Breaking News

ಛೋಟಾ ಮುಂಬೈನಲ್ಲಿ ಹೆಚ್ಚುತ್ತಿವೆ ಕಳ್ಳತನ: ಖದೀಮರ ಕಾಟಕ್ಕೆ ಬೆಚ್ಚಿದ ಅವಳಿನಗರದ ಜನ…!

*ಕೇಂದ್ರ ಸಚಿವರ ನಿವಾಸದ ಸುತ್ತಮುತ್ತಲು ನಿಲ್ಲದ ಕಳ್ಳರ ಹಾವಳಿ..ಬೆಚ್ಚಿಬಿದ್ದ ವಾಣಿಜ್ಯ ನಗರಿ ಹುಬ್ಬಳ್ಳಿಯ ಜನತೆ…!

ಹುಬ್ಬಳ್ಳಿ: ಅದು ಛೋಟಾ ಮುಂಬೈ ಖ್ಯಾತಿಯ ನಗರ. ಸಾಕಷ್ಟು ಪ್ರಖ್ಯಾತಿಯ ಮೂಲಕ ಹೆಸರು ಮಾಡಿರುವ ನಗರ. ಈ ನಗರದಲ್ಲಿ ಈಗ ಜನರು ನಿಟ್ಟುಸಿರು ಬಿಟ್ಟು ಓಡಾಡುವುದೇ ಕಷ್ಟಕರವಾಗಿದೆ. ಯಾವ ಹೊತ್ತಿನಲ್ಲಿ ಏನಾಗುತ್ತದೆಯೋ ಎಂಬ ಆತಂಕದಲ್ಲಿಯೇ ಜೀವನ ನಡೆಸುವಂತಾಗಿದೆ. ಹಾಗಿದ್ದರೇ ಅಲ್ಲಿ ಆಗುತ್ತಿರುವುದಾದರೂ ಏನು..? ಆ ನಗರದ ಜನರು ಭಯಗೊಂಡಿದ್ದಾದರೂ ಯಾಕೆ ಅಂತೀರಾ Big Tv News ಬಿಚ್ಚಿಡುತ್ತಿದೆ ಸ್ಪೋಟಕ ಮಾಹಿತಿ..

ಹೀಗೆ ಮುರಿದು ಬಿದ್ದಿರುವ ಮನೆಯ ಕೀಲಿ. ಸುಟ್ಟು ಕರಕಲಾದ ಸ್ಥಿತಿಯಲ್ಲಿರುವ ಮನೆಯ ಬಾಗಿಲು. ಬಿಟ್ಟ ಕಣ್ಣು ಬಿಟ್ಟಂತೆ ನೋಡಿ ಆತಂಕಗೊಂಡಿರುವ ಕುಟುಂಬಸ್ಥರು. ಇದೆಲ್ಲದಕ್ಕೂ ಸಾಕ್ಷಿಯಾಗಿದ್ದು, ವಾಣಿಜ್ಯನಗರಿ ಹುಬ್ಬಳ್ಳಿಯ ಮಯೂರ ಎಸ್ಟೇಟ್. ಹೌದು.. ಸುಮಾರು ಇಪ್ಪತ್ತು ಇಪ್ಪತ್ತೈದು ವರ್ಷಗಳಿಂದ ಯಾವುದೇ ಒಂದು ಕಳ್ಳತನ ನಡೆಯದೇ ಇರುವ ಕಾಲೋನಿಯಲ್ಲಿ ಈಗ ಸರಣಿ ಕಳ್ಳತನ ನಡೆಯುತ್ತಿವೆ. ರಾತ್ರಿ ಮಲಗಿದವರು ಬೆಳಿಗ್ಗೆ ಎದ್ದ ತಕ್ಷಣ ಮನೆಯ ಬಾಗಿಲು ಹಾಗೂ ಮನೆಯ ಆಭರಣಗಳನ್ನು ಚೆಕ್ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮಂಕಿ ಕ್ಯಾಪ್ ಧರಿಸಿಕೊಂಡು ಬರುವ ಕಳ್ಳರು ಮನೆಯಲ್ಲಿರುವ ಹಣ ಹಾಗೂ ಚಿನ್ನಾಭರಣ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಮೊನ್ನೆಯಷ್ಟೇ ಪರಶುರಾಮ ನಂಜಲೇಕರ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಿದ ಖದೀಮ ಮೂರು ಲಕ್ಷದ ಬೆಳ್ಳಿಯ ಸಾಮಗ್ರಿ, ಐವತ್ತು ಸಾವಿರ ನಗದು, ಹತ್ತು ಗ್ರಾಂ ಚಿನ್ನದ ಜೊತೆಗೆ ಪರಾರಿಯಾಗಿದ್ದಾನೆ. ಕಳ್ಳನ ಚಲನವಲನಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದರೂ ಕಳ್ಳನ ಬಂಧನ ಮಾತ್ರ ಸಾಧ್ಯವಾಗುತ್ತಿಲ್ಲ.

ಇನ್ನೂ ಕಳೆದ ಒಂದು ವಾರದಿಂದ ನಾಲ್ಕೈದು ಕಡೆಯಲ್ಲಿ ಕಳ್ಳತನ ನಡೆದಿವೆ. ಮನೆಯಲ್ಲಿ ಯಾರು ಇಲ್ಲದೇ ಇರುವುದನ್ನು ಟಾರ್ಗೆಟ್ ಮಾಡುವ ಚಾಲಾಕಿ ಕಳ್ಳರು ಮನೆಯ ಬಾಗಿಲು ಮುರಿದು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಬಹುತೇಕ ಕಳ್ಳತನ ಪ್ರಕರಣದ ಸಿಸಿ ಟಿವಿ ದೃಶ್ಯಗಳು ಲಭ್ಯವಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ ಪೊಲೀಸ್ ಬೀಟ್ ವ್ಯವಸ್ಥೆ ಇದ್ದರೂ ಕೂಡ ಜನರು ನಿಶ್ಚಿಂತೆಯಿಂದ ನಿದ್ದೆ ಮಾಡಲು ಆಗುತ್ತಿಲ್ಲ. ಅಲ್ಲದೇ ಈಗಾಗಲೇ ನಡೆದಿರುವ ಕಳ್ಳತನ ಪ್ರಕರಣದಲ್ಲಿ ಮಂಕಿ ಕ್ಯಾಪ್ ಧರಿಸಿದ ವ್ಯಕ್ತಿಯೇ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದರೂ ಖದೀಮನನ್ನು ಹಿಡಿಯಲು ಮಾತ್ರ ಸಾಧ್ಯವಾಗುತ್ತಿಲ್ಲ.

ಒಟ್ಟಿನಲ್ಲಿ ಅವಳಿನಗರದ ಜನರಿಗೆ ಖದೀಮರು ಮೇಲಿಂದ ಮೇಲೆ ಶಾಕ್ ನೀಡುತ್ತಲೇ ಇದ್ದಾರೆ. ಹೀಗಿದ್ದರೂ ಪೊಲೀಸ್ ಕಮೀಷನರೇಟ್ ನಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಲು ಸಾಧ್ಯವಾಗುತ್ತಿಲ್ಲ. ಇನ್ನಾದರೂ ಪೊಲೀಸ್ ಇಲಾಖೆ ಎಚ್ಚೇತ್ತುಕೊಂಡು ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲಿದೆಯಾ ಕಾದು ನೋಡಬೇಕಿದೆ.

Share News

About Shaikh BigTv

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *