Breaking News

Breaking News

ಯುದ್ದ ಪೀಡಿತ ಉಕ್ರೇನ್ ನಿಂದ ಹುಬ್ಬಳ್ಳಿಗೆ ಬಂದ ವಿದ್ಯಾರ್ಥಿನಿಯರು

ಹುಬ್ಬಳ್ಳಿ: ರಷ್ಯಾ ಮತ್ತು ಉಕ್ರೇನ್​ ನಡುವಿನ ಯುದ್ಧ ಭಾರತದ ವಿದ್ಯಾರ್ಥಿಗಳ ಮೇಲೆ ಸಹ ಪರಿಣಾಮ ಬೀರಿತ್ತು. ಓದಲು ತೆರಳಿದ್ದ ವಿದ್ಯಾರ್ಥಿಗಳು ಅಲ್ಲಿ ಸಿಲುಕಿಕೊಂಡು ಪರದಾಡುತ್ತಿದ್ದರು. ಆದರೆ ಸರ್ಕಾರದ ಸಹಾಯದಿಂದ ಸದ್ಯ ಕೆಲ ವಿದ್ಯಾರ್ಥಿಗಳು ವಾಪಾಸ್​ ಆಗಿದ್ದಾರೆ. ಕರ್ನಾಟಕದ ಹಲವಾರು ವಿದ್ಯಾರ್ಥಿಗಳು ಸಹ ಅಲ್ಲಿದ್ದು, ಇದೀಗ ಇಬ್ಬರು ವಿದ್ಯಾರ್ಥಿಗಳು ವಾಪಾಸ್​ ಆಗಿದ್ದಾರೆ. ಮರಳಿ ಬಂದ ಅವರನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಸ್ವಾಗತಿಸಿದ್ದಾರೆ. ಕುಟುಂಬವನ್ನು ಸೇರುತ್ತಿರುವ ಸಂತಸದಲ್ಲಿರುವ ವಿದ್ಯಾರ್ಥಿಗು ಬಂದಿದ್ದಾರೆ. ಯುಕ್ರೇನ್ …

Read More »

ಕ್ಷುಲ್ಲಕ ಕಾರಣಕ್ಕೆ 8 ಜನರಿಂದ ಹಲ್ಲೆ : ಕಿಮ್ಸ್‌ಗೆ ಯುವಕ ದಾಖಲು

ಹುಬ್ಬಳ್ಳಿ: ಯುವಕನೊಬ್ಬನ ಮೇಲೆ ಕ್ಷುಲ್ಲಕ ಕಾರಣಕ್ಕೆ ಎಂಟು ಜನರ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಹುಬ್ಬಳ್ಳಿ ತಾಲೂಕಿನ ಬೆಳಗಲಿ ಗ್ರಾಮದಲ್ಲಿ ನಡೆದಿದೆ. ಮಹಮ್ಮದ್ ಅಲಿ ನದಾಫ್ (27) ಹಲ್ಲೆಗೆ ಒಳಗಾದ ಯುವಕನಾಗಿದ್ದು, ಈತನ ಮೇಲೆ ನೆರೆ ಹೊರೆಯ ಜನರ ಗುಂಪೊಂದು ಹಲ್ಲ ಮಾಡಿದೆ. ಬೆಳಗಲಿ ಗ್ರಾಮದಲ್ಲಿಂದು ಷರೀಫ್ ಹಾಗೂ ಗುರುಗೋವಿಂದ ಭಟ್ಟರ ಜಾತ್ರಾ ಮಹೋತ್ಸವವಿತ್ತು. ಈ ಹಿನ್ನೆಲೆಯಲ್ಲಿ ಮಹಮ್ಮದ್ ಅಲಿ ತನ್ನೂರಿನ ಬಸ್ ನಿಲ್ದಾಣದ ಬಳಿ ಬಂದಿದ್ದಾನಂತೆ. ಈ …

Read More »

ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಅಂಗನವಾಡಿ ಕಾರ್ಯಕರ್ತೆಯರು

ಬೆಂಗಳೂರು: ಸರ್ಕಾರ ಕೊಟ್ಟ ಮಾತು ತಪ್ಪಿ ನಮ್ಮ ಬೇಡಿಕೆ ಈಡೇರಿಸದಿದ್ದರೆ ಮಾ.7 ರಿಂದ ಅರ್ನಿಷ್ಟಾವ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯ ಫೆಡರೇಷನ್ ಎಚ್ಚರಿಸಿದೆ. ಶುಕ್ರವಾರದಿಂದ ಬಜೆಟ್ ಅವೇಶನ ಆರಂಭವಾಗಲಿದೆ.ಬಜೆಟ್‍ನಲ್ಲಿ ನಮ್ಮ ಬೇಡಿಕೆ ಈಡೇರಿಸಬೇಕು ಇಲ್ಲದಿದ್ದರೆ 7 ರಿಂದ ಅಹೋರಾತ್ರಿ ಧರಣೆ ನಡೆಸಲಾಗುವುದು ಎಂದು ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಜಯಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್‍ಗೆ ಪತ್ರ ಬರೆದು …

Read More »

ಉಕ್ರೇನ್‌ನ ಬಂಕರ್ ನಲ್ಲಿ‌ ಅಡಗಿಕುಳ್ಳಿತಕೊಂಡ ಉಜಿರೆ ವಿದ್ಯಾರ್ಥಿನಿ

ಬೆಳ್ತಂಗಡಿ: ಉಕ್ರೇನ್‌ನ ಕಾರ್ಕಿವ್ ನಲ್ಲಿ ಮಂಗಳವಾರ ರಷ್ಯಾ ದಾಳಿಗೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಿವಾಸಿ, ವೈದ್ಯ ವಿದ್ಯಾರ್ಥಿ ನವೀನ್ ಸಾವನ್ನಪ್ಪಿದ ಸ್ಥಳದಿಂದ ಕೇವಲ 100 ಮೀಟರ್ ಅಂತರದಲ್ಲಿ ಉಜಿರೆಯ ವೈದ್ಯ ವಿದ್ಯಾರ್ಥಿನಿ ಹೀನಾ ಫಾತಿಮಾ ಅವರೂ ಬಂಕರ್ ನಲ್ಲಿ ಅಡಗಿಕೊಂಡಿದ್ದು ಅಪಾಯದ ಸ್ಥಿತಿಯಲ್ಲಿದ್ದಾರೆ. ದ್ವಿತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿರುವ ಹೀನಾ ಅವರು ಮೃತಪಟ್ಟ ನವೀನ್ ಅವರ ಬ್ಯಾಚ್ ನಲ್ಲೇ ಕಲಿಯುತ್ತಿದ್ದಾರೆ ಎಂದು ಅವರ ಮಾವ, ಉದ್ಯಮಿ ಆಬಿದ್ ಅಲಿ ಅವರು …

Read More »

ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಮಾಜಿ ಸಿಎಂ

ಬೆಂಗಳೂರು: ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರವು ಸರ್ಕಾರಿ ನೌಕರರ ವೇತನ ಹಾಗೂ ಅನುಷ್ಠಾನಕ್ಕಾಗಿ ಅಧಿಕಾರಿಗಳ ವೇತನ ಸಮಿತಿಯನ್ನು ಬಜೆಟ್‍ನಲ್ಲಿ ಘೋಷಣೆ ಮಾಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದ್ದಾರೆ. ಈ ಸಂಬಂಧ ಸಿಎಂ ಬೊಮ್ಮಾಯಿಗೆ ಪತ್ರ ಬರೆದಿರುವ ಯಡಿಯೂರಪ್ಪ ಅವರು ಕೇಂದ್ರ ಹಾಗೂ ಇತರೆ ರಾಜ್ಯಗಳ ಮಾದರಿಯಲ್ಲಿ ಕರ್ನಾಟಕದಲ್ಲೂ ಸಹ ಸರ್ಕಾರಿ ನೌಕರರ ವೇತನವನ್ನು ಹೆಚ್ಚಳ ಮಾಡುವ ಅಗತ್ಯವಿದೆ. ಹೀಗಾಗಿ ಅದರ ಪರಾಮರ್ಶೆ ಮತ್ತು …

Read More »

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಸಿಹಿ ಸುದ್ದಿ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಸ್ಯಾಂಡಲ್ ವುಡ್​​ನ ಬಹುನಿರೀಕ್ಷಿತ ಸಿನಿಮಾ. ಸಿನಿರಸಿಕರು ಬಹುದಿನಗಳಿಂದ ಕಾಯ್ತಿರೋ ಸಿನಿಮಾ. ಸಿನಿಮಾದ ಟ್ರೈಲರ್ ರಿಲೀಸ್ ಯಾವಾಗ ಅನ್ನೋ ಕುತೂಹಲಕ್ಕೆ ಉತ್ತರ ಸಿಕ್ಕಿದೆ.. ಡೈರೆಕ್ಟರ್ ಪ್ರಶಾಂತ್ ನೀಲ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, ಇದೇ ಮಾರ್ಚ್​ 27 ರಂದು ಟ್ರೈಲರ್​ ರಿಲೀಸ್ ಆಗಲಿದೆ ಎಂದು ತಿಳಿಸಿದ್ದಾರೆ. ಬಹು ನಿರೀಕ್ಷಿತ ಕೆಜೆಎಫ್​ ಚಾಪ್ಟರ್​ 2 ಟ್ರೈಲರ್​ ರಿಲೀಸ್​ಗೆ ಚಿತ್ರ ತಂಡ ಡೇಟ್​ ಅನೌನ್ಸ್ …

Read More »

ತುಂಬಿದ ನೀರಿನ ಕಣಿವೆಗೆ ಹಾರಿ ಯುವಕ ಆತ್ಮಹತ್ಯೆ

ಹುಬ್ಬಳ್ಳಿ: ಯುವಕನೊರ್ವ ತುಂಬಿದ ನೀರಿನ ಕಣಿವೆಗೆ ಹಾರಿ ಮೃತಪಟ್ಟಿರುವ ಘಟನೆ ತಾಲೂಕಿನ ಕೊಟಗೊಂಡಹುಣಸಿ ಗ್ರಾಮದ ಹೊರವಲಯದ ಕಣಿವೆಯಲ್ಲಿ ನಡೆದಿದೆ. ಶಶಾಂಕ ಮಾಗಡಿ (21) ಮೃತ ಯುವಕ, ಈತ ಕಾಲೇಜು ಶಿಕ್ಷಣದ ಜೊತೆಗೆ ಕಂಪ್ಯೂಟರ್ ತರಭೇತಿಯನ್ನು ಪಡೆಯುತ್ತಿದ್ದನು. ಆದರೆ ಫೆ.28 ರಂದು ಈತನ ತಂದೆ ನಡೆಸುತ್ತಿದ್ದ ಕಂಪ್ಯೂಟರ್ ಅಂಗಡಿಯಿಂದ ಮನೆಗೆ ಹೋಗುವುದಾಗಿ ಹೇಳಿ ಮನೆಗೆ ಬರದೇ ಕಾಣೆಯಾಗಿದ್ದನು. ಶಶಾಂಕನಿಗಾಗಿ ಕುಟುಂಬಸ್ಥರು ಎಲ್ಲೆಡೆ ಹುಡುಕಾಟ ನಡೆಸುತ್ತಿದ್ದರು. ಇಂದು ಊರಿನ ಕಣಿವೆಯಲ್ಲಿ ಶವವೊಂದು ತೇಲಾಡುತ್ತಿರುವುದನ್ನು …

Read More »

35ಕ್ಕೂ ಹೆಚ್ಚು ಜನರ ಮೇಲೆ ಹುಚ್ಚು ನಾಯಿಗಳ ದಾಳಿ

ಮೈಸೂರು: ಹುಚ್ಚು ನಾಯಿಗಳ ದಾಳಿಗೆ 35ಕ್ಕೂ ಹೆಚ್ಚು ಜನರಿಗೆ ಗಾಯವಾದ ಘಟನೆ ಜಿಲ್ಲೆಯ ಹುಣಸೂರು ನಗರದ ಕಲ್ಪತರು ವೃತ್ತದ ಬಳಿ ನಡೆದಿದೆ. ಗಾಯಗೊಂಡವರಿಗೆ ಸದ್ಯ ಹುಣಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಶಾಲಾ ಮಕ್ಕಳು ಸೇರಿದಂತೆ 10ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಾಳುಗಳಿಗೆ ಹುಣಸೂರು ಆಸ್ಪತ್ರೆಯಲ್ಲಿ ಹೊರರೋಗಿಗಳಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಪಾದಾಚಾರಿಗಳನ್ನು ಕಚ್ಚಿದ ಹುಚ್ಚು ನಾಯಿಗಳ ಗುಂಪು, 35ಕ್ಕೂ ಅಧಿಕ ಜನರನ್ನು ಕಚ್ಚಿ ಪರಾರಿಯಾಗಿವೆ. ನಾಯಿಗಳ ಉಪಟಳದಿಂದ ಸಾರ್ವಜನಿಕರು ಬಹಳ …

Read More »

ಉಕ್ರೇನ್‌ನಲ್ಲಿ ಸಿಲುಕಿರುವ 6 ಸಾವಿರ ಜನ ಭಾರತಕ್ಕೆ ವಾಪಸ್

ಹೊಸದಿಲ್ಲಿ: ಉಕ್ರೇನ್‌ನಲ್ಲಿ ಸಿಲುಕಿರುವ 20 ಸಾವಿರ ಭಾರತೀಯರಲ್ಲಿ 6 ಸಾವಿರ ಮಂದಿಯನ್ನು ಈಗಾಗಲೇ ಭಾರತಕ್ಕೆ ಕರೆತರಲಾಗಿದೆ ಎಂದು ವಿದೇಶಾಂಗ ಇಲಾಖೆಯ ಸಹಾಯಕ ಸಚಿವ ವಿ. ಮುರಳೀಧರನ್‌ ತಿಳಿಸಿದ್ದಾರೆ. ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳು ಹಾಗೂ ಇತರ ನಾಗರಿಕರು ಸೇರಿ ಒಟ್ಟು 20,000 ಮಂದಿಯಿದ್ದಾರೆ. ಅವರಲ್ಲಿ 6,000 ಮಂದಿಯನ್ನು ವಾಪಸ್‌ ಕರೆಯಿಸಿಕೊಳ್ಳಲಾಗುತ್ತಿದೆ. ವಾಪಸ್‌ ಬಂದವರಲ್ಲಿ 4,000 ಮಂದಿಯನ್ನು ಯುದ್ಧ ಆರಂಭಕ್ಕೆ ಅಂದರೆ ಫೆ. 24ಕ್ಕಿಂತ ಮುನ್ನವೇ ಸ್ವದೇಶಕ್ಕೆ …

Read More »

ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಇಳಿಕೆ

ನವದೆಹಲಿ : ದೇಶದಲ್ಲಿ ಇಂದು ಕೊರೊನಾ ವೈರಸ್  ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಇಳಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 6,561 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ 6,561 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.ಕಳೆದ 24 ಗಂಟೆಗಳಲ್ಲಿ 142 ಜನರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಕೋವಿಡ್-19 | ಭಾರತವು 6,561 ಹೊಸ ಪ್ರಕರಣಗಳು, 142 ಸಾವುಗಳು ಮತ್ತು 14,947 ಚೇತರಿಕೆಗಳನ್ನು ವರದಿ …

Read More »