ಮೈಸೂರು: ಹುಚ್ಚು ನಾಯಿಗಳ ದಾಳಿಗೆ 35ಕ್ಕೂ ಹೆಚ್ಚು ಜನರಿಗೆ ಗಾಯವಾದ ಘಟನೆ ಜಿಲ್ಲೆಯ ಹುಣಸೂರು ನಗರದ ಕಲ್ಪತರು ವೃತ್ತದ ಬಳಿ ನಡೆದಿದೆ.
ಗಾಯಗೊಂಡವರಿಗೆ ಸದ್ಯ ಹುಣಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಶಾಲಾ ಮಕ್ಕಳು ಸೇರಿದಂತೆ 10ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಾಳುಗಳಿಗೆ ಹುಣಸೂರು ಆಸ್ಪತ್ರೆಯಲ್ಲಿ ಹೊರರೋಗಿಗಳಾಗಿ ಚಿಕಿತ್ಸೆ ನೀಡಲಾಗುತ್ತಿದೆ.
ಪಾದಾಚಾರಿಗಳನ್ನು ಕಚ್ಚಿದ ಹುಚ್ಚು ನಾಯಿಗಳ ಗುಂಪು, 35ಕ್ಕೂ ಅಧಿಕ ಜನರನ್ನು ಕಚ್ಚಿ ಪರಾರಿಯಾಗಿವೆ. ನಾಯಿಗಳ ಉಪಟಳದಿಂದ ಸಾರ್ವಜನಿಕರು ಬಹಳ ತೊಂದರೆಗೆ ಒಳಗಾಗಿದ್ದಾರೆ. ಘಟನೆ ಬೆನ್ನಲ್ಲೇ ನಾಯಿಗಳ ಹಾವಳಿ ತಡೆಯುವಂತೆ ಸಾರ್ವಜನಿಕರ ಒತ್ತಾಯ ಕೇಳಿಬಂದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

