Breaking News

ಧಾರವಾಡ

ಶೀಲ ಶಂಕಿಸಿ ಪತ್ನಿಯನ್ನೇ ಕೊಲೆಗೈದು ಕೊನೆಗೆ ತಾನೂ ನೇಣು ಬಿಗಿದುಕೊಂಡ ಪತಿ

ಧಾರವಾಡ: ತನ್ನ ಪತ್ನಿಯ ಶೀಲ ಶಂಕಿಸಿದ ಪತಿರಾಯನೊಬ್ಬ ಆಕೆಯನ್ನು ಕೊಲೆ ಮಾಡಿ ಕೊನೆಗೆ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದಲ್ಲಿ ನಡೆದಿದೆ. ಶ್ರೀದೇವಿ ರಾಮಾಪುರ ಎಂಬುವವಳೇ ಪತಿಯಿಂದ ಕೊಲೆಯಾದವಳು. ರಾಜು ರಾಮಾಪುರ ಎಂಬಾತನೇ ನೇಣು ಹಾಕಿಕೊಂಡು ಕೊನೆಗೆ ಆತ್ಮಹತ್ಯೆ ಮಾಡಿಕೊಂಡವನು. ಪತ್ನಿಯ ಮೇಲೆ ಸಂಶಯಪಡುತ್ತಿದ್ದ ರಾಜು, ಆಕೆಯನ್ನು ಹೊಲದಲ್ಲೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಆನಂತರ ತಾನೂ ಹೊಲದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ …

Read More »

ರಸ್ತೆ ಡಿವೈಡರ್ ಗೆ ಕಾರ್ ಡಿಕ್ಕಿ : ಶಾಸಕ ಅರವಿಂದ ಬೆಲ್ಲದ ಅವರ ಚಿಕ್ಕಪ್ಪ ಸಾವು

ಧಾರವಾಡ:  ಎಸ್.ಪಿ. ಕಚೇರಿ ಎದುರು ನಡೆದ ಅಪಘಾತದಲ್ಲಿ ಶಾಸಕ ಅರವಿಂದ ಬೆಲ್ಲದ ಅವರ ಚಿಕ್ಕಪ್ಪ ಶಿವಣ್ಣ ಬೆಲ್ಲದ(82) ಸಾವನ್ನಪ್ಪಿದ್ದಾರೆ. ರಸ್ತೆ ಡಿವೈಡರ್ ಗೆ ಕಾರ್ ಡಿಕ್ಕಿಯಾಗಿ ಶಿವಣ್ಣ ಬೆಲ್ಲದ ಮೃತಪಟ್ಟಿದ್ದಾರೆ. ತಡರಾತ್ರಿ ಧಾರವಾಡದ ಎಸ್ಪಿ ಕಚೇರಿ ಎದುರು ಅಪಘಾತ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಶಿವಣ್ಣ ಬೆಲ್ಲದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶಿವಣ್ಣ ಬೆಲ್ಲದ ಮೃತಪಟ್ಟಿದ್ದಾರೆನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Read More »

ರಾಷ್ಟ್ರಪತಿ ಆಗಮನ ಹಿನ್ನೆಲೆ , ಐಐಐಟಿಗೆ ಶಾಸಕ ಬೆಲ್ಲದ ಭೇಟಿ

ಧಾರವಾಡ : ಐಐಐಟಿ ಉದ್ಘಾಟನೆಗೆ ಸೋಮವಾರ ಧಾರವಾಡಕ್ಕೆ ರಾಷ್ಟ್ರಪತಿ ದೌಪದಿ ಮರ್ಮು ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಐಐಐಟಿಗೆ ಭೇಟಿ ನೀಡಿದ ಶಾಸಕ ಅರವಿಂದ ಬೆಲ್ಲದ ಅವರು , ಅಲ್ಲಿನ ಪೂರ್ವಸಿದ್ಧತಾ ಕಾರ್ಯಗಳನ್ನು ಪರಿಶೀಲನೆ ನಡೆಸಿದರು . ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಅವರು ಈ ಕಾರ್ಯಕ್ರಮದ ಬಂದೋಬಸ್ತ್ ಜವಾಬ್ದಾರಿ ಹೊತ್ತಿದ್ದು ಐಐಐಟಿಯಲ್ಲಿನ ಎಲ್ಲ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ . ಶಾಸಕ ಅರವಿಂದ ಬೆಲ್ಲದ ಅವರು , ಕೇಂದ್ರಕ್ಕೆ ಭೇಟಿ …

Read More »

ಧಾರವಾಡ ಕೃಷಿ ಮೇಳದಲ್ಲಿ ಶ್ವಾನನಿಂದ ರಕ್ತದಾನ

ಧಾರವಾಡ: ಕೃಷಿ ವಿಶ್ವವಿದ್ಯಾಲಯ ಕೃಷಿಮೇಳ ಆರಂಭಗೊಂಡು ಇಂದಿಗೆ ಮೂರು ದಿನ ಕಳೆಯಿತು. ಈ ಬಾರೀ ಮೇಳದಲ್ಲಿ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ಶ್ವಾನಯೊಂದು ರಕ್ತದಾನ ಮಾಡುವ ಮೂಲಕ ಇನ್ನೊಂದು ಜೀವ ಉಳಿಸಿದೆ… ಧಾರವಾಡದ ಕೃಷಿಮೇಳದಲ್ಲಿ ಮಾಯಾ ಹೆಸರಿನ ಶ್ವಾನಕ್ಕೆ ಚಾರ್ಲಿ ಎಂಬ ಶ್ವಾನ ರಕ್ತದಾನ ಮಾಡಿ ಜೀವ ಉಳಿಸಿದೆ. ಚಾರ್ಲಿ ಶ್ವಾನದಿಂದ ರಕ್ತದಾನ ಮಾಡಿಸಿ ಮಾಲೀಕ ಸೋಮಶೇಖರ್ ಮಾನವೀಯತೆಯ ಮೆರೆದಿದ್ದಾರೆ…ಏರ್‌ಪೋರ್ಟ್ ಭದ್ರತೆಯಲ್ಲಿದ್ದ ಮಾಯಾ ಹೆಸರಿನ ಶ್ವಾನಕ್ಕೆ ರಕ್ತ ಬೇಕಾಗಿತ್ತು. ವೈದ್ಯರ ಕರೆಯ …

Read More »

ಮೋದಿಜಿ ನಡೆ ಚಿಣ್ಣರ ಕಡೆ ಚಾಲನೆ

ಧಾರವಾಡ: ಕರ್ಪ್‌ಜ್ಞಾನ ಫೌಂಡೇಶನ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕರ್ನಾಟಕ ಎಜುಕೇಷನ್ ಬೋರ್ಡ್ ಇವರ ಸಂಯುಕ್ತ ಆಶ್ರಯದಲ್ಲಿ ಮೋದಿಜಿ ನಡೆ ಚಿಣ್ಣರ ಕಡೆ ಪ್ರಧಾನಿ ನರೇಂದ್ರ ಮೋದಿಯವರ 72ನೇಯ ಜನ್ಮದಿನೋತ್ಸವದ ಅಂಗವಾಗಿ ಹಮ್ಮಿಕೊಂಡ ಗಣಿತ-ಮೇಳಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಲನೆ ನೀಡಿದರು. ಈ ಕಾರ್ಯಕ್ರಮ ದ ಅಂಗವಾಗಿ ಒಟ್ಟು 8 ಕೆ.ಜಿ ರಂಗೋಲಿ‌ ಬಳಸಿ, 7 ಪೋಟ್.2. ಇಂಚಿನ ಪ್ರಧಾನಿ ಮೋದಿ ಅವರ ಭಾವಚಿತ್ರ ಕೆಲಗೇರಿಯ ಮಂಜುನಾಥ …

Read More »

ಕರ್ತವ್ಯ ಲೋಪ ಇಬ್ಬರು ಪೊಲೀಸರನ್ನು ಅಮಾನತ್ತುಗೊಳಿಸಿದ ಎಸ್‌ಪಿ

ಧಾರವಾಡ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿಯಿಂದ ಹಾವೇರಿ ಜಿಲ್ಲೆಗೆ ರಸ್ತೆ ಮುಖಾಂತರ ಹೋಗುವ ಸಂದರ್ಭದಲ್ಲಿ ಬಂದೋಬಸ್ತ್ಗಾಗಿ ನಿಯೋಜಿಸಲಾಗಿದ್ದ ಇಬ್ಬರು ಪೊಲೀಸರು ಕರ್ತವ್ಯಕ್ಕೆ ತಡವಾಗಿ ಬಂದಿದ್ದಕ್ಕೆ ಆ ಇಬ್ಬರೂ ಪೊಲೀಸರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ . ಧಾರವಾಡ ಮಹಿಳಾ ಪೊಲೀಸ್ ಠಾಣೆಯ ಹವಾಲ್ದಾರ ಸುರೇಶ ಹುಡೇದ ಹಾಗೂ ಅಣ್ಣಿಗೇರಿ ಪೊಲೀಸ್ ಠಾಣೆಯ ರಾಜೀವ್ ಶಿರುಂದ ಎಂಬುವವರೇ ಅಮಾನತ್ತುಗೊಂಡ ಪೊಲೀಸರು . ತಮಗೆ ನಿಯೋಜಿಸಿದ್ದ …

Read More »

ಧಾರವಾಡ ದೇವರ ಜಾತ್ರೆಯಲ್ಲಿ ಸಾವರ್ಕರ್ ಭಾವಚಿತ್ರ ಮೆರವಣಿಗೆ

ಧಾರವಾಡ : ರಾಜ್ಯದಲ್ಲಿ ವಿ.ಡಿ.ಸಾವರ್ಕರ್ ಫೋಟೋ ವಿಚಾರ ಚರ್ಚೆಯಾಗುತ್ತಿರುವ ಹೊತ್ತಲ್ಲೇ ಧಾರವಾಡದಲ್ಲಿ ದೇವರ ಜಾತ್ರೆಯಲ್ಲಿ ಯುವಕರು ವಿ.ಡಿ. ಸಾವರ್ಕರ್ ಭಾವಚಿತ್ರ ಮೆರವಣಿಗೆ ಮಾಡಿದ್ದಾರೆ. ಧಾರವಾಡ ಜಿಲ್ಲೆಯ ಅಮ್ಮಿನಬಾವಿಯ ಈಶ್ವರ ಜಾತ್ರೆ ಹಿನ್ನೆಲೆಯಲ್ಲಿ ಹೆಜ್ಜೆಮೇಳದೊಂದಿಗೆ ಯುವಕರುಉ ವಿ.ಡಿ.ಸಾವರ್ಕರ್ ಭಾವಚಿತ್ರವನ್ನು ಹಿಡಿದು ಯುವಕರು ಸಾಗಿದ್ದಾರೆ. ವಿ.ಡಿ.ಸಾವರ್ಕರ್ ಭಾರತಾಂಬೆಯ ಹೆಮ್ಮೆಯ ವೀರಪುತ್ರ ಎಂಬ ಬರಹವುಳ್ಳ ಫೋಟೋ ಹಿಡಿದು ಸಾಗಿರುವ ಘಟನೆ ನಡೆದಿದೆ.

Read More »

ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ತಪ್ಪು ಮತ್ತು ಅದನ್ನು ಖಂಡಿಸುತ್ತೇನೆ : ಜೋಶಿ

ಧಾರವಾಡ : ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಸಭಾ ವಿರೋಧ ಪಕ್ಷದ ನಾಯಕಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ತಪ್ಪು ಮತ್ತು ಅದನ್ನು ಖಂಡಿಸುತ್ತೇನೆ ಎಂದು ಕೇಂದ್ರ ಗಣಿ, ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಲಾದ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು. ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ವಿರೋಧ ಪಕ್ಷದ ನಾಯಕರು, ಎಲ್ಲಿ ಬೇಕಾದರು ಅವರು ಹೋಗಿ ಪರಿಶೀಲನೆ ಮಾಡುವ ಹಕ್ಕು ಅವರಿಗಿದೆಎಂದರು. …

Read More »

ಕಾಲೇಜಿನಲ್ಲಿ ಲೈಂಗಿಕ ದೌರ್ಜನ್ಯ: ಬೃಹತ್ ಪ್ರತಿಭಟನೆ

ಧಾರವಾಡ: ವಿಶ್ವೇಶ್ವರಯ್ಯ ಕಾಲೇಜಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಖಂಡಿಸಿ ಎಬಿವಿಪಿ ಸಂಘಟನೆ ನೇತೃತ್ವದಲ್ಲಿ ವಿವಿಧ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಧಾರವಾಡದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಇತ್ತೀಚೆಗೆ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆಯುತ್ತಲೇ ಇವೆ. ಇಂತಹ ಪ್ರಕರಣಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಜರುಗಿಸಬೇಕು. ಸದ್ಯ ವಿಶ್ವೇಶ್ವರಯ್ಯ ಕಾಲೇಜಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ …

Read More »

ರಾಜ್ಯಕ್ಕೆ ಮಾದರಿಯಾದ ಧಾರವಾಡ ಸಂಚಾರಿ ಪೊಲೀಸರ ಮಾರುವೇಷದ ಕಾರ್ಯಾಚರಣೆ , ಅದೇನು ಅಂತೀರಾ ಈ ಸುದ್ದಿ ನೋಡಿ

. ಧಾರವಾಡ : ರೇಲ್ವೆ ನಿಲ್ದಾಣದಲ್ಲಿ ಮಾರುವೇಷದಲ್ಲಿ ಮಾಡಿದ ಕೆಲಸ ರಾಜ್ಯಕ್ಕೆ ಮಾದರಿಯಾಗಿದೆ. ನಗರದ ಸಂಚಾರಿ ಪೊಲೀಸರು ಮಾರುವೇಷದಲ್ಲಿ ಕಾರ್ಯಾಚರಣೆ ಮಾಡಿ ಆಟೋ ಚಾಲಕರಿಗೆ ಸಖತ್ ಬಿಸಿಯನ್ನು ಮುಟ್ಟಿಸಿದ್ದಾರೆ. ನಗರದ ರೇಲ್ವೆ ನಿಲ್ದಾಣದಲ್ಲಿ ಸಾರ್ವಜನಿಕರಿಂದ ಬಾಡಿಗೆ ದರದಕ್ಕಿಂತ ಹೆಚ್ಚಿನ ದರವನ್ನು ವಸೂಲಿ ಮಾಡುತ್ತಿದ್ದ ಆಟೋ ಚಾಲಕ ರಿಗೆ ಮಾರುವೇಷದಲ್ಲಿ ಕಾರ್ಯಾಚರಣೆ ಮಾಡಿ ಬಿಸಿ ಮುಟ್ಟಿಸಿ ರಾಜ್ಯಕ್ಕೆ ಮಾದರಿಯಾಗುವ ಕಾರ್ಯಾಚರಣೆ ಯನ್ನು ಮಾಡಿದ್ದಾರೆ.ರೇಲ್ವೆ ನಿಲ್ದಾಣಕ್ಕೆ ಬರುವ‌ ಸಾರ್ವಜನಿಕರಿಗೆ ನಿಗದಿ ಮಾಡಿದ ದರದಕ್ಕಿಂತ …

Read More »