Breaking News

Breaking News

ಕೋ-ಆಪರೇಟೀವ್​ ಬ್ಯಾಂಕ್​​ನಲ್ಲಿ ಕೋಟ್ಯಂತರ ಅವ್ಯವಹಾರ

ಬೆಳಗಾವಿ: ಡಿಕೆಶಿ ಗರ್ಲ್​​ ಫ್ರೆಂಡ್​ ಮನೆ ಲಂಡನ್​​ನಲ್ಲಿ ಇದೆ ಎಂದು ಡಿ.ಕೆ.ಶಿವಕುಮಾರ್​​ ವಿರುದ್ಧ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.  ಶುಗರ್​ ಫ್ಯಾಕ್ಟರಿಯಲ್ಲಿ ಡಿಕೆಶಿ ಹಣ ಹೂಡಿಕೆ ಮಾಡಿದ್ದಾರೆ. ಹೆಬ್ಬಾಳ್ಕರ್​​ ಶುಗರ್​​ ಫ್ಯಾಕ್ಟರಿಯಲ್ಲಿ ಡಿಕೆಶಿ ಬ್ಲಾಕ್​​ಮನಿ ಇದೆ, ಕೋ-ಆಪರೇಟೀವ್​ ಬ್ಯಾಂಕ್​​ನಲ್ಲಿ ಕೋಟ್ಯಂತರ ಅವ್ಯವಹಾರ ಆಗಿದೆ.  ಲಂಡನ್​​, ದುಬೈನಲ್ಲಿ ಮನೆ ಇವೆ ಅಂತಾ ಡಿಕೆಶಿ ಹೇಳಿದ್ದಾರೆ, ಡಿಕೆಶಿ ಗರ್ಲ್​​ ಫ್ರೆಂಡ್​ ಮನೆ ಲಂಡನ್​​ನಲ್ಲಿ ಇದೆ ಎಂದು ಗುಡುಗಿದ್ದಾರೆ. ಡಿ.ಕೆ.ಶಿವಕುಮಾರ್​​​ ನೂರಾರು CD ಮಾಡಿಕೊಂಡಿದ್ದಾರೆ ಎಂದು …

Read More »

ಡಿಕೆ ಶಿವಕುಮಾರ್​ ಅವರ ಆಡಿಯೋ ರಿಲೀಸ್

ಬೆಳಗಾವಿ:  ಸಾಹುಕಾರ್, ಡಿಕೆ ಶಿವಕುಮಾರ್​ ಅವರ ಆಡಿಯೋ ರಿಲೀಸ್ ಮಾಡಿದ್ದು,  ಡಿಕೆಶಿ ಅವ್ರದ್ದೆನ್ನಲಾದ 18 ಸೆಕೆಂಡ್​ಗಳ ಆಡಿಯೋ ಇದಾಗಿದೆ. ರಮೇಶ್​ ಜಾರಕಿಹೊಳಿಯಿಂದ ಸ್ಫೋಟಕ ಆಡಿಯೋ ರಿಲೀಸ್​​ ಆಗಿದ್ದು, ಡಿಕೆಶಿ ಆಡಿಯೋದಲ್ಲಿ  ನನಗೆ ದುಬೈನಲ್ಲಿ ಮನೆ.. ಲಂಡನ್​​​​​ನಲ್ಲೂ ಮನೆ ಇದೆ. ದೆಹಲಿಯಲ್ಲೊಂದು ಮನೆ ತಗೊಂಡು ಇಟ್ಟಕೊಂಡಿದ್ದೀನಿ.  ಮುಂಬೈನಲ್ಲೂ ಒಂದು ಫ್ಲಾಟ್​​​ ಇದೆ ಎಂದಿದ್ದಾರೆ. ಆಡಿಯೋದಲ್ಲಿ ಕೋಟಿ ಕೋಟಿ ವ್ಯವಹಾರದ ಪ್ರಸ್ತಾಪ ಮಾಡಿದ್ದಾರೆ. ರೇಡ್​ ಆದಾಗ 40-50 ಕೋಟಿ ಸೀಜ್ ಆಗಿತ್ತು ಎಂದಿದ್ದಾರೆ. ಡಿ.ಕೆ.ಶಿವಕುಮಾರ್​​ ವಿರುದ್ಧ …

Read More »

ಜಯಲಲಿತಾ ಸಮಕ್ಕೆ ಭವಾನಿ ರೇವಣ್ಣ ಫೋಟೋ

ಹಾಸನ :  ಕುಟುಂಬ ರಾಜಕಾರಣಿದಲ್ಲಿ ಟಿಕೆಟ್ ಗಾಗಿ ಬುಗಿಲೆದ್ದಿರುವ ಮಾತಿನ ಚಕಮಕಿಯಲ್ಲಿ, ಈಗ ಮತ್ತೊಂದು ಹೊಸ ರೂಪ ಪಡೆದಿದೆ. ಹಾಸನದಲ್ಲಿ ಟಿಕೆಟ್ ಗಾಗಿ ಒಂದು ಭವಾನಿ ರೇವಣ್ಣ ಪೈಪೋಟಿ ನಡೆಸುತ್ತಿದ್ದರೇ , ಮತ್ತೊಂದು ಕಡೆ ಮಾಜಿ ಶಾಸಕರ ಮಗ ಸ್ವರೂಪ್ ತಮ್ಮ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಆದ್ರೇ ಮತದಾರರು ಹಾಗೂ ಭವಾಣಿ ರೇವಣ್ಣನವರ ಅಭಿಮಾನಿಗಳು ಒಂದು ಹೆಜ್ಜೆ ಮುಂದೆ ಇತ್ತ ಕುಮಾರಸ್ವಾಮಿಗೆ ಟಾಂಗ್ ಕೊಡುವ ಕೆಲಸ ಮಾಡಿದ್ದಾರೆ. ಕರ್ನಾಟಕದ ‘ಅಮ್ಮ’.. …

Read More »

ಪಕ್ಷಕ್ಕಿಂತ ಸಮುದಾಯವೇ ಮುಖ್ಯ ಎಂಬುದೇ ಅಲ್ಪಾಸಂಖ್ಯಾತರ ಕೂಗು-ಐ ಜಿ ಸನದಿ

ಹುಬ್ಬಳ್ಳಿ: ಮುಸ್ಲಿಂ ಸಮೂದಾಯದವರ ಜನಸಂಖ್ಯೆ ಹೆಚ್ಚಿರುವ ಕಡೆ ಕನಿಷ್ಟ ಪಕ್ಷ ಒಂದು ಟಿಕೆಟ್‌ ನೀಡಬೇಕೆಂದು ಮಾಜಿ ‌ಸಂಸದ ಐ ಜಿ ಸನದಿಯವರು ಒತ್ತಾಯಿಸಿದರು. ಅಲ್ಪಸಂಖ್ಯಾತರಿಗೆ ಹುಬ್ಬಳ್ಳಿ ಧಾರವಾಡ ದಲ್ಲಿ ಒಂದು ಟಿಕೆಟ್ ನೀಡುವಂತೆ ಕಾಂಗ್ರೆಸ್ ಗೆ ಮನವಿ ಮಾಡಿದ್ದಾರೆ. ಕಾಂಗ್ರೆಸ್ ನಿಂದ ಇಲ್ಲಿಯವರೆಗೂ ನಮ್ಮ ಸಮುದಾಯಕ್ಕೆ ಯಾವುದೇ ಅನ್ಯಾಯ ಆಗಿಲ್ಲ. ಕಾಂಗ್ರೇಸ್ ಪಕ್ಷದಲ್ಲಿ ಮೊದಲು ಪಾರ್ಟಿ ಅನ್ನುವ ಸಿದ್ದಾಂತ ವಿತ್ತು. ಆದ್ರೇ ಈಗ ಮುಸ್ಲಿಂ ಸಮುದಾಯದ ಧ್ವನಿ ಹೆಚ್ಚಾಗಿದೆ. ಪಾರ್ಟಿಗಿಂತ …

Read More »

ಅಲ್ಪಸಂಖ್ಯಾತರಿಗೂ ವಿಧಾನ ಸಭಾ ಟಿಕೆಟ್ ನೀಡಿ, ಕೊಡಲಿಲ್ಲ ಅಂದ್ರೆ ಮುಂದೆ ನೋಡಿ…!

ಹುಬ್ಬಳ್ಳಿ: ಧಾರವಾಡ ವಿಧಾನ ಸಭಾ 7 ಕ್ಷೇತ್ರದಲ್ಲಿ ಒಂದು ಎಸ್ ಸಿ ರಿಸರ್ವ ವೆಷನ್ ಇದ್ದು, ಉಳಿದ ಆರು ಕ್ಷೇತ್ರದಲ್ಲಿ ಯಾವುದಾದರೂ ಒಂದು ಕಡೆ ಮುಸ್ಲಿಂ ಆಕಾಂಕ್ಷಿಗಳಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದರು. ಹುಬ್ಬಳ್ಳಿಯ ಹೋಟೆಲ್ ಒಂದರಲ್ಲಿ ಸಭೆ ನಡೆಸಿದ ಮುಸ್ಲಿಂ ಸಮುದಾಯದವರು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್-73 ರ ವಿಧಾನ ಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಆಕಾಂಕ್ಷಿಯಾಗಿರುವ ಅಲ್ ಹಾಜ್ ಸಿ.ಎಸ್.ಮಹಬೂಬಭಾಷಾ ರವರಿಗೆ ಟಿಕೆಟ್ ನೀಡಬೇಕೆಂದು ಚರ್ಚೆ ನಡೆಸಿದರು. ಆರು ಬಾರಿ …

Read More »

ಕುಂದಗೋಳದಲ್ಲಿ ಮನೆ ಗೋಡೆಗೆ ಕಮಲದ ಬಣ್ಣ ಬರೆದ ಕೇಂದ್ರ‌ಗೃಹ ಸಚಿವ ಅಮೀತ್ ಶಾ..

ಹುಬ್ಬಳ್ಳಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಕುಂದಗೋಳ ಪಟ್ಟಣದಲ್ಲಿ ಅದ್ದೂರಿ ರೋಡ್ ಶೋ ನಡೆಸಿ ಮನೆಯೊಂದರ ಗೋಡೆಯಲ್ಲಿ ಬರೆದ ಕಮಲ ಚಿತ್ರಕ್ಕೆ ಬಣ್ಣ ಬಳೆದಿ ಚಾಲನೆ ನೀಡಿದರು. ಕುಂದಗೋಳ ಪಟ್ಟಣದ ಬಸವರಾಜ ಹಂಚಿನಮನಿ ಅವರ ಮನೆ ಗೋಡೆಯ ಮೇಲೆ ಕಮಲ ಚಿತ್ರಕ್ಕೆ ಬಣ್ಣ ತುಂಬುವ ಮೂಲಕ ಗೋಡೆ ಬರಹಕ್ಕೆ ಚಾಲನೆ ನೀಡಿದರು. ಕಮಲ ಚಿಹ್ನೆಗೆ ಕೇಸರಿ ಬಣ್ಣ ಬರೆದು ಚಾಲನೆ ನೀಡಿದರು. ಬಳಿಜ ಬಸವರಾಜ್ ಹಂಚಿನಮನಿ ಅವರ. …

Read More »

ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ಪ್ರತಿಭಟಿಸಿದ ರೈತಪರ ಹೋರಾಟಗಾರರು

ಹುಬ್ಬಳ್ಳಿ, ಜ.28- ನಗರಕ್ಕೆ ಇಂದು (ಶನಿವಾರ) ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ರೈತಪರ ಹೋರಾಟಗಾರರು ನಗರದ ಕಿತ್ತೂ ಚೆನ್ನಮ್ಮ ಮೈದಾನದಲ್ಲಿ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ರೈತ ಪರ ಹೋರಾಟಗಾರ ಸಿದ್ಧು ತೇಜಿ, ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಈ ಕೂಡಲೇ ಉತ್ತರ ಕರ್ನಾಟಕದ ಜನತೆಯ ಹಲವಾರು ವರ್ಷಗಳ ಬೇಡಿಕೆಯಾದ ಕಳಸಾ- ಬಂಡೂರಿ ಮಹದಾಯಿ ಯೋಜನೆ ಕೇವಲ ಕಾಗದದಲ್ಲಿ …

Read More »

ಧಾರವಾಡದಿಂದ ಕುಂದಗೋಳಕ್ಕೆ ಹೆಲಿಕಾಪ್ಟರ್ ಮೂಲಕ ತೆರಳಿದ ಅಮಿತ್ ಶಾ

ಧಾರವಾಡ: ಕುಂದಗೋಳ ಪಟ್ಟಣದಲ್ಲಿ ನಡೆಯಲಿರುವ ಬೃಹತ್ ರೋಡ್ ಶೋದಲ್ಲಿ ಪಾಲ್ಗೊಳ್ಳಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಧಾರವಾಡದಿಂದ ಹೆಲಿಕಾಪ್ಟರ್ ಮೂಲಕ ತೆರಳಿದರು. ಧಾರವಾಡದಲ್ಲಿ ಫೋರೆನ್ಸಿಕ್ ಕ್ಯಾಂಪಸ್ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ನಂತರ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅಮಿತ್ ಶಾ ಅವರು, ಕೃಷಿ ವಿಶ್ವವಿದ್ಯಾಲಯದಲ್ಲೇ ಭೋಜನ ಸವಿದರು. ಅಲ್ಲಿಂದ ಎತ್ತಿನಗುಡ್ಡದ ಸರ್ಕಾರಿ ಶಾಲಾ ಆವರಣದಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಹೆಲಿಪ್ಯಾಡ್‌ಗೆ ತೆರಳಿದ ಅವರು, ಹೆಲಿಕಾಪ್ಟರ್ ಮೂಲಕ ಕುಂದಗೋಳಕ್ಕೆ ಪ್ರಯಾಣ ಬೆಳೆಸಿದರು. …

Read More »

ಕೆಎಲ್ ಇ ಸೇವೆ ಸ್ಮರಿಸಿದ ಅಮಿತ್ ಶಾ: ಯುವಕರು ಸಾಹಸದ ಮೂಲಕ ಸಾಧನೆಗೆ ಮುಂದಾಗಿ

ಹುಬ್ಬಳ್ಳಿ: ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ನನ್ನ ಪುಣ್ಯ. ಇದೆ ಸಮಯದಲ್ಲಿ ಭಾರತದ ಅಮೃತ ಮಹೋತ್ಸವ ನಡೆಯುತ್ತಿದೆ. ದೇಶದಲ್ಲಿ ನಾವು ಗಟ್ಟಿಯಾಗಿ ಉಳಿದು ತೋರಿಸುವ ಸಮಯ ಇದಾಗಲಿದೆ. ಪ್ರತಿಷ್ಠಾಪಿಸಿದ 5 ಜನ ಗುರುಗಳಿಗೆ ನಾನು ಅಭಿನಂದಿಸಲು ಇಚ್ಚಿಸುತ್ತೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ಅಮೃತ ಮಹೋತ್ಸವಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, 12ನೇ ವರ್ಷದವನಾಗಿದ್ದಾಗಲೇ ನಾನು ರಾಜಕೀಯ ಜೀವನ ಆರಂಭಿಸಿದ್ದೇನೆ. ಶಿಕ್ಷಣದ ವ್ಯಾಪರಿಕರಣ ಆಗುವ ಸಮಯದಲ್ಲಿ …

Read More »

ಮಹೋತ್ಸವಕ್ಕೆ ಚಾಲನೆ: ಜ್ಯೋತಿಯ ಮೂಲಕ ಉದ್ಘಾಟನೆ

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಕೆಎಲ್‌ಇ ಬಿವಿಬಿ ತಾಂತ್ರಿಕ ವಿಶ್ವವಿದ್ಯಾಲಯ ಅಮೃತ ಮಹೋತ್ಸವದ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಅಮಿತ್ ಶಾ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಹೌದು.. ವಿದ್ಯಾನಗರದ ಬಿವಿಬಿ ಆವರಣದಲ್ಲಿ ಆಯೋಜಿಸಲಾಗಿದ್ದ ಅಮೃತ ಮಹೋತ್ಸವ ಹಾಗೂ ಪ್ರಭಾಕರ ಕೋರೆ ಅಭಿನಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇನ್ನೂ ಬ್ರಹ್ಮ ಋಷಿ ಗುರುದೇವ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡದ ಬಳಿಕ ಕೇಂದ್ರ ಸಚಿವ ಅಮಿತ್ …

Read More »