೆ ರಾಜ್ಯಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಶಾಸಕ ಎನ್ ಎಚ್ ಶಿವಶಂಕರರೆಡ್ಡಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ನಿನ್ನೆ ರಾತ್ರಿ ಶಾಸಕ ಶಿವಶಂಕರರೆಡ್ಡಿ ಪಾದಯಾತ್ರೆಯಿಂದ ಗೌರಿಬಿದನೂರಿಗೆ ವಾಪಸ್ಸಾಗಿದ್ದರು.

Read More »

ರಾಜ್ಯದಲ್ಲಿ ನಾಳೆಯಿಂದ ಹೊಸ ನಿಯಮಗಳು ಜಾರಿ

ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ  ಕೋವಿಡ್ ಕುರಿತ ಸಭೆ ನಡೆಯುತ್ತಿದ್ದ.ರಾಜ್ಯಾದ್ಯಂತ ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿದ್ದು, ಕೋವಿಡ್ ಮೂರನೇ ಅಲೆ ನಿಯಂತ್ರಣಕ್ಕೆ ಸರ್ಕಾರ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಂಡಿದೆ. ನಾಳೆಯಿಂದಲೇ ರಾಜ್ಯದಲ್ಲಿ ಹೊಸ ಬಿಗಿ ನಿಯಮಗಳು ಜಾರಿಗೆ ಬರಲಿವೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ರಾಜ್ಯಾದ್ಯಂತ ಕೋವಿಡ್ ಟೆಸ್ಟ್ ಹೆಚ್ಚಿಸಲಾಗುವುದು ಪ್ರತಿದಿನ ಈಗಿರುವ 1 ಲಕ್ಷದ 10 ಸಾವಿರ ಟೆಸ್ಟಿಂಗ್ ಸಂಖ್ಯೆಯನ್ನು 1 ಲಕ್ಷದ 50 ಸಾವಿರಕ್ಕೆ ಹೆಚ್ಚಿಸಲಾಗುವುದು. …

Read More »

ಬೆಂಗಳೂರಿನ ಸುಂದರ ಕ್ಷೇತ್ರಗಳಲ್ಲಿ ಚಿಕ್ಕಪೇಟೆ ಒಂದಾಗಲಿದೆ : ಉದಯ್ ಬಿ. ಗರುಡಾಚಾರ್

ಬೆಂಗಳೂರು :ಮುಂದಿನ ಒಂದೂವರೆ ವರ್ಷದೊಳಗೆ ಚಿಕ್ಕಪೇಟೆ ಕ್ಷೇತ್ರ ಬೆಂಗಳೂರಿನ ಸುಂದರ ಕ್ಷೇತ್ರಗಳಲ್ಲಿ ಒಂದಾಗಲಿದೆ ಎಂದು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಉದಯ್ ಬಿ. ಗರುಡಾಚಾರ್ ಭರವಸೆ ನೀಡಿದರು. ಕಲಾಸಿಪಾಳ್ಯದ ಪಾಪುರಲ್ ಆಟೊ ಮೊಬೈಲ್ ವೃತ್ತದಲ್ಲಿ  ಕಮ್ಯುನಿಟಿ ಸಂಕ್ರಾಂತಿ ಸಂಭ್ರಮದ ವತಿಯಿಂದ ಆ ಯೋಜಿಸಿದ್ದ ಸಂಕ್ರಾಂತಿ ಉತ್ಸವದಲ್ಲಿ ಮಂಗಳವಾರ ಅವರು ಮಾತನಾಡಿದರು. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ನಾಲ್ಕೈದು ವರ್ಷಗಳ ಹಿಂದೆ, ಅಂದರೆ ನಾನು ಶಾಸಕನಾಗಿ ಬರುವ ಮೊದಲು ಸಾಕಷ್ಟು ಅವ್ಯವಸ್ಥೆಗಳಿದ್ದವು. ರಸ್ತೆಗಳು, …

Read More »

ಬೂಸ್ಟರ್ ಡೋಸ್ ವಿತರಣೆಗೆ ಚಾಲನೆ ನೀಡಿದ ಸಿಎಂ

ಬೆಂಗಳೂರು: ರಾಜ್ಯದಲ್ಲಿ ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ವಿತರಣೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಇಂದು ಶಿವಾಜಿನಗರದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜಿನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಈ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಇದಕ್ಕಾಗಿ ಶುಕ್ರವಾರದಿಂದಲೇ ಕೋವಿನ್​ ವೆಬ್​​​​​ಸೈಟ್​ನಲ್ಲಿ ನೋಂದಣಿ ಕೂಡಾ ಆರಂಭವಾಗಿದೆ. ಡಿಸೆಂಬರ್​25 ರಂದು ದಿಢೀರ್​ ಆಗಿ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, …

Read More »

ಕಾಗ್ರೆಂಸ್ ನಾಯಕರು ವಿರುದ್ಧ FIR ದಾಖಲು

ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿತ್ತು. ನಿನ್ನೆ ಕರ್ಫ್ಯೂ ಇದ್ದರೂ ಕೂಡ ನಿಯಮ ಉಲ್ಲಂಘನೆ ಮಾಡಿ ಕಾಂಗ್ರೆಸ್ ನಾಯಕರು ಮೇಕೆದಾಟು ಪಾದಯಾತ್ರೆಗೆ ಚಾಲನೆ ನೀಡಿದ್ದರು. ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿ ಪಾದಯಾತ್ರೆಗೆ ಚಾಲನೆ ನೀಡಿದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ 30 ಜನ ಕಾಂಗ್ರೆಸ್ ನಾಯಕರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಈ ಕುರಿತು ಮಾತನಾಡಿರುವ ಸಿಎಂ ಬಸವರಾಜ್ ಬೊಮ್ಮಾಯಿ, ನಿಯಮ …

Read More »

ಮಾಸ್ಕ್‌ ಧರಿಸದೆ ಸಂಚರಿಸುವವರಿಂದ ದಂಡ ವಸೂಲಿ

ರಾಯಚೂರು: ಕೊರೋನಾ ದಿನ ದಿನದಿಂದಕ್ಕೆ ಏರಿಕೆ ಕಾಣುತ್ತಿದ್ದುದು ಇದೀಗ ವಿಕೆಂಡ್ ಲಾಕ್ ಮಾಡಲಾಗಿದ್ದು ಎಲ್ಲರಲೂ ಆತಂಕ ಮನೆ ಮಾಡಿದೆ. ಇದೀಗ ವೀಕೆಂಡ್ ಕರ್ಫ್ಯೂ ಎರಡನೇ ದಿನ ಕ್ಕೆ ಕಾಲಿಟ್ಟುದೆ. ವಾರಾಂತ್ಯದ ಕರ್ಫ್ಯೂ ಜಾರಿಯನ್ನು ಭಾನುವಾರ ಬಿಗಿ ಮಾಡಿದ್ದ ಪೊಲೀಸರು, ಮಾಸ್ಕ್‌ ಧರಿಸದೆ ಸಂಚರಿಸುವವರಿಂದ ದಂಡ ವಸೂಲಿ ಮಾಡಿದರು. ಅಲ್ಲದೆ, ಅನಗತ್ಯ ಸಂಚಾರಿಗಳಿಗೆ ಬಿಸಿ ಮುಟ್ಟಿಸಿದರು. ನಗರದ ಪ್ರತಿಯೊಂದು ವೃತ್ತ ಹಾಗೂ ರಸ್ತೆ ಮಾರ್ಗಗಳಲ್ಲಿ ಪೊಲೀಸರು ಬೀಡು ಬಿಟ್ಟಿದ್ದರು.ಕೆಲವು ಕಡೆಗಳಲ್ಲಿ ಬ್ಯಾರಿಕೇಡ್‌ …

Read More »

ದಾವಣಗೆರೆ ಜಿಲ್ಲೆಯಲ್ಲಿ 30 ಜನಕ್ಕೆ ಕೊರೊನಾ ಪಾಸಿಟಿವ್

ದಾವಣಗೆರೆ : ಕೊರೋನಾ ದಿನ ದಿನದಿಂದಕ್ಕೆ ಏರಿಕೆ ಕಾಣುತ್ತಿದ್ದುದು ಇದೀಗ ವಿಕೆಂಡ್ ಲಾಕ್ ಮಾಡಲಾಗಿದ್ದು ಎಲ್ಲರಲೂ ಆತಂಕ ಮನೆ ಮಾಡಿದೆ. ಇದೀಗ ವೀಕೆಂಡ್ ಕರ್ಫ್ಯೂ ಎರಡನೇ ದಿನ ಕ್ಕೆ ಕಾಲಿಟ್ಟುದ್ದು ನಗರದ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರು ಕೂಡಾ ಕೊರೋನಾ ಏರಿಕೆ ಕ್ರಮದಲ್ಲಿ ಸಾಗುತ್ತಿದೆ. ಇಂದು ದಾವಣಗೆರೆ ಜಿಲ್ಲೆಯಲ್ಲಿ 30 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ದಾವಣಗೆರೆಯಲ್ಲಿ 20, ಜಗಳೂರು 6, ಚನ್ನಗಿರಿ 2, ಹೊರ ಜಿಲ್ಲೆಯಿಂದ ಬಂದ 2 ಮಂದಿಯಲ್ಲಿ ಸೋಂಕು …

Read More »

23 ಖಾಕಿ ಪಡೆದೆ ಕೊರೋನಾ ಪಾಸಿಟಿವ್

ಹಾಸನ: ಕೊರೋನಾ ದಿನ ದಿನದಿಂದಕ್ಕೆ ಏರಿಕೆ ಕಾಣುತ್ತಿದ್ದುದು ಇದೀಗ ವಿಕೆಂಡ್ ಲಾಕ್ ಮಾಡಲಾಗಿದ್ದು ಎಲ್ಲರಲೂ ಆತಂಕ ಮನೆ ಮಾಡಿದೆ.    ಜಿಲ್ಲೆಯಲ್ಲಿ 23 ಪೊಲೀಸರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಓರ್ವ ಇನ್ಸ್‌ಪೆಕ್ಟರ್, ಓರ್ವ ಸಬ್ ಇನ್ಸ್‌ಪೆಕ್ಟರ್, 21 ಕಾನ್ಸ್‌ಟೇಬಲ್‌ಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ನಗರದಲ್ಲಿಯೇ ಅತಿ ಹೆಚ್ಚು ಪೊಲೀಸರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಟ್ರಾಫಿಕ್ ಹಾಗೂ ಗ್ರಾಮಾಂತರ ಠಾಣೆ ಪೊಲೀಸರಿಗೆ ಕೊರೊನ ಪಾಸಿಟಿವ್ ಬಂದಿದೆ. ಶುಕ್ರವಾರ ಜಿಲ್ಲೆಯ ಎಲ್ಲಾ ಪೊಲೀಸರಿಗೂ …

Read More »