Breaking News

Breaking News

ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್ : ತಪ್ಪಿದ ಅನಾಹುತ

ಕಲಘಟಗಿ : ಮಳೆಯ ಪ್ರಮಾಣ ಹೆಚ್ಚಿದ ಪರಿಣಾಮ ಪಟ್ಟಣದ ಬಸ್ ನಿಲ್ದಾಣ ದ ಎದುರು ವಿಷ್ಣು ಲಾಡ್ಜ್ ಹತ್ತಿರದ ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿದೆ . ಅದೃಷ್ಟ ವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ . ಜಿಟಿ ಜಿಟಿ ಮಳೆಗೆ ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದ್ದು , ಕೆಲ ಕಾಲ ಭಯದ ವಾತಾವರಣ ನಿರ್ಮಾಣವಾಗಿತ್ತು . ಸ್ವಲ್ಪ ಸಮಯದ ನಂತರ ಬೆಂಕಿ …

Read More »

ವಿವಾಹ ಜೀವನಕ್ಕೆ ಕಾಲಿಟ್ಟ ನಟಿ ನಿಕ್ಕಿ ಗಲ್ರಾನಿ

ಚೆನ್ನೈ: ನಟಿ ಸಂಜನಾ ಗಲ್ರಾನಿ ಅವರ ಸಹೋದರಿ ನಟಿ ನಿಕ್ಕಿ ಗಲ್ರಾನಿ ಅವರು ತೆಲುಗು ನಟ, ಬಹುಕಾಲದ ಗೆಳೆಯ ಆದಿ ಪಿನಿಶೆಟ್ಟಿ ಅವರೊಟ್ಟಿಗೆ ಚೆನ್ನೈನಲ್ಲಿ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಂದ್ರ ಸಂಪ್ರದಾಯದ ಪ್ರಕಾರ ವಿವಾಹವಾಗಿರುವ ಈ ಜೋಡಿಯ ಅದ್ದೂರಿ ಮದುವೆಯ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

Read More »

ಮಳೆ ಆರ್ಭಟ : ಬೆಂಗಳೂರು ಸಿಟಿ ರೌಂಡ್ಸ್ ಮಾಡಿದ ಸಿಎಂ

ಬೆಂಗಳೂರು : ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನಲ್ಲಿ ಮಳೆಯಿಂದಾಗಿ ತೊಂದರೆಗೊಳಗಾದ ಜನವಸತಿ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ಬೆಂಗಳೂರಿನ ಮಳೆ ಹಾನಿ ಪ್ರದೇಶಗಳಿಗೆ ಬಿಬಿಎಂಪಿ ಅಧಿಕಾರಿಗಳ ಜೊತಗೆ ಸಿಎಂ ಬಸವರಾಜ ಬೊಮ್ಮಾಯಿಇಂದು ಸಿಟಿ ರೌಂಡ್ಸ್ ಹೊರಟಿದ್ದಾರೆ.ಮಳೆ ಹಾನಿ ಸಂಬಂಧ ಸ್ಥಳೀಯರಿಂದ ಸಿಎಂ ಬೊಮ್ಮಾಯಿ ಮಾಹಿತಿ ಪಡೆಯುತ್ತಿದ್ದಾರೆ. ಇಂದು ಸಿಎಂ ಬಸವರಾಜ ಬೊಮ್ಮಾಯಿ, ಸಾಯಿ ಬಡಾವಣೆ, ನಾಗಪ್ಪ ರೆಡ್ಡಿ ಬಡಾವಣೆ, ಪೈ ಬಡಾವಣೆಗಳಲ್‌ಇ ವೀಕ್ಷಣೆ ಮಾಡಲಿದ್ದಾರೆ. …

Read More »

ನಟಿ ಸಂಜನಾ ಮನೆಗೆ ಹೊಸ ಅತಿಥಿ ಆಗಮನ

ನಟಿ ಸಂಜನಾ ಗಲ್ರಾನಿ ಅವರ ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಿದೆ. ಇಂದು (ಮೇ 19) ಸಂಜನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ವಿಶೇಷ ಎಂದರೆ ಸಂಜನಾ ಸಹೋದರಿ ನಿಕ್ಕಿ ಮದುವೆ ಇಂದೇ ನೆರವೇರಿದೆ. ಮೇ ತಿಂಗಳಲ್ಲಿ ಮಗುವಿನ ಆಗಮನ ಆಗಲಿದೆ ಎಂದು ಸಂಜನಾ ಈ ಮೊದಲೇ ಹೇಳಿದ್ದರು. ಅವರು 7ನೇ ತಿಂಗಳಿಗೆ ಕಾಲಿಟ್ಟಾಗ ಸೋಶಿಯಲ್ ಮೀಡಿಯಾದಲ್ಲಿ ಮಗು ಯಾವಾಗ ಜನಿಸಬಹುದು ಎಂದು ಅಭಿಮಾನಿಯೊಬ್ಬರು ಕಮೆಂಟ್​ ಮೂಲಕ ಪ್ರಶ್ನಿಸಿದ್ದರು. ‘ಪ್ರಾಯಶಃ ಮೇ …

Read More »

ಕಾವಲುಗಾರನ ಮಗಳು ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ಮೊದಲನೇ ಸ್ಥಾನ

ಹಾವೇರಿ: ನಗರದ ಜಿಲ್ಲಾ ಗುರುಭವನದಲ್ಲಿ ಕಾವಲುಗಾರನಾಗಿ ಕೆಲಸ ಮಾಡುವ ಬಸವರಾಜ ಶೇತಸನದಿ ಅವರ ಮಗಳು ಮಧು ಶೇತಸನದಿ, ಕನ್ನಡ ಮಾಧ್ಯಮದಲ್ಲಿ 625ಕ್ಕೆ 625 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಮೊದಲನೇ ಸ್ಥಾನ ಪಡೆದಿದ್ದಾಳೆ. ‘ನನ್ನ ಮಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ ಎಂಬುದನ್ನು ಕೇಳಿ ತುಂಬಾ ಸಂತೋಷವಾಗಿದೆ.ಹಾಗಲು-ರಾತ್ರಿ ಕಷ್ಟಪಟ್ಟು ಓದಿ ನಮಗೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ಮಗ ಪ್ರಶಾಂತ 7ನೇ ತರಗತಿ ಓದುತ್ತಿದ್ದಾನೆ’ ಎಂದು ಮಧು ಅವರ ತಂದೆ …

Read More »

ವರುಣನ‌ ಆರ್ಭಟ : ಶಾಲೆಗಳಿಗೆ ರಜೆ ಘೋಷಣೆ

ಬೆಂಗಳೂರು: ಮುಂಗಾರು ಪ್ರವೇ​ಶಕ್ಕೆ ಮುನ್ನವೇ ರಾಜ್ಯ​ದ 22ಕ್ಕೂ ಹೆಚ್ಚು ಜಿಲ್ಲೆ​ಗ​ಳಲ್ಲಿ ಮಳೆ​ಯ​ಬ್ಬರ ಮುಂದು​ವ​ರೆದಿ​ದ್ದು, ಜನ​ಜೀ​ವನ ಸಂಪೂರ್ಣ ಅಸ್ತ​ವ್ಯ​ಸ್ತ​ಗೊಂಡಿದೆ. ಮೈಸೂರು, ದಕ್ಷಿಣ ಕನ್ನಡ ಸೇರಿ ನಾಲ್ಕು ಜಿಲ್ಲೆ​ಗ​ಳಲ್ಲಿ ಮುನ್ನೆ​ಚ್ಚ​ರಿಕಾ ಕ್ರಮ​ವಾಗಿ ಶಾಲೆ​ಗ​ಳಿಗೆ ಗುರು​ವಾರ ರಜೆ ಘೋಷಿ​ಸ​ಲಾ​ಗಿ​ದೆ. ಉಡುಪಿಯಲ್ಲಿ ಶುಕ್ರವಾರ ರಜೆ ಘೋಷಿಸಲಾಗಿದೆ. ಸಿಡಿಲು ಬಡಿದು ಇಬ್ಬರು ಸೇರಿದಂತೆ ಒಟ್ಟು ಮೂರು ಮಂದಿ ಮಳೆ ಸಂಬಂಧಿ ಘಟನೆಗಳಲ್ಲಿ ಮೃತ​ಪ​ಟ್ಟಿ​ದ್ದಾ​ರೆ.

Read More »

ಹೈದರಾಬಾದ್‌ನಲ್ಲಿ ಹೊಸ ರೂಪಾಂತರ ತಳಿ ಪತ್ತೆ

ಹೈದ್ರಾಬಾದ್: ಭಾರತದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ತಗ್ಗಿತು ಎನ್ನುವಷ್ಟರಲ್ಲೇ ಹೊಸ ಹೊಸ ರೂಪಾಂತರಿಗಳು ವರದಿಯಾಗುತ್ತಿವೆ. ದೇಶದಲ್ಲಿ ಓಮಿಕ್ರಾನ್ ಉಪ ತಳಿ BA.4ರ ಮೊದಲ ಪ್ರಕರಣವು ಹೈದರಾಬಾದ್‌ನಲ್ಲಿ ವರದಿಯಾಗಿದೆ. ಹೊಸ ಕೋವಿಡ್-19 ಉಪ ತಳಿಯ ಪತ್ತೆಯ ಬಗ್ಗೆ ಹಲವು ಮಾಧ್ಯಮಗಳು ವರದಿ ಮಾಡಿವೆ. ಅದಾಗ್ಯೂ, ಹೊಸ ರೂಪಾಂತರಿಯ ದೃಢೀಕರಣಕ್ಕಾಗಿ ಮಾದರಿಯನ್ನು ಭಾರತೀಯ SARS-CoV-2 ಕನ್ಸೋರ್ಟಿಯಂ ಆನ್ ಜೀನೋಮಿಕ್ಸ್ (INSACOG)ನಲ್ಲಿ ಪರಿಶೀಲನೆಗೆ ರವಾನಿಸಲಾಗಿದೆ.

Read More »

ರವಿ ಡಿ. ಚನ್ನಣ್ಣನವರ್ ಸೋದರನ ವಿರುದ್ಧ ಎಫ್‌ಐಆರ್ ದಾಖಲು … ಯಾಕೆ ಗೊತ್ತಾ ಈ ಸುದ್ದಿ ನೋಡಿ?

ಬೆಂಗಳೂರು: ಪತ್ನಿಗೆ ಕಿರುಕುಳ ನೀಡಿದ ಆರೋಪದಡಿಯಲ್ಲಿ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಸೋದರನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬೆಂಗಳೂರಿನ ಚಂದ್ರಾಲೇಔಟ್ ಠಾಣೆಯಲ್ಲಿ ರಾಘವೇಂದ್ರ ಡಿ. ಚೆನ್ನಣ್ಣನವರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. 2015ರಲ್ಲಿ ರೋಜಾ ಮತ್ತು ರಾಘವೇಂದ್ರ ಡಿ. ಚೆನ್ನಣ್ಣನವರ್ ಮದುವೆಯಾಗಿತ್ತು. ರವಿ ಡಿ.ಚನ್ನಣ್ಣನವರ್ ಮುಂದೆ ನಿಂತು ಮದುವೆ ಮಾಡಿಸಿದ್ದರು. ಆದರೆ ರೋಜಾ ಮದುವೆಗೂ ಮುನ್ನ ಮತ್ತೊಬ್ಬ ಮಹಿಳೆ ಜತೆ ಮದುವೆಯಾಗಿದ್ದನ್ನು ಬಚ್ಚಿಟ್ಟಿದ್ದ ಆರೋಪ ಕೇಳಿಬಂದಿದೆ. ಮೊದಲು ಮದುವೆಯಾಗಿದ್ದ ಮಹಿಳೆ …

Read More »

ಧಾರವಾಡ ಶಾಲೆ, ಕಾಲೇಜು ಗಳಿಗೆ ರಜೆ ಘೋಷಣೆ

ಧಾರವಾಡ : ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣದಿಂದ ಎಲ್ಲಾ ಶಾಲೆ , ಕಾಲೇಜುಗಳಿಗೆ ಇಂದು ಮೇ . 20 ರಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ರಜೆ ಘೋಷಿಸಿದ್ದಾರೆ . ಹವಾಮಾನ ಇಲಾಖೆಯು ಮಳೆ ಮುಂದುವರೆಯುವ ಸಾಧ್ಯತೆಯ ಮುನ್ಸೂಚನೆ ನೀಡಿದೆ . ಇಂದು ಮೇ . 20 ರಂದು ಜಿಲ್ಲೆಯ ಎಲ್ಲಾ ಶಾಲೆ , ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ . ನಿನ್ನೆ ಮೇ .19 ಇಡೀ ದಿನ ಮತ್ತು ರಾತ್ರಿ …

Read More »

ರೈತನ ಮಗ ರಾಜ್ಯಕ್ಕೆ ಪ್ರಥಮ : ಹರ್ಷ ವ್ಯಕ್ತಪಡಿಸಿದ ಪಾಲಕರು

ಸವಣೂರು (ಹಾವೇರಿ): ತಾಲ್ಲೂಕಿನ ಹಳೆಮನ್ನಂಗಿ ಗ್ರಾಮದ ರೈತ ಜಿ.ಎನ್. ನಿಸ್ಸಿಮಗೌಡ್ರ ಅವರ ಮಗ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಪ್ರವೀಣ ಬಸನಗೌಡ ನೀರಲಗಿ ಬಡತನದಲ್ಲಿಯೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾನೆ. ‘ಶಾಲೆಯಲ್ಲಿ ಶಿಕ್ಷಕರ ಮಾರ್ಗದರ್ಶನ, ತಂದೆ-ತಾಯಿಗಳ ಆಶೀರ್ವಾದ ಹಾಗೂ ಸಹಕಾರದಿಂದ ರಾಜ್ಯಕ್ಕೆ ಪ್ರಥಮಸ್ಥಾನ ಪಡೆಯಲು ಸಾಧ್ಯವಾಗಿದೆ. ಶಿಕ್ಷಕರ ಬೋಧನೆಗೆ ತಕ್ಕಂತೆ ನಿತ್ಯ ವಿದ್ಯಾಭ್ಯಾಸ ಮಾಡಿದೆ. ಮನೆಯಲ್ಲಿ ಪಾಲಕರು ಕೂಡ ಸಹಕಾರ ನೀಡಿದರು’ ಎಂದು …

Read More »