ನವದೆಹಲಿ: ಸದ್ಯ ಏಳನೇ ವೇತನ ಆಯೋಗ ಇದ್ದು, ಅದರ ನಂತರ ಎಂಟನೇ ವೇತನ ಆಯೋಗ ಜಾರಿಯಾಗಲಿದೆ. ಈ ಹೊಸ ಆಯೋಗದಡಿ ಅನೇಕ ವೇತನ ಪರಿಷ್ಕರಣೆಯ ಲಾಭ ಸಿಗುವ ಬಗ್ಗೆ ಕೇಂದ್ರ ಸರ್ಕಾರಿ ನೌಕರರು ಕಾತರದಿಂದ ಕಾಯುತ್ತಿದ್ದಾರೆ, ಇದು ನೌಕರರ ದೀರ್ಘ ಕಾಲದ ಬೇಡಿಕೆಯಾಗಿದ್ದು, ಸರ್ಕಾರ ಪರಿಹರಿಸಲು ಸಿದ್ಧವಾಗುತ್ತಿದ್ದು, ಇದರಿಂದ ನಿರೀಕ್ಷೆಯಲ್ಲಿರುವ ನೌಕರರಲ್ಲಿ ಹರ್ಷ ಹೆಚ್ಚಾಗಿದೆ.
7ನೇ ವೇತನ ಆಯೋಗ ಜಾರಿಯಾಗಿ ಒಂದು ದಶಕದ ನಂತರ 8ನೇ ವೇತನ ಆಯೋಗವು ಜಾರಿಗೆ ಬರಲಿದೆ. ಅಂದರೆ ಹತ್ತು ವರ್ಷಗಳ ನಂತರ 2026 ರ ಜನವರಿಯಲ್ಲಿ ಅನುಷ್ಠಾನಗೊಳ್ಳುವ ನಿರೀಕ್ಷೆ ಇದೆ ಸರ್ಕಾರ ನೌಕರರ ಹಣದುಬ್ಬರ ಸರಿದೂಗಿಸಲು ಈ ಎಂಟನೇ ವೇತನ ಆಯೋಗದಡಿ ವೇತನವನ್ನು ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಮಾಡಲಿದ್ದು, ಹೆಚ್ಚು ಲಾಭ ಸಿಗಲಿದೆ ಎಂದು ಯೋಚಿಸುತ್ತಿದ್ದಾರೆ.
ಹೊಸ ವೇತನ ಆಯೋಗದಡಿ ಮೂಲಕ ವೇತನದಲ್ಲಿ ಭಾರೀ ಹೆಚ್ಚಳ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಈ ಹೆಚ್ಚಳವು ಫಿಟ್‌ಮೆಂಟ್ ಅಂಶವನ್ನು ಆಧರಿಸಿದೆ. ಸರ್ಕಾರ ಪರಿಷ್ಕೃತ ವೇತನ ಶ್ರೇಣಿ ಪರಿಚಯಿಸಲಿದ್ದು, ಇದರಿಂದ ನೌಲರರಿಗೆ ಎಲ್ಲಾ ಹಂತಗಳಲ್ಲಿನ ಪ್ರಯೋಜನ ಸಿಗಲಿದೆ.
ಈ ಎಂಟನೆ ವೇತನ ಆಯೋಗದ ಜಾರಿಯಿಂದ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಒಟ್ಟು ಆದಾಯದ ಒಟ್ಟಾರೆ ಗಳಿಕೆಯಲ್ಲಿ ಶೇಕಡಾ 25 ರಿಂದ 35 ರಷ್ಟು ಸಂಭಾವ್ಯ ಹೆಚ್ಚಳವಾಗಬಹುದು. ಸದ್ಯದವರೆಗೆ ಕೇಂದ್ರ ಸರ್ಕಾರ ಈ ಎಂಟನೇ ವೇತನ ಆಯೋಗದ ಬಗ್ಗೆ ಜಾರಿ ನಿರ್ಧಾರ, ಕಾಲ ಮಿತಿಯನ್ನು ದೃಢೀಕರಿಸಿಲ್ಲ. ಆದರೆ ಏಳನೇ ವೇತನ ಆಯೋಗವು ಮುಂದಿನ 18 ತಿಂಗಳಲ್ಲಿ ಅಂತ್ಯವಾಗಲಿದೆ ಅದಾದ ಬಳಿಕ 2026 ರಲ್ಲಿ ಈ ಹೊಸ ವೇತನ ಆಯೋಗ ಜಾರಿಗೆ ತರಬೇಕಾಗುತ್ತದೆ, ಇದರಿಂದಾಗಿ ನೌಕರರ ನಿರೀಕ್ಷೆಗಳು ಹೆಚ್ಚಾಗಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

