Breaking News

ಮುರಘಾ ಕೇಸ್ ಚಾರ್ಜ್​ಶೀಟ್​ನಲ್ಲಿವೆ ಸ್ಫೋಟಕ ಮಾಹಿತಿ


ಚಿತ್ರದುರ್ಗ : ಮುರಘಾ ಕೇಸ್ ಚಾರ್ಜ್​ಶೀಟ್​ನಲ್ಲಿವೆ ಸ್ಫೋಟಕ ಮಾಹಿತಿಯಿದಾಗಿದ್ದು, ಬಾಲಕಿಯರ ಆರೋಪಕ್ಕೆ ಶಿವಮೂರ್ತಿ ಶರಣರ ಉತ್ತರವೇನು ಗೊತ್ತಾ..

ಮುರುಘಾಶ್ರೀಗಳು ನಮ್ಮ ಮಠದ ಒಳಗೆ ಬಾಲಕಿಯರ ಹಾಸ್ಟೆಲ್​​ ಇದೆ. ನಾವು ನಿರಂತರವಾಗಿ ಯಾವುದೇ ಹಾಸ್ಟೆಲ್‌ಗಳಿಗೆ ಭೇಟಿ ನೀಡಲ್ಲ, ವಾರದ ಪ್ರಾರ್ಥನೆ, ಉಪನ್ಯಾಸ ಇದ್ದಾಗ ಸಭಾ ಮಂಟಪಕ್ಕೆ ಕರೆ ತರ್ತಾರೆ, ಆ ಸಮಯದಲ್ಲಿ ಅಪೌಷ್ಟಿಕತೆ ನಿವಾರಣೆಗಾಗಿ ಹಣ್ಣು,ಮತ್ತು ಡ್ರೈಫುಡ್ಸ್​ ಕೊಡ್ತೇವೆ.ನಮ್ಮ ಕೊಠಡಿಯಿಂದ ಹಾಸ್ಟೆಲ್​​ 300 ಅಡಿಗಳಷ್ಟು ದೂರದಲ್ಲಿದೆ. ಹಾಸ್ಟೆಲ್​ನಿಂದ ನಮ್ಮ ಕೊಠಡಿಗೆ ಮುಖ್ಯದ್ವಾರದಿಂದ ಮಾತ್ರ ಪ್ರವೇಶವಿದೆ.

ನನ್ನ ಖಾಸಗಿ ಕೊಠಡಿಯಿಂದ ಹಾಸ್ಟೆಲ್‌ಗೆ ಹೋಗಲು ಯಾವುದೇ ಪ್ರವೇಶದ್ವಾರ ಇಲ್ಲ, ನಮ್ಮ ಖಾಸಗಿ ಕೊಠಡಿಗೆ ಯಾವುದೇ ಸಿಸಿ ಕ್ಯಾಮಾರಗಳನ್ನು ಅಳವಡಿಸಿರುವುದಿಲ್ಲ. ವಿದ್ಯಾರ್ಥಿನಿಯರು ನಮಗೆ ಪ್ರೀತಿಯಿಂದ ಅಪ್ಪಾಜಿ ಎಂದು ಕರೆಯುತ್ತಾರೆ.

ಖಾಸಗಿ ಕೊಠಡಿಗೆ ಯಾರಿಗೂ ಪ್ರವೇಶ ಇರಲ್ಲ, ಸ್ವಚ್ಛತೆಗೂ ಮಕ್ಕಳನ್ನು ಕರೆಸಲ್ಲ, ವಾರ್ಡನ್ ರಶ್ಮಿ ಕಳೆದ 4-5 ವರ್ಷಗಳ ಹಿಂದೆ ನೇಮಕ ಆಗಿದ್ದಾರೆ. ರಶ್ಮಿರವರು ವಿದ್ಯಾರ್ಥಿನಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಕಳುಹಿಸ್ತಿರಲಿಲ್ಲ.ಗುಂಪಿನಲ್ಲಿ ಬಂದು ವಿದ್ಯಾರ್ಥಿನಿಯರು ನಮ್ಮ ಭೇಟಿ ಮಾಡುತ್ತಿದ್ದರು.ಆಗ ಸೇಬು, ಮಾವು, ಕಿತ್ತಳೆ, ದ್ರಾಕ್ಷಿ, ಡ್ರೈಫೂಟ್, ಚಾಕೊಲೇಟ್​ ಪ್ರಸಾದ ನೀಡುತ್ತಿದ್ದೆವು, ಆರೋಪ ಮಾಡ್ತಿರುವ ಬಾಲಕಿಯರು ನಮಗೆ ವೈಯಕ್ತಿಕವಾಗಿ ಪರಿಚಯವಿಲ್ಲ.

ಮಕ್ಕಳಿಗೆ ಕೊಡುವ ಪ್ರಸಾದದಲ್ಲಿ ಮತ್ತು ಬರುವ ಔಷಧಿ ಬೆರೆಸುತ್ತಿರಲಿಲ್ಲ, ನಮ್ಮ ಹಾಸ್ಟೆಲ್‌ನ ವಿದ್ಯಾರ್ಥಿನಿಯರನ್ನು ಲೈಂಗಿಕವಾಗಿ ಬಳಸಿಕೊಂಡಿಲ್ಲ. ನಮ್ಮ ಖಾಸಗಿ ಕೊಠಡಿಯಲ್ಲಿ ಯಾವುದೇ ವಾಕಿಂಗ್ ಸ್ಟಿಕ್‌ ಬಳಸುವುದಿಲ್ಲ. ನಾವು ಸ್ನಾನ ಗೃಹದಲ್ಲಿ ಯಾರ ಸಹಾಯವನ್ನೂ ಪಡೆಯುವುದಿಲ್ಲ, ಜೂನ್ 27 ರಿಂದ ಜುಲೈ18 ರವರೆಗೆ ಅಮೇರಿಕಕ್ಕೆ ಭೇಟಿ ನೀಡಿರುತ್ತೇವೆ.. ಜುಲೈ 23.ರಿಂದ 28 ರವರೆಗೆ ಮಾರಿಷಸ್ ದೇಶಕ್ಕೆ ಭೇಟಿ ನೀಡಿದ್ದೆ, ಈ ವೇಳೆ ಹಾಸ್ಟೆಲ್​​ನ ಇಬ್ಬರು ಮಕ್ಕಳು ಕಾಣೆಯಾಗಿದ್ದ ಮಾಹಿತಿ ಬಂತು. ಮಕ್ಕಳು ಕಾಟನ್‌ ಪೇಟೆ ಪೊಲೀಸ್ ಠಾಣೆಯಲ್ಲಿ ಮರುದಿನ ಪತ್ತೆಯಾಗಿದ್ದರು. ಕಾಟನ್‌ ಪೇಟೆಗೆ ಹೋಗಿ ನಮ್ಮ ಸುಪರ್ದಿಗೆ ಮಕ್ಕಳನ್ನು ಪಡೆದಿದ್ದೇವೆ. ನಂತರ ಬಾಲಕಿಯರನ್ನು ಪೊಷಕರ ಜೊತೆ ಕಳುಹಿಸಿದ್ದಾಗಿ ಸಿಬ್ಬಂದಿ ಹೇಳಿದ್ದಾರೆ, ಇದಾದ ಬಳಿಕ ನನ್ನ ವಿರುದ್ಧ ದೂರು ದಾಖಲು ಮಾಡಿದ್ದಾರೆಂದು ಹೇಳಿದ್ದಾರೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *