Breaking News

Breaking News

ಫುಟ್‌ಪಾತ್ ಮೇಲೆ ಮಲಗಿದ್ದ ಐವರ ಟ್ರಕ್ ಹರಿದು ಸಾವು

ನವದೆಹಲಿ: ಫುಟ್‌ಪಾತ್ ಮೇಲೆ ಮಲಗಿದ್ದ ಐವರ ಮೇಲೆ ಟ್ರಕ್‌ವೊಂದು ಹರಿದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ದೆಹಲಿಯ ಶಾಸ್ತ್ರಿ ಪಾರ್ಕ್ ಪ್ರದೇಶದಲ್ಲಿ ಇಂದು ನಡೆದಿದೆ. ಮುಂಜಾನೆ 5:30ರ ವೇಳೆಗೆ ಘಟನೆ ಸಂಭವಿಸಿದೆ. ಮನೆ, ಆಶ್ರಯವಿಲ್ಲದ ಐವರು ಫುಟ್‌ಪಾತ್ ಮೇಲೆ ಮಲಗಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ಟ್ರಕ್ ಹರಿದಿದೆ. ತಕ್ಷಣವೇ ಎಲ್ಲರನ್ನೂ ಜಗ್ ಪ್ರವೇಶ್ ಚಂದ್ರ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಪೈಕಿ ಮೂವರು ಮೃತಪಟ್ಟಿದ್ದಾರೆ ಎಂದು …

Read More »

ಇಸ್ಕಾನ್ ದೇವಾಲಯಕ್ಕೆ ಶೋಭಾ ಕರಂದ್ಲಾಜೆ ಭೇಟಿ

ಬೆಂಗಳೂರು: ನಾಡಿನೆಲ್ಲೆಡೆ ಇಂದು ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಮನೆ ಮಾಡಿದ್ದು, ಬೆಂಗಳೂರಿನ ಇಸ್ಕಾನ್ ದೇವಾಲಯದಲ್ಲೂ ಜನ್ಮಾಷ್ಟಮಿ ವಿಜೃಂಭಣೆಯಿಂದ ನಡೆಯುತ್ತಿದೆ. ಈ ಸಂಧರ್ಭ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇಸ್ಕಾನ್ ದೇವಾಲಯಕ್ಕೆ ಭೇಟಿ ನೀಡಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮದಲ್ಲಿ ಪಾಲ್ಗೊಂಡರು. ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಭಕ್ತರು ಶ್ರೀ ಕೃಷ್ಣನ ಸರಣೆ ಮಾಡುತ್ತಿದ್ದಾರೆ. ಇಸ್ಕಾನ್‌ನಲ್ಲಿ ಮುಂಜಾನೆ 4:3ರಿಂದ ರಾಧಾ- ಕೃಷ್ಣರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಮುಂಜಾನೆ 4:30ಕ್ಕೆ ಕೃಷ್ಣನಿಗೆ ಮಂಗಳಾರತಿಮತ್ತು ತುಳಸಿ ಆರತಿ …

Read More »

ವೋಲ್ಲಾ ಸೈ ವಸತಿ ಸಂಕೀರ್ಣಕ್ಕೆ ಉಕ್ರೇನಿಯನ್ ಡೋನ್ ಡಿಕ್ಕಿ

ಟೋಕಿಯೋ: ರಷ್ಯಾದ ಸರಟೋವ್‌ನಲ್ಲಿರುವ 38 ಅಂತಸ್ತಿನ ವೋಲ್ಲಾ ಸೈ ವಸತಿ ಸಂಕೀರ್ಣಕ್ಕೆ ಉಕ್ರೇನಿಯನ್ ಡೋನ್ ಅಪ್ಪಳಿಸಿತು, ಇದು ನಗರದ ಅತ್ಯಂತ ಎತ್ತರದ ಕಟ್ಟಡವಾಗಿದೆ. ಇದು ಸಂಚಲನ ಮೂಡಿಸಿದೆ. ಇದಲ್ಲದೆ, ಈ ವಿಷಯದ ಬಗ್ಗೆ ತಿಳಿದಿರುವ ಉಕ್ರೇನಿಯನ್ ಅಧಿಕಾರಿಯ ಪ್ರಕಾರ, ಶುಕ್ರವಾರ ಬೆಳಿಗ್ಗೆ ಸುಮಾರು 350 ಕಿಲೋಮೀಟರ್ ದೂರದಲ್ಲಿರುವ ಮೊರೊವೊಸ್ಟ್ ಏ‌ರ್ ಬೇಸ್ ಮೇಲೆ ದಾಳಿ ಮಾಡುವ ಮೂಲಕ ಆರು ರಷ್ಯಾದ ಯುದ್ಧ- ಬಾಂಬರ್‌ಗಳನ್ನು ನಾಶಪಡಿಸಿದೆ ಎಂದು ಉಕ್ರೇನ್ ಹೇಳಿಕೊಂಡಿದೆ. ರಷ್ಯಾದ …

Read More »

ವೈದ್ಯರಿಗೆ ಪೋಲಿಸ್ ಎಂದು ಸುಳ್ಳು ಹೇಳಿ ವಂಚನೆ

ಚಿತ್ರದುರ್ಗ: ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟಿಆರ್‌ಎಐ) ಮತ್ತು ಮುಂಬೈ ಪೊಲೀಸರೆಂದು ಹೇಳಿ ಕರೆ ಮಾಡಿ ಸೈಬರ್ ವಂಚಕರು ಹಿರಿಯ ವೈದ್ಯರೊಬ್ಬರಿಗೆ ವಂಚಿಸಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಶ್ರೀನಿವಾಸ್ ಶೆಟ್ಟಿ ವಂಚನೆಗೊಳಗಾದ ವೈದ್ಯ. ವಂಚಕರು ವಾಟ್ಸಪ್ ಕಾಲ್ ಮತ್ತು ನಾರ್ಮಲ್ ಕಾಲ್ ಮಾಡಿ, ನಿಮ್ಮ ಬ್ಯಾಂಕ್ ಖಾತೆ ಬಳಸಿ ಮನಿ ಲ್ಯಾಂಡರಿಂಗ್ ವಂಚನೆ ಆಗಿದೆ. ನಿಮ್ಮ ಖಾತೆಯ ಹಣದ ಆಡಿಟ್ ಮಾಡಬೇಕಿದೆ ಎಂದು ನಂಬಿಸಿ ವೈದ್ಯರ ಖಾತೆಯಿಂದ 1.27 …

Read More »

‘ದಿ ವಿಲನ್’ ಚಿತ್ರದ ನಟಿಯ ಎರಡನೇ ಮದುವೆ ಫೋಟೊ ವೃರೆಲ್

ಬ್ರಿಟೀಷ್ ಬ್ಯೂಟಿ ಆಮಿ ಜಾಕ್ಸನ್ ಕನ್ನಡ ಸಿನಿರಸಿರಕರಿಗೂ ಚಿರಪರಿಚಿತ. ಜೋಗಿ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಚಿತ್ರದಲ್ಲಿ ಸುದೀಪ್ ಜೋಡಿಯಾಗಿ ಆಕೆ ನಟಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಚೆಲುವೆ ಆಗಾಗ್ಗೆ ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ. ಸದ್ಯ ಆಮಿ ಜಾಕ್ಸನ್ ತಮ್ಮ ಎರಡನೇ ಮದುವೆ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ತನ್ನ ಗೆಳೆಯ ಎಡ್ ವೆಸ್ಟ್‌ವಿಕ್‌ನನ್ನು ಆಕೆ ಮದುವೆ ಆಗಿದ್ದಾರೆ. ಇವರಿಬ್ಬರ ವಿವಾಹ ಸಮಾರಂಭ ಇಟಲಿಯ ಅಮಾ ತೀರದಲ್ಲಿ ನಡೆದಿದೆ. ಈ …

Read More »

ಮಗಳ ವಯಸ್ಸಿನ ಪುಟ್ಟ ಬಾಲಕಿಯ ಮೇಲೆ ಕಾಮುಕನ ಅತ್ಯಾಚಾರ

ಹುಬ್ಬಳ್ಳಿ: ಡ್ರೈವರ್ ಕೆಲಸ ಮಾಡುತ್ತಿದ್ದ 54 ವರ್ಷದ ಕಾಮುಕ 7 ವರ್ಷದ ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ಅಶೋಕ ನಗರ ಠಾಣೆಯ ಪೊಲೀಸರು ಬಂಧಿಸಿ ಆರೋಪಿ ವಿರುದ್ಧ ಪೋಕ್ಸ ಪ್ರಕರಣವನ್ನು ದಾಖಲು ಮಾಡಿದ್ದಾರೆ. ಬಂಧಿತ ಆರೋಪಿ ಹೆಸರು ನೂರ್ ಅಹ್ಮದ್ . ಈತನ ಮನೆಯಲ್ಲಿಯೇ ಬಾಡಿಗೆಗೆ ಇದ್ದ ಕುಟುಂಬವೊಂದರ 7 ವರ್ಷದ ಮಗುವನ್ನು ಮನೆಯಲ್ಲಿ ಯಾರೂ ಇಲ್ಲದ ವೇಳೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಲು ಯತ್ನಿಸಿದ್ದ. ಕೂಡಲೇ ಮಗುವಿನ ಮನೆಯವರು …

Read More »

ಅಣ್ಣಿಗೇರಿಯಲ್ಲಿ ಪೊಲೀಸರಿಂದ ಗಣೇಶ್ ಚತುರ್ಥಿ ಹಿನ್ನೆಲೆ ಪತಸಂಚಲನ

ಅಣ್ಣಿಗೇರಿ: ಪಟ್ಟಣದಲ್ಲಿ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 97 ಬೆಟಾಲಿಯನ್ ಆರ್ ಎ ಎಫ್ (ರಾಪಿಡ್ ಆಕ್ಷನ್ ಫೋರ್ಸ್) ಸಿಬ್ಬಂದಿಯೊಂದಿಗೆ ರೂಟ್ ಮಾರ್ಚ್‌ ನಡೆಸಿದರು. ಈ ವೇಳೆ ಪಿಎಸ್‌ಐ ಸಿದ್ದಾರೂಢ ಆಲದಕಟ್ಟಿ, ಯು.ಸಿ. ಪಾಟೀಲ ಇತರರು ಭಾಗವಹಿಸಿದ್ದರು

Read More »

ಬೆರಟಿ ಕೆರೆಗೆ ಬಾಗಿನ ಅರ್ಪಿಸಿದ ಶಾಸಕ ತಮ್ಮಯ್ಯ,ಸಿ .ಟಿ. ರವಿ

ಕಡೂರು: ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಹುಲಿಕೆರೆ ವ್ಯಾಪ್ತಿಯ ಪ್ರಮುಖ ಜಲಾ ಮೂಲ ಬೆರಟಿ ಕೆರೆ ತುಂಬಿದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಶಾಸಕ ಹೆಚ್. ಡಿ ತಮ್ಮಯ್ಯ, ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಬಾಗಿನ ಅರ್ಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ತಮ್ಮಯ್ಯ ಅಯ್ಯನ ಕೆರೆ ಯಿಂದ ಬೆರಟಿ ಕೆರೆಗೆ ನೀರು ತರುವ ಯೋಜನೆಗೆ ಹಿಂದಿನ ಶಾಸಕರ ಅವಧಿಯಲ್ಲಿ 9ಕೋಟಿ ಅನುದಾನ ಬಿಡುಗಡೆಯಾಗಿತ್ತು ಆದರೆ ತಾಂತ್ರಿಕ ಕಾರಣದಿಂದ ಕೆಲಸ ಆರಂಭಗೊಂಡಿರಲಿಲ್ಲ, …

Read More »

ಯುವತಿಯನ್ನು ರಕ್ಷಿಸಲು ಹೋಗಿ ಇಬ್ಬರು ಸ್ನೇಹಿತರು ಸಾವು

ವಾರಣಾಸಿಯ ಗಂಗಾ ನದಿಯ ಘಾಟ್‌ಗಳಲ್ಲಿ ಸೆಲ್ಪಿ ತೆಗೆದುಕೊಳ್ಳುತ್ತಿದ್ದ 19 ವರ್ಷದ ವಿದ್ಯಾರ್ಥಿನಿಯೊಬ್ಬಳು ಕಾಲು ಜಾರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ. ಆಕೆಯ 21 ವರ್ಷ ವಯಸ್ಸಿನ ಇಬ್ಬರು ಸ್ನೇಹಿತರು ಅವಳನ್ನು ರಕ್ಷಿಸಲು ನದಿಗೆ ಹಾರಿದರು ಆದರೆ ಕೊಚ್ಚಿಹೋಗಿದ್ದಾರೆ. ಇವರಲ್ಲಿ ಒಬ್ಬನ ಶವವನ್ನು ಅಧಿಕಾರಿಗಳು ಹೊರತೆಗೆದಿದ್ದು, ಇನ್ನಿಬ್ಬರ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ.

Read More »

ಅಮೇರಿಕಾದಲ್ಲಿ ಭಾರತೀಯ ಮೂಲದ ಖ್ಯಾತ ವೈದ್ಯ ಗುಂಡಿಕ್ಕಿ ಹತ್ಯೆ

ವಾಷಿಂಗ್ಟನ್‌: ಅಮೇರಿಕಾದಲ್ಲಿ ಭಾರತೀಯ ಮೂಲದ ಖ್ಯಾತ ವೈದ್ಯರೊಬ್ಬರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅಲಬಾಮಾ ನಗರದ ಟುಸ್ಕಲುಸಾ ಎಂಬಲ್ಲಿ ಶುಕ್ರವಾರ ನಡೆದ ಗುಂಡಿನ ದಾಳಿಯಲ್ಲಿ ಡಾ.ರಮೇಶ್ ಬಾಬು ಪೆರಮಸೆಟ್ಟಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇವರು ಅಮೆರಿಕದಲ್ಲಿ ಹಲವು ಆಸ್ಪತ್ರೆಗಳನ್ನು ನಡೆಸುತ್ತಿರುವ ಖ್ಯಾತ ವೈದ್ಯರು. ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯವರಾಗಿದ್ದ ಡಾ.ರಮೇಶ್, ಕ್ರಿಲ್ಸನ್ ನೆಟ್ವರ್ಕ್ ಹೆಸರಿನ ಸ್ಥಳೀಯ ವೈದ್ಯರ ಸಂಘಟನೆಯ ಸಂಸ್ಥಾಪಕ ಹಾಗೂ ವೈದ್ಯಕೀಯ ನಿರ್ದೇಶಕರಲ್ಲೊಬ್ಬರು. ಟುಸ್ಕಲೂಸಾದಲ್ಲಿ ವೈದ್ಯರಾಗಿಯೂ ಪ್ರಾಕ್ಟಿಸ್ ಮಾಡುತ್ತಿದ್ದ …

Read More »