BigTv News
September 8, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಹಾಡಹಗುಲೆ ಮೈದುನನಿಂದ ಅತ್ತಿಗೆಯ ಕಗ್ಗೊಲೆ ನಡೆದಿರುವ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಿನಾರಾಯಣಪುರ ಗ್ರಾಮದಲ್ಲಿ ಜರುಗಿದೆ. ಮನೆಯಲ್ಲಿನ ಆಂತರಿಕ ಕಲಹ ಹಿನ್ನಲೆಯಲ್ಲಿ ಆರೋಪಿ ಮೈದುನ ಕುಡಗೊಲಿನಿಂದ ಕತ್ತಿಗೆ ಹೊಡೆದು ತನ್ನ ಅತ್ತುಗೆಯನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸುನಂದಾ ಮೆಣಸಿನಕಾಯಿ(40) ಕೊಲೆ ಆಗಿರುವ ದುರ್ದೈವಿ ಮಹಿಳೆಯಾಗಿದ್ದಾಳೆ. ಸ್ಥಳಕ್ಕೆ ಕುಂದಗೋಳ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್ನೂ ಪ್ರಕರಣದ ಆರೋಪಿಯ ಪತ್ತೆಗಾಗಿ ಪೋಲಿಸರು ಬಲೆ ಬೀಸಿದ್ದಾರೆ.ಅತ್ತುಗೆಯನ್ನೇ ಕೊಂದ …
Read More »
BigTv News
September 8, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ರಜತ ಉಳ್ಳಾಗಡ್ಡಿಮಠ ಫೌಂಡೇಶನ್ ವತಿಯಿಂದ ದಿ. ವಿಶ್ವಪ್ರಕಾಶ್ ಉಳ್ಳಾಗಡ್ಡಿಮಠ ಅವರ ಸ್ಮರಣಾರ್ಥ ಹುಬ್ಬಳ್ಳಿಯ ಮೂರುಸಾವಿರಮಠದ ಆವರಣದಲ್ಲಿ 108 ಅರ್ಚಕರು, ಪುರೋಹಿತರಿಗೆ ಸನ್ಮಾನಿಸಲಾಯಿತು. ಫೌಂಡೇಶನ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ನೇತೃತ್ವದಲ್ಲಿ ಮೂರುಸಾವಿರಮಠದ ಡಾ.ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನೇರವೇರಿದ ಸನ್ಮಾನ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧೆಡೆಯ ಪುರೋಹಿತ, ಅರ್ಚಕರಿಗೆ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ನಂತರ ಮಾತನಾಡಿದ ಮೂರುಸಾವಿರಮಠದ ಶ್ರೀಗಳು, ರಜತ್ ಉಳ್ಳಾಗಡ್ಡಿಮಠ ಫೌಂಡೇಶನ್ ಕಳೆದ ಒಂದೂವರೆ ವರ್ಷಗಳಿಂದ …
Read More »
BigTv News
September 8, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಬೆನ್ನೆಹಳ್ಳ ಜ್ವಲಂತ ಸಮಸ್ಯೆಯಾಗಿ ಉಳಿದಿದ್ದು, ಪ್ರತಿವರ್ಷ ಬೆಣ್ಣೆಹಳ್ಳ ಮತ್ತು ರಾಡಿಹಳ್ಳ ಪ್ರವಾಹದಿಂದ ಜನರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆ ಸರ್ಕಾರ ಕೂಡಲೇ ಬೆನ್ನೆಹಳ್ಳಕ್ಕೆ ಶಾಶ್ವತ ಪರಿಹಾರ ಒದಗಿಸುವ ಕೆಲಸ ಮಾಡಬೇಕೆಂದು ಬೆಣ್ಣೆಹಳ್ಳ ಸಂರಕ್ಷಣಾ ಸಮಿತಿ ಮತ್ತು ರಾಡಿಹಳ್ಳ ಸಂರಕ್ಷಣಾ ಸಮಿತಿ ಜಂಟಿಯಾಗಿ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿತು. ಹುಬ್ಬಳ್ಳಿಯ ಪತ್ರಿಕಾಗೋಷ್ಠಿಯಲ್ಲಿ ಬೆನ್ನೆ ಹಳ್ಳದ ಸಂರಕ್ಷಣಾ ಸಮಿತಿ ಅಧ್ಯಕ್ಷ ಕಿರಣ ರೆಡ್ಡೆರ್ ಮಾತನಾಡಿ, ಪ್ರತಿವರ್ಷ ಮಳೆಗಾಲದಲ್ಲಿ ಬೆನ್ನೆ ಹಳ್ಳ, …
Read More »
BigTv News
September 8, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ವಯಸ್ಸಾಯ್ತು ಇನ್ನೇನು ಸಾಧನೆ ಮಾಡಲು ಸಾಧ್ಯ ಎಂದು ಗೊಣಗುವವರಿಗೆ ಈ ವ್ಯಕ್ತಿ ವಿಭಿನ್ನ . ಐವತ್ತರ ವಯಸ್ಸಿನಲ್ಲೂ ಆಫ್ರಿಕಾದ ಅತೀ ದೊಡ್ಡ ಶಿಖರ ಕಿಲಿಮಾಂಜರೋ ಪರ್ವತ ಚಾರಣ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು , ಈ ಸಾಹಸಿ ಕನ್ನಡಿಗ ಶಿಖರದ ತುದಿಯಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ . ಹೀಗೆ ದಕ್ಷಿಣ ಆಫ್ರಿಕಾ ದೇಶದ ಶಿಖರದ ಮೇಲೆ ನಮ್ಮ ಭಾರತ ದೇಶದ ತ್ರಿವರ್ಣ ಧ್ವಜವನ್ನು ಹಾರಿಸುತ್ತಿರುವ ಇವರ ಹೆಸರು ಗಿರೀಶ ಹುಲ್ಲೂರ …
Read More »
BigTv News
September 8, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಅತಿವೃಷ್ಟಿ ಹಾನಿಯ ಅಧ್ಯಯನಕ್ಕಾಗಿ ಭಾರತ ಸರ್ಕಾರದ ಅಂತರ್ ಸಚಿವಾಲಯದ ಅಧಿಕಾರಿಗಳ ಅಧ್ಯಯನ ತಂಡವು ಇಂದು ಜಿಲ್ಲೆಯ ವಿವಿಧ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ,ಹಾನಿಗೀಡಾದ ಬೆಳೆಗಳು ಮನೆ,ಶಾಲೆ,ರಸ್ತೆ,ಸೇತುವೆಗಳನ್ನು ಪರಿಶೀಲಿಸಿತು. ಜಿಲ್ಲೆಯಲ್ಲಿ ಅಧಿಕ ಮಳೆಯಿಂದ ಉಂಟಾಗಿರುವ ಹಾನಿಯ ವರದಿಯನ್ನು 10 ದಿನಗಳೊಳಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಕೇಂದ್ರ ಜಲಶಕ್ತಿ ಮಂತ್ರಾಲಯದ ಅಶೋಕಕುಮಾರ ಹೇಳಿದರು. ಕಿರೇಸೂರಿನಲ್ಲಿ ಬೆಣ್ಣೆಹಳ್ಳದ ಪ್ರವಾಹದಿಂದ ಹಾನಿಗೀಡಾಗಿರುವ ಹೊಲಗಳಲ್ಲಿನ ಬೆಳೆಗಳನ್ನು ವೀಕ್ಷಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ …
Read More »
BigTv News
September 8, 2022
Breaking News, ಹುಬ್ಬಳ್ಳಿ
ಪ ಹುಬ್ಬಳ್ಳಿ : ಬೇಕಾಬಿಟ್ಟಿ ಪರೋಟ ತಯಾರು ಮಾಡುತ್ತಿದ್ದ ಘಟಕದ ಮೇಲೆ ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿದ್ದು , ಒಂದು ವಾರದಲ್ಲಿ ಘಟಕ ಬಂದ್ ಮಾಡುವಂತೆ ಸೂಚನೆ ನೀಡಿದ್ದಾರೆ . ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ . ಶ್ರೀಧರ್ ದಂಡೆಪ್ಪನವರ ದಾಳಿ ನಡೆಸಿದ್ದಾರೆ . ವಾರ್ಡ್ ಸಂಖ್ಯೆ 76 ರಲ್ಲಿ ಬರುವ ಇಸ್ಲಾಂಪುರ ಪರೋಟ ತಯಾರಿಕಾ ಘಟಕದ ಮೇಲೆ ದಾಳಿ ಮಾಡಲಾಗಿದೆ . ಪಾಲಿಕೆ ಸದಸ್ಯರ …
Read More »
BigTv News
September 8, 2022
Breaking News, ಬೆಳಗಾವಿ
ಬೆಳಗಾವಿ : ಹೃದಯಾಘಾತದಿಂದ ನಿಧನರಾದ ಸಚಿವ ಉಮೇಶ್ ಕತ್ತಿ ಅಂತ್ಯಕ್ರಿಯೆ ಹುಕ್ಕೇರಿಯ ಸ್ವಗ್ರಾಮ ಬೆಲ್ಲದ ಬಾಗೇವಾಡಿಯ ತೋಟದ ಮನೆಯಲ್ಲಿ ಸಂಜೆ ನೆರವೇರಿತು. ಕುಶಾಲತೋಪು ಸಿಡಿಸಿ ಸಕಲ ಸರ್ಕಾರಿ ಗೌರವಗಳೊಂದಿಗೆ ವೀರಶೈವ ಲಿಂಗಾಯತ ಧಾರ್ಮಿಕ ಪದ್ಧತಿಯಂತೆ ಅಂತಿಮ ವಿಧಿ ವಿಧಾನ ನೆರವೇರಿತು. ವೀರಶೈವ ಲಿಂಗಾಯತ ಪದ್ಧತೆಯಂತೆ ಅಂತಿಮ ವಿಧಿವಿಧಾನವನ್ನು ಬೆಲ್ಲದ ಬಾಗೇವಾಡಿ ಗ್ರಾಮದ ಮಹಾಂತ ವಿರಕ್ತ ಮಠದ ಶಿವಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ತಂದೆ-ತಾಯಿ ಸಮಾಧಿ ಪಕ್ಕದಲ್ಲೇ ಉಮೇಶ್ …
Read More »
BigTv News
September 8, 2022
Breaking News, ಬೆಂಗಳೂರು
ಬೆಂಗಳೂರು: ಕನ್ನಡದ ಹಿರಿಯ ನಟಿ ಲೀಲಾವತಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರ ನಿವಾಸಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವಂತ ಕನ್ನಡದ ಹಿರಿಯ ನಟಿ ಲೀಲಾವತಿ ಹಾಸಿಗೆ ಹಿಡಿದಿದ್ದಾರೆ. ನೆಲಮಂಗಲದ ಬಳಿಯ ಅವರ ತೋಟದ ಮನೆಯಲ್ಲಿಯೇ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆಯನ್ನು ನಟಿ ಲೀಲಾವತಿಗೆ ನೀಡಲಾಗುತ್ತಿದೆ. ಈ ವಿಷಯ ತಿಳಿದಂತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ …
Read More »
BigTv News
September 8, 2022
Breaking News
ಕನ್ಯಾಕುಮಾರಿ: ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಪ್ರಚಾರಕ್ಕೆ ರಾಹುಲ್ ಗಾಂಧಿ ತೆರಳಿದರೆ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ವಿರಾಮ ತೆಗೆದುಕೊಂಡು ಅದೇ ಹಂತದಿಂದ ಆರಂಭವಾಗಲಿದೆ ಎಂದು ದಿಗ್ವಿಜಯ ಸಿಂಗ್ ಹೇಳಿದ್ದಾರೆ. ಇಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಯಾತ್ರೆಯ ಸಂಚಾಲಕ ಸಿಂಗ್, “ರಾಹುಲ್ ಗಾಂಧಿ ಅವರು ಯಾತ್ರೆಯ ಮಾರ್ಗದ ಉದ್ದಕ್ಕೂ ನಡೆಯುತ್ತಾರೆ, ಅವರು ಪ್ರಚಾರಕ್ಕೆ ಬಿಡುವು ನೀಡಿದರೆ, ಯಾತ್ರೆಯನ್ನು ನಿಲ್ಲಿಸಿ ಅದೇ ಸ್ಥಳದಿಂದ ಪುನರಾರಂಭಿಸಲಾಗುವುದು. .” ಯಾತ್ರೆಯು 12 ರಾಜ್ಯಗಳು ಮತ್ತು …
Read More »
BigTv News
September 8, 2022
Breaking News, ಬೆಂಗಳೂರು
ಬೆಂಗಳೂರು: ಉತ್ತರ ಬೆಂಗಳೂರಿನ ನೆಲೆಸಿರುವ ಕೆಲವು ಉನ್ನತ ವ್ಯಾಪಾರ ಅಧಿಕಾರಿಗಳು ತಮ್ಮ ಪ್ರದೇಶದಲ್ಲಿ ಈ ಪರಿಸ್ಥಿತಿ ಬರುತ್ತದೆ ಎಂದು ಕನಸಿನಲ್ಲೂ ಯೋಚಿಸಿರಲಿಕ್ಕಿಲ್ಲ. ಎರಡು ದಿನಗಳ ಭಾರೀ ಮಳೆಯಿಂದ ಉಂಟಾದ ಪ್ರವಾಹದಿಂದಾಗಿ ಹಲವಾರು ಉದ್ಯಮಿಗಳು ತಮ್ಮ ಸ್ವಂತ ಮನೆಗಳಲ್ಲಿ ಸಿಲುಕಿಕೊಂಡರು, ನಗರದ ಹಲವಾರು ಭಾಗಗಳಲ್ಲಿ, ವಿಶೇಷವಾಗಿ ಐಟಿ ಕಾರಿಡಾರ್ ರಸ್ತೆಗಳಲ್ಲಿ ಜನ ಜೀವನವನ್ನು ಸ್ತಬ್ದಗೊಳಿಸಿತ್ತು. ನಾಗವಾರದ ಸಮೀಪವಿರುವ ಕಣ್ಮನ ಸೆಳೆಯುವ ಪ್ರದೇಶವು ಪ್ರವಾಹದ ಸಮಯದಲ್ಲಿ ನಾಗವಾರ ಕೆರೆಯಾಗಿ ಮಾರ್ಪಟ್ಟಿತು.ಇಲ್ಲಿ ಬಿಲಿಯನೇರ್‌ಗಳ ವಿಲ್ಲಾದ …
Read More »