ಬೆಂಗಳೂರು: ಪ್ರಸಿದ್ಧ ಟಾಟಾ ಸಾಲ್ಟ್ ಹೆಸರಿನಲ್ಲಿ ನಕಲಿ ಉಪ್ಪು ಮಾರಾಟ ಮಾಡುತ್ತಿದ್ದ ಜಾಲವೊಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ ಪತ್ತೆಯಾಗಿದೆ. ಅಧಿಕಾರಿಗಳು ದಾಳಿ ನಡೆಸಿ 840 ಪ್ಯಾಕೆಟ್ ನಕಲಿ ಉಪ್ಪು ಹಾಗೂ 1,850 ಕೆಜಿ ಸಡಿಲ ಉಪ್ಪನ್ನು ವಶಪಡಿಸಿಕೊಂಡಿದ್ದಾರೆ. ಟಾಟಾ ಸಾಲ್ಟ್ ಪ್ಯಾಕೆಟ್‌ನಂತೆಯೇ ನಕಲಿ ಪೊಟ್ಟಣಗಳನ್ನು ಸಿದ್ಧಪಡಿಸಿ, ಅದರಲ್ಲಿ ಕಳಪೆ ಗುಣಮಟ್ಟದ ಉಪ್ಪು ತುಂಬಿ ಮಾರಾಟ ಮಾಡಲಾಗುತ್ತಿತ್ತು. ಇಂತಹ ಉಪ್ಪಿನ ಸೇವನೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ. ಉಪ್ಪು ಖರೀದಿಸುವಾಗ ಪ್ಯಾಕೆಟ್ ಸೀಲ್, ತಯಾರಿಕಾ ವಿವರ, ಬ್ಯಾಚ್ ಸಂಖ್ಯೆ ಹಾಗೂ QR ಕೋಡ್ ಪರಿಶೀಲಿಸುವಂತೆ ಗ್ರಾಹಕರಿಗೆ ಸೂಚಿಸಲಾಗಿದೆ. ಅಲ್ಲದೆ, ದಿನಕ್ಕೆ ಐದು ಗ್ರಾಂಗಿಂತ ಕಡಿಮೆ ಉಪ್ಪು ಸೇವಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
