ರಾಯಚೂರು : ಚರಂಡಿ ವಿಚಾರಕ್ಕೆ ಯೋಧ ಹಾಗೂ ಗ್ರಾಮದ ಮುಖಂಡರ ನಡುವೆ ಗಲಾಟೆ ಸಂಭವಿಸಿ, ಯೋಧನ ತಾಯಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ನಿಲೋಗಲ್ ಗ್ರಾಮದಲ್ಲಿ ನಡೆದಿದೆ.
ಯೋಧ ಅಮರೇಶ ಹಾಗೂ ಗ್ರಾಮದ ಮುಖಂಡ ಶರಣಪ್ಪಗೌಡ ಅವರ ನಡುವೆ ಗಲಾಟೆಯಾಗಿದೆ. ಶರಣಪ್ಪಗೌಡ ಅವರ ಗುಂಪಿನಿಂದ ಅಮರೇಶ ಅವರ ತಾಯಿ ವೀರಮ್ಮ ಲಿಂಗಪ್ಪ(75) ಎನ್ನುವವರ ಮೇಲೆ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.ವಿಷಯ ತಿಳಿದು ಸ್ಥಳಕ್ಕೆ ಹಟ್ಟಿ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ನಿಭಾಯಿಸಿದ್ದಾರೆ. ಸದ್ಯ ನಿಲೋಗಲ್ ಗ್ರಾಮದಲ್ಲಿ ಬಿಗುವಿನ ವಾತಾವರಣವಿದೆ. ಶರಣಪ್ಪಗೌಡ ಬಿಜೆಪಿ ಮುಖಂಡನಾಗಿದ್ದಾನೆ. ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
bigtvnews | Hubli Dharwad News | Kannada News | Karnataka News Hubli News | News In Hubli | Local news

