Breaking News

Breaking News

ಛೋಟಾ ಮುಂಬೈನಲ್ಲಿ ಹೆಚ್ಚುತ್ತಿವೆ ಕಳ್ಳತನ: ಖದೀಮರ ಕಾಟಕ್ಕೆ ಬೆಚ್ಚಿದ ಅವಳಿನಗರದ ಜನ…!

*ಕೇಂದ್ರ ಸಚಿವರ ನಿವಾಸದ ಸುತ್ತಮುತ್ತಲು ನಿಲ್ಲದ ಕಳ್ಳರ ಹಾವಳಿ..ಬೆಚ್ಚಿಬಿದ್ದ ವಾಣಿಜ್ಯ ನಗರಿ ಹುಬ್ಬಳ್ಳಿಯ ಜನತೆ…! ಹುಬ್ಬಳ್ಳಿ: ಅದು ಛೋಟಾ ಮುಂಬೈ ಖ್ಯಾತಿಯ ನಗರ. ಸಾಕಷ್ಟು ಪ್ರಖ್ಯಾತಿಯ ಮೂಲಕ ಹೆಸರು ಮಾಡಿರುವ ನಗರ. ಈ ನಗರದಲ್ಲಿ ಈಗ ಜನರು ನಿಟ್ಟುಸಿರು ಬಿಟ್ಟು ಓಡಾಡುವುದೇ ಕಷ್ಟಕರವಾಗಿದೆ. ಯಾವ ಹೊತ್ತಿನಲ್ಲಿ ಏನಾಗುತ್ತದೆಯೋ ಎಂಬ ಆತಂಕದಲ್ಲಿಯೇ ಜೀವನ ನಡೆಸುವಂತಾಗಿದೆ. ಹಾಗಿದ್ದರೇ ಅಲ್ಲಿ ಆಗುತ್ತಿರುವುದಾದರೂ ಏನು..? ಆ ನಗರದ ಜನರು ಭಯಗೊಂಡಿದ್ದಾದರೂ ಯಾಕೆ ಅಂತೀರಾ Big Tv …

Read More »

ನಾಪತ್ತೆಯಾಗಿದ್ದ ಮಹಿಳಾ ಕ್ರಿಕೆಟ್ ಆಟಗಾರ್ತಿ ಒಡಿಶಾ ಅರಣ್ಯದಲ್ಲಿ ಶವವಾಗಿ ಪತ್ತೆ…!

ಕಟಕ್ ಜನವರಿ 14: ಒಡಿಶಾದ 26 ವರ್ಷದ ಮಹಿಳಾ ಕ್ರಿಕೆಟ್ ಆಟಗಾರ್ತಿ ರಾಜಶ್ರೀ ಸ್ವೈನ್ ಅವರು ಶುಕ್ರವಾರ ಕಟಕ್ ಜಿಲ್ಲೆಯ ದಟ್ಟ ಅರಣ್ಯದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆಕೆ ಜನವರಿ 11 ರಿಂದ ನಾಪತ್ತೆಯಾಗಿದ್ದಳು. ಆಕೆಯ ಸ್ಕೂಟರ್ ಕಾಡಿನ ಬಳಿ ಬಿಟ್ಟು ಹೋಗಿರುವುದು ಪತ್ತೆಯಾಗಿದೆ.”ಈ ವಿಷಯದಲ್ಲಿ ಅಸ್ವಾಭಾವಿಕ ಸಾವಿನ ಪ್ರಕರಣವನ್ನು ದಾಖಲಿಸಲಾಗಿದೆ. ಅಥಗಢ ಪ್ರದೇಶದ ಗುರುಡಿಝಾಟಿಯಾ ಅರಣ್ಯದಲ್ಲಿ ಮರಕ್ಕೆ ನೇಣು ಬಿಗಿದ ಆಕೆಯ ಶವವನ್ನು ನಾವು ಕಂಡುಕೊಂಡಿದ್ದೇವೆ. …

Read More »

ಉತ್ತರ ಕರ್ನಾಟಕದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನ ಗೆಲ್ಲುತ್ತದೆ: ತೇಜಸ್ವಿ ಸೂರ್ಯ ವಿಶ್ವಾಸ.

ಹುಬ್ಬಳ್ಳಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯುವ ಜನತೆ ಮಹತ್ವದ ಪಾತ್ರ ವಹಿಸಲಿದ್ದಾರೆ. ಯುವಕರಿಗೆ ಬಿಜೆಪಿ ಪಕ್ಷ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾ ಬಂದಿದೆ. ಹಾಗಾಗಿ ಈ ಬಾರಿಯ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಸ್ಥಾನವನ್ನು ನಾವು ಗೆಲ್ಲುತ್ತೇವೆ ವಿಶ್ವಾಸ ನಮ್ಮಗೆ ಇದೆ ಎಂದು ಸಂಸದ ತೇಜಸ್ವಿ ಸೂರ್ಯ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ – ಧಾರವಾಡದಲ್ಲಿ ಯುವ ಜನೋತ್ಸವ ಕಾರ್ಯಕ್ರಮ …

Read More »

ಪಂಚಮಸಾಲಿ ಸಮುದಾಯಕ್ಕೆ 2A ಬದಲಾಗಿ 2D ಮಿಸಲಾತಿ ನೀಡಿರುವ ಹಿನ್ನಲೆ

ಹಾವೇರಿ: ಪಂಚಮಸಾಲಿ ಸಮುದಾಯಕ್ಕೆ 2A ಬದಲಾಗಿ 2D ಮಿಸಲಾತಿ ನೀಡಿರುವ ಹಿನ್ನಲೆಯಲ್ಲಿ ಇಂದು ಲಿಂಗಯಿತ ಸಮೂದಾಯದ ಮುಖಂಡರು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿಯವರ ಮನೆ ಮುಂದೆ ಪ್ರತಿಭಟನೆ ಮುಂದಾಗಿದ್ದಾರೆ. ಶಿಗ್ಗಾವಿ ಪಟ್ಟಣದ ರಾಣಿ ಚೆನ್ನಮ್ಮ ವೃತ್ತಕ್ಕೆ ಆಗಮಿಸಿದ ಜಯಮೃತ್ಯಂಜಯ ಸ್ವಾಮೀಜಿ ಮಾಧ್ಯಮರೊಂದಿಗೆ ಮಾತನಾಡಿ ಕಳೆದ ಅಧಿವೇಶನದಲ್ಲಿ ನಮಗೆ ಸಿಎಂ ಮಾತು ಕೊಟ್ಟಿದ್ದರು. ತಾಯಿಯ ಮೇಲೆ ಪ್ರಮಾಣ ಮಾಡಿ ಡಿ,29 ಕ್ಕೆ 2A ಮೀಸಲಾತಿ ನೀಡುತ್ತೇವೆಂದು ಹೇಳಿದರು. ಆದರೆ 2C, 2D ಹೊಸ …

Read More »

ಮೋದಿ ಮೇಲಿನ ಅಭಿಮಾನದಿಂದ ಯುವಕ ಹಾರ ಹಾಕಲು ಬಂದಿದ್ದ ಕೇಂದ್ರ ಸಚಿವ ಜೋಶಿ

ಧಾರವಾಡ : ನಿನ್ನೆ ಹುಬ್ಬಳ್ಳಿಯ ವಿಮಾನ ನಿಲ್ದಾಣದಿಂದ ಪ್ರಧಾನಿ ಮೋದಿ ರೋಡ್ ಶೋ ವೇಳೆ ಯುವಕ ಹಾರ ಹಾಕಲು ಯತ್ನಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಧಾರವಾಡದಲ್ಲಿ ಪ್ರತಿಕ್ರಿಯಿಸಿದ್ದಾರೆ. ಪ್ರಧಾನಿಗಳಿಗೆ ದೊಡ್ಡ ಪ್ರಮಾಣದ ಭದ್ರತೆ ಇರುತ್ತದೆ. ನಮ್ಮ ಮಾಹಿತಿ ಪ್ರಕಾರ ಆ ಯುವಕ ಅಭಿಮಾನದಿಂದ, ಪ್ರೀತಿಯಿಂದ ಮಾಲೆ ಹಾಕಲು ಬಂದಿದ್ದ. ಅದರಿಂದ ಏನೂ ದೊಡ್ಡ ಸಮಸ್ಯೆ ಆಗುವುದಿಲ್ಲ ಎಂದಿದ್ದಾರೆ.

Read More »

ಬಣಜಿಗ ಬಂಧುಗಳು ಸಂಕ್ರಾಂತಿ ಸಂಭ್ರಮ ನಾಳೆ

ಹುಬ್ಬಳ್ಳಿ: ಬಣಜಿಗ ಬಂಧುಗಳು ಸಂಕ್ರಾಂತಿ ಸಂಭ್ರಮ ಸಮಿತಿ, ಹುಬ್ಬಳ್ಳಿ ತಾಲೂಕು ವತಿಯಿಂದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮವನ್ನು ನಗರದ ಗೋಕುಲ್ ರಸ್ತೆಯ ಚವ್ಹಾನ್ ಗಾರ್ಡನ್ ನಲ್ಲಿ ಜನೆವರಿ ೧೫ ರಂದು ಸಾಯಂಕಾಲ ೬ ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸೋಮಶೇಖರ ಉಮರಾಣಿ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನೂ ಈ ಕಾರ್ಯಕ್ರಮಕ್ಕೆ ಚಲನಚಿತ್ರ ಹಾಸ್ಯ ನಟ ದೊಡ್ಡಣ್ಣ ಎಸ್, ಸಂಗೀತ ಸಂಯೋಜನಾಕಾರಿ ಭೋಜಶೆಟ್ಟಿ ಉಪಸ್ಥಿತರಿರಲಿದ್ದಾರೆ‌. ಅಂದಿನ ಕಾರ್ಯಕ್ರಮದಲ್ಲಿ ಬೆ. ೧೦ ರಿಂದ …

Read More »

ಯುವಜನೋತ್ಸವಕ್ಕೆ ಬಂದಿದ್ದ ಯುವಕನಿಗೆ ಕಾಣಿಸಿಕೊಂಡ ಹೃದಯದ ಸಮಸ್ಯೆ

ಧಾರವಾಡ: ಧಾರವಾಡದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಯುವಜನೋತ್ಸವಕ್ಕೆಂದು ಬಂದಿದ್ದ ಜಮ್ಮು, ಕಾಶ್ಮೀರದ ಯುವಕನಿಗೆ ಹೃದಯದ ಸಮಸ್ಯೆ ಕಾಣಿಸಿಕೊಂಡಿದೆ. ಸದಿನ್ ಎನ್ನುವ ಯುವಕನಿಗೆ ತೀವ್ರ ಉಸಿರಾಟದ ಸಮಸ್ಯೆ ಹಾಗೂ ಹೃದಯದ ಸಮಸ್ಯೆ ಕಾಣಿಸಿಕೊಂಡಿತ್ತು. ಈತ ಯುವಜನೋತ್ಸವದಲ್ಲಿ ಪಾಲ್ಗೊಳ್ಳಲೆಂದು ಬಂದು ಕೃಷಿ ವಿಶ್ವವಿದ್ಯಾಲಯದಲ್ಲಿ ಉಳಿದುಕೊಂಡಿದ್ದ. ಈತನಿಗೆ ಹೃದಯದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೂಡಲೇ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Read More »

ಮೋದಿಗೆ ಹಾರ ಹಾಕಲು ಬಂದ ಯುವಕ-ರೋಡ್ ಷೋ ವೇಳೆ ಭದ್ರತಾ ಲೋಪ…

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಗೆ ಆಗಮಿಸಿದ ಮೋದಿ ಅವರಿಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ಸೇರಿದಂತೆ ಇತರ ಭದ್ರತಾ ಪಡೆಗಳ ಮೂಲಕ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಆದರೆ ಈ ನಡುವೆ ಭದ್ರತಾ ಲೋಪವೊಂದು ಕಂಡು ಬಂದಿದೆ. ಪ್ರಧಾನಿಯ ರೋಡ್ ಷೋ ವೇಳೆ ಯುವಕನೊಬ್ಬ ಬ್ಯಾರಿಕೇಡ್ ದಾಟಿ ಮೋದಿಯವರಿಗೆ ಹಾರ ಹಾಕಲು ಬಂದಿದ್ದಾನೆ. ಇನ್ನೂ ಖುದ್ದು ಮೋದಿ ಕೈಗೆ ಹೂವಿನ ಹಾರ ಕೊಡಲು ಯತ್ನಿಸಿದ್ದು, ಬಳಿಕ ಯುವಕನನ್ನು ಎಳೆದೊಯ್ದಿದ್ದಾರೆ. ಪೊಲೀಸರ ಕರ್ತವ್ಯ ಲೋಪ …

Read More »

ಮೋದಿ ಆಗಮನ ಹಿನ್ನೆಲೆ, ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ಕಾವು.

ಹುಬ್ಬಳ್ಳಿ: ವಾಣಿಜ್ಯ ನಗರೀ ಹುಬ್ಬಳ್ಳಿಯಲ್ಲಿ ಯುವಜನೋತ್ಷವ ಕಾರ್ಯಕ್ರಮ ಆಯೋಜಿಸಲಾಗಿದೆ. ಇವೊಂದು ಕಾರ್ಯಕ್ರಮ ಉದ್ಘಾಟನಾ ಸಮಾರಂಭಕ್ಕೆ ಮೋದಿ ಆಗಮಿಸುತ್ತಿದ್ದಾರೆ. ಆದ್ರೇ ನಗರದ ಕೆಲವರು ಮೋದಿ ಗೋಬ್ಯಾಕ್ ಎಂದು ಘೋಷಣೆ ಕೂಗುತ್ತಿದ್ದಾರೆ. ಇನ್ನೂ ನಗರದ ಮಿನಿ ಸೌಧದ ಎದುರು ಖಾಲಿ ಬಿಂದಿಗೆ, ಹಾಗೂ ಅಣುಕು ಪ್ರದರ್ಶನದ ಫೋಸ್ಟರ್ ಹಿಡಿದು ಕಾಂಗ್ರೆಸ್ ಕಾರ್ಯ ಕರ್ತರು, ಮಹಿಳೆಯರು ಹಾಗೂ ಯುವಕರು ಪ್ರತಿಭಟನೆ ಮಾಡಿದರು. ಉದ್ಯೋಗ ಸೃಷ್ಟಿ ಎಂದು ಸುಳ್ಳು ಭರವಸೆ, ಬೆಲೆ ಎರಿಕೆ, ನೀರಿನ ಸಮಸ್ಯೆ, …

Read More »

ಲಾರಿ ಹಾಗೂ ರಿಕ್ಷಾ ಮಧ್ಯೆ ಭೀಕರ ರಸ್ತೆ ಅಪಘಾತ,

ಧಾರವಾಡ ಜಿಲ್ಲೆಯನವಲಗುಂದ ತಾಲೂಕಿನ ಯಮನೂರ ಗ್ರಾಮದ ಬೆಣ್ಣೆ ಹಳ್ಳದ ಸೇತುವೆಯ ವಿಜಯಪುರ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಲಾರಿ ಹಾಗೂ ರಿಕ್ಷಾ ನಡುವೆ ಭೀಕರ ಅಪಘಾತ ಸಂಭವಿಸಿದೆ.ನರಗುಂದ ಕಡೆ ತೆರಳುತ್ತಿದ್ದ ಲಾರಿ ಹಾಗೂ ಹುಬ್ಬಳ್ಳಿ ಕಡೆಗೆ ಹೊರಟಿದ್ದ ರಿಕ್ಷಾ ನಡುವೆ ಅಪಘಾತ ಸಂಭವಿಸಿದ್ದು, ರಿಕ್ಷಾ ದಲ್ಲಿರುವ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.ಸ್ಥಳಕ್ಕೆ ನವಲಗುಂದ ಪೊಲೀಸರು ಭೇಟಿ ನೀಡಿದ್ದು, ಗಾಯಾಳುಗಳನ್ನು ನವಲಗುಂದ ತಾಲೂಕ ಆಸ್ಪತ್ರೆಗೆ …

Read More »