Breaking News

ಮಂಡ್ಯ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಸರಾ ಹಬ್ಬದ ದಿನ ರೈತರು ಪ್ರತಿಭಟನೆ

ಮಂಡ್ಯ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಸರಾ ಹಬ್ಬದ ದಿನ (ಅ. 5 ರಂದು) ಹೆದ್ದಾರಿ ಬಂದ್​ಗೆ ರೈತ ಸಂಘಟನೆ ಕರೆ ನೀಡಿದೆ. ಮಂಡ್ಯ, ಮದ್ದೂರು, ಕೆ.ಆರ್​.ಪೇಟೆ, ಮಳವಳ್ಳಿ, ಶ್ರೀರಂಗಪಟ್ಟಣ, ಮೈಸೂರಿನ ಇಲವಾಲ, ಟಿ.ನರಸೀಪುರ, ನಂಜನಗೂಡು, ಹುಣಸೂರಿನಲ್ಲಿ ಬೃಹತ್ ಪ್ರತಿಭಟನೆಗೆ ರೈತ ಸಂಘಟನೆ ಕರೆ ನೀಡಿದೆ. ಟ್ರ್ಯಾಕ್ಟರ್, ಎತ್ತಿನಗಾಡಿಗಳ ಮೂಲಕ ಹೆದ್ದಾರಿ ತಡೆಯಲಾಗುವುದು. ರಾಜ್ಯ ಸರ್ಕಾರ ಕೂಡಲೇ ನಮ್ಮ ಸಮಸ್ಯೆಗೆ ಸ್ಪಂದಿಸಬೇಕು, ಬೇಡಿಕೆ ಈಡೇರಿಸುವಂತೆ ಹಲವು ಬಾರಿ ಮನವಿ ಮಾಡಿದ್ದೆವು. …

Read More »

ದಸರಾ ಆಯುಧ ಪೂಜೆಗೆ ಕೇವಲ 50 ರೂ ಕೊಟ್ಟ ರಾಜ್ಯ ಸರ್ಕಾರ

ಮಂಡ್ಯ : ದಸರಾ ಆಯುಧ ಪೂಜೆಗೆ ಕೇವಲ 50 ರೂ ಕೊಟ್ಟ ರಾಜ್ಯ ಸರ್ಕಾರದ ವಿರುದ್ಧ ಮಂಡ್ಯ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದು, ಕೋಟಿ ಕೋಟಿ ಬೊಕ್ಕಸಕ್ಕೆ ತುಂಬಿಕೊಳ್ಳುವ ಸರ್ಕಾರ ಚಿಲ್ಲರೆ ಕಾಸು ನೀಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮಂಡ್ಯ ಘಟಕಗಳಲ್ಲಿನ ಪ್ರತಿ ವಾಹನಕ್ಕೆ ತಲಾ 50 ರೂಪಾಯಿ. ವಿಭಾಗೀಯ ಕಾರ್ಯಗಾರಕ್ಕೆ 1000 ರೂಪಾಯಿ. ಪ್ರಾದೇಶಿಕ ಕಾರ್ಯಾಗಾರಕ್ಕೆ 2000 ರೂಪಾಯಿ ಹೀಗೆ ಆಯುಧ ಪೂಜೆಗಾಗಿ ಕೆಎಸ್‌ಆರ್‌ಟಿಸಿಗೆ ಸರ್ಕಾರ ಚಿಲ್ಲರೆ ಕಾಸು …

Read More »

ಜಗನ್ನಾಥ್ ಶೆಟ್ಟಿ ಹನಿಟ್ರ್ಯಾಪ್‌ ಗೆ ಬಿಗ್ ಟ್ವಿಸ್ಟ್

ಮಂಡ್ಯ: ಇಲ್ಲಿನ ಚಿನ್ನದ ವ್ಯಾಪಾರಿ ಜಗನ್ನಾಥ್ ಶೆಟ್ಟಿ ನಿಜವಾಗಿಯೂ ಹನಿಟ್ರ್ಯಾಪ್‌ನಲ್ಲಿ ಸಿಕ್ಕಿಹಾಕಿಕೊಂಡರಾ?ಎಂಬ ಅನುಮಾನ ಈಗ ಮೂಡುತ್ತಿದೆ. ಇವರನ್ನು ಹನಿಟ್ರ್ಯಾಪ್ ಬಲೆಗೆ ಕೆಡವಲು ಹಲವು ದಿನಗಳಿಂದ ಪ್ಲಾನ್ ನಡೆದಿತ್ತಂತೆ. ಈ ವ್ಯಾಪಾರಿಯ ಜೊತೆಗೆ ಲಾಡ್ಜ್‌ನಲ್ಲಿ ಕಾಣಿಸಿಕೊಂಡ ಯುವತಿಯೂ ಕೂಡ ಸಲ್ಮಾ ಭಾನು ಆಂಡ್ ಟೀಂನ ಸದಸ್ಯೆ. ಆ ಯುವತಿಯ ಮೂಲಕವೇ ಜಗನ್ನಾಥ್ ಶೆಟ್ಟಿಗೆ ಖೆಡ್ಡಾ ತೋಡಿದ್ದಾರೆ ಎಂಬುದು ಲೇಟೆಸ್ಟ್‌ ವಿಚಾರ. ಫೋನ್ ಮೂಲಕ ಯುವತಿ ಜಗನ್ನಾಥ್​ ಶೆಟ್ಟಿ ಅವರ ಸ್ನೇಹ ಸಂಪಾದಿಸಿದ್ದಳು. …

Read More »

ಬಿಜೆಪಿ ಮುಖಂಡ ಹನಿಟ್ರ್ಯಾಪ್​​ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಮಂಡ್ಯ :- ಆರ್​ಎಸ್​ಎಸ್​, ಬಿಜೆಪಿ ಮುಖಂಡ ಹನಿಟ್ರ್ಯಾಪ್​​ ಸುಳಿಯಲ್ಲಿ ಸಿಲುಕಿ ಹಾಕಿಕೊಂಡಿದ್ದು, 50 ಲಕ್ಷ ಹಣವನ್ನು ಸುಲಿಗೆ ಮಾಡಿ ದ್ದಾರೆ. ಎಂದು ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿ ಮುಖಂಡ, ಧಾರ್ಮಿಕ ಪರಿಷತ್ ಸದಸ್ಯ, ಶ್ರೀನಿಧಿ ಗೊಲ್ಡ್ ಮಾಲೀಕ ಜಗನ್ನಾಥ ಶೆಟ್ಟಿ ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಗೆ ಕಳೆದ ತಿಂಗಳು ದೂರು ನೀಡಿದ್ದರು. ಜಗನ್ನಾಥ ಶೆಟ್ಟಿ ಮಂಗಳೂರಿಗೆ ತೆರಳಲು ಮಂಡ್ಯದಲ್ಲಿ ಬಸ್​ಗಾಗಿ ಕಾಯುತ್ತಿದ್ದರು. ಈ ವೇಳೆ ನಾಲ್ವರು ಮೈಸೂರಿಗೆ ಡ್ರಾಪ್​ ಕೊಡುವುದಾಗಿ …

Read More »

ಸರ್ಪದಿಂದ ಮಗುವನ್ನು ರಕ್ಷಿಸಿದ ತಾಯಿ : ವಿಡಿಯೋ ವೈರಲ್

ಮಂಡ್ಯ: ಕ್ಷಣಾರ್ಧದಲ್ಲಿ ನಾಗರಹಾವಿನಿಂದ ಮಗನನ್ನು ತಾಯಿಯೊಬ್ಬಳು ಕಾಪಾಡಿರುವ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ತಾಯಿಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮದ್ದೂರಿನ ಚಾಮುಂಡೇಶ್ವರಿ ನಗರದಲ್ಲಿ ಈ ಘಟನೆ ನಡೆದಿದೆ. ಸದ್ಯ ಇವರು ಪಟ್ಟಣದ ಕೆಮ್ಮಣ್ಣನಾಲೆ ಸರ್ಕಲ್ ಸಮೀಪ ವಾಸವಾಗಿದ್ದಾರೆ.ವೈದ್ಯರಾಗಿ ಕೆಲಸ ಮಾಡುತ್ತಿರುವ ವಿಷ್ಣುಪ್ರಸಾದ್ ಪುತ್ರ ನಾಗರ ಹಾವಿನ ಕಡಿತದಿಂದ ಬಚಾವಾದ ಬಾಲಕನಾಗಿದ್ದಾನೆ. ಮನೆಯಿಂದ ಹೊರ ಹೋಗಲು ತಾಯಿ ಜೊತೆ ಹೊರ ಬಂದ ಬಾಲಕ ಮನೆಯ ಬಾಗಿಲ ಬಳಿ ಹರಿದು …

Read More »

ಅರ್ಧ ಕತ್ತರಿಸಿದ ಮಹಿಳೆಯ ಮೃತದೇಹ ಕಾಲುವೆಯಲ್ಲಿ ಪತ್ತೆಮಂ

ಮಂಡ್ಯ : ಜಿಲ್ಲೆ ಪಾಂಡವಪುರ ತಾಲೂಕಿನ ಬೇಬಿ ಗ್ರಾಮದ ಕಾಲುವೆಯಲ್ಲಿ ಅರ್ಧ ಕತ್ತರಿಸಿದ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಮೃತ ಮಹಿಳೆಯ ಹೊಟ್ಟೆಯ ಮೇಲ್ಭಾಗ, ತಲೆ, ಕೈ ನಾಪತ್ತೆಯಾಗಿದೆ. ಬೇರೆಲ್ಲೋ ಕೊಲೆ ಮಾಡಿ ದೇಹವನ್ನ ಕತ್ತರಿಸಿ ಕಾಲುವೆಯಲ್ಲಿ ಎಸೆದಿರುವ ಶಂಕೆ ವ್ಯಕ್ತವಾಗಿದ್ದು ಸ್ಥಳಕ್ಕೆ ಭೇಟಿ ನೀಡಿ ಪಾಂಡವಪುರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಮೃತ ದೇಹದ ಕಾಲುಗಳಿಗೆ ಹಗ್ಗ ಕಟ್ಟಿರುವುದು ಬೆಳಕಿಗೆ ಬಂದಿದ್ದು ಮೃತ ಮಹಿಳೆಯ ದೇಹದ ಇತರೆ ಭಾಗಗಳಿಗಾಗಿ ಶೋಧಕಾರ್ಯ ನಡೆಯುತ್ತಿದೆ.

Read More »

ಮುಂಜಾನೆ ವೇಳೆ ಮಂಡ್ಯದಲ್ಲಿ ಘೋರ ದುರಂತ : ಮಹಿಳೆ ಸಾವು , 40 ಜನ ಆಸ್ಪತ್ರೆಗೆ ದಾಖಲು

ಮಂಡ್ಯ : ಬೆಳ್ಳಂಬೆಳಗ್ಗೆ ಮನೆಯ ತಾರಸಿ ಕುಸಿದು ಬಿದ್ದು ಘೋರ ದುರಂತ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹುಲಿಗೆರೆಪುರ ಗ್ರಾಮದಲ್ಲಿ ಇಂದು‌ ಮುಂಜಾನೆ ಮಾದೇಗೌಡ ನಿವಾಸದಲ್ಲಿ ನಡೆದಿದೆ. ಗ್ರಾಮದ ಪುಟ್ಟಲಿಂಗಮ್ಮ(50) ಸಾವನ್ನಪ್ಪಿದ್ದು,40 ಜನರು ಗಾಯಗೊಂಡಿದ್ದಾರೆ. ಗ್ರಾಮದಲ್ಲಿನ ಬಸವೇಶ್ವರ ದೇವಸ್ಥಾನ ಕೊಂಡೋತ್ಸವ ನೋಡಲು ಮಾದೇಗೌಡರ ತಾರಸಿಗೆ 100 ಕ್ಕೂ ಹೆಚ್ಚು ಜನರು ಏರಿದ್ದರು. ಈ ವೇಳೆ 90 ವರ್ಷದ ಹಳೆಯ ಕಟ್ಟಡ ಕುಸಿದಿದೆ. 10 ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ 40 …

Read More »

ವೈರಮುಡಿ ಉತ್ಸವಕ್ಕೆ ಇಂದು ಸಿಎಂ ಚಾಲನೆ

ಮಂಡ್ಯ : ಐತಿಹಾಸಿಕ ಶ್ರೀಚಲುವನಾರಾಯಣಸ್ವಾಮಿಯ ವೈರಮುಡಿ ಉತ್ಸವಇಂದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯ ನಡೆಯಲಿದ್ದು, ಉತ್ಸವಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಕೊರೊನಾ ಕಾರಣದಿಂದ ಕಳೆದ 2 ವರ್ಷಗಳಿಂದ ಸರಳವಾಗಿ ನಡೆದಿದ ವೈರಮುಡಿ ಉತ್ಸವ ಈ ಬಾರಿ ಅದ್ಧೂರಿಯಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಸಿದ್ಧತೆ ಮತ್ತು ಕ್ರಮಗಳನ್ನು ವಹಿಸಲಾಗಿದೆ.

Read More »

ಶಾಸಕ ರವೀಂದ್ರ ಶ್ರೀಕಂಠಯ್ಯ ವಿರುದ್ಧ ಕಾಳಿ ಮಠದ ಋಷಿಕುಮಾರಸ್ವಾಮಿ ವಾಗ್ದಾಳಿ

ಮಂಡ್ಯ: ನಾನು ಸ್ವಾಮೀಜಿ ಅಲ್ಲ ಎಂದು ನನಗೆ ಸರ್ಟಿಫಿಕೇಟ್ ಕೊಡುವುದು ಬೇಡ ಅದರ ಬದಲು,ತಮ್ಮ ಕ್ಷೇತ್ರವನ್ನು ಪ್ರಗತಿಯ ಪಥ ದಲ್ಲಿ ಕೊಂಡೊಯ್ಯಲಿ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ವಿರುದ್ಧ ಕಾಳಿ ಮಠದ ಋಷಿಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ಇನ್ನೂ ನಿಮ್ಮ ಪ್ರತಾಪಕ್ಕೆ ಹೆದರಿ ಓಡಿ ಹೋಗಲು ನಾನು ಸಂಸದೆ ಸುಮಲತಾ ಅಂಬರೀಶ್ ಅಮ್ಮಾ ಅಲ್ಲ ಎಂದು ಶ್ರೀರಂಗಪಟ್ಟಣ ಟೌನ್ ಠಾಣೆಗೆ ಸಹಿ ಹಾಕಲು ಬಂಧಾಗ ಕಾಳಿ …

Read More »

ಪತಿಯ ಕಣ್ಣೇದರು ಪ್ರಾಣ ಬಿಟ್ಟ ಪತ್ನಿ

ಮಂಡ್ಯ: ಗರ್ಭಿಣಿ ಪತ್ನಿಯೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದಂತ ಸಂದರ್ಭದಲ್ಲಿ ಹಿಂಬದಿಯಿಂದ ಬಂದಂತ ಲಾರಿಯೊಂದು ಡಿಕ್ಕಿಯಾದ ಪರಿಣಾಮ, ಪತಿಯ ಕಣ್ಣೆದುರಿಗೆ ಗರ್ಭಿಣಿ ಪತ್ನಿ ಸಾವನ್ನಪ್ಪಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ  ಕಿಕ್ಕೇರಿಯ ಬಳಿಯಲ್ಲಿ ಬೈಕ್ ನಲ್ಲಿ ಗರ್ಭಿಣಿ ಪತ್ನಿ ಸಹನ ಹಾಗೂ ಪತಿ ಸಂದೀಪ್ ಚನ್ನರಾಯಪಟ್ಟಣಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಲಾರಿಯೊಂದು ಹಿಂಬದಿಯಿಂದ ಡಿಕ್ಕಿಯಾಗಿದೆ. ಪರಿಣಾಮವಾಗಿ ಬೈಕ್ ನಲ್ಲಿ ಕುಳಿತಿದ್ದಂತ ಮಹಿಳೆ ಕೆಳಗೆ ಬಿದ್ದಿದ್ದಾರೆ. …

Read More »