Breaking News

ಬುದ್ಧಿಮಾಂದ್ಯ ಮಕ್ಕಳ ಜೊತೆ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡ ಕಲಂದರ್ ಮುಲ್ಲಾ

ಹುಬ್ಬಳ್ಳಿ: ಹುಟ್ಟು ಹಬ್ಬ ಬಂತಂದರೆ ಸಾಕು ಪಾರ್ಟಿ, ಮೊಜು ಮಸ್ತಿ ಮಾಡುವುದೆ ಹೆಚ್ಚು. ಆದರೆ ಇಲ್ಲೊಬ್ಬ ಯುವನಾಯಕ ಬುದ್ಧಿಮಾಂದ್ಯ ಮಕ್ಕಳೊಂದಿಗೆ ವಿಶೇಷವಾಗಿ ಜನ್ಮದಿನ ಆಚರಣೆ ಮಾಡಿಕೊಂಡಿದ್ದಾರೆ.

ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಲಂದರ್ ಮುಲ್ಲಾ ಹಟೇಲಸಾಬ್ ಅವರು, ಇಂದು ತಮ್ಮ ಹುಟ್ಟು ಹಬ್ಬವನ್ನು ಹುಬ್ಬಳ್ಳಿಯ ಉಣಕಲ್‌ದಲ್ಲಿರುವ ಮಂದಮತಿ ಮಹಿಳೆಯರ ಅನುಪಾಲನಾ ವಸತಿಯಲ್ಲಿ ಮಕ್ಕಳ ಕೈಯಿಂದ ಸಸಿಗಳನ್ನು ನೆಟ್ಟಿಸಿ, ಮಕ್ಕಳಿಗೆ ಸಿಹಿ ಹಂಚಿ, ಊಟ ಬಡಿಸುವುದರ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಮಹಾದೇವಪ್ಪ ನರಗುಂದ, ಉದ್ಯಮಿ ಹಾಗೂ ಸಮಾಜ ಸೇವಕರಾದ ರಮೇಶ ಮಹಾದೇವಪ್ಪನವರ, ಸುಜಾತ ಚನ್ನಪ್ಪಗೌಡ್ರ, ನಜೀರ್ ಆಹ್ಮದ್ ಮುಲ್ಲಾ, ಬಶೀರ್ ಖಾನ್ ಮುಸಾಫಿರ್, ಕಾಶಿಂ ಕೂಡಲಗಿ, ನಂದೀಶ ವಡ್ಡಟ್ಟಿ, ಕಲ್ಲಪ್ಪ ಭರಮಗೌಡ್ರ, ರವಿ ಮಳಗಿ, ಯುನುಸ, ರಫೀಕ್ ನದಾಫ್,
ಶಕೀಲ್ ವಲಿಆಹ್ಮದ್, ಹಸನಸಾಬ್ ತಾಸೇವಾಲೆ, ಕಲಂದರ ಅಣ್ಣಿಗೇರಿ
ಅಂಬರ್ ಬಿಜಾಪುರ ಉಪಸ್ಥಿತರಿದ್ದರು.

Share News

About admin

Check Also

ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ

ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …

Leave a Reply

Your email address will not be published. Required fields are marked *