admin
February 16, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಹುಬ್ಬಳ್ಳಿಯ ಜೆಸಿ ನಗರದಲ್ಲಿರುವ ವುಮೆನ್ಸ್ ಕಾಲೇಜ್ ನಲ್ಲಿ ಆರಂಭವಾದ ಹಿಜಾಬ್ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಸದ್ಯ ಕಾಲೇಜಿಗೆ ಭೇಟಿ ಕೊಟ್ಟ ಪೊಲೀಸ್ ಕಮೀಷನರ್ ಲಾಬುರಾಮ ಕಾಲೇಜಿನ ಸುತ್ತ ಸೆಕ್ಷನ್ 144 ಜಾರಿ ಮಾಡಿದ್ದಾರೆ. ಕಾಲೇಜು ಆಡಳಿತ ಮಂಡಳಿ ಒಂದು ದಿನ ರಜೆ ಘೋಷಣೆ ಮಾಡಿದ್ದ ಹಿನ್ನೆಲೆಯಲ್ಲಿ, ಪೊಲೀಸ್ ಕಮೀಷನರ್ ಕಾಲೇಜಿಗೆ ಭೇಟಿ ನೀಡಿ ಬಿಗಿ ಬಂದು ಬಸ್ತ್ ಮಾಡಿದ್ದಾರೆ. ಬಳಿಕ ಕಾಲೇಜು …
Read More »
admin
February 16, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ನಾವು ನೀವೆಲ್ಲಾ ಒಂದೇ ಎನ್ನುವ ಭಾವೈಕ್ಯತೆ ಸಾರವನ್ನು ಸಾರುವ ಮೂಲಕ ಇತರರಿಗೆ ಮಾದರಿಯಾಗಿದ್ದ ಹುಬ್ಬಳ್ಳಿ ಧಾರವಾಡ ಏಕಾಏಕಿ ಆರಂಭವಾದ ಹಿಜಾಬ್ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇಲ್ಲಿಯ ಜೆಸಿ ನಗರದಲ್ಲಿರುವ ವುಮೆನ್ಸ್ ಕಾಲೇಜಿನಲ್ಲಿ ಇಂದು ಬೆಳಗ್ಗೆಯಿಂದ ಆರಂಭವಾದ ಹಿಜಾಬ್ ಗಲಾಟೆಯಿಂದಾಗಿ ಸದ್ಯ ಕಾಲೇಜು ಆಡಳಿತ ಮಂಡಳಿ ಕಾಲೇಜಿಗೆ ರಜೆ ಘೋಷಣೆ ಮಾಡಿದೆ. ಇನ್ನು ಹಿಜಾಬ್ ಧರಿಸಿಕೊಂಡು ಬಂದ ವಿದ್ಯಾರ್ಥಿನಿಯರಿಗೆ ಕಾಲೇಜಿನಲ್ಲಿ ಎಂಟ್ರಿ ನೀಡದಕ್ಕೆ ವಿದ್ಯಾರ್ಥಿನಿಯರು ಹೋರಾಟ ಆರಂಭಿಸುತ್ತಿದ್ದಂತೆ …
Read More »
admin
February 16, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಹಿಜಾಬ್ ವಿವಾದದ ನಡೆವೆಯೂ ಕಾಲೇಜುಗಳ ಪುನಾರಂಭವಾಗಿದ್ದು, ಹಿಜಾಬ್ ಹಾಕಿಕೊಂಡು ಬಂದ ವಿದ್ಯಾರ್ಥಿಗಳನ್ನು ಹೊರಗೆ ನಿಲ್ಲಿಸಿದ ಘಟನೆ ಇಲ್ಲಿನ ಜೆ.ಸಿ. ನಗರದ ವುಮೇನ್ಸ್ ಕಾಲೇಜಿನ ಆವರಣದಲ್ಲಿ ನಡೆದಿದೆ. ಹಿಜಾಬ್ ಹಾಕಿಕೊಂಡು ಬಂದ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ ಹಿಜಾಬ್ ತೆಗೆದು ಒಳಗೆ ಬನ್ನಿ ಇಲ್ಲದಿದ್ದರೆ ಕಾಲೇಜು ಪ್ರವೇಶಕ್ಕೆ ಅನುಮತಿ ಇಲ್ಲ ಎಂದು ಹೇಳಿದ್ದನ್ನು ಖಂಡಿಸಿ ವಿದ್ಯಾರ್ಥಿನಿಯರು ಕಾಲೇಜು ಎದುರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ವಿ ವಾಂಟ್ …
Read More »
admin
February 13, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಮುಂದಿನ ದಿನಗಳಲ್ಲಿ ದೆಹಲಿಯ ಕೆಂಪು ಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುತ್ತೇನೆ ಎಂದು ಹೇಳಿಕೆ ನೀಡಿರುವ ಕರ್ನಾಟಕದ ಮಂತ್ರಿ ಈಶ್ವರಪ್ಪ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದು ಯಾವಾಗ. ಬೊಮ್ಮಾಯಿ ಅವರು ಕ್ರಮ ಕೈಗೊಳ್ಳದಿದ್ದರೆ, ನಾನೇ ಬೆಂಗಳೂರಿಗೆ ತೆರಳಿ ಈಶ್ವರಪ್ಪ ವಿರುದ್ದ ದೂರು ದಾಖಲಿಸುತ್ತೇನೆ ಎಂದು ಸಿಎಂ ಇಬ್ರಾಹಿಂ ಸಿಎಂ ಬೊಮ್ಮಾಯಿ ಅವರಿಗೆ ಎಚ್ಚರಿಕೆ ನೀಡಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿಚಾರದಲ್ಲಿ ಹೆಣ್ಣು ಮಕ್ಕಳು …
Read More »
admin
February 13, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆಯನ್ನು ನೀಡುವುದಿಲ್ಲ. ನಾನು ನಾಳೆ ರಾಜೀನಾಮೆ ನೀಡಿದರೇ ಬಿಜೆಪಿಗೆ ಲಾಭವಾಗುತ್ತದೆ ಎಂದು ಹೇಳುವ ಮೂಲಕ ಸಿಎಮ್ ಇಬ್ರಾಹಿಂ ಯೂಟರ್ನ್ ಹೊಡೆದಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡೋಲ್ಲ. ಈ ವೇಳೆ ರಾಜೀನಾಮೆ ಕೊಟ್ಟರೆ ಬಿಜೆಪಿಯಿಂದ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬರುತ್ತದೆ. ಹೀಗಾಗಿ ಬಜೆಟ್ ಅಧಿವೇಶನದ ನಂತರ ರಾಜೀನಾಮೆ ಕುರಿತು ತೀರ್ಮಾನ ಕೈಗೊಳ್ಳುವುದಾಗಿ ಇಬ್ರಾಹಿಂ ಹೇಳಿದರು. ಹೈಕಮಾಂಡ್ …
Read More »
admin
February 13, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ನಾಳೆಯಿಂದ ಫ್ರೌಡ ಶಾಲೆಗಳನ್ನ ಆರಂಭಿಸುತ್ತೇವೆ, ಈಗಾಗಲೇ ಜಿಲ್ಲಾಧಿಕಾರಿಗಳು, ಶಾಲಾ ಆಡಳಿತ ಮಂಡಳಿಗಳಿಗೆ ಶಾಂತಿ ಸಭೆ ಮಾಡಲು ತಿಳಿಸಿದ್ದೇನೆ. ನಾಳೆ ಶಾಂತಿಯುತವಾಗಿ ಎಲ್ಲಾ ತರಗತಿಗಳು ನಡೆಯುತ್ತವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ವ್ಯವಸ್ಥೆಯನ್ನು ನೋಡಿಕೊಂಡು ಕಾಲೇಜುಗಳ ಆರಂಭದ ಬಗ್ಗೆ ನಿರ್ಧರಿಸುತ್ತೇವೆ. ಮೊದಲಿನ ಹಾಗೇ ಸೌರ್ಹದಯುತವಾಗಿ ಶಾಲಾ ಕಾಲೇಜುಗಳನ್ನ ಆರಂಭಿಸುತ್ತೆವೆ. ಶಾಲಾ ಕಾಲೇಜುಗಳನ್ನ ಆರಂಭಿಸೋದು ನಮ್ಮ ಮೊದಲ ಆಧ್ಯತೆವಾಗಿದೆ ಎಂದರು. ಹಿಜಾಬ್ …
Read More »
admin
February 12, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ:ವಿದ್ಯಾರ್ಥಿಗಳಿಗೆ ಕಲಿಕೆಗೆ ಸಹಾಯ ವಾಗುವಂತಹ ಕಾಲೇಜು ಹಾಗೂ ರೋಗಿಗಳ ಜೀವವನ್ನು ಕಾಪಾಡಬೇಕಾದ ಆಸ್ಪತ್ರೆ ನೀರ್ಮಾಣವಾಗ ಬೇಕಾದ ಸ್ಥಳದಲ್ಲಿ ಗಾಂಜಾ ಬೆಳೆದ ಪ್ರಕರಣ ಬೆಳಕಿಗೆ ಬಂದಿದೆ. ನಗರದ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ಕೆಎಲ್ಇ ಜಗದ್ಗುರು ಗಂಗಾಧರ ಮಹಾಸ್ವಾಮಿಗಳು ಮೂರುಸಾವಿರ ಮಠ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ನಿರ್ಮಾಣ ಹಂತದಲ್ಲಿರುವ ಸ್ಥಳದಲ್ಲಿಯೇ ಗಾಂಜಾ ಬೆಳೆದ ಪ್ರಕರಣವನ್ನು ಕಸಬಾಪೇಟೆ ಠಾಣೆಯ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಎರಡ್ಮೂರು ತಿಂಗಳ ಹಿಂದೇನೆ ಗಾಂಜಾ ಬೆಳೆದಿದ್ದರೆಂದು ಗೊತ್ತಾಗಿದೆ. ಖಚಿತ …
Read More »
admin
February 12, 2022
Breaking News, ಹುಬ್ಬಳ್ಳಿ
ಧಾರವಾಡ: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಈಗಾಗಲೇ ನ್ಯಾಯಾಲಯದಲ್ಲಿದೆ. ನ್ಯಾಯಾಲಯದ ತೀರ್ಪು ಬರುವವರೆಗೂ ಎಲ್ಲರೂ ಶಾಂತಿಯಿಂದ ಇರಬೇಕು. ನಾವೆಲ್ಲರೂ ಸೇರಿ ಸುಂದರ ಸಮಾಜ ನಿರ್ಮಾಣ ಮಾಡೋಣ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು. ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಾಲಯದ ತೀರ್ಪು ಬರುವವರೆಗೂ ನಾವೆಲ್ಲರೂ ಕಾಯಬೇಕಷ್ಟೇ ಎಂದರು. ಇನ್ನು ರಮೇಶ ಜಾರಕಿಹೊಳಿ ಅವರಿಗೆ ಮತ್ತೆ ಸಚಿವ ಸ್ಥಾನ ಕೊಡುವ ವಿಚಾರವಾಗಿ ಮಾತನಾಡಿದ ಅವರು, ಅವರಿಗೆ ಸಚಿವ ಸ್ಥಾನ …
Read More »
admin
February 11, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ನನ್ನ ದೆಹಲಿ ಪ್ರವಾಸಕ್ಕೆ ಯಾವುದೇ ರಾಜಕೀಯ ಬಣ್ಣ ಬೇಡ. ನಾನು ಈ ಹಿಂದೆ ತಿಳಿಸಿದಂತೆ ಸಂಪುಟಕ್ಕೆ ಸೇರುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ನಡೆಯುತ್ತಿರುವ ಕೈಗಾರಿಕೆಗಳಿಗೆ ಕೇಂದ್ರ ಸರ್ಕಾರದಿಂದ ನೆರವು, ಸಬ್ಸಿಡಿ ನೀಡುವ ಕುರಿತು ಮತ್ತು ನಗರದ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚಿಸಲು ನಾನು ದೆಹಲಿ ಪ್ರವಾಸ ಕೈಗೊಂಡಿದ್ದೆ. ಅಲ್ಲಿ ಸಚಿವ ಪಿಯುಷ್ ಗೋಯಲ್, ಪ್ರಹ್ಲಾದ್ ಜೋಶಿ ಅವರೊಂದಿಗೆ ಮಾತನಾಡಿದ್ದೇನೆ. …
Read More »
admin
February 11, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಹಿಜಾಬ್ ವಿವಾದ ನ್ಯಾಯಾಲಯದಲ್ಲಿದೆ.ನ್ಯಾಯಾಲಯದ ಬಗ್ಗೆ ನಾವು ಮಾತನಾಡಕ್ಕೆ ಆಗಲ್ಲಾ, ಏನು ತೀರ್ಪು ಬರತ್ತೋ ಅದನ್ನು ಸರ್ಕಾರ ಪಾಲಿಸಬೇಕು. ಯಾರೂ ಬಣ್ಣದ ಬಟ್ಟೆಗಳನ್ನು ಧರಿಸದಿರುವಂತೆ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರು ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 10 ನೇ ತರಗತಿವರೆಗೆ ಈಗಾಗಲೇ ಸಮವಸ್ತ್ರ ಇದೆ. ಆದರೆ ಕಾಲೇಜಿನ ಸಮಾಜಶಾಸ್ತ್ರದ ಕುರಿತು ಏನು ತೀರ್ಮಾನ ಕೈಗೊಳ್ಳುತ್ತಾರೋ ಕಾದು ನೋಡಬೇಕು. ನ್ಯಾಯಾಲಯ ನೀಡಿದ …
Read More »