Breaking News

ಧಾರವಾಡ

ಪ್ರತಿಯೊಬ್ಬ ಸರ್ಕಾರಿ ನೌಕರನೂ ಸಹ ಪ್ರಾಮಾಣಿಕವಾಗಿ ಜನರಿಗೆ ಸರ್ಕಾರಿ ಸೌಲಭ್ಯಗಳನ್ನು ನೀಡಬೇಕು : ಡಿಎಸ್‌ ಪಿ ವೆಂಕಣಗೌಡ ಪಾಟೀಲ

ನವಲಗುಂದ : ದೇಶ ಮತ್ತು ಸಮಾಜಕ್ಕಾಗಿ ಸೇವೆ ಸಲ್ಲಿಸುವ ಅಮೂಲ್ಯ ಅವಕಾಶ ಸರ್ಕಾರಿ ನೌಕರರಿಗೆ ದೊರಕಿರುವುದರಿಂದ ಪ್ರತಿಯೊಬ್ಬ ಸರ್ಕಾರಿ ನೌಕರನೂ ಸಹ ಪ್ರಾಮಾಣಿಕವಾಗಿ ಜನರಿಗೆ ಸರ್ಕಾರಿ ಸೌಲಭ್ಯಗಳನ್ನು ನೀಡಬೇಕು. ಯಾವುದೇ ಆಸೆ ಆಕಾಂಕ್ಷೆಗಳಿಗೂ ಬಲಿಯಾಗದೆ, ನೈತಿಕತೆಯಿಂದ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ಧಾರವಾಡ ಲೋಕಾಯುಕ್ತ ಡಿಎಸ್‌ ಪಿ ವೆಂಕಣಗೌಡ ಪಾಟೀಲ ಹೇಳಿದರು. ತಾಲೂಕಾ ಪಂಚಾಯತಿ ಸಭಾಭಾವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕಾ ಆಡಳಿತ, ತಾಲೂಕ ಪಂಚಾಯತ್‌, ಪುರಸಭೆ, ಪೊಲೀಸ್ …

Read More »

ಸಾಲ ತೀರಿಸಲಾಗದೆ ಮನನೊಂದು ರೈತ ಆತ್ಮಹತ್ಯೆ

ನವಲಗುಂದ : ಬೆಳೆಗಾಗಿ ಮಾಡಿದ ಸಾಲ ತೀರಿಸಲಾಗದೆ ಮನನೊಂದು ರೈತನೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕಾಲವಾಡ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಕಾಲವಾಡ ಗ್ರಾಮದ ರೈತ ಗರ್ಜಪ್ಪ ನರಸಪ್ಪ ಸಾಲಮನಿ(51) ಈತನು ಕೃಷಿ ಚಟುವಟಿಕೆಗಾಗಿ ಆರೇಕುರಹಟ್ಟಿ ಗ್ರಾಮದ ಕೆ.ವಿ.ಜಿ ಬ್ಯಾಂಕಿನಲ್ಲಿ 50 ಸಾವಿರ, ಕಾಲವಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 45 ಸಾವಿರ ಮತ್ತು ಹೈನುಗಾರಿಕೆಗಾಗಿ ಹುಬ್ಬಳ್ಳಿಯ ಐಡಿಎಫ್‌ಸಿ ಬ್ಯಾಂಕಿನಲ್ಲಿ 4 ಲಕ್ಷ ಸಾಲ ಮಾಡಿದ್ದನು. …

Read More »

ವಿದ್ಯುತ್ ಕೇಬಲ್ ಗೆ ಸಿಕ್ಕಿಕೊಂಡಿದ್ದ ಗಾಳಿಪಟ ಬಿಡಿಸಲು ಹೋಗಿದ ಯುವಕನಿಗೆ ಶಾರ್ಟ್ ಸರ್ಕ್ಯೂಟ್

ಹುಬ್ಬಳ್ಳಿ: ವಿದ್ಯುತ್ ಕೇಬಲ್ ಗೆ ಸಿಕ್ಕಿಕೊಂಡಿದ್ದ ಗಾಳಿಪಟ ಬಿಡಿಸಲು ಹೋಗಿ ಶಾರ್ಟ್ ಸರ್ಕ್ಯೂಟ್ ನಿಂದ ಬಾಲಕ ಸಂಪೂರ್ಣ ಅಸ್ವಸ್ಥಗೊಂಡಿದ್ದಾನೆ. ಹುಬ್ಬಳ್ಳಿಯ ಸಂತೋಷ ನಗರದಲ್ಲಿ ಘಟನೆ ನಡೆದಿದ್ದು, ರಾಹುಲ್ ಬದ್ದಿ ಎಂಬುವ ಬಾಲಕನೇ ಅಪಘಾತಕ್ಕೆ ಒಳಗಾಗಿರುವ ಬಾಲಕನಾಗಿದ್ದಾನೆ. ವಿದ್ಯುತ್ ಕೇಬಲ್ ಗೆ ಗಾಳಿಪಟ ಸಿಲುಕಿಕೊಂಡಿದ್ದು, ಕಬ್ಬಿನಿಂದ ವಿದ್ಯುತ್ ಕೇಬಲ್‌ ಗೆ ಹೊಡೆದಿದ್ದು, ಇದರಿಂದ ಬಾಲಕನಿಗೆ ವಿದ್ಯುತ್ ತಗುಲಿದೆ. ಈ ನಿಟ್ಟಿನಲ್ಲಿ ಸಂಪೂರ್ಣ ದೇಹ ಸುಟ್ಟ ಸ್ಥಿತಿಯಲ್ಲಿದ್ದು, ಬಾಲಕನನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

Read More »

ಹಾವು ಕಚ್ಚಿ 5 ವರ್ಷದ ಹೆಣ್ಣು ಮಗು ಸಾವು

ಕುಂದಗೋಳ : ಹಾವು ಕಚ್ಚಿ 5 ವರ್ಷದ ಹೆಣ್ಣು ಮಗುವೊಂದು ಮೃತಪಟ್ಟ ಘಟನೆ ಶಿಶುವಿನಹಾಳ ಗ್ರಾಮದಲ್ಲಿ ಮೃತಪಟ್ಟ ಘಟನೆ ನಿನ್ನೆ ಸೋಮವಾರ ನಡೆದಿದೆ. ಗುಡಗೇರಿ ಗ್ರಾಮದ ಮಗು ತನ್ನ ತಾಯಿಯ ತವರು ಮನೆ ಶಿಗ್ಗಾಂವಿ ತಾಲೂಕಿನ ಶಿಶುವಿನಹಾಳ ಗ್ರಾಮಕ್ಕೆ ತೆರಳಿದಾಗ ಹಾವು ಕಚ್ಚಿ ಸಾವನ್ನಪ್ಪಿದೆ. ಮಗು ಕಳೆದುಕೊಂಡ ಕುಟುಂಬಸ್ಥರು ರೋಧನೆ ಮುಗಿಲು ಮುಟ್ಟಿದ್ದು, ಗುಡಗೇರಿ ಗ್ರಾಮದಲ್ಲಿ ಯು.ಕೆ.ಜಿ ವ್ಯಾಸಂಗ ಮಾಡುತ್ತಿದ್ದ ಮಗುವೇ ಸಾವನ್ನಪ್ಪಿದೆ. ಶಿಗ್ಗಾಂವಿ ಗ್ರಾಮೀಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ …

Read More »

ಜೂಜಾಟವಾಡುತ್ತಿದ್ದ 33 ಜನರನ್ನು ಬಂಧಿಸಿದ ಪೊಲೀಸರು

ನವಲಗುಂದ: ಸಾರ್ವಜನಿಕ ಸ್ಥಳದಲ್ಲಿ ಜೂಜಾಟವಾಡುತ್ತಿದ್ದ 33 ಜನರನ್ನು ಬಂಧಿಸಿದ ಪೊಲೀಸರು ಬಂಧಿತರಿಂದ 29,215 ರೂಪಾಯಿ ವಶ ಪಡಿಸಿಕೊಂಡ ಘಟನೆ ನಡೆದಿದೆ. ತಾಲೂಕಿನ ಯಮನೂರು, ಆರೇಕುರಹಟ್ಟಿ ಮತ್ತು ಹಾಲಕುಸುಗಲ್ ಗ್ರಾಮದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಶನಿವಾರ ಮತ್ತು ಭಾನುವಾರದಂದು ಸಾರ್ವಜನಿಕ ಸ್ಥಳಗಳಲ್ಲಿ ಜೂಜಾಟ ಆಡುತ್ತಿದ್ದವರನ್ನು ಹೆಡೆಮುರಿ ಕಟ್ಟಿದ ಖಾಕಿ ಪಡೆ ಕೂಡಲೇ ಅವರನ್ನೆಲ್ಲ ಬಂಧಿಸಿ ನಗದು ವಶ ಪಡಿಸಿಕೊಂಡಿದ್ದಾರೆ. ಇನ್ನೂ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖಚಿತ ಮಾಹಿತಿ ಮೇರೆಗೆ …

Read More »

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಧಾರವಾಡದಲ್ಲಿ ಬೃಹತ್‌ ಪ್ರತಿಭಟನೆ

ಧಾರವಾಡ: ರೈತರ ಪಹಣಿ ಪತ್ರಿಕೆಗಳಲ್ಲಿ ವಕ್ಷ ಆಸ್ತಿ ಎಂಬ ಹೆಸರು ನಮೂದಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಧಾರವಾಡದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು. ಧಾರವಾಡದ ಉಳವಿ ಚೆನ್ನಬಸವೇಶ್ವರ ದೇವಸ್ಥಾನದಿಂದ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಶಾಸಕರಾದ ಮಹೇಶ ಟೆಂಗಿನಕಾಯಿ, ಮಾಜಿ ಶಾಸಕರಾದ ಅಮೃತ ದೇಸಾಯಿ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ರ್ಯಾಲಿ ನಡೆಸಿದರು. ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ, ರಾಜ್ಯ …

Read More »

ಕುಂದಗೋಳದಲ್ಲಿ ವಿಶೇಷವಾದ ಹವಳದ ಹಾವ ಪತ್ತೆ

ಕುಂದಗೋಳ: ಹಾವಿನ ಪ್ರಭೇದದಲ್ಲಿ ವಿಶೇಷವಾದ ಹವಳದ ಹಾವನ್ನು ಉರಗ ರಕ್ಷಕ ಸತೀಶ್ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿದ್ದಾರೆ. ಕುಂದಗೋಳ ಪಟ್ಟಣದ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಬಂದಿದ್ದ ಹವಳದ ಹಾವನ್ನು ಉರಗ ರಕ್ಷಕ ಸತೀಶ್‌ ಎಂಬುವರು ರಕ್ಷಿಸಿ ಕಾಡಿಗೆ ಬಿಟ್ಟು ಬಂದಿದ್ದಾರೆ. ಹವಳದ ಹಾವು ಹಾವುಗಳ ಜಾತಿಯಲ್ಲೇ ವಿರಳವಾಗಿದ್ದು, ಗ್ರಾಮೀಣ ಭಾಗದಲ್ಲಿ ಕಾಣ ಸಿಗುವುದು ಅಪರೂಪ.

Read More »

ಶ್ರೀ ಮಾರುತಿ ದೇವಸ್ಥಾನ ಅಭಿವೃದ್ಧಿಗೆ 1 ಲಕ್ಷ 50 ವೀರೇಂದ್ರ ಹೆಗಡೆಯವರು ಕೊಡುಗೆ

ಕುಂದಗೋಳ : ಶ್ರೀ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯಿಂದ ಕುಂದಗೋಳ ಪಟ್ಟಣದ ಕಾಳಿದಾಸ ನಗರದ ಶ್ರೀ ಮಾರುತಿ ದೇವಸ್ಥಾನ ಅಭಿವೃದ್ಧಿಗೆ 1 ಲಕ್ಷ 50 ಸಾವಿರ ರೂಪಾಯಿಗಳನ್ನು ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರು ಕೊಡುಗೆ ನೀಡಿರುವ ಹಿನ್ನೆಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಯೋಜನಾಧಿಕಾರಿಗಳು ಚೆಕ್‌’ನ್ನು ಮಾರುತಿ ದೇವಸ್ಥಾನ ಟ್ರಸ್ಟ್ ಕಮೀಟಿ ಅವರಿಗೆ ಹಸ್ತಾಂತರಿಸಿದರು.

Read More »

ಸಿಡಿಲು ಬಡಿದು ಯುವಕ‌ ಸಾವು

ಧಾರವಾಡ: ಧಾರವಾಡ ತಾಲ್ಲೂಕಿನ ಬಾಡ ಗ್ರಾಮದಲ್ಲಿ ಸಿಡಿಲು ಬಡಿದು ರಾಯನಗೌಡ ಶಂಕರಗೌಡ ಪಾಟೀಲ(24) ಎಂಬ ಯುವಕ ಮೃತಪಟ್ಟಿದ್ದಾರೆ. ಸಂಜೆ 6 ಗಂಟೆ ಹೊತ್ತಿನಲ್ಲಿ ಈ ಅವಘಡ ಸಂಭವಿಸಿದೆ. ರಾಯನಗೌಡ ಅವರು ಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದಿದೆ ಎಂದು ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.

Read More »

ನವಲಗುಂದದಲ್ಲಿ ಅಧಿಕಾರಿಗಳಿಗೆ ಸನ್ಮಾನಿಸಿದ ಶಾಸಕ ಕೋನರೆಡ್ಡಿ

ನವಲಗುಂದ: ಹುಬ್ಬಳ್ಳಿ ಗ್ರಾಮಿಣ ತಹಶೀಲ್ದಾರರಾಗಿ ಅಧಿಕಾರ ಸಲ್ಲಿಸಿ ವರ್ಗಾವಣೆಗೊಂಡ ಪ್ರಕಾಶ ನಾಶಿ ಅವರನ್ನು, ನೂತನ ತಹಶೀಲ್ದಾರರಾಗಿ ಅಧಿಕಾರ ಸ್ವೀಕರಿಸಿದ ಜೆ. ಬಿ. ಮಜ್ಜಗಿ ಮತ್ತು ಲೋಕೋಪಯೋಗಿ ಇಲಾಖೆಯಲ್ಲಿ ಎಇಇ ಸ್ಥಾನದಿಂದ ಎಇ ಯಾಗಿ ಪದೋನ್ನತಿ ಹೊಂದಿದ ಎಸ್. ಎನ್. ಸಿದ್ದಾಪೂರ ಅವರನ್ನು ನವಲಗುಂದ ವಿಧಾನಸಭಾ ಮತಕ್ಷೇತ್ರ-69 ನವಲಗುಂದ ನಗರದ ವಾಲ್ಮೀಕಿ ಭವನದಲ್ಲಿ ಶಾಸಕ ಎನ್. ಎಚ್. ಕೋನರೆಡ್ಡಿ ನೇತೃತ್ವದಲ್ಲಿ ನಿನ್ನೆ ಸಂಜೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅಧಿಕಾರಿಗಳು ಉಪಸ್ಥಿತರಿದ್ದರು.

Read More »