Breaking News

Breaking News

ಹಿಜಾಬ್ ಸಮವಸ್ತ್ರ ತೆಗೆಯಲು ನಿರಾಕರಿಸಿದ ಶಿಕಾರಿಪುರ ವಿದ್ಯಾರ್ಥಿನಿಯರು

ಶಿಕಾರಿಪುರ: ಹಿಜಾಬ್ ತೆಗೆದು ತರಗತಿ ಒಳಗೆ ಪ್ರವೇಶ ಮಾಡುವುದಿಲ್ಲ ಎಂದು ಪಟ್ಟಣದ ಮೌಲಾನಾ ಆಜಾದ್ ಮಾದರಿ ಶಾಲೆ ವಿದ್ಯಾರ್ಥಿನಿಯರು ಪಟ್ಟು ಹಿಡಿದರು. ಮೌಲಾಜಾ ಆಜಾದ್ ಮಾದರಿ ಶಾಲೆಯಲ್ಲಿ ಬೆಳಿಗ್ಗೆ ಪ್ರಾರ್ಥನೆ ಮುಗಿದ ನಂತರ ಮುಖ್ಯೋಪಾಧ್ಯಾಯರಾದ ಮಮತಾಸಾಲಿ ಮಾತನಾಡಿ, ‘ಹೈಕೋರ್ಟ್ ಮಧ್ಯಂತರ ಆದೇಶದ ಅನುಸಾರ ಹಿಜಾಬ್ ತೆಗೆದು ಸಮವಸ್ತ್ರದಲ್ಲಿ ತರಗತಿ ಒಳಗೆ ಪ್ರವೇಶ ಮಾಡಬೇಕು’ ಎಂದು ಸೂಚಿಸಿದರು. ಆಗ ವಿದ್ಯಾರ್ಥಿನಿಯರು, ‘ಹಿಜಾಬ್ ತೆಗೆಯುವುದಿಲ್ಲ’ ಎಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಹಿಜಾಬ್ …

Read More »

ಚರಂಡಿ ವಿಚಾರಕ್ಕೆ ಬಿತ್ತು ಯೋಧನ ತಾಯಿಯ ಹೆಣ

ರಾಯಚೂರು : ಚರಂಡಿ ವಿಚಾರಕ್ಕೆ ಯೋಧ ಹಾಗೂ ಗ್ರಾಮದ ಮುಖಂಡರ ನಡುವೆ ಗಲಾಟೆ ಸಂಭವಿಸಿ, ಯೋಧನ ತಾಯಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ನಿಲೋಗಲ್ ಗ್ರಾಮದಲ್ಲಿ ನಡೆದಿದೆ. ಯೋಧ ಅಮರೇಶ ಹಾಗೂ ಗ್ರಾಮದ ಮುಖಂಡ ಶರಣಪ್ಪಗೌಡ ಅವರ ನಡುವೆ ಗಲಾಟೆಯಾಗಿದೆ. ಶರಣಪ್ಪಗೌಡ ಅವರ ಗುಂಪಿನಿಂದ ಅಮರೇಶ ಅವರ ತಾಯಿ ವೀರಮ್ಮ ಲಿಂಗಪ್ಪ(75) ಎನ್ನುವವರ ಮೇಲೆ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.ವಿಷಯ ತಿಳಿದು ಸ್ಥಳಕ್ಕೆ ಹಟ್ಟಿ ಪೊಲೀಸರು …

Read More »

ಕಳೆದ 24 ಗಂಟೆಯಲ್ಲಿ 27,409 ಕೊರೋನಾ ದೃಢ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ವೇಗವಾಗಿ ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ 27,409 ಜನರಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆ ಕೂಡ ಇಳಿಕೆಯಾಗಿದ್ದು, 24 ಗಂಟೆಯಲ್ಲಿ 347 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಈವರೆಗೆ ಕೋವಿಡ್ ಗೆ ಬಲಿಯಾದವರ ಸಂಖ್ಯೆ 5,09,358ಕ್ಕೆ ಏರಿಕೆಯಾಗಿದೆ. ಇನ್ನು ದೇಶದಲ್ಲಿ 4,23,127 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 24 ಗಂಟೆಯಲ್ಲಿ 82,817 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಈವರೆಗೆ …

Read More »

ಕಾಂಗ್ರೆಸ್‌ ಶಕ್ತಿ ದೇಶದ ಶಕ್ತಿ : ಡಿಕೆಶಿ

ಬೆಂಗಳೂರು: ಕಾಂಗ್ರೆಸ್‌ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್‌ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸಮಾಜದ ಎಲ್ಲ ವರ್ಗದವರು ಅಧಿಕಾರಕ್ಕೆ ಬಂದಂತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್‌ ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಬಿಜೆಪಿಯವರು ಗೋಹತ್ಯೆ, ಮತಾಂತರ, ಕೇಸರಿ ಶಾಲು ವಿಚಾರವಾಗಿ ಮಾತ್ರ ಮಾತನಾಡುತ್ತಾರೆಯೇ ಹೊರತು ಅವರ ಪಕ್ಷದ ಸಾಧನೆ ಬಗ್ಗೆಯಲ್ಲ ಎಂದು ಹೇಳಿದರು.

Read More »

ಪ್ರತಿಯೊಬ್ಬ ವ್ಯಕ್ತಿಗೂ ಅವರು ಬಯಸಿದ್ದನ್ನು ಧರಿಸುವ ಹಕ್ಕಿದೆ : ನಿತೀಶ್ ಕುಮಾರ್

ಪಟ್ನಾ: ‘ಪ್ರತಿ ಧರ್ಮವನ್ನು ಮತ್ತು ಅವರ ಆರಾಧನೆಯ ಆಚರಣೆಗಳನ್ನು ಗೌರವಿಸುತ್ತೇನೆ’ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೋಮವಾರ ಹೇಳಿದ್ದಾರೆ. ಬಿಹಾರದಲ್ಲಿ ಬಿಜೆಪಿ ಮೈತ್ರಿಯೊಂದಿಗೆ ಸರ್ಕಾರ ರಚಿಸಿರುವ ಜೆಡಿಯು ವರಿಷ್ಠ, ಮುಖ್ಯಮಂತ್ರಿ ನಿತೀಶ್‌ ಅವರ ಈ ಹೇಳಿಕೆಯು ಕರ್ನಾಟಕದ ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಪ್ರಾಮುಖ್ಯತೆ ಪಡೆದಿದೆ.‘ಯಾರಾದರೂ ತಲೆಯನ್ನು ಬಟ್ಟೆಯಿಂದ ಮುಚ್ಚಿಕೊಂಡರೆ, ಹಣೆಯ ಮೇಲೆ ಶ್ರೀಗಂಧದ ಬೊಟ್ಟು ಇಟ್ಟುಕೊಂಡರೆ ಅದು ವಿವಾದಾತ್ಮಕ ವಿಷಯವಾಗುವುದಿಲ್ಲ ಎಂದು ನಾನು ನಂಬುತ್ತೇನೆ. ಪ್ರತಿಯೊಬ್ಬ ವ್ಯಕ್ತಿಗೂ …

Read More »

ಹಿರಿಯ ನಟಿ ಭಾರ್ಗವಿ ನಾರಾಯಣ್ ವಿಧಿವಶ

ಚಂದನವನದ ಹಿರಿಯ ನಟಿ ಭಾರ್ಗವಿ ನಾರಾಯಣ್ವಿ ವಿಧಿವಶರಾಗಿದ್ದಾರೆ ಎಂದು ತಿಳಿದು ಬಂದಿದೆ. ಭಾರ್ಗವಿ ನಾರಾಯಣ್ ಅವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಭಾರತೀಯ ಚಲನಚಿತ್ರದ ನಟಿ ಮತ್ತು ಕರ್ನಾಟಕದ, ರಂಗಭೂಮಿಯ ಕಲಾವಿದೆ. ಭಾರ್ಗವಿ ನಾರಾಯಣ್ ಅವರ ಕೆಲವು ಪ್ರಸಿದ್ಧ ಚಿತ್ರಗಳು ನಟಿಸಿದ್ದಾರೆ. ಎರಡು ಕನಸು, ಪಲ್ಲವಿ ಅನುಪಲ್ಲವಿ, ಹಾಗೂ ಬಾ ನಲ್ಲೆ ಮಧುಚಂದ್ರಕ್ಕೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಭಾರ್ಗವಿ ನಾರಾಯಣ್ ಅವರು ಇಪ್ಪತ್ತು ಎರಡು ಚಿತ್ರಗಳು ಹಾಗೂ ದೂರದರ್ಶನ ಸರಣಿಯ ಮಂಥನಾ …

Read More »

ವಂಚನೆ ಪ್ರಕರಣ : ಮಾಜಿ ಕಾರ್ಪೊರೇಟರ್ ದೇವದಾಸ್ ಬಂಧನ

ಕೋಲಾರ: ವಂಚನೆ ಪ್ರಕರಣದಲ್ಲಿ ಕೋಲಾರ ಜಿಲ್ಲೆಯ ಬಿಟಿಎಂ ಲೇಔಟ್ ಮಾಜಿ ಕಾರ್ಪೊರೇಟರ್​ ಅನ್ನು ಬಂಧಿಸಲಾಗಿದೆ.ಮದನಪಲ್ಲಿ ಪೊಲೀಸರು ಮಾಜಿ ಕಾರ್ಪೊರೇಟರ್ ದೇವದಾಸ್ ಅವನ್ನು ಬಂಧಿಸಲಾಗಿದೆ. ಸರ್ಕಾರಿ ಜಮೀನನ್ನು ನಿಮ್ಮ ಹೆಸರಿಗೆ ಮಾಡಿಸಿಕೊಡುತ್ತೇನೆ ಎಂದು ಮದನಪಲ್ಲಿ ಶಾಸಕ ಮಹಮದ್ ನವಾಜ್ ಬಾಷರಿಂದ ಹಣ ಪಡೆದಿದ್ದ ದೇವದಾಸ್ ಅವರ ವಿರುದ್ಧ ಕೇಸ್​ ದಾಖಲಾಗಿದೆ. ಒಂದು ಕೋಟಿ ರೂಪಾಯಿ ಹಣ ಪಡೆದಿರುವ ಆರೋಪ ಎದುರಿಸುತ್ತಿರುವ ದೇವದಾಸ್, ಹಣ ಪಡೆದ ಬಳಿಕ ಯಾವುದೇ ಜಮೀನು ಕೊಡಿಸಿರಲಿಲ್ಲ. ಹೀಗಾಗಿ …

Read More »

ಸ್ಯಾಂಡಲ್‌ವುಡ್‌ನ ಹಿರಿಯ ನಟ ಕಲಾತಪಸ್ವಿ ರಾಜೇಶ್ ಆಸ್ಪತ್ರೆಗೆ ದಾಖಲು

ಬೆಂಗಳೂರು: ಕನ್ನಡ ಸಿನಿಮಾ ರಂಗಕ್ಕೆ ಮತ್ತೊಂದು ಆತಂಕ ಶುರುವಾಗಿದೆ. ಸ್ಯಾಂಡಲ್‌ವುಡ್‌ನ ಹಿರಿಯ ನಟ , ಕಲಾತಪಸ್ವಿ ರಾಜೇಶ್ ಅಸ್ವಸ್ಥಗೊಂಡಿದ್ದಾರೆ. 82 ವರ್ಷದ ರಾಜೇಶ್, ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇದೀಗ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಜೇಶ್ ಆಸ್ಪತ್ರೆ ಸೇರಿರುವ ವಿಚಾರ ತಿಳಿದು ಕನ್ನಡ ಚಿತ್ರರಂಗ ಕಂಗೆಟ್ಟಿದೆ. ಹಿರಿ-ಕಿರಿಯ ನಟರು, ನಟಿಯರು, ಕಲಾವಿದರು, ತಂತ್ರಜ್ಞರು, ನಿರ್ದೇಶಕ, ನಿರ್ಮಾಪಕರು ಕಂಗಾಲಾಗಿದ್ದಾರೆ. ಅಭಿಮಾನಿಗಳು ಕಲಾತಪಸ್ವಿ ಆರೋಗ್ಯವಾಗಿ ವಾಪಸ್ ಬರಲಿ, ಇನ್ನಷ್ಟು ಕಾಲ ನಮ್ಮ ಜೊತೆಗೆ ಇರಲಿ …

Read More »

ಹಿಜಾಬ್ ವಿವಾದ : ವಿಚಾರಣೆ ಮುಂದೂಡಿದ ಹೈಕೋರ್ಟ್

ಬೆಂಗಳೂರು: ರಾಜ್ಯದ ಶಾಲಾ ಕಾಲೇಜುಗಳ ಹಿಜಾಬ್- ಕೇಸರಿ ಶಾಲು ಪ್ರಕರಣದ ಕುರಿತು ಸೋಮವಾರ ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ ನ ತ್ರಿಸದಸ್ಯ ವಿಸ್ತ್ರತ ಪೀಠ ವಿಚಾರಣೆಯನ್ನು ಮಂಗಳವಾರ ಮಧಾಹ್ನ 2.30 ಕ್ಕೆ ಮುಂದೂಡಿದೆ. ಮುಖ್ಯ ನ್ಯಾ.ರಿತುರಾಜ್ ಅವಸ್ಥಿ ನ್ಯಾ.ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾ.ಜೈಬುನ್ನಿಸಾ ಎಂ.ಖಾಜಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಇಂದು ಫೆ 14 ಮಧ್ಯಾಹ್ನ 2.30ಕ್ಕೆ ಆರಂಭಿಸಿ ಸುದೀರ್ಘ ವಾದವನ್ನು ಆಲಿಸಿತು. ಆರ್ಟಿಕಲ್ 25 ಪ್ರಕಾರ ಶಿರವಸ್ತ್ರ ಧರಿಸುವುದು ತಪ್ಪಲ್ಲ …

Read More »

ಇಂದಿನಿಂದ 10 ದಿನಗಳ ಕಾಲ ವಿಧಾನ ಮಂಡಲದ ಅಧಿವೇಶ ಬಜೆಟ್ ಪ್ರಾರಂಭ

ಬೆಂಗಳೂರು: ಸೋಮವಾರದ ಇಂದಿನಿಂದ 10 ದಿನಗಳ ಕಾಲ ವಿಧಾನ ಮಂಡಲದ ಅಧಿವೇಶ ಬಜೆಟ್ ನಡೆಯಲಿದೆ. ಮೊದಲ ದಿನದ ಇಂದು ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಈ ಬಾರಿ 2026 ಪ್ರಶ್ನೆಗಳು, ಸರ್ಕಾರದಿಂದ ಎರಡು ವಿಧೇಯಕಗಳು ಮಂಡನೆಯಾಗಲಿವೆ. ಈ ಕುರಿತು ಮಾಹಿತಿ ನೀಡಿದಂತ ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು, ಸಂಪ್ರದಾಯದಂತೆ ವರ್ಷದ ಮೊದಲ ಅಧಿವೇಶನದ ವೇಳೆ ವಿಧಾನ ಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲರು ಇಂದು ಭಾಷಣ …

Read More »