Breaking News

Breaking News

ಮೈಸೂರಿನಲ್ಲಿ ಟಿಪ್ಪು ಸುಲ್ತಾನರ 100 ಅಡಿ ಎತ್ತರದ ಪ್ರತಿಮೆ ನಿರ್ಮಾಣ

ಮೈಸೂರು : ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಮುಸ್ಲಿಂ ಸಮುದಾಯದ ಅಸ್ಮಿತೆ ಉಳಿಸಿಕೊಳ್ಳಲು ಮೈಸೂರಿನಲ್ಲಿ ಟಿಪ್ಪು ಸುಲ್ತಾನರ 100 ಅಡಿ ಎತ್ತರದ ಪ್ರತಿಮೆ ನಿರ್ಮಿಸಲಾಗುವುದು ಎಂದು ಶಾಸಕ ತನ್ವೀರ್‌ ಸೇಠ್‌ ಘೋಷಿಸಿದರು. ರಾಜೀವ್‌ನಗರ ಅಲ್‌ ಬದರ್‌ ಮೈದಾನದಲ್ಲಿ ಟಿಪ್ಪು ಕನ್ನಡ ರಾಜ್ಯೋತ್ಸವ ವೇದಿಕೆಯು ಗುರುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಟಿಪ್ಪು ಉತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಸ್ಲಾಂ ಧರ್ಮದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಅವಕಾಶವಿಲ್ಲ. ಇದ್ದಿದ್ದರೇ ಮನೆಗೊಂದರಂತೆ ಟಿಪ್ಪು ಪ್ರತಿಮೆ …

Read More »

ಕೆಂಪೇಗೌಡ ಅವರ 108 ಅಡಿ ಪ್ರತಿಮೆ ಸ್ಥಾಪಿಸಲು ಸರ್ಕಾರದ ಹಣ ಬಳಸಿದ್ದು ಏಕೆ? : ಡಿಕೆಶಿ

ಬೆಂಗಳೂರು :  ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡ ಅವರ 108 ಅಡಿ ಪ್ರತಿಮೆ ಸ್ಥಾಪಿಸಲು ಸರ್ಕಾರದ ಹಣ ಬಳಸಿದ್ದು ಏಕೆ? ಎಂದು ಪ್ರಶ್ನಿನಿಸಿದ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು, ಇದು ದೊಡ್ಡ ಅಪರಾಧ ಎಂದು ಗುರುವಾರ ಹೇಳಿದ್ದಾರೆ. ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ನಾಡಪ್ರಭು ಕೆಂಪೇಗೌಡ ಅವರ 108 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿರುವ ಬೆಂಗಳೂರು …

Read More »

ಮುರಘಾ ಕೇಸ್ ಚಾರ್ಜ್​ಶೀಟ್​ನಲ್ಲಿವೆ ಸ್ಫೋಟಕ ಮಾಹಿತಿ

ಚಿತ್ರದುರ್ಗ : ಮುರಘಾ ಕೇಸ್ ಚಾರ್ಜ್​ಶೀಟ್​ನಲ್ಲಿವೆ ಸ್ಫೋಟಕ ಮಾಹಿತಿಯಿದಾಗಿದ್ದು, ಬಾಲಕಿಯರ ಆರೋಪಕ್ಕೆ ಶಿವಮೂರ್ತಿ ಶರಣರ ಉತ್ತರವೇನು ಗೊತ್ತಾ.. ಮುರುಘಾಶ್ರೀಗಳು ನಮ್ಮ ಮಠದ ಒಳಗೆ ಬಾಲಕಿಯರ ಹಾಸ್ಟೆಲ್​​ ಇದೆ. ನಾವು ನಿರಂತರವಾಗಿ ಯಾವುದೇ ಹಾಸ್ಟೆಲ್‌ಗಳಿಗೆ ಭೇಟಿ ನೀಡಲ್ಲ, ವಾರದ ಪ್ರಾರ್ಥನೆ, ಉಪನ್ಯಾಸ ಇದ್ದಾಗ ಸಭಾ ಮಂಟಪಕ್ಕೆ ಕರೆ ತರ್ತಾರೆ, ಆ ಸಮಯದಲ್ಲಿ ಅಪೌಷ್ಟಿಕತೆ ನಿವಾರಣೆಗಾಗಿ ಹಣ್ಣು,ಮತ್ತು ಡ್ರೈಫುಡ್ಸ್​ ಕೊಡ್ತೇವೆ.ನಮ್ಮ ಕೊಠಡಿಯಿಂದ ಹಾಸ್ಟೆಲ್​​ 300 ಅಡಿಗಳಷ್ಟು ದೂರದಲ್ಲಿದೆ. ಹಾಸ್ಟೆಲ್​ನಿಂದ ನಮ್ಮ ಕೊಠಡಿಗೆ ಮುಖ್ಯದ್ವಾರದಿಂದ …

Read More »

ಟಿಪ್ಪು ದೇಶದ್ರೋಹಿ ಜಯಂತಿ ಆಚರಣೆ ಮಾಡಲು ಬಿಡಲ್ಲ; ಮುತಾಲಿಕ್

ಹುಬ್ಬಳ್ಳಿ : ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ನಮ್ಮ ವಿರೋಧವಿದೆ. ಹೀಗಾಗಿ ನಮಗೆ ಪ್ರತಿಭಟನೆ ಮಾಡಲು ಬಿಡುತ್ತಿಲ್ಲ. ಟಿಪ್ಪು ಹಿಂದು ಮತ್ತು ಕನ್ನಡ ವಿರೋಧಿ. ಹಾಗಾಗಿ ಎಲ್ಲಿಯೂ ಆಚರಣೆ ಮಾಡಲು ಬಿಡುವುದಿಲ್ಲ. ಯಾವುದೇ ಸಂದರ್ಭದಲ್ಲಿ ಆಚರಣೆ ತಡೆಯುತ್ತೇವೆ. ಎಲ್ಲ ಮಹಾಪುರುಷರಿಗೆ ಟಿಪ್ಪು ಸುಲ್ತಾನ್ ಹೋಲಿಕೆ ಮಾಡಬಾರದು. ಆತ ದೇಶದ್ರೋಹಿ, ಯಾರ ಜಯಂತಿ ಬೇಕಾದರೂ ಮಾಡಿ ಆದರೆ ಟಿಪ್ಪು ಜಯಂತಿ ಮಾಡಬೇಡಿ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು. …

Read More »

ಜಿ 20 ಲಾಂಛನ ಬಿಡುಗಡೆ : ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ನವದೆಹಲಿ: (ನವೆಂಬರ್ 9) ಜಿ 20 ಲಾಂಛನದಲ್ಲಿ ಕಮಲದ ಹೂವಿನ ಬಳಕೆಯ ಬಗ್ಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು, ಬಿಜೆಪಿಯ ಚುನಾವಣಾ ಚಿಹ್ನೆಯನ್ನು ಬಳಸಿರುವುದು ಆಘಾತಕಾರಿಯಾದರೂ, ಪ್ರಧಾನಿ ಮತ್ತು ಅವರ ಪಕ್ಷವು ತಮ್ಮನ್ನು ತಾವು ಪ್ರಚಾರ ಮಾಡಿಕೊಳ್ಳುವ ಯಾವುದೇ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ ಎಂದು ಈಗ ಅದು ತಿಳಿದಿದೆ ಎಂದು ಹೇಳಿದೆ. ಅಂದ ಹಾಗೇ ಪ್ರಧಾನಿ ಮೋದಿ ಅವರು ಜಿ 20 ಗುಂಪಿನ ಭಾರತದ ಮುಂಬರುವ …

Read More »

ಅರಣ್ಯ ವೀಕ್ಷಣೆ ವೇಳೆ ಸಿಬ್ಬಂದಿ ಸಾವು

ಕೊಡಗು: ಅರಣ್ಯ ವೀಕ್ಷಣೆ ವೇಳೆ ಅವಘಡವೊಂದು ಸಂಭವಿಸಿದೆ. ಭಾಗಮಂಡಲ ಅರಣ್ಯ ವ್ಯಾಪ್ತಿಯ ತೊಡಿಕಾನದ ಸಿಪಿಟಿ 76ರಲ್ಲಿ ಅರಣ್ಯ ಸಿಬ್ಬಂದಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಚಿನ್ನಪ್ಪ ಎಂ.ಹೆಚ್ ಎನ್ನುವ ಅರಣ್ಯ ಇಲಾಖೆ‌ ಸಿಬ್ಬಂದಿ ಮೃತಪಟ್ಟಿದ್ದಾರೆ. ಅರಣ್ಯದೊಳಗಿನ ಜಲಪಾತ ಬಳಿ ನೀರು ಕುಡಿಯಲು ಹೋಗಿದ್ದ ವೇಳೆ ಕಾಲು ಜಾರಿ ಜರಿಯ ಕೆಳಗೆ ಬಿದ್ದು ಮೃತಪಟ್ಟದ್ದಾರೆ ಎನ್ನಲಾಗಿದೆ. ಈ ಘಟನೆ ನಿನ್ನೆ ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. …

Read More »

ಮೀನುಗಳಿಗೆ ಆಹಾರ ಹಾಕಲು‌ ಹೋಗಿ ಪ್ರಾಣ ಕಳೆದುಕೊಂಡ ವಿದ್ಯಾರ್ಥಿನಿ

ಮಸ್ಕಿ : ಮನೆಯ ತೋಟದ ಬಾವಿಯಲ್ಲಿನ ಮೀನುಗಳಿಗೆ ಆಹಾರ ಹಾಕಲು ಹೋದ ವಿದ್ಯಾರ್ಥಿನಿಯೊಬ್ಬಳು ಬಾವಿಗೆ ಬಿದ್ದು ಮೃತಪಟ್ಟ ಘಟನೆ ತಾಲ್ಲೂಕು ಕುಣಿಕೆಲ್ಲೂರು ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ. ಮೃತ ವಿದ್ಯಾರ್ಥಿನಿ ಮೇಗಾ ಅರಳಹಳ್ಳಿ (18) ಎಂದು ಗುರುತಿಸಲಾಗಿದೆ. ಬಾವಿಯಲ್ಲಿ ಬಿದ್ದ ವಿದ್ಯಾರ್ಥಿನಿಯ ಶವ ಹೊರ ತೆಗೆಯಲು ಲಿಂಗಸುಗೂರಿನ ಆಗ್ನಿ ಶಾಮಕ ಸಿಬ್ಬಂದಿ ಹಾಗೂ ಮಸ್ಕಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಇದುವರೆಗೂ ಶವ ದೊರಕಿಲ್ಲ. ರಾತ್ರಿ ಮನೆಯಲ್ಲಿ ಊಟದವಾದ ನಂತರ ಉಳಿದ …

Read More »

ನ. 11ರಂದು ರಾಜಧಾನಿಗೆ ಪ್ರಧಾನಿ ಆಗಮನ

ಬೆಂಗಳೂರು : ಇದೇ ನವೆಂಬರ್ 11ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಕೆಂಪೇಗೌಡರ ಪ್ರತಿಮೆ, ವಂದೇ ಭಾರತ್ ರೈಲು ಮತ್ತು ಏರ್​ಪೋರ್ಟ್​​ 2ನೇ ಟರ್ಮಿನಲ್ ಉದ್ಘಾಟನೆ ಮಾಡಲಿದ್ದಾರೆ. ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿಗಳಿಗೆ ಕಾಂಗ್ರೆಸ್  ಸಾಲು ಸಾಲು ಪ್ರಶ್ನೆಗಳನ್ನು ಕೇಳಿದೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ

Read More »

ಅಧಿಕಾರಿಗಳ ಕಿರುಕುಳ ಆರೋಪ : ದಯಾಮರಣಕ್ಕೆ ಅವಕಾಶ ನೀಡುವಂತೆ ಮನವಿ ಸಲ್ಲಿಕೆ

ಸಾಗರ : ಜಮೀನಿನ ವಿಚಾರದಲ್ಲಿ ಕೆಲ ಸರಕಾರಿ ಅಧಿಕಾರಿಗಳು ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ತಾಲೂಕಿನ ಕುಗ್ವೆ ಗ್ರಾಮದ ಶ್ರೀಕಾಂತ್ ನಾಯಕ್ ದಂಪತಿ ದಯಾಮರಣಕ್ಕೆ ಅವಕಾಶ ನೀಡುವಂತೆ ಕೋರಿ ಉಪವಿಭಾಗಾಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದಾರೆ. ನಗರದ ಹೊರವಲಯದಲ್ಲಿರುವ ಕುಗ್ವೆ ಗ್ರಾಮದ ಶ್ರೀಕಾಂತ್ ನಾಯಕ್ ಹಾಗೂ ಸುಜಾತಾ ನಾಯಕ್ ದಂಪತಿ ಬುಧವಾರ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ದಯಾಮರಣಕ್ಕೆ ಅನುಮತಿ ಕೊಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ನಮ್ಮ …

Read More »

ಹಿಂದೂ ಪದದ ಬಗ್ಗೆ ವಿವಾದಾತ್ಮಕ ಹೇಳಿಕೆ : ಕೆಪಿಸಿಸಿ ಕಾರ್ಯಾಧ್ಯಕ್ಷ ವಿರುದ್ಧ ದೂರು ದಾಖಲು

ಬೆಂಗಳೂರು : ಹಿಂದೂ ಪದದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ವಿರುದ್ಧ ವಕೀಲರೊಬ್ಬರು ವಿಚಾರಣಾ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದಾರೆ. ನಗರದ ವಕೀಲ ಕೆ. ದಿಲೀಪ್‌ ಕುಮಾರ್‌ ಅವರು ಬುಧವಾರ ನಗರದ 8ನೇ ಎಸಿಎಂಎಂ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದು, ಗಲಭೆ ಮತ್ತು ಮಾನಹಾನಿ ಪರಿಚ್ಛೇದ ಅಡಿ ಅಪರಾಧ ಕೃತ್ಯ ಎಸಗಿದ ಸಂಬಂಧ ಸತೀಶ್‌ ಜಾರಕಿಹೊಳಿ ವಿರುದ್ಧ ಕಾಗ್ನಿಜೆನ್ಸ್‌ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.ನ್ಯಾಯಾಲಯವು …

Read More »