Breaking News

ಮಹಾನಗರ ಪಾಲಿಕೆ ಆಯುಕ್ತರಾಗಿ ಭರತ್.ಎಸ್ ನೇಮಕ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾಗಿ ಭರತ್ .ಎಸ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಹಿಂದೆ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಭರತ್ ಅವರನ್ನು ಪಾಲಿಕೆ ಆಯುಕ್ತರನ್ನಾಗಿ ನೇಮಕ ಮಾಡಿದೆ. ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆಗೆ ನೂತನ ಆಯುಕ್ತರನ್ನಾಗಿ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದ್ದು,

ಡಾ. ಗೋಪಾಲಕೃಷ್ಣ ವರ್ಗಾವಣೆ ನಂತರ ತೆರವು ಆಗಿದ್ದ ಪಾಲಿಕೆ ಆಯುಕ್ತರ ಸ್ಥಾನಕ್ಕೆ ಭರತ್ ಎಸ್ ಅವರನ್ನು ನೇಮಕ ಮಾಡಿದ್ದು, ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಕೂಡ ಭರತ್ ಅವರು ಸೇವೆ ಸಲ್ಲಿಸಿದ್ದಾರೆ. ಇನ್ನೂ ಬಹುತೇಕ ಅಧಿಕಾರಿಗಳ ಸ್ಥಾನಗಳ ಭರ್ತಿ ಮಾಡುವ ಬಗ್ಗೆ ಸರ್ಕಾರ ಗಮನ ಹರಿಸುವ ಮೂಲಕ ಪಾಲಿಕೆಯ ಅಧಿಕಾರಿಗಳ ಕೊರತೆ ಕಡಿಮೆ ಮಾಡಬೇಕಿದೆ.

Share News

About BigTv News

Check Also

ಹಳೇಹುಬ್ಬಳ್ಳಿಯಲ್ಲಿ ಮನೆಗಳ್ಳರಿಗೆ ಖಾಕಿ ಶಾಕ್..! ಇಬ್ಬರು ಅರೆಸ್ಟ್, ₹3.45 ಲಕ್ಷದ ಚಿನ್ನಾಭರಣ ವಶ…

ಹಳೇಹುಬ್ಬಳ್ಳಿಯಲ್ಲಿ ಮನೆಗಳ್ಳರಿಗೆ ಖಾಕಿ ಶಾಕ್..! ಇಬ್ಬರು ಆರೋಪಿಗಳ ಬಂಧನ, ₹3.45 ಲಕ್ಷ ಮೌಲ್ಯದ ಚಿನ್ನಾಭರಣ ವಶ! ಹುಬ್ಬಳ್ಳಿ: ಮನೆಗೆ ಬೀಗ …

Leave a Reply

Your email address will not be published. Required fields are marked *