Breaking News

Breaking News

ಹೂಡಿಕೆ ನೆಪದಲ್ಲಿ ಹಣ ಪಡೆದು ಉದ್ಯಮಿಗಳಿಗೆ ಬ್ಲಾಕ್ ಮೇಲ್: ಮಹಿಳೆ ವಿರುದ್ಧ 8 ಕೇಸ್ ದಾಖಲು

ಉಡುಪಿ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೂಡಿಕೆಯ ನೆಪದಲ್ಲಿ ಹಣ ಪಡೆದು ನಂತರ ಖಾಸಗಿ ವಿಡಿಯೋ ಬಹಿರಂಗಪಡಿಸುವುದಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಜೀನತ್ ಇಬ್ರಾಹಿಂ ಬಂಧಿತ ಆರೋಪಿಯಾಗಿದ್ದು, ವಿವಿಧ ಪೊಲೀಸ್ ಠಾಣೆಗಳಲ್ಲಿ ಅವರ ಮೇಲೆ ಎಂಟು ಪ್ರಕರಣ ದಾಖಲಾಗಿವೆ ಎಂದು ಎಸ್‌ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ. ಉದ್ಯಮಿಯೊಬ್ಬರು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೂಡಿಕೆ ಮಾಡಲು ಜೀನತ್ ಇಬ್ರಾಹಿಂಗೆ 70 ಲಕ್ಷ ರೂ. ನೀಡಿದ್ದು, ಹಣ …

Read More »

ಚಿತ್ರದುರ್ಗ: ಹರಳಯ್ಯ ಮಠದ ಸ್ವಾಮೀಜಿ ಮೇಲೆ ಯುವಕನಿಂದ ಹಲ್ಲೆ, ಪೊಲೀಸ್ ಠಾಣೆಯಲ್ಲೂ ಶ್ರೀಗಳ ಎದೆಗೆ ಒದ್ದು ದಾಂಧಲೆ!

ಚಿತ್ರದುರ್ಗ: ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದ ಶಿವಶರಣ ಹರಳಯ್ಯ ಮಠದಲ್ಲಿ ಪೀಠಾಧಿಪತಿ ಬಸವ ಹರಳಯ್ಯ ಸ್ವಾಮೀಜಿ ಹಾಗೂ ಶಾಲಾ ಬಸ್ ಚಾಲಕನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಮಠದ ಜಾಗದ ವಿವಾದದ ಹಿನ್ನೆಲೆಯಲ್ಲಿ ನಡೆದ ದಾಳಿಯಲ್ಲಿ ಸ್ವಾಮೀಜಿಗೆ ಗಾಯಗಳಾಗಿದ್ದು, ಚಾಲಕ ಭೀಮರಾಜ್ ಮೇಲೂ ಹಲ್ಲೆ ನಡೆಸಲಾಗಿದೆ. ದಾಳಿಯ ಬಳಿಕ ದೂರು ನೀಡಲು ಐಮಂಗಲ ಪೊಲೀಸ್ ಠಾಣೆಗೆ ತೆರಳಿದ್ದ ಸ್ವಾಮೀಜಿಯನ್ನು ಆರೋಪಿಗಳು ಠಾಣೆಯೊಳಗೂ ಬೆನ್ನಟ್ಟಿ ದೌರ್ಜನ್ಯ ಎಸಗಿದ್ದಾರೆ ಎಂಬ …

Read More »

ಬೆಂಗಳೂರಲ್ಲಿ ನಿಲ್ಲದ ರೋಡ್ ರೇಜ್ – ರಾಡ್ ಹಿಡಿದು ಕ್ಯಾಬ್‌ ಚಾಲಕನಿಗೆ ಹಲ್ಲೆಗೈದ ಮತ್ತೋರ್ವ ಡ್ರೈವರ್!

ಬೆಂಗಳೂರು : ನಗರದಲ್ಲಿ ರೋಡ್ ರೇಜ್ ಪ್ರಕರಣಗಳು ಹೆಚ್ಚಾಗುತ್ತಿರುವ ನಡುವೆಯೇ, ಬಿಟಿಎಂ ಲೇಔಟ್‌ನಿಂದ ತಾವರೆಕೆರೆ ಕಡೆಗೆ ಸಾಗುವ ರಸ್ತೆಯಲ್ಲಿ ಕ್ಯಾಬ್ ಚಾಲಕನೊಬ್ಬ ರಾಡ್ ಹಿಡಿದು ಮತ್ತೊಬ್ಬ ಕ್ಯಾಬ್ ಚಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ರಸ್ತೆಯಲ್ಲಿ ವಾಹನಕ್ಕೆ ದಾರಿ ಬಿಡುವಂತೆ ಹಾರ್ನ್ ಮಾಡಿದ ವಿಚಾರಕ್ಕೆ ಆಕ್ರೋಶಗೊಂಡ ಕ್ಯಾಬ್ ಚಾಲಕ, ಏಕಾಏಕಿ ಕಾರಿನಿಂದ ಇಳಿದು ಕೈಯಲ್ಲಿ ರಾಡ್ ಹಿಡಿದು ಮತ್ತೊಂದು ಕಾರಿನ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾನೆ. ಕೆಲಕಾಲ ರಸ್ತೆಯಲ್ಲೇ …

Read More »

3 ಲಕ್ಷ ಸಾಲಕ್ಕೆ 18 ಲಕ್ಷ ಬಡ್ಡಿ!- ಮೀಟರ್ ಬಡ್ಡಿ ದಂಧೆಕೋರರು ಅರೆಸ್ಟ್

ಬೆಳಗಾವಿ: ಅಕ್ರಮವಾಗಿ ಮೀಟರ್ ಬಡ್ಡಿ ದಂಧೆ ನಡೆಸಿ ಸಾಲಗಾರನಿಗೆ ಜೀವ ಬೆದರಿಕೆ ಹಾಗೂ ಕಿರುಕುಳ ನೀಡುತ್ತಿದ್ದ ಇಬ್ಬರು ಆರೋಪಿಗಳನ್ನು ಭಾನುವಾರ ಪೊಲೀಸರು ಬಂಧಿಸಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ರೋಹಿದಾಸ ಗಲ್ಲಿಯ ನಿವಾಸಿಯಾದ ವಿಠಲ ತುಕಾರಾಮ ಮಾನೆ ಎಂಬುವವರು ಆರೋಪಿಗಳಿಂದ 3.10 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಈ ಸಾಲಕ್ಕೆ ಪ್ರತಿಯಾಗಿ ಅವರು ಈಗಾಗಲೇ ಬರೋಬ್ಬರಿ 18.60 ಲಕ್ಷ ರೂಪಾಯಿ ಬಡ್ಡಿಯನ್ನು ಪಾವತಿಸಿದ್ದರು. ಆದರೂ ಆರೋಪಿಗಳು ತೃಪ್ತರಾಗದೆ ಮತ್ತಷ್ಟು …

Read More »

ಹೂಡಿಕೆ ಹೆಸರಿನಲ್ಲಿ 30.90 ಲಕ್ಷ ರೂ. ವಂಚನೆ: ಪ್ರಕರಣ ದಾಖಲು

ಮಲ್ಪೆ: ಹೂಡಿಕೆ ಹೆಸರಿನಲ್ಲಿ ಹಲವು ಮಂದಿಗೆ 30.90ಲಕ್ಷ ರೂ. ವಂಚಿಸಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪ್ರದೀಪ ಆಚಾರ್ಯ, ಜ್ಯೋತಿ ಜತ್ತನ್, ದಮಯಂತಿ ಎ., ರೋಹಿಣಿ ಎಂಬವರು ಜೂ.19ರಂದು ಕೋಡಿ ಗ್ರಾಮದ ಇಂದಿರಾ ಬಂಗೇರ ಎಂಬವರ ಮನೆಗೆ ಬಂದು ಬಿಜಿ ವೆಲ್ತ್ ಶೇರಿಂಗ್ ಎಂಬ ಶೇರ್ ಮಾರ್ಕೆಟಿಂಗ್ ವ್ಯಾವಹಾರವನ್ನು ಮಲ್ಪೆಯ ಕಾರ್ತಿಕ್ ಸಹಜ್ ಕಟ್ಟಡದಲ್ಲಿ ಕಛೇರಿ ಇದ್ದು, ನಮ್ಮ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದರೆ ಹಣ ದ್ವಿಗುಣ ವಾಗುತ್ತದೆ …

Read More »

ಎಣ್ಣೆ ಪಾರ್ಟಿ: ಸ್ಕ್ರೂ ಡ್ರೈವರ್‌ನಿಂದ ಜಜ್ಜಿ ಗಳೆಯನ ಕೊಲೆ

ವಿಜಯಪುರ: ಮನೆಯಲ್ಲೇ ಎಣ್ಣೆ ಪಾರ್ಟಿ ಮಾಡುತ್ತಿದ್ದಾಗ ಹಣ ಹಾಗೂ ಮೊಬೈಲ್ ಫೋನ್‌ಗೆ ಬೇಡಿಕೆ ಇಟ್ಟ ಗೆಳೆಯನನ್ನೇ ಸ್ಕ್ರೂ ಡ್ರೈವರ್‌ನಿಂದ ಕೊಲೆ ಮಾಡಿರುವ ಘಟನೆ ನಗರದ ಚಪ್ಪರಬಂದ್ ಗಲ್ಲಿಯಲ್ಲಿ ನಡೆದಿದೆ. ಉಮರಸಾಬ ಪಟೇಲ್ (36) ಕೊಲೆಯಾದ ವ್ಯಕ್ತಿ. ನಬೀರಸೂಲ ಅಹ್ಮದ ಹೊಟಗಿ ಕೊಲೆ ಆರೋಪಿ. ನಬೀರಸೂಲ ತನ್ನ ಮನೆಯಲ್ಲಿ ಜು.4ರ ಶನಿವಾರ ರಾತ್ರಿ ಉಮರಸಾಬ ಜೊತೆ ಮದ್ಯಪಾನ ಮಾಡಿದ್ದ. ಇದಾದ ನಂತರ ಉಮರಸಾಬ ಹಣಕ್ಕಾಗಿ ಬೇಡಿಕೆ ಇಟ್ಟು ಮೊಬೈಲ್ ಪೋನ್ ಕೊಡಿಸುವಂತೆ …

Read More »

ಪಟಗುಪ್ಪ ಸೇತುವೆ ಬಳಿ ಗೋವಿನ ಕತ್ತು ಸೀಳಿದ 4 ಯುವಕರ ಬಂಧನ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪಟಗುಪ್ಪ ಸೇತುವೆ ಸಮೀಪ ಗೋವಿನ ಕತ್ತು ಸೀಳಿ ಮಾಂಸ ಮಾರಾಟಕ್ಕೆ ಯತ್ನಿಸಿದ ಪ್ರಕರಣವನ್ನು ಪೊಲೀಸರು ಭೇದಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿ ಆಲೂರು ಗ್ರಾಮದ ನಿವಾಸಿಗಳಾಗಿದ್ದಾರೆ. ಈ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಜಾನುವಾರು ಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯ್ದೆ-2020 ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ, ವಿಶೇಷ ತನಿಖಾ …

Read More »

ಗಾಂಜಾ ಗಿಡ ಬೆಳೆದಿದ್ದವನ ಸೆರೆ

ಕೆ.ಆರ್.ನಗರ: ಮನೆಯ ಪಕ್ಕದಲ್ಲಿಯೇ ಗಾಂಜಾ ಗಿಡಗಳನ್ನು ಬೆಳೆಸಿದ್ದ ತಾಲೂಕಿನ ಹೆಬ್ಬಾಳು ಗ್ರಾಮದ ಮಹದೇವ ಎಂಬಾತನನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಬಂಧಿಸಿ, ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ. ಮೈಸೂರು ಅಬಕಾರಿ ಜಂಟಿ ಆಯುಕ್ತ, ಮೈಸೂರು ಗ್ರಾಮಾಂತರ ಅಬಕಾರಿ ಉಪ ಆಯುಕ್ತರ ಆದೇಶದಂತೆ ಹುಣಸೂರು ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ಶುಕ್ರವಾರ ಮಾಹಿತಿದಾರನು ನೀಡಿದ ಖಚಿತ ಮಾಹಿತಿಯ ಮೇರೆಗೆ ಹೆಬ್ಬಾಳು ಗ್ರಾಮದ ಮಹಾದೇವ ಅವರ ಮನೆಗೆ ದಾಳಿ ಮಾಡಲಾಗಿದೆ. ದಾಳಿಯಲ್ಲಿ ಹೆಬ್ಬಾಳು …

Read More »

ಕೊಳೆತ ಸ್ಥಿತಿಯಲ್ಲಿದ್ದ ಶವ ಪತ್ತೆ; 10-15 ದಿನ ಹಿಂದೆಯೇ ಕೊಲೆಯಾಗಿರುವ ಶಂಕೆ

ಕನಕಗಿರಿ: ಪಟ್ಟಣದ ನಿರ್ಮಾಣ ಹಂತದಲ್ಲಿನ ಮನೆಯಲ್ಲಿ ಮಹಿಳೆಯನ್ನು ಹತ್ಯೆ ಮಾಡಿ ಸಾಕ್ಷಿ ನಾಶಕ್ಕಾಗಿ ಸುಟ್ಟು ಹಾಕಿರುವ ಘಟನೆ ಮಾಸುವ ಮುನ್ನವೇ ಅದೇ ಮಾದರಿಯಲ್ಲಿ ಯುವಕನನ್ನು ಹತ್ಯೆ ಮಾಡಿ ಸುಟ್ಟು ಹಾಕಿರುವ ಘಟನೆ ತಾಲೂಕಿನ ಚರ್ಚನಗುಡ್ಡ ತಾಂಡಾದ ಗುಡ್ಡದ ಪ್ರದೇಶದಲ್ಲಿ 10,15 ದಿನಗಳ ಹಿಂದೆಯೇ ನಡೆದಿದ್ದು, ತಡವಾಗಿ (ಜು.5) ಬೆಳಕಿಗೆ ಬಂದಿದೆ. ಚರ್ಚನಗುಡ್ಡ ತಾಂಡಾದ ಸರ್ವೆ ನಂ.26ರ ಜಮೀನಿನ ಬಳಿ ಗುಡ್ಡವಿದ್ದು, ಜು.4ರ ಶನಿವಾರ ಸಂಜೆ ಜಮೀನಿಗೆ ತೆರಳಿದ್ದ ರೈತ ಶಂಕ್ರಪ್ಪನಿಗೆ …

Read More »

ಗಂಗಾವತಿಯಲ್ಲಿ ಬೆಚ್ಚಿಬೀಳಿಸಿದ ಘಟನೆ: ಯುವಕನ ಕೊಲೆ ಮಾಡಿ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಚಿರ್ಚನಗುಡ್ಡ ತಾಂಡಾ ಸಮೀಪ ಅಪರಿಚಿತ 25–30 ವರ್ಷದ ಯುವಕನನ್ನು ದುಷ್ಕರ್ಮಿಗಳು ಕೊಲೆ ಮಾಡಿ, ಶವಕ್ಕೆ ಬೆಂಕಿ ಹಚ್ಚಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೃತ್ಯವು 3–4 ದಿನಗಳ ಹಿಂದೆ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ನಿರ್ಜನ ಪ್ರದೇಶದಲ್ಲಿ ಕರಕಲಾದ ಶವದಿಂದ ದುರ್ವಾಸನೆ ಬರುತ್ತಿದ್ದುದನ್ನು ಹೊಲಕ್ಕೆ ತೆರಳಿದ್ದ ಮಹಿಳೆ ಗಮನಿಸಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಕೊಲೆ ನಡೆದಿರುವ ಶಂಕೆ …

Read More »