Breaking News

ಕೆಂಪು‌ ಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತೇನೆ ಹೇಳಿಕೆ ನೀಡಿರುವ ಈಶ್ವರಪ್ಪವಿರುದ್ಧ ಕ್ರಮ ಕೈಗೊಳ್ಳಿ , ಇಲ್ಲದಿದ್ದರೆ ನಾನೇ ದೂರು‌ ದಾಖಲಿಸುವೆ : ಸಿಎಂ ಇಬ್ರಾಹಿಂ

ಹುಬ್ಬಳ್ಳಿ : ಮುಂದಿನ ದಿನಗಳಲ್ಲಿ ದೆಹಲಿಯ‌ ಕೆಂಪು‌ ಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುತ್ತೇನೆ ಎಂದು ಹೇಳಿಕೆ‌ ನೀಡಿರುವ ಕರ್ನಾಟಕದ ಮಂತ್ರಿ ಈಶ್ವರಪ್ಪ ವಿರುದ್ದ ಸೂಕ್ತ ಕಾನೂನು‌ ಕ್ರಮ‌ ಕೈಗೊಳ್ಳುವುದು ಯಾವಾಗ. ಬೊಮ್ಮಾಯಿ ಅವರು ಕ್ರಮ ಕೈಗೊಳ್ಳದಿದ್ದರೆ, ನಾನೇ ಬೆಂಗಳೂರಿಗೆ ತೆರಳಿ ಈಶ್ವರಪ್ಪ ವಿರುದ್ದ ದೂರು ದಾಖಲಿಸುತ್ತೇನೆ ಎಂದು ಸಿಎಂ ಇಬ್ರಾಹಿಂ ಸಿಎಂ ಬೊಮ್ಮಾಯಿ ಅವರಿಗೆ ಎಚ್ಚರಿಕೆ ನೀಡಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿಚಾರದಲ್ಲಿ ಹೆಣ್ಣು ಮಕ್ಕಳು‌ ತಲೆ ಮೇಲೆ ಸೆರಗು ಹಾಕಿಕೊಳ್ಳೋದೆ ಬೇಡ್ವಾ, ಹಿಜಾಬ್ ಹಾಕಿಕೊಳ್ಳುವುದು ನಮ್ಮ ಸಂಸ್ಕೃತಿ. ಹಿಜಾಬ್ ವಿರುದ್ದವಾಗಿ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಹಂಚಿದ್ದೆ ಈಶ್ವರಪ್ಪನ ಪುತ್ರ, ಅಷ್ಟೇ ಅಲ್ಲದೇ ಈಶ್ವರಪ್ಪ ಕೂಡಾ ಕೇಸರಿ‌ ಧ್ವಜವನ್ನ ಕೆಂಪು‌ಕೋಟೆ ಮೇಲೆ ಹಾರಿಸುತ್ತೇವೆ ಅಂದಿದಾರೆ. ಕೆಂಪು‌ಕೋಟೆ ಮೇಲೆ ಧ್ವಜ ಹಾರಿಸಬೇಕಾದರೆ ಅರ್ಹತೆ ಏನಿರಬೇಕು ಎಂಬುದು ಸಚಿವರಿಗೆ ತಿಳಿದಿದೇಯಾ…? ಪ್ರಧಾನಮಂತ್ರಿಗಳು ಮಾತ್ರ ಕೆಂಪು‌ಕೋಟೆ ಮೇಲೆ ಧ್ವಜ ಹಾರಿಸುತ್ತಾರೆ. ಈ ರೀತಿ ಉಡಾಫೆ ಹೇಳಿಕೆ ನೀಡಿರುವ ಈಶ್ವರಪ್ಪ ವಿರುದ್ದ ಕಾನೂನು‌ ಕ್ರಮವನ್ನ ಸರ್ಕಾರ ತೆಗೆದುಕೊಳ್ಳಬೇಕು ಇಲ್ಲಾವಾದಲ್ಲಿ ನಾನೆ ದೂರು ದಾಖಲಿಸುತ್ತೇನೆ ಎಂದು ಈಶ್ವರಪ್ಪ ಹೇಳಿಕೆಯನ್ನ‌ ಖಂಡಿಸಿದರು.

ಇನ್ನೂ ಇದೇ ವೇಳೆ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ, ಹಿಜಾಬ್‌ಗೆ ಬೇರೆ ಅರ್ಥ‌ಕಲ್ಪಿಸುವ ಅಗತ್ಯವಿಲ್ಲ, ಸೆರಗು ಅಂದರೆ ಅದೂ ಮಹಿಳೆಯರ ತಲೆ ಮೇಲೆ ಹಾಕಿಕೊಳ್ಳವ ಸೆರಗೇ ಹೊರತು ಬೇರೆ ಅಲ್ಲ.‌ ಹಿಜಾಬ್ ನಮ್ಮ ಸಂಸ್ಕೃತಿಯಾಗಿದೆ. ತಲೆ ಮೇಲೆ ಸೆರಗು ಹಾಕಿಕೊಳ್ಳೊದು ತಪ್ಪಾ..?.ದೇವಾನು ದೇವತೆಗಳೆ ತಲೆ‌ಮೇಲೆ ಸೆರಗು ಹಾಕಿಕೊಂಡಿದ್ದಾರೆ. ತರಗತಿ ಒಳಗಡೆ ಬುರ್ಕಾ ಬೇಡ ಅಂದರೆ ಬುರ್ಕಾ ತೆಗೆದಿಟ್ಟು ತರಗತಿ ಕೇಳ್ತಾರೆ. ಆದರೆ ತಲೆ‌ ಮೇಲೆ ಸೆರಗು ತಗಿಬೇಕು ಅನ್ನೋದು ತಪ್ಪು. ಹೆಣ್ಣು ಮಕ್ಕಳೇ ಮೈತುಂಬ ಬಟ್ಟೆ ಹಾಕೊಂಡು ಬರುತ್ತೇವೆ ಎನ್ನುತ್ತಿರುವಾಗ ಬಟ್ಟೆ ತೆಗಿಬೇಕು ಅಂತಿದಾರೆ. ಇದೇಂತಾ ಸರ್ಕಾರ ಎಂದು ವ್ಯಂಗ್ಯವಾಡಿ, ರಾಮಮಂದಿರ ಮುಗೀತು. ಗೋಹತ್ಯೆ ಮುಗೀತು, ಇದೀಗ ಹಿಜಾಬ್ ಶುರು ಮಾಡಿದ್ದಾರೆ. ಎಲ್ಲಾ ದುಖಾನ‌ ಬಂದ ಆದ್ಮೇಲೆ ಈಗ ಹಿಜಾಬ್ ದುಖಾನ ಆರಂಭ ಮಾಡಿದ್ದಾರೆ ಎಂದು ಸರ್ಕಾರದ ವಿರುದ್ದ ಕಿಡಿಕಾರಿದರು.

ಹಿಜಾಬ್ ವಿವಾದವನ್ನ ಯಾರು ಹುಟ್ಟು ಹಾಕಿದರು, ಅದಕ್ಕೆ ಪ್ರಚೋದನೆ ನೀಡಿದವರು ಯಾರು‌…? ಕೇಸರಿ ಶಾಲು ಹಂಚಿ ಮತ್ತಷ್ಟು ವಿವಾದ ಜಟಿಲ ಮಾಡಿದವರು ಯಾರು ಎಂಬುವುದರ ಬಗ್ಗೆ ಸರ್ಕಾರ ತನಿಖೆ ನಡೆಸಲಿ. ಅದಕ್ಕೆ ನಾವು ಸ್ವಾಗತ ಮಾಡುತ್ತೇವೆ. ನಾವ್ಯಾರು ಕೂಡಾ ಇದರ ಬಗ್ಗೆ ತನಿಖೆ ಬೇಡ ಅನ್ನುತ್ತಿಲ್ಲ, ಯಾರೇ ದೇಶದ್ರೋಹ ಕೆಲಸ ಮಾಡಿದರು ಕೂಡಾ ಅದೂ ತಪ್ಪು. ಕೆ ಎಸ್ ಈಶ್ವರಪ್ಪರವರು ಪ್ರಚೋದನೆ ಹೇಳಿಕೆ ನೀಡಿದ್ದಾರೆ ಇಲ್ಲಿ ಯಾವ ಕ್ರಮವಾಗುತ್ತೆ..?, ಕೇಸರಿ ಶಾಲು ಹಂಚಿದ ವಿಡಿಯೋ ಇದೆ ಇದರ ಬಗ್ಗೆ ಕ್ರಮ ಏನು..?. ಸಿಎಫ್‌ಐ ಸಂಘಟನೆ ಏನು ಹೇಳಿದೆ, ಇಸ್ಲಾಮಿಕ್ ಸ್ಟೂಡೆಂಟ್ ಏನ್ ಹೇಳಿದ್ದಾರೆ ಎಲ್ಲವನ್ನು ಹೊರಗೆ ತನ್ನಿ. ತನಿಖೆ ನಡೆಸಿ‌ ಕ್ರಮ ಕೈಗೊಳ್ಳಿ ಎಂದು ಒತ್ತಾಯ ಮಾಡಿದರು.‌

Share News

About admin

Check Also

ಗೃಹಪ್ರವೇಶದ ನಂತರ ಬೆಂಗಳೂರು ಟೆಕ್ಕಿಗೆ ಕಾದಿತ್ತು ಶಾಕ್: 12 ಲಕ್ಷ ಮೌಲ್ಯದ ಚಿನ್ನ ಕದ್ದ ಕಳ್ಳರು, FIRಗೂ ಅಲೆದಾಟ

ಬೆಂಗಳೂರು: ಹೊಸ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಕುಟುಂಬದ 80 ಗ್ರಾಂ ಚಿನ್ನಾಭರಣ ಕಳವಾಗಿದ್ದು, ಮೌಲ್ಯ ಸುಮಾರು ₹12 …

Leave a Reply

Your email address will not be published. Required fields are marked *