Breaking News

Breaking News

ನಿರುದ್ಯೋಗ ಯುವಕರಿಂದ ಶಾಲಾ ಮಕ್ಕಳಿಗೆ ಉಚಿತ ಶಿಕ್ಷಣ

ಅಳವಂಡಿ: ತಾವು ಪಡೆದ ಶಿಕ್ಷಣ ವ್ಯರ್ಥವಾಗಬಾರದು ಎಂಬ ಉದ್ದೇಶದಿಂದ ಕೊಪ್ಪಳ ತಾಲ್ಲೂಕಿನ ನಾಲ್ವರು ಯುವಕರು ಕಳೆದ ಮೂರು ವರ್ಷಗಳಿಂದ ತಮ್ಮ ಗ್ರಾಮದ ಶಾಲಾ ಮಕ್ಕಳಿಗೆ ಉಚಿತ ಮನೆಪಾಠ ಮಾಡುತ್ತಿದ್ದಾರೆ.‌ ಕೊಪ್ಪಳ ತಾಲ್ಲೂಕಿನ ನೀರಲಗಿ ಗ್ರಾಮದ ಪದವೀಧರರಾದ ಆಂದೇಶ ಉಳ್ಳಾಗಡ್ಡಿ, ವಿನಾಯಕ ಮರೇಬಾಳ, ಶಂಕರಗೌಡ ಪೊಲೀಸ್ ಪಾಟೀಲ, ದವನಕುಮಾರ ಆನಂದಹಳ್ಳಿ ಎಂಬುವವರು ತಮ್ಮ ಗ್ರಾಮದ ಶಾಲಾ ಮಕ್ಕಳಿಗೆ ಎರಡರಿಂದ ಮೂರು ಗಂಟೆಗಳ ಕಾಲ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಗ್ರಾಮದ ಯುವಕರಾದ ಆಂದೇಶ …

Read More »

ಒನ್ ಸ್ಟಾಪ್ ಸೆಂಟರ್: ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಯಾದಗಿರಿ: ಒನ್ ಸ್ಟಾಪ್ ಸೆಂಟರ್ (ಸಖಿ) ಯೋಜನೆ ಅನುಷ್ಠಾನಗೊಳಿಸಲು ಹೊರಗುತ್ತಿಗೆ ಆಧಾರದ ಮೇರೆಗೆ ಕೇಂದ್ರ ನಿರ್ವಾಹಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವೀರನಗೌಡ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಒನ್ ಸ್ಟಾಪ್ ಸೆಂಟರ್ (ಸಖಿ) ಯೋಜನೆ ಅನುಷ್ಠಾನಗೊಳಿಸಲು ತಾತ್ಕಾಲಿಕವಾಗಿ ಕೇಂದ್ರ ನಿರ್ವಾಹಕರ ಹುದ್ದೆಯನ್ನು ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ವಿದ್ಯಾರ್ಹತೆ, ಅನುಭವ ಹಾಗೂ ಉಸ್ತುವಾರಿಯಲ್ಲಿ ಉತ್ತಮ ಕೆಲಸ ನಿರ್ವಹಿಸಬಲ್ಲ, ಗಣಕಯಂತ್ರ ನಿರ್ವಹಣೆಯಲ್ಲಿ ಪರಿಣಿತಿ, ಕನ್ನಡ …

Read More »

ಶಿಕ್ಷಣ ಇಲಾಖೆ ಮಹತ್ವದ ಆದೇಶ: ಹೊಸ ನಿಯಮ ಜಾರಿ

ಬೆಂಗಳೂರು: ಕೆಲವೊಂದು ಪರೀಕ್ಷೆಗಳು ಮಕ್ಕಳ ಭವಿಷ್ಯಕ್ಕೆ ಬಹಳ ಮುಖ್ಯವಾಗಿದ್ದು, ಅದರಲ್ಲೂ ಎಸ್‌ಎಸ್‌ಎಲ್ ಸಿ ಪಿಯು ಪರೀಕ್ಷೆಗಳು ತುಂಬಾನೇ ಮುಖ್ಯವಾಗಿರುತ್ತವೆ. 100 ಅಂಕಗಳಿಗೆ 3 ಗಂಟೆ ಪರೀಕ್ಷೆ ನಡೆಸಲಾಗುತ್ತದೆ ಇಡೀ ವರ್ಷ ಓದಿರುವುದನ್ನು 3 ಗಂಟೆಗಳಲ್ಲಿ ಬರೆಯಬೇಕು. ಎಷ್ಟೋ ಮಕ್ಕಳಿಗೆ ಈ ಸಮಯವೇ ಸಾಕಾಗುವುದಿಲ್ಲ, ಆದರೆ ಈಗ ಆ ಸಮಯವನ್ನು ಕೂಡ ಇಳಿಸಲಾಗುತ್ತಿದೆ. ಈ ಸಂಬಂಧ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದ್ದು, ಹೊಸ ನಿಯಮ ಜಾರಿಗೆ ತಂದಿದೆ. ಇಷ್ಟು ವರ್ಷ …

Read More »

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ದಾನಿಗಳು ಕೈಜೋಡಿಸುವುದು ಮುಖ್ಯ: ಸಚಿವ ಮಧು ಬಂಗಾರಪ್ಪ

ಬೆಳಗಾವಿ: ರಾಜ್ಯದಲ್ಲಿನ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಸರ್ಕಾರದ ಜೊತೆಗೆ ದಾನಿಗಳು ಕೈಜೋಡಿಸಿದ್ದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ರೂಪಿಸಲು ಸಾಧ್ಯ ಎಂದು ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು. ನಗರದ ಸುವರ್ಣ ವಿಧಾನಸೌಧದಲ್ಲಿ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದ ಲೋಗೋ ವಿದ್ಯಾರ್ಥಿಗಳಿಂದ ಅನಾವರಣಗೊಳಿಸಿ ದಾನಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ …

Read More »

ಈದ್ ಮಿಲಾದ್: ಮೆರವಣಿಗೆಯಲ್ಲಿ ಡಿಜೆ ಬಳಕೆ ನಿಷೇಧ

ಬೆಂಗಳೂರು: ಈದ್‌ಮಿಲಾದ್ ಹಬ್ಬದ ಪ್ರಯುಕ್ತ ಬೆಂಗಳೂರು ನಗರ ಪೊಲೀಸರು ಕೆಲ ಸೂಚನೆಗಳನ್ನು ಹೊರಡಿಸಿದ್ದಾರೆ. ಅದರಂತೆ ಈದ್‌ ಮಿಲಾದ್‌ ಮೆರವಣಿಗೆಯಲ್ಲಿ ಡಿಜೆ ಮ್ಯೂಸಿಕ್‌ ಬಳಸುವಂತಿಲ್ಲ, ಹರಿತವಾದ ಆಯುಧ ಇಟ್ಟುಕೊಳ್ಳುವಂತಿಲ್ಲ. ಈದ್‌ಮಿಲಾದ್ ಹಬ್ಬದ ದಿನಗಳಾದ ಸೆ.15 ಹಾಗೂ 16ರಂದು ಮುಸ್ಲಿಮರು ನಗರದಲ್ಲಿ ಮೆರವಣಿಗೆ ನಡೆಸಲಿದ್ದಾರೆ. ವೈಎಂಸಿಎ ಮೈದಾನ, ಮಿಲ್ಲರ್‌ ರಸ್ತೆ, ಖುದ್ದುಸಾಬ್ ಈದ್ಗಾ ಮೈದಾನ, ಶಿವಾಜಿನಗರ ಛೋಟಾ ಮೈದಾನ, ಭಾರತೀನಗರದ ಸುಲ್ತಾನ್‌ಜೀ ಗುಂಟಾ ಮೈದಾನ ಮತ್ತಿತರ ಕಡೆಗಳಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಈ ಸಂಬಂಧ …

Read More »

ರಾಜ್ಯ ಸಿವಿಲ್ ಸೇವೆಗಳ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆ

ಬೆಂಗಳೂರು: ರಾಜ್ಯ ಸರ್ಕಾರದಿಂದ ಉದ್ಯೋಗ ಆಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಲಾಗಿದ್ದು, ರಾಜ್ಯ ಸಿವಿಲ್ ಸೇವೆಗಳಿಗೆ ಸಂಬಂಧಿಸಿದಂತ ಗ್ರೂಪ್-ಬಿ ಹಾಗೂ ಸಿ ವೃಂದದ ನೇಮಕಾತಿಯ ವೇಳೆಯಲ್ಲಿ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ 3 ವರ್ಷ ವಯೋಮಿತಿಯನ್ನು ಸಡಿಲಿಸಿ ಆದೇಶಿಸಿದೆ. ರಾಜ್ಯ ಸರ್ಕಾರದಿಂದ ಈ ಬಗ್ಗೆ ಆದೇಶ ಹೊರಡಿಸಿದ್ದು, ಕೋವಿಡ್-19 ಸಮಯದಲ್ಲಿ ನೇಮಕಾತಿಗಳು ಸರಿಯಾಗಿ ನಡೆದಿರಲಿಲ್ಲ, ಹಲವು ನೇಮಕಾತಿಗಳನ್ನು ಮುಂದೂಡುತ್ತಾ ಬರಲಾಗಿತ್ತು. ಹೀಗಾಗಿ ಅನೇಕ ಉದ್ಯೋಗ ಆಕಾಂಕ್ಷಿಗಳು ವಯೋಮಿತಿಯನ್ನು ಮೀರುವಂತೆ ಆಗಿತ್ತು ಅವರೆಲ್ಲರೂ …

Read More »

ಗ್ರಾಮ ಪಂಚಾಯಿತಿ: ಮೊಬೈಲ್​ನಲ್ಲೆ ಆಸ್ತಿ ತೆರಿಗೆ ಪಾವತಿ

ಬೆಂಗಳೂರು: ಗ್ರಾಮ ಪಂಚಾಯ್ತಿ ಆಸ್ತಿ ತೆರಿಗೆ ಪಾವತಿ ಈಗ ಸುಲಭ, ನಿಮ್ಮ ಸ್ಮಾರ್ಟ್ ಪೋನ್ ನಲ್ಲೇ ಗ್ರಾಮ ಪಂಚಾಯ್ತಿ ಆಸ್ತಿ ತೆರಿಗೆಯನ್ನು ಪಾವತಿಸಬಹುದಾಗಿದೆ. ಸ್ಮಾರ್ಟ್ ಪೋನ್ ಯುಗದಲ್ಲಿ ಸ್ಮಾರ್ಟ್ ಆಗೇ ಗ್ರಾಮ ಪಂಚಾಯ್ತಿ ಆಸ್ತಿ ತೆರಿಗೆ ಪಾವತಿಸುವಂತ ವಿಧಾನವನ್ನು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಪರಿಚಯಿಸಿದೆ. ರಾಜ್ಯದ ಗ್ರಾಮೀಣ ಜನರು ಗ್ರಾಮ ಪಂಚಾಯ್ತಿ ಬಾಪೂಜಿ ಸೇವಾ ಕೇಂದ್ರಗಳಿಗೆ ತೆರಳದೇ ಕುಳಿತಲ್ಲೇ ಮೊಬೈಲ್ ನಲ್ಲಿ ಆಸ್ತಿ ತೆರಿಗೆ ಪಾವತಿಸೋದಕ್ಕೆ ಅವಕಾಶ ನೀಡಿದೆ. ಗೂಗಲ್ ಪೇ, …

Read More »

ವಿದ್ಯುತ್‌ ವಿತರಣಾ ಉಪಕೇಂದ್ರಕ್ಕೆ ಸ್ಥಳಾಂತರದ ಶಂಕೆ: ರೈತರ ಆಕ್ರೋಶ

ಲಿಂಗಸುಗೂರು: ತಾಲ್ಲೂಕಿನ ಆನೆಹೊಸೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೆ ಗುಣಮಟ್ಟದ ವಿದ್ಯುತ್‍ ಪೂರೈಕೆಗೆ 132/11ಕೆವಿ ವಿದ್ಯುತ್‍ ವಿತರಣಾ ಉಪ ಕೇಂದ್ರ ಮಂಜೂರಾತಿ ಹಂತದಲ್ಲಿದೆ. ಮಂಜೂರಾತಿ ಹಂತದಲ್ಲಿ ಇರುವಾಗಲೇ ಸ್ಥಳಾಂತರದ ಶಂಕೆ ಕೇಳಿಬಂದಿದ್ದು ರೈತರ ಆಕ್ರೋಶಕ್ಕೆ ದಾರಿ ಮಾಡಿಕೊಟ್ಟಿದೆ. 2023ರಲ್ಲಿ ತಾಲ್ಲೂಕಿನ ಆನೆಹೊಸೂರು, ಆನ್ವರಿ, ಗುಂತಗೋಳ ಗ್ರಾಮಗಳಲ್ಲಿ 110/11ಕೆವಿ ವಿದ್ಯುತ್‍ ವಿತರಣಾ ಉಪಕೇಂದ್ರ ಸ್ಥಾಪನೆಗೆ ಪ್ರಸ್ತಾವ ಸಲ್ಲಿಸಲಾಗಿತ್ತು, ಈಚೆಗೆ ಜರುಗಿದ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ 110/11ಕೆವಿ ಬದಲು 132/11ಕೆವಿ ಮಾರ್ಪಡಿಸಿ ಸಂಪೂರ್ಣ …

Read More »

ಜಲವಿದ್ಯುತ್ ಸ್ಥಾವರದ ಆರ್‌ಟಿಪಿಎಸ್ ಹಾಗೂ ವೈಟಿಪಿಎಸ್ ಘಟಕಗಳು ತಾತ್ಕಲಿಕ ಬಂದ್

ಶಕ್ತಿನಗರ: ರಾಜ್ಯದಲ್ಲಿ ಉತ್ತಮವಾಗಿ ಮಳೆಯಾಗಿದ್ದರಿಂದ ಜಲವಿದ್ಯುತ್‌ ಉತ್ಪಾದನೆ ಪ್ರಮಾಣ ಹೆಚ್ಚಿಸಿದ ಪರಿಣಾಮ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್‌ಟಿಪಿಎಸ್) ಆರು ಘಟಕಗಳಲ್ಲಿ ಹಾಗೂ ಯರಮರಸ್ ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ವೈಟಿಪಿಎಸ್) ಎರಡು ಘಟಕಗಳಲ್ಲಿ ತಾತ್ಕಲಿಕವಾಗಿ ವಿದ್ಯುತ್‌ ಉತ್ಪಾದನೆ ನಿಲ್ಲಿಸಲಾಗಿದೆ. ಬಹುತೇಕ ಜಲಾಶಯಗಳು ಭರ್ತಿ ಹಂತಕ್ಕೆ ತಲುಪಿದ್ದರಿಂದ ಜಲವಿದ್ಯುತ್ ಕೇಂದ್ರಗಳು ಕಾರ್ಯಾರಂಭಿಸಿವೆ. ಶಾಖೋತ್ಪನ್ನ ಘಟಕಗಳ ಉತ್ಪಾದನೆ ತಾತ್ಕಲಿಕವಾಗಿ ಬಂದ್ ಮಾಡಲು ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ) ಮುಂದಾಗಿದೆ. ಮತ್ತೊಂದೆಡೆ ಪವನ ಮತ್ತು …

Read More »

8 ನೇ ವೇತನ ಆಯೋಗ ಜಾರಿಯಡಿ ನೌಕರರ ವೇತನ ಗಣನೀಯ ಹೆಚ್ಚಳ

ನವದೆಹಲಿ: ಸದ್ಯ ಏಳನೇ ವೇತನ ಆಯೋಗ ಇದ್ದು, ಅದರ ನಂತರ ಎಂಟನೇ ವೇತನ ಆಯೋಗ ಜಾರಿಯಾಗಲಿದೆ. ಈ ಹೊಸ ಆಯೋಗದಡಿ ಅನೇಕ ವೇತನ ಪರಿಷ್ಕರಣೆಯ ಲಾಭ ಸಿಗುವ ಬಗ್ಗೆ ಕೇಂದ್ರ ಸರ್ಕಾರಿ ನೌಕರರು ಕಾತರದಿಂದ ಕಾಯುತ್ತಿದ್ದಾರೆ, ಇದು ನೌಕರರ ದೀರ್ಘ ಕಾಲದ ಬೇಡಿಕೆಯಾಗಿದ್ದು, ಸರ್ಕಾರ ಪರಿಹರಿಸಲು ಸಿದ್ಧವಾಗುತ್ತಿದ್ದು, ಇದರಿಂದ ನಿರೀಕ್ಷೆಯಲ್ಲಿರುವ ನೌಕರರಲ್ಲಿ ಹರ್ಷ ಹೆಚ್ಚಾಗಿದೆ. 7ನೇ ವೇತನ ಆಯೋಗ ಜಾರಿಯಾಗಿ ಒಂದು ದಶಕದ ನಂತರ 8ನೇ ವೇತನ ಆಯೋಗವು ಜಾರಿಗೆ …

Read More »