ಕಲಬುರಗಿ: ಪತಿಯ ಮರ್ಮಾಂಗಕ್ಕೆ ಒದ್ದು, ರುಬ್ಬುಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಪತಿ ಸಿದ್ದರಾಮನನ್ನು ಹತ್ಯೆ ಮಾಡಿ ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದ ಪತ್ನಿ ಅಂಬಿಕಾ ಮತ್ತು ಆಕೆಯ ಪ್ರಿಯಕರ ಮಾರುತಿಯನ್ನು ಪೊಲೀಸರು ಬಂಧಿಸಿದ್ದಾರೆ. ನವೆಂಬರ್ 3ರಂದು ರಾತ್ರಿ ಅಂಬಿಕಾ ಪತಿಗೆ ನಿದ್ರೆ ಮಾತ್ರೆ ನೀಡಿದ್ದಾಳೆ ಎನ್ನಲಾಗಿದೆ. ಬಳಿಕ ಪ್ರಿಯಕರ ಮಾರುತಿ ಮನೆಗೆ ಬಂದಿದ್ದಾನೆ. ನವೆಂಬರ್ 4ರಂದು ಬೆಳಗ್ಗೆ ಎಚ್ಚರಗೊಂಡ ಸಿದ್ದರಾಮ ಪತ್ನಿ ಮತ್ತು ಪ್ರಿಯಕರನನ್ನು ಒಟ್ಟಿಗೆ ಕಂಡು ಜಗಳವಾಡಿದ್ದಾನೆ. ಈ ವೇಳೆ ಇಬ್ಬರೂ ಸೇರಿ ಸಿದ್ದರಾಮನನ್ನು ಹತ್ಯೆ ಮಾಡಿ, ಮೃತದೇಹವನ್ನು ಮಂಚದ ಮೇಲೆ ಮಲಗಿಸಿ ಸಹಜ ಸಾವು ಎಂದು ನಾಟಕವಾಡಿದ್ದಾರೆ ಎನ್ನಲಾಗಿದೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಪತ್ನಿ ಮತ್ತು ಪ್ರಿಯಕರನನ್ನು ಬಂಧಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
