ಪಟ್ಟಣದ ಕತ್ರಿ ಬಜಾರದ ಹನುಮಾನ ಮಂದಿರದ ಸಮೀಪದ ‘ಭೂಮಿಕಾ’ ಹೋಟೆಲ್‌ನಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಉಂಟಾದ ಬೆಂಕಿ ಅವಘಡದಲ್ಲಿ ಗಾಯಗೊಂಡಿದ್ದ ಮೂವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೇ 29ರಂದು ಬೆಳಿಗ್ಗೆ ನಡೆದ ಘಟನೆಯಲ್ಲಿ ಹೋಟೆಲ್ ಮಾಲೀಕ ಬಸವರಾಜ ಕುಂಬಾರ ಅವರು ಉಪಹಾರ ಮತ್ತು ಚಹಾ ತಯಾರಿಸಲು ಎಲ್‌ಪಿಜಿ ಗ್ಯಾಸ್ ಸ್ಟೌ ಹಚ್ಚುವ ವೇಳೆ ಅನಿಲ ಸೋರಿಕೆಯಾಗಿ ಏಕಾಏಕಿ ಬೆಂಕಿ ಹೊತ್ತಿಕೊಂಡಿತ್ತು. ಈ ಅವಘಡದಲ್ಲಿ ಹೋಟೆಲ್‌ನಲ್ಲಿದ್ದ ಎಂಟು ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ತೀವ್ರ ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಸೀರ್ ಅಹಮ್ಮದ್ ಕಡದರಾಳ (42), ಶಕೀಲ್ ಅಹಮ್ಮದ್ ಕುಂಬಾರವಾಡಿ (35) ಹಾಗೂ ರಾಜಕುಮಾರ ಗೋಟಗುಣಕಿ (71) ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ಉಳಿದ ಐವರು ಚಿಕಿತ್ಸೆ ಪಡೆದು ಜೀವಾಪಾಯದಿಂದ ಪಾರಾಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

