admin
April 3, 2022
Breaking News, ಧಾರವಾಡ
ಧಾರವಾಡ: ಕ್ರಿಕೆಟ್ ಆಡುವ ವೇಳೆ ಹೃದಯಾಘಾತವಾಗಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ. ಮುನ್ನಾ ಇರ್ಕಲ್ ಎಂಬುವನೇ ಕ್ರಿಕೆಟ್ ಆಡುವ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಮೃತ ಮುನ್ನಾ ಇರ್ಕಲ್ ನಗರದ ಸಂಗೊಳ್ಳಿ ರಾಯಣ್ಣ ನಗರದ ನಿವಾಸಿಯಾಗಿದ್ದಾನೆ ಅಂತ ತಿಳಿದು ಬಂದಿದೆ. ನಗರದ ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ಬೆಳಿಗ್ಗೆ ಕ್ರಿಕೆಟ್ ಆಡುವಾಗ ಮುನ್ನಾ ಇರ್ಕಲ್‌ಗೆ ಹೃದಯಾಘಾತ ಇಹಲೋಕ ತ್ಯಜಿಸಿದ್ದಾನೆ. ಯುವಕನನ್ನ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯದಲ್ಲಿಯೇ ಸಾವನ್ನಪ್ಪಿದ್ದಾನೆ ಅಂತ ತಿಳಿದು ಬಂದಿದೆ. ಉಪನಗರ …
Read More »
admin
April 2, 2022
Breaking News, ಧಾರವಾಡ
ಧಾರವಾಡ: ಬಾಲಕನೋರ್ವನ ಮೇಲೆ ನಾಲೈದು ಜನ ಹಲ್ಲೆ ನಡೆಸಿದ್ದು , ಬಾಲಕನ ಕುತ್ತಿಗೆಗೆ ಚಾಕುವಿನಿಂದ ಇರಿದ ಘಟನೆ ಧಾರವಾಡದ ಮಾಳಾಪುರದಲ್ಲ ನಡೆದಿದೆ. ಅರುಣ ಚೋಳಣ್ಣವರ ( 14 ) ಹಲ್ಲೆಗೊಳಗಾದ ಎಂಬ ಬಾಲಕ. ಹಲ್ಲೆಗೆ ಕಾರಣ ತಿಳಿದು ಬಂದಿಲ್ಲ . ಬಾಲಕನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು , ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು , ಹಲ್ಲೆ ನಡೆಸಿದವರನ್ನು ಪೊಲೀಸರು ಇನ್ನಷ್ಟೇ ಪತ್ತೆ ಮಾಡಬೇಕಿದೆ .
Read More »
admin
April 1, 2022
Breaking News, ಧಾರವಾಡ
ಧಾರವಾಡ: ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರನ್ನು ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಭೇಟಿಯಾಗಿ ಮಾತುಕತೆ ನಡೆಸಿದ್ದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನವನ್ನು ಮೂಡಿಸಿದೆ. ಏಕಾಏಕಿ ಶಾಸಕ ಬೆಲ್ಲದ ಅವರು ಪಕ್ಷದ ಚಾಣುಕ್ಯ ಎಂದೆ ಹೆಸರಾದ ಅಮೀತ್ ಶಾ ಬೇಟಿಯಾಗಿ ಮಾತುಕತೆ ನಡೆಸಿರುವದು ಕುತೂಹಲ ಉಂಟುಮಾಡಿದೆ. ಈಗಾಗಲೇ ಪಂಚ ರಾಜ್ಯಗಳ ಚುನಾವಣೆ ಮುಗಿದಿರುವದರಿಂದ ಕರ್ನಾಟಕ ರಾಜ್ಯದ ಸಚಿವ ಸಂಪುಟ ರಚನೆಯ ಹಾದಿ …
Read More »
admin
March 31, 2022
Breaking News, ಧಾರವಾಡ
ಧಾರವಾಡ: ನಗರದಲ್ಲಿ ನಿನ್ನೆ ತಡರಾತ್ರಿ ಕಳ್ಳತನ ನಡೆದಿದ್ದು . ಕೆಲಗೇರಿಯ ಆಂಜನೇಯ ನಗರದಲ್ಲಿ ಸರಣಿ ಕಳ್ಳತನ ನಡೆದಿದ್ದು , ಮೂರ್ನಾಲ್ಕು ಮನೆಗಳಿಗೆ ಕಳ್ಳರು ಕನ್ನ ಹಾಕಿ ಅಪಾರ ಪ್ರಮಾಣದ ನಗದು ಹಣ, ಚಿನ್ನ, ಬೆಳ್ಳಿಯ ಆಭರಣಗಳನ್ನು ದೊಚಿಕೊಂಡು ಹೋದ ಘಟನೆ ನಡೆದಿದೆ. ಆಂಜನೇಯ ನಗರದ 4 ನೇ ಕ್ರಾಸ್‌ನಲ್ಲಿರುವ ಪ್ರಕಾಶ್ ದೊಡ್ಡಮನಿ ಎಂಬ ಸಿಆರ್‌ಪಿಎಫ್ ಪೊಲೀಸ್ ಮನೆಯಲ್ಲಿ ಮೊದಲು ಕಳ್ಳರು ಕಳ್ಳತನ ಮಾಡಿದ್ದು ಇವರ ಮನೆಯಲ್ಲಿದ್ದ ಒಂದೂವರೆ ಕೆಜೆ ಬೆಳ್ಳಿ …
Read More »
admin
March 31, 2022
Breaking News, ಧಾರವಾಡ
ಧಾರವಾಡ : ತಮ್ಮಅತ್ಯದ್ಭುತ ಕೈಚಳಕದಿಂದ ಶಾಸಕ ಅರವಿಂದ ಬೆಲ್ಲದ ಅವರ ಭಾವ ಚಿತ್ರವೊಂದನ್ನು ಪ್ರತಿಭಾವಂತ ಕಲಾವಿದರಾದ ಆನಂದ ಹಿರೇಮಠ ಅವರು ಚಿತ್ರಿಸಿ ಶಾಸಕರಿಗೆ ಉಡುಗೊರೆಯಾಗಿ ನೀಡಿದ್ದಾರೆ . ಅವರ ಪ್ರೀತಿ – ಗೌರವ – ಅಭಿಮಾನಕ್ಕೆ ಋಣಿಯಾಗಿದ್ದು , ಅವರ ಕಲಾ ಪ್ರತಿಭೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುತ್ತೇನೆ ಎಂದು ಶಾಸಕರು ಹೇಳಿದರು .
Read More »
admin
March 30, 2022
Breaking News, ಧಾರವಾಡ
ಧಾರವಾಡ : ಮತದಾರರ ಯಾದಿ ತಯಾರಿಕೆಯಲ್ಲಿ ಚುನಾವಣಾ ಆಯೋಗ ನಿರ್ಲಕ್ಷ ತೋರಿದೆ. ಇದರ ಪರಿಣಾಮ ಸಾವಿರಾರು ಅರ್ಹ ಮತದಾರರ ಹೆಸರುಗಳು ಮತಪಟ್ಟಿಯಿಂದ ಕೈ ಬಿಟ್ಟು ಹೋಗಿವೆ. ಕೂಡಲೇ ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಕೂಡಲೇ ಪರಿಶೀಲಿಸಬೇಕೆಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಆಗ್ರಹಿಸಿದರು. ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹು-ಧಾ ಪಶ್ಚಿಮ ಮತಕ್ಷೇತ್ರದ ವಿವಿಧ ಪ್ರದೇಶಗಳಿಗೆ ಸಮೀಕ್ಷೆ ನಡೆಸಿದ್ದು ಸಾಕಷ್ಟು ಕುಟುಂಬಗಳಲ್ಲಿ ಚುನಾವಣಾ ಆಯೋಗದ ಗುರುತಿನ ಚೀಟಿ …
Read More »
admin
March 29, 2022
Breaking News, ಧಾರವಾಡ
admin
March 28, 2022
Breaking News, ಧಾರವಾಡ
ಧಾರವಾಡ : ರಾಜ್ಯ ಸರಕಾರಿ ನೌಕರರಿಗೆ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ . ಇಲಾಖೆಯ ಎ , ಬಿ , ಸಿ ಹಾಗೂ ಡಿ ವೃಂದದ ರಾಜ್ಯ ಸರಕಾರಿ ಅಧಿಕಾರಿ ಹಾಗೂ ನೌಕರರು ಸೂಕ್ತ ಪ್ರಸ್ತಾವನೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಏಪ್ರೀಲ್ 4 ರೊಳಗಾಗಿ ಸಲ್ಲಿಸಬಹುದು . ಪ್ರತಿಯೊಂದು ನಾಮನಿರ್ದೇಶನಕ್ಕೂ ಅವರ ಸಾಧನೆಗಳು ಮಾನದಂಡಕ್ಕನುಗುಣವಾಗಿರಬೇಕು . ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ …
Read More »
admin
March 26, 2022
Breaking News, ಧಾರವಾಡ
ಧಾರವಾಡ:-14 ನೇ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ಅಧಿಕೃತವಾಗಿ ಚಾಲನೆ ದೊರೆಯಿತು. ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದೆ . ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನೇಮಕಗೊಂಡಿರುವ ಡಾ.ರಮಾಕಾಂತ ಜೋಶಿ ಅವರನ್ನು ಭವ್ಯ ಮೆರವಣಿಗೆ ಮೂಲಕ ಸಮ್ಮೇಳದ ಮುಖ್ಯ ವೇದಿಕೆಗೆ ಕರೆತರಲಾಯಿತು.ಧಾರವಾಡದ ಕೆಸಿಸಿ ಬ್ಯಾಂಕ್ ವೃತ್ತದಿಂದ ಆರಂಭವಾದ ಸರ್ವಾಧ್ಯಕ್ಷರ ಮೆರವಣಿಗೆಯಲ್ಲಿ ಡೊಳ್ಳು ಕುಣಿತ , ಮಹಿಳಾ ಡೊಳ್ಳು ಕುಣಿತ , …
Read More »
admin
March 26, 2022
Breaking News, ಧಾರವಾಡ
ಧಾರವಾಡ : ಮಾರ್ಚ್ 28 ರಿಂದ ಏಪ್ರೀಲ್ 4 ರವರೆಗೆ SSLC ವಾರ್ಷಿಕ ಪರೀಕ್ಷೆಗಳನ್ನು ಧಾರವಾಡ ಜಿಲ್ಲೆಯ ವಿವಿಧ ಸ್ಥಳಗಳಲ್ಲಿನ ಒಟ್ಟು 52 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ .ಪರೀಕ್ಷೆಯ ಅವಧಿಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪರೀಕ್ಷೆಗಳನ್ನು ಶಾಂತಯುತವಾಗಿ , ಸುಗಮವಾಗಿ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶ ಹೊರಡಿಸಿದ್ದಾರೆ. ಧಾರವಾಡ ಜಿಲ್ಲೆಯ ಒಟ್ಟು 52 ಪರೀಕ್ಷಾ ಕೇಂದ್ರಗಳ ಸುತ್ತಲೂ ಪರೀಕ್ಷಾ ಅವಧಿಯಲ್ಲಿ 200 ಮೀಟರ ಪ್ರದೇಶವನ್ನು ನಿಭರ್‌ಂಧಿತ ಪ್ರದೇಶವೆಂದು …
Read More »