Breaking News

ಧಾರವಾಡ

ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

ಧಾರವಾಡ: ಬಗ‌ರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಧಾರವಾಡ ತಹಸೀಲ್ದಾರ್ ಕಚೇರಿ ಎದುರು ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿದರು. ನಗರದ ತಹಸೀಲ್ದಾರ್ ಕಚೇರಿ ಎದುರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಆಕ್ರೋಶ ವ್ಯಕ್ತಪಡಿಸಿದರು. ಬೆಳ್ಳಿಗೆಟ್ಟಿ ಗ್ರಾಮದ ಸಾಗುವಳಿದಾರರಿಗೆ ಕಿರುಕುಳ ತಪ್ಪಿಸಿ, ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

Read More »

ವಕ್ಷ ಆಸ್ತಿ ವಿರೋಧಿಸಿ ಶ್ರೀರಾಮ ಸೇನೆ ಪ್ರತಿಭಟನೆ

ಧಾರವಾಡ: ರೈತರ ಜಮೀನಿನ ಪಹಣಿ ಪತ್ರಿಕೆಯಲ್ಲಿ ವಕ್ಷ ಆಸ್ತಿ ಎಂದು ನಮೂದಾಗಿದ್ದರಿಂದ ಆಕ್ರೋಶಗೊಂಡ ರೈತರು ಧಾರವಾಡ ತಹಶೀಲ್ದಾರ್ ಕಚೇರಿ ಎದುರು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್, ಮಾಜಿ ಶಾಸಕರಾದ ಅಮೃತ ದೇಸಾಯಿ ಹಾಗೂ ಸೀಮಾ ಮಸೂತಿ ಅವರ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಸಿದರು. ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಜವಳಗಿ, ಮಸೂತಿ ಹಾಗೂ ಹುಟಗಿ ಅವರ ಜಮೀನಿಗೆ ವಕ್ಷ ಆಸ್ತಿ ಎಂದು ನಮೂದಾಗಿದ್ದರಿಂದ ಕಂಗಾಲಾದ ರೈತರು ಧಾರವಾಡ ತಹಶೀಲ್ದಾರ್ …

Read More »

ಡಾ.ರಾಜಕುಮಾರ ಅಭಿಮಾನಿಗಳ ಸಂಘದ ವತಿಯಿಂದ ಅಭಿನಂದನಾ ಕಾರ್ಯಕ್ರಮ

ನವಲಗುಂದ: ಖ್ಯಾತ ಚಲನಚಿತ್ರ ನಟ, ಕರ್ನಾಟಕ ರತ್ನ ದಿ.ಪುನೀತ ರಾಜಕುಮಾರ ಅವರ 3ನೇಯ ಪುಣ್ಯಸ್ಮರಣೆಯ ಪ್ರಯುಕ್ತ ನಗರದ ಡಾ.ರಾಜಕುಮಾರ ಅಭಿಮಾನಿಗಳ ಸಂಘದ ವತಿಯಿಂದ ಅಭಿನಂದನಾ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು . ಕಾರ್ಯಕ್ರಮದಲ್ಲಿ ಶಾಸಕ ಎನ್.ಎಚ್.ಕೋನರೆಡ್ಡಿ, ಭಾಗವಹಿಸಿ ಪುನೀತ್ ಅವರ ಭಾವಚಿತ್ರಕ್ಕೆ ಗೌರವ ಪೂರ್ವಕ ನಮನಗಳನ್ನು ಸಲ್ಲಿಸಿ ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲವಾದರೂ ಒಳ್ಳೆಯದನ್ನು ಬಯಸುವ ಪ್ರತೀ ಹೃದಯದಲ್ಲೂ ಜೀವಂತವಾಗಿದ್ದಾರೆ ಎಂದರು.

Read More »

ಕುಂದಗೋಳ ಘಟಕದ ನಿರ್ದೇಶಕ ಸ್ಥಾನಕ್ಕೆ ಆಯ್ಕೆ

ಕುಂದಗೋಳ : 2024-2029 ರ ಅವಧಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕುಂದಗೋಳ ಘಟಕದ ನಿರ್ದೇಶಕ ಸ್ಥಾನಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಅಧಿಕಾರಿಗಳಾದ ಪರ್ವಿನ್‌’ಭಾನು ಕಾಂಟ್ರಾಕ್ಟರ್ ಮತ್ತು ವಿನಯ ನಲವಡಿ ಇಬ್ಬರು ಸಮಾನ ಮತಗಳನ್ನು ಪಡೆದು ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಇವರನ್ನೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಪರವಾಗಿ ಕುಂದಗೋಳ ತಾಲ್ಲೂಕಿನ ಎಲ್ಲ ಸರಕಾರಿ ನೌಕರರ ಪರವಾಗಿ ಗೌರವಿಸಿ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವಿ ಮಾಡಲಗೇರಿ …

Read More »

ಅ.30 ಕಲ್ಯಾಣಪುರ ಮಠದಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ

ಕುಂದಗೋಳ : ಅಕ್ಟೋಬರ್ 30 ನಾಳೆ ಬುಧವಾರ ಬೆಳಗ್ಗೆ 9-30 ರಿಂದ ಮಧ್ಯಾಹ್ನ 2-00 ಗಂಟೆಯವರೆಗೆ ಕಲ್ಯಾಣಪುರ ಬಸವಣ್ಣಜ್ಜನವರ ಮಠದಲ್ಲಿ ವಾಸನ್ ಐ ಕೇರ್ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಲಿದೆ. ಈ ಶಿಬಿರದ ದಿವ್ಯ ಸಾನಿಧ್ಯವನ್ನೂ ಅಭಿನವ ಕಲ್ಯಾಣಪುರ ಬಸವಣ್ಣಜ್ಜನವರು ವಹಿಸಲಿದ್ದು, ಶಿಬಿರದಲ್ಲಿ ಉಚಿತವಾಗಿ ನೇತ್ರ ತಪಾಸಣಾ ಮಾಡಿ ಚಿಕಿತ್ಸೆ ಅವಶ್ಯಕತೆ ಇದ್ದಲ್ಲಿ ಉಚಿತ ಆಪರೇಷನ್‌ ಸಹ ಮಾಡಲಾಗುವುದು. ಈ ಶಿಬಿರದ ಪ್ರಯೋಜನ ಪಡೆಯಲು ಇಚ್ಚಿಸುವ ಕುಂದಗೋಳ …

Read More »

ರೈತರಿಗೆ ಅರ್ಜಿ ಕೊಡಲು ಹೇಳಿದ ವಿಮೆ ಕಂಪನಿಗಳು

ಕುಂದಗೋಳ : ಅಕ್ಟೋಬರ್ ದಿ.20 ಮತ್ತು 21 ರಂದು ತಾಲೂಕಿನಾದ್ಯಂತ ಬಿದ್ದ ಮಳೆಗೆ ಭೂಮಿಯಲ್ಲಿ ಇದ್ದ ಗೋವಿನಜೋಳ ಮೊಳಕೆ ಒಡೆದ ಸಂದರ್ಭದಲ್ಲಿ ಮತ್ತು ಶೇಂಗಾ ಬೆಳೆ ಭೂಮಿಯಲ್ಲಿ ಕಿತ್ತು ಒಕ್ಕಲು ಮಾಡಲು ಅವಕಾಶ ಇರಲಾರದೆ ಹಾನಿಯಾದ ಸಂದರ್ಭದಲ್ಲಿ ಹಾಗೂ ಹತ್ತಿ ಬೆಳೆಯು ಒಡೆದು ಮಳೆಗೆ ಸಿಕ್ಕು ಹಾಳಾಗಿರುವ ಸಂದರ್ಭದಲ್ಲಿ ಈಗಾಗಲೇ ಬೆಳೆ ವಿಮೆ ತುಂಬಿದ ರೈತರು “ಸ್ಥಳ ನಿರ್ದಿಷ್ಟ ವಿಕೋಪತೆ” ಅಡಿ ಪರಿಹಾರವನ್ನು ಪಡೆಯಲು ಇನ್ಸೂರೆನ್ಸ್ ಕಂಪನಿಯ ಪ್ರತಿನಿಧಿಗಳಿಗೆ ತಿಳಿಸಿ …

Read More »

ಎನ್‌. ಶಶಿಕುಮಾ‌ರ್ ನೇತೃತ್ವದಲ್ಲಿ 258 ಬೈಕ್ ಹಾಗೂ 3 ಆಟೋಗಳನ್ನು ಸೀಜ್

ಹುಬ್ಬಳ್ಳಿ: ನಗರದಲ್ಲಿ ಶನಿವಾರ ರಾತ್ರಿ ಕಮಿಷನ‌ರ್ ಎನ್‌. ಶಶಿಕುಮಾ‌ರ್ ನೇತೃತ್ವದಲ್ಲಿ ದಕ್ಷಿಣ ಉಪ ವಿಭಾಗದಲ್ಲಿ 14 ಚೆಕ್ ಪೋಸ್ಟ್ ಹಾಕಿ ವಾಹನಗಳ ಪರಿಶೀಲನೆ ಮಾಡುವಾಗ ದಾಖಲೆಗಳು ಇಲ್ಲದೆ ಹಾಗೂ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ 258 ಬೈಕ್ ಹಾಗೂ 3 ಆಟೋಗಳನ್ನು ಸೀಜ್ ಮಾಡಲಾಯಿತು. ಸದ್ಯ ಈ ಎಲ್ಲ ವಾಹನಗಳ ಪೈಕಿ ಇದೀಗ ವಾಹನಗಳ ಸರಿಯಾದ ದಾಖಲೆಗಳು ಇದ್ದ ವಾಹನಗಳನ್ನು ಬಿಟ್ಟು ಕಳುಹಿಸಿ, ದಾಖಲೆಗಳು ಇಲ್ಲದ ವಾಹನಗಳಿಗೆ 166500 ರೂಪಾಯಿ ದಂಡವನ್ನು ವಿಧಿಸಲಾಗಿದೆ. …

Read More »

ಮಳೆಯಿಂದ ಹಾನಿಯಾದ ಕಾಮಗಾರಿಯನ್ನು ಪರಿಶೀಲಿಸಿದ ಸತೀಶ್ ಜಾರಕಿಹೊಳಿ

ಕುಂದಗೋಳ : ಅತಿವೃಷ್ಟಿ ಪರಿಣಾಮ ಕುಂದಗೋಳ ತಾಲೂಕಿನಲ್ಲಿ ಹಾನಿಯಾದ ಲೋಕೋಪಯೋಗಿ ಇಲಾಖೆ ಕಾಮಗಾರಿಗಳನ್ನು ಸಚಿವ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಪರಿಶೀಲಿಸಿ ಪರಿಹಾರ ಭರವಸೆ ನೀಡಿದ್ದಾರೆ. ಕುಂದಗೋಳ ತಾಲೂಕಿನಲ್ಲಿ ಭೀಕರ ಮಳೆಯ ಅನಾಹುಕ್ಕೆ ರೈತಾಪಿ ಜನರ ಬೆಳೆಗಳು ಸಂಪೂರ್ಣ ಹಾಳಾಗಿವೆ, ಅದರಂತೆ ಪ್ರವಾಹದ ಸೆಳೆತಕ್ಕೆ ರಸ್ತೆ ಬ್ರಿಡ್ಜ್ ಕೊಚ್ಚಿಕೊಂಡು ಸಂಚಾರಕ್ಕೆ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಕುಂದಗೋಳ ಮಾರ್ಗವಾಗಿ ಹುಬ್ಬಳ್ಳಿಗೆ ಪ್ರಮಾಣ ಬೆಳೆಸುತ್ತಿದ್ದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ …

Read More »

ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಜಂಟಿಯಾಗಿ ಸಮೀಕ್ಷಾ ಕಾರ್ಯ

ನವಲಗುಂದ : ತಾಲೂಕಿನಲ್ಲಿ ಸುರಿದ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ಮೆಕ್ಕೆಜೋಳ, ಹತ್ತಿ ಮೆಣಸಿನ ಗಿಡ, ಈರುಳ್ಳಿ ಬೆಳೆ ಸೇರಿ ಹಲವು ಬೆಳೆಗಳು ಹಾಳಾಗಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಕಂದಾಯ ಇಲಾಖೆ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಜಂಟಿಯಾಗಿ ಸಮೀಕ್ಷಾ ಕಾರ್ಯವನ್ನು ಕೈಗೆತ್ತಿಕೊಂಡಿವೆ. ತಾಲೂಕಿನ ತಿರ್ಲಾಪುರ ಗ್ರಾಮದ ರೈತ ವಿರೂಪಾಕ್ಷಯ್ಯ ಬಸಲಿಂಗಯ್ಯ ಹಿರೇಮಠ ಅವರ ಅರೇಕುರಹಟ್ಟಿ ಹದ್ದಿನ ಜಮೀನಿನಲ್ಲಿ ಹತ್ತಿ ಬೆಳೆ ಹಾಳಾಗಿರುವುದನ್ನು ತಹಶೀಲ್ದಾರ ಸುದೀರ್ ಸಾಹುಕಾರ ಅವರು …

Read More »

42 ಪ್ಯಾನೊ ಹಾಗೂ ಟ್ಯಾಬ್’ಗಳನ್ನು ಅರ್ಹ ವಿಶೇಷ ಚೇತನರಿಗೆ ವಿತರಣೆ

ಕುಂದಗೋಳ : ತಾಲೂಕಿನ ಗುರುವಿನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಗುರುವಿನಹಳ್ಳಿ ಹಾಗೂ ವಿಠಲಾಪುರ ಗ್ರಾಮದ ಪ್ರತಿಶತ 5% ಅನುದಾನದಲ್ಲಿ 42 ಪ್ಯಾನೊ ಹಾಗೂ ಟ್ಯಾಬ್’ಗಳನ್ನು ಅರ್ಹ ವಿಶೇಷ ಚೇತನರಿಗೆ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಮಂಜುನಾಥ ಬೂದಪ್ಪನವರ ಉಪಾಧ್ಯಕ್ಷರಾದ ರತ್ನವ ಪಡೆಸೂರ ಹಾಗೂ ಗ್ರಾಪಂ ಸದಸ್ಯರು, ಎರಡು ಊರಿನ ಹಿರಿಯರು ಹಾಗೂ ಉಪಸ್ಥಿತರಿದ್ದರು.

Read More »