Breaking News

Breaking News

ಬುದ್ಧಿಮಾಂದ್ಯ ಮಕ್ಕಳ ಜೊತೆ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡ ಕಲಂದರ್ ಮುಲ್ಲಾ

ಹುಬ್ಬಳ್ಳಿ: ಹುಟ್ಟು ಹಬ್ಬ ಬಂತಂದರೆ ಸಾಕು ಪಾರ್ಟಿ, ಮೊಜು ಮಸ್ತಿ ಮಾಡುವುದೆ ಹೆಚ್ಚು. ಆದರೆ ಇಲ್ಲೊಬ್ಬ ಯುವನಾಯಕ ಬುದ್ಧಿಮಾಂದ್ಯ ಮಕ್ಕಳೊಂದಿಗೆ ವಿಶೇಷವಾಗಿ ಜನ್ಮದಿನ ಆಚರಣೆ ಮಾಡಿಕೊಂಡಿದ್ದಾರೆ. ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಲಂದರ್ ಮುಲ್ಲಾ ಹಟೇಲಸಾಬ್ ಅವರು, ಇಂದು ತಮ್ಮ ಹುಟ್ಟು ಹಬ್ಬವನ್ನು ಹುಬ್ಬಳ್ಳಿಯ ಉಣಕಲ್‌ದಲ್ಲಿರುವ ಮಂದಮತಿ ಮಹಿಳೆಯರ ಅನುಪಾಲನಾ ವಸತಿಯಲ್ಲಿ ಮಕ್ಕಳ ಕೈಯಿಂದ ಸಸಿಗಳನ್ನು ನೆಟ್ಟಿಸಿ, ಮಕ್ಕಳಿಗೆ ಸಿಹಿ ಹಂಚಿ, ಊಟ …

Read More »

ಉರುಗವನ್ನು ರಕ್ಷಣೆ ಮಾಡಿದ ಸ್ನೇಕ್ ನಾಗರಾಜ

ಹುಬ್ಬಳ್ಳಿ : ನಗರದ ಗಬ್ಬೂರ ಬೈಪಾಸ್ ಹತ್ತಿರ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ ಹಿಂದುಗಡೆ ನಾಗರಹಾವು ಪ್ರತ್ಯಕ್ಷವಾಗಿತ್ತು.ಹಾವು ಕಂಡ ದೇವಸ್ಥಾನದ ಅರ್ಚಕರು ಭಯಗೊಂಡು ಸ್ನೇಕ್ ನಾಗರಾಜ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ನಾಗರಾಜ ಹಾವು ರಕ್ಷಣೆ ಮಾಡಿ,ಅದನ್ನು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ.ಇನ್ನೂ ನಾಗರಾಜ ಅವರ ಕಾರ್ಯಕ್ಕೆ ಗಬ್ಬೂರ ಜನತೆ ಅಭಿನಂದನೆ ಸಲ್ಲಿಸಿದ್ದಾರೆ.

Read More »

ಸಂಕಲ್ಪ ಸೌಹಾರ್ದ ಸಹಕಾರಿ ಸಂಘ ನಿಯಮಿತ ಉದ್ಘಾಟನೆ

ಧಾರವಾಡ : ತಾಲ್ಲೂಕಿನ ಸತ್ತೂರಿನಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದ ಬಳಿ ಇರುವ ಸರಕಾರಿ ಶಾಲೆಯ ಆವರಣದಲ್ಲಿ ಆಯೋಜಿಸಲಾದ ಸಂಕಲ್ಪ ಸೌಹಾರ್ದ ಸಹಕಾರಿ ಸಂಘ ನಿಯಮಿತ ಸತ್ತೂರ , ಇದರ ಉದ್ಘಾಟನೆಯನ್ನು ಶಾಸಕ ಅರವಿಂದ್ ಬೆಲ್ಲದ್ ನೇರವೇರಿಸಿದರು . ಈ ಸಂದರ್ಭದಲ್ಲಿ , ನಿರ್ದೇಶಕ ಮಂಡಳಿಯ ಅಧ್ಯಕ್ಷರಾದ ಪುಂಡಲೀಕ ತಳವಾರ್ , ನಿರ್ದೇಶಕರಾದ ಗುರುಪ್ರಸಾದ್ ಕರೆಡೆಣ್ಣವರ ಸೇರಿದಂತೆ ಇನ್ನಿತರ ನಿರ್ದೇಶಕರು ಉಪಸ್ಥಿತರಿದ್ದರು .

Read More »

ಹಗಲು ಕಳ್ಳತನ : 10 ಲಕ್ಷ ರೂ ಚಿನ್ನಾಭರಣಗಳ ವಶಪಡಿಸಿಕೊಂಡ ಪೋಲಿಸರು

ಧಾರವಾಡ : ಜಿಲ್ಲೆಯ ಕಲಘಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಗಲು ಕಳ್ಳತನ ಮಾಡಿದ್ದ ಪ್ರಕರಣ ಪತ್ತೆ ಹಚ್ಚಿದ ಪೊಲೀಸ್ ತಂಡ 10 ಲಕ್ಷ ರೂ . ಮೌಲ್ಯದ ಚಿನ್ನಾಭರಣಗಳ ವಶಪಡಿಸಿಕೊಂಡಿದೆ . ಕಲಘಟಗಿಯಲ್ಲಿ ಕಳೆದ ವಾರ ನಡೆದ ಘಟನೆ ಇದಾಗಿದ್ದು ಕಲಘಟಗಿ ಪಟ್ಟಣದ ಗಾಂಧಿನಗರದ ನಿವಾಸಿ ವಾಮನರಾವ್ ದೇಶಪಾಂಡೆ ಅವರ ಮನೆಯಲ್ಲಿ ನಗದು , ಚಿನ್ನಾಭರಣ ದೋಚಿದ 3 ಮಂದಿ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ . ಎಸ್ಪಿ ಕೃಷ್ಣಕಾಂತ್ , …

Read More »

ಹುಬ್ಬಳ್ಳಿ ಗಲಭೆ : ನನ್ನ ಗಂಡನನ್ನು ಬೀಡಿ ಎಂದು‌ ಕಣ್ಣೀರು ಹಾಕಿದ ಗರ್ಭಿಣಿ

ಹುಬ್ಬಳ್ಳಿ : ನಗರದ ಹುಬ್ಬಳ್ಳಿ ಗಲಭೆ ಹಿನ್ನಲೆ ಇಲ್ಲಿಯವರೆಗೂ 140 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ . ಸಾದಿಕ ಮಕಾಂದಾರ ಎಂಬುವನನ್ನು ಪೋಲಿಸರು ವಿಚಾರಣೆ ಮಾಡಲು ಪೋಲಿಸ್ ಠಾಣೆಗೆ ಕರೆತಂದಿದ್ದಾರೆ . ಈ ಸಂದರ್ಭದಲ್ಲಿ ಬಂಧಿತನ ಸಂಬಂಧಿಕರ ಆಕ್ರಂದನ ಮಾತ್ರ ಹಳೆ ಪೋಲಿಸ್ ಠಾಣೆ ಎದುರು ನಿಂತಿಲ್ಲ . 8 ತಿಂಗಳ ತುಂಬು ಗರ್ಭಿಣಿಯು ತನ್ನ ಗಂಡನನ್ನು ಬಿಡುವಂತೆ ಕಣ್ಣಿರು ಹಾಕಿದಳು . ನಾನು ಆಸ್ಪತ್ರೆಗೆ ಹೋಗಬೇಕು , ಇದು …

Read More »

ನೂತನ ವಧು – ವರರಿಗೆ ಶುಭ ಹಾರೈಸಿದ ಶಾಸಕ

ಧಾರವಾಡ : ತಾಲ್ಲೂಕಿನ ಸತ್ತೂರಿನಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದ ಬಳಿ ಇರುವ ಸರಕಾರಿ ಶಾಲೆಯ ಆವರಣದಲ್ಲಿ ಆಯೋಜಿಸಲಾದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶಾಸಕ ಅರವಿಂದ್ ಬೆಲ್ಲದ್ ಭಾಗವಹಿಸಿ , ವಧು – ವರರಿಗೆ ಶುಭ ಹಾರೈಸಿದರು. ಸಂದರ್ಭದಲ್ಲಿ , ನಿರ್ದೇಶಕ ಮಂಡಳಿಯ ಅಧ್ಯಕ್ಷರಾದ ಶ್ರೀ ಪುಂಡಲೀಕ ತಳವಾರ್ , ನಿರ್ದೇಶಕರಾದ ಶ್ರೀ ಗುರುಪ್ರಸಾದ್ ಕರೆಡೆಣ್ಣವರ ಸೇರಿದಂತೆ ಇನ್ನಿತರ ನಿರ್ದೇಶಕರು ಉಪಸ್ಥಿತರಿದ್ದರು .

Read More »

ಜನಪ್ರತಿನಿಧಿ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಸಚಿವ ಭರವಸೆ

ಹುಬ್ಬಳ್ಳಿ : ನಗರದ ಸಚಿವ ಎಸ್ಪಿಮುನೇನಕೊಪ್ಪ ಅವರ ಗೃಹ ಕಛೇರಿಯಲ್ಲಿ ನವಲಗುಂದ ಕ್ಷೇತ್ರದ ವಿವಿಧ ಗ್ರಾಮಗಳಿಂದ ರೈತರ ಹಾಗೂ ಸಾರ್ವಜನಿಕರ ಆಗಮಿಸಿ ತಮ್ಮ ಸಮಸ್ಯೆಗಳ ಕುರಿತು ಸಚಿವರಿಗೆ ಅಹವಾಲುಗಳನ್ನು ನೀಡಿದರು. ಸಚಿವರು ಅವರ ಸಮಸ್ಯೆಗಳಿಗೆ ಸ್ಪಂದಿಸಿ ಆದಷ್ಟು ಬೇಗನೆ ಸಮಸ್ಯೆ ಬಗೆಹರಿಸುವುದಾಗಿ ಸಚಿವರು ಭರವಸೆ ನೀಡಿದರು .

Read More »

ಸರ್ಕಾರದ ವಿರುದ್ಧ ದಿಂಗಾಲೇಶ್ವರ ಶ್ರೀಗಳು ಹೊಸ ಬಾಂಬ್‌ ಸ್ಫೋಟ್

ಗದಗ : ಶಿರಹಟ್ಟಿ ಮಠಕ್ಕೆ ಬಿಡುಗಡೆಯಾದ ಅನುದಾನದ ಹಣವನ್ನ ನುಂಗಿ ಹಾಕಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ದಿಂಗಾಲೇಶ್ವರ ಶ್ರೀಗಳು ಹೊಸ ಬಾಂಬ್‌ ಸಿಡಿಸಿದ್ದಾರೆ. ನಗರದಲ್ಲಿ ಈ ಕುರಿತು ಸುದ್ದಿಗಾರೊಂದಿಗೆ ಮಾತನಾಡಿದ ಶ್ರೀಗಳು, ‘ಶಿರಹಟ್ಟಿ ಮಠದ ಹೆಸರಲ್ಲಿ ಬಿಡುಗಡೆಯಾದ 2 ಕೋಟಿ ರೂಪಾಯಿ ಅನುದಾನದಲ್ಲಿ 1.25 ಕೋಟಿ ಹಣ ನುಂಗಿ ಹಾಕಿದ್ದಾರೆ. 10 ವರ್ಷ ಕಳೆದರೂ ಇನ್ನು ಅನುದಾನ ಬಿಡುಗಡೆಯಾಗಿಲ್ಲ ಎಂದು ಆರೋಪಿಸಿದರು.

Read More »

ಡಾ.ರಾಜ್ ಕುಮಾರ್ ರವರು ಜನ್ಮದಿನವನ್ನು ಪ್ರತಿವರ್ಷ ಆಚರಣೆ : ಬೊಮ್ಮಾಯಿ

ಬೆಂಗಳೂರು : ಭಾರತೀಯ ಚಿತ್ರರಂಗದಲ್ಲಿ ಡಾ.ರಾಜ್ ಕುಮಾರ್ ರವರು ಜನ್ಮದಿನವನ್ನು ಪ್ರತಿವರ್ಷ ಸರ್ಕಾರದಿಂದಲೇ ಆಚರಣೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು. ನಿನ್ನೆ ರವೀಂದ್ರ ಕಲಾಕ್ಷೇತ್ರದಲ್ಲಿ 2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅದ್ಭುತ ನಟನಾ ಕೌಶಲ್ಯದಿಂದ ತನ್ನದೆ ಆದ ಛಾಪನ್ನು ಮೂಡಿಸಿದ ಡಾ.ರಾಜ್ ಕುಮಾರ್ ಅವರು ಪೌರಾಣಿಕ, ಸಾಮಾಜಿಕ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡುತ್ತಿದ್ದರು ಎಂದರು.

Read More »

ಸಿಎಂ ಗೆ ಮಾಜಿ ಸಿಎಂ ಪತ್ರ.. ಯಾಕೆ ಅಂತೀರಾ ಈ ಸುದ್ದಿ ನೋಡಿ ?

ಬೆಂಗಳೂರು: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರಿಡುವ ನಿರ್ಧಾರವನ್ನು ಕೈಬಿಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಿಜೆಪಿ ಶಾಸಕ ಬಿ.ಎಸ್‌. ಯಡಿಯೂರಪ್ಪ ಪತ್ರ ಬರೆದಿದ್ದಾರೆ. ಇತ್ತೀಚೆಗೆ ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಮುಖ್ಯಮಂತ್ರಿ, ‘ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಿ.ಎಸ್‌. ಯಡಿಯೂರಪ್ಪ ಅವರ ಹೆಸರನ್ನು ನಾಮಕರಣ ಮಾಡಲು ತೀರ್ಮಾನಿಸಲಾಗಿದೆ’ ಎಂದು ಪ್ರಕಟಿಸಿದ್ದರು. ಈ ಕುರಿತು ಭಾನುವಾರ ಪತ್ರ ಬರೆದಿರುವ ಯಡಿಯೂರಪ್ಪ, ‘ನಿಮ್ಮ ನಿರ್ಧಾರವನ್ನು ಪುನರ್‌ ಪರಿಶೀಲಿಸಿ, ರಾಷ್ಟ್ರದ, ನಾಡಿನ ಅಭಿವೃದ್ಧಿಗೆ ಹಾಗೂ …

Read More »