Breaking News

Breaking News

ಹಿಜಾಬ್‌ ವಿವಾದ ಸೃಷ್ಟಿಯಿಂದ ದೇಶಕ್ಕೆ ಅವಮಾನ : ಡಿಕೆಶಿ

ಮಂಗಳೂರು : ಹಿಜಾಬ್‌ ವಿವಾದ ಸೃಷ್ಟಿಯಿಂದ ದೇಶಕ್ಕೆ ಅವಮಾನವಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವ ಕುಮಾರ್‌ ಹೇಳಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,ಪ್ರಸ್ತುತ ಜನರಿಗೆ ಬೇಕಾಗಿರುವುದು ಆರ್ಥಿಕ ಭದ್ರತೆ, ಉದ್ಯೋಗ, ನೆಮ್ಮದಿಯ ಬದುಕು. ಜನತೆಯ ಈ ಆಶೋತ್ತರಗಳನ್ನು ಈಡೇರಿಸುವುದೇ ಕಾಂಗ್ರೆಸ್‌ನ ಗುರಿ. ನಾವು ಆದ್ಯತೆ ನೀಡುವುದು ಇದಕ್ಕೆ. ಆದರೆ ಬಿಜೆಪಿಗೆ ಈ ಆದ್ಯತೆಗಳು ಬೇಕಾಗಿಲ್ಲ . ಅವರ ಗಮನ ಇರುವುದು ಮತೀಯ ಭಾವನೆಗಳನ್ನು ಕೆರಳಿಸಿ ಅರಾಜಕತೆ …

Read More »

ರಾಜ್ಯದಲ್ಲಿ ಕೊರೋನಾ ಪಾಸಿಟಿವಿಟಿ ದರ ಶೇ.6.19ಕ್ಕೆ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸೋಮವಾರ 6,151 ಹೊಸ ಪ್ರಕರಣ ದಾಖಲಾಗಿದ್ದು, 16,802 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸೋಂಕಿತರ ಪಾಸಿಟಿವಿಟಿ ದರ ಶೇ.6.19ಕ್ಕೆ ಹಾಗೂ ಸಕ್ರಿಯ ಪ್ರಕರಣ 87080 ಕ್ಕೆ ಇಳಿಕೆಯಾಗಿದೆ. ಸೋಮವಾರ 99,254 ಸ್ಲ್ಯಾಬ್ ಗಳನ್ನು ಪರೀಕ್ಷೆ ಒಳಪಡಿಸಲಾಗಿತ್ತು.ಬೆಂಗಳೂರು ನಗರ 2718, ಬೆಳಗಾವಿ 321, ಮೈಸೂರು 285, ಹಾಸನ 219, ತುಮಕೂರು 210, ಕೊಡಗು 195,ಮಂಡ್ಯ 182, ಶಿವಮೊಗ್ಗ 177, ಧಾರವಾಡ 149, ಚಿತ್ರದುರ್ಗ 161, ಬಳ್ಳಾರಿ 154, ಕೊಪ್ಪಳ 133, …

Read More »

ಕರ್ನಾಟಕದಲ್ಲಿ 6151 ಜನರಲ್ಲಿ ಕೊರೊನಾವೈರಸ್ ದೃಢ

ಬೆಂಗಳೂರು: ಕರ್ನಾಟಕದಲ್ಲಿ ಸೋಮವಾರ ಒಟ್ಟು 6151 ಜನರಲ್ಲಿ ಕೊರೊನಾವೈರಸ್ ಸೋಂಕು ದೃಢಪಟ್ಟಿದೆ. ಕೊವಿಡ್​ನಿಂದ ಒಟ್ಟು 49 ಜನರು ಸಾವನಪ್ಪಿದ್ದಾರೆ. ಒಟ್ಟು 16,802 ಜನರು ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್​ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ಒಟ್ಟು 87,080 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ಪ್ರಮಾಣ ಶೇ 6.19, ಸೋಂಕಿತರ ಸಾವಿನ ಸರಾಸರಿ ಶೇ 0.79 ಇದೆ. ರಾಜ್ಯದಲ್ಲಿ ಈವರೆಗೆ ಒಟ್ಟು 39,02,309 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 37,75,799 ಜನರು ಚೇತರಿಸಿಕೊಂಡಿದ್ದಾರೆ. ಈವರೆಗೆ ಒಟ್ಟು …

Read More »

ಬನ್ನೂರು ಪುಟಾಣಿ ವೈಭವ್‌ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ಆಯ್ಕೆ

ಬನ್ನೂರು: ವಿವಿಧ ಪ್ರಾಣಿ, ಪಕ್ಷಿ, ಹಣ್ಣು, ವಸ್ತುಗಳು, ವಾಹನಗಳು ಹಾಗೂ ದೇಹದ ವಿವಿಧ ಭಾಗಗಳನ್ನು ಗುರುತಿಸುವ ಮೂಲಕ ಪಟ್ಟಣದ ನಿವಾಸಿ ಗಿರೀಶ್‌ ಹಾಗೂ ಗಗನ ದಂಪತಿ ಪುತ್ರ ವೈಭವ್‌ (2) ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ಆಯ್ಕೆಯಾಗಿದ್ದಾನೆ. ಈ ಪೋರ ವರ್ಣಮಾಲೆ ಹಾಗೂ ವಿವಿಧ ಯೋಗದ ಭಂಗಿಗಳನ್ನೂ ಗುರುತಿಸುತ್ತಾನೆ. ಬಾಲಕನ ಸ್ಮರಣಶಕ್ತಿ ಹೆಚ್ಚಾಗಿದೆ. ಈತನ ಪ್ರತಿಭೆಯನ್ನು ಕಂಡ ಪೋಷಕರು ವಿಡಿಯೊ ಮಾಡಿ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ಸಲ್ಲಿಸಿದ್ದರು. ಈಗ …

Read More »

ಹಿಜಾಜ್ ವಿವಾದ ಕುರಿತು ಹೈಕೋರ್ಟ್ ನಲ್ಲಿಯಿಂದು ವಿಚಾರಣೆ

ನವದೆಹಲಿ: ರಾಜ್ಯದ ಶಾಲಾ, ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಹೈಕೋರ್ಟ್ ನಲ್ಲಿ ಮಹತ್ವದ ವಿಚಾರಣೆ ನಡೆಯಲಿದೆ. ಉಡುಪಿಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ಪಾಠ ಕೇಳಲು ನಿರ್ಬಂಧ ವಿಧಿಸಿರುವುದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಿದ್ದು, ಇದರೊಂದಿಗೆ ಸಲ್ಲಿಕೆಯಾಗಿರುವ ನಾಲ್ಕು ರಿಟ್ ಅರ್ಜಿಗಳ ವಿಚಾರಣೆ ಇಂದು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಏಕಸದಸ್ಯಪೀಠದಲ್ಲಿ ನಡೆಯಲಿದೆ. ರಾಜ್ಯ ಸರ್ಕಾರ …

Read More »

ಪವರ್ ಸ್ಟಾರ್ ಅಭಿಮಾನಿಗಳಿಂದ ವಿಭಿನ್ನ ಮದುವೆ

ಗಂಗಾವತಿ: ತಾಲ್ಲೂಕಿನ ಕಡೆಬಾಗಿಲು ಗ್ರಾಮದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿ ಯುವಕ ಯುವತಿ ಅಪ್ಪು ಫೋಟೊ ಎದುರಿಗೆ ಸತಿಪತಿಗಳಾಗಿ ಇಂದು ವಿವಾಹವಾಗಿ ಅಭಿಮಾನ ಮೆರೆದಿದ್ದಾರೆ. ಸೋಮವಾರ ಕಡೆಬಾಗಿಲು ಗ್ರಾಮದ ವಾಲ್ಮೀಕಿ ಬಂಧುಗಳ ಮದುವೆ ಸಮಾರಂಭದಲ್ಲಿ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳಾಗಿರುವ ನಿಂಗರಾಜ್ ಮತ್ತು ಲಕ್ಷ್ಮಿ ಇವರು ಪುನೀತ್ ರಾಜ್ ಕುಮಾರ್ ರವರ ಭಾವಚಿತ್ರವನ್ನ ವೇದಿಕೆ ಮೇಲಿರಿಸಿ ಸತಿಪತಿಗಳಾದರು.

Read More »

ಪ್ರಭಾಕರ ಸದಾಶಿವರಾವ ಕುಲಕರ್ಣಿ ನಿಧನ

ಬೆಳಗಾವಿ: ನಗರದ ನಾನಾವಾಡಿ ನಿವಾಸಿ, ಎಂ.ವಿ. ಹೇರವಾಡ್ಕರ್ ಶಾಲೆಯ ನಿವೃತ್ತ ಪ್ರಾಂಶುಪಾಲ ಪ್ರಭಾಕರ ಸದಾಶಿವರಾವ ಕುಲಕರ್ಣಿ (97) ಸೋಮವಾರ ನಿಧನರಾದರು.ಅವರಿಗೆ ಪುತ್ರ ಮತ್ತು ಪುತ್ರಿ ಇದ್ದಾರೆ. ಅವರ ಇಚ್ಛೆಯಂತೆ ಕುಟುಂಬದವರು, ಇಲ್ಲಿನ ಜೆಂಟ್ಸ್ ನೇತ್ರ ಪ್ರತಿಷ್ಠಾನ ಹಾಗೂ ಬೈಲಹೊಂಗಲದ ಡಾ.ರಾಮಣ್ಣವರ ಚಾರಿಟಬಲ್ ಟ್ರಸ್ಟ್‌ ವತಿಯಿಂದ ಹುಬ್ಬಳ್ಳಿಯ ಗಬ್ಬೂರ ಕ್ರಾಸ್‌ನ ಕೆಎಲ್‌ಇ ಸಂಸ್ಥೆಯ ಗಂಗಾಧರ ಸ್ವಮೀಜಿ ಮೂರು ಸಾವಿರ ಮಠ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕಾಗಿ ದೇಹವನ್ನು ದಾನವಾಗಿ ನೀಡಿದರು.

Read More »

ಹಿಜಾಬ್ ಧರಿಸಲು ನಿರಾಕರಣೆ ಖಂಡಿಸಿ ಜಿಲ್ಲಾ ಮಹಿಳಾ ಒಕ್ಕೂಟ ಪ್ರತಿಭಟನೆ

ಚಾಮರಾಜನಗರ: ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನಿರಾಕರಿಸುವುದನ್ನು ಖಂಡಿಸಿ ಜಿಲ್ಲಾ ಮಹಿಳಾ ಒಕ್ಕೂಟದ ವತಿಯಿಂದ ಮುಸ್ಲಿಂ ವಿದ್ಯಾರ್ಥಿನಿಯರು, ಮಹಿಳೆಯರು ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಮಹಿಳೆಯರು ಹಾಗೂ ವಿದ್ಯಾರ್ಥಿಗಳು ನಗರದ ಡೀವಿಯೇಷನ್‌ ರಸ್ತೆಯ ಲಾರಿ ನಿಲ್ದಾಣದಿಂದ ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆಯ ಮೂಲಕ ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆ ನಡೆಸಿ, ಅಲ್ಲಿ ಪ್ರತಿಭಟನೆ ನಡೆಸಿದರು. ಮೆರವಣಿಗೆಯುದ್ದಕ್ಕೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸರ್ಕಾರವು …

Read More »

ಪತ್ರಕರ್ತ, ಲೇಖಕ ಭೀಮಸೇನ ತೊರಗಲ್ಲ ನಿಧನ

ಬೆಳಗಾವಿ: ಪತ್ರಕರ್ತ, ಲೇಖಕ ಭೀಮಸೇನ ತೊರಗಲ್ಲ ಅವರು ವಯೋಸಹಜ ಅನಾರೋಗ್ಯದಿಂದ ಸೋಮವಾರ ನಿಧನರಾದರು. ಭೀಮಸೇನ ತೊರಗಲ್ಲಗೆ 82 ವರ್ಷ ವಯಸ್ಸಾಗಿತ್ತು. ಇವರಿಗೆ ಪತ್ನಿ, ಪುತ್ರಿ, ಪುತ್ರ ಇದ್ದಾರೆ. ಅವರ ಇಚ್ಛೆಯಂತೆ ಯಾವುದೇ ವಿಧಿ-ವಿಧಾನಗಳಿಲ್ಲದೆ ಶಹಪುರದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು.

Read More »

ಚೆನ್ನವೀರ ಕಣವಿಯವರ ಆರೋಗ್ಯದ ಸ್ಥಿತಿ ವಿಚಾರಿಸಿದ ಸಿಎಂ

ನಾಡೋಜ ಚೆನ್ನವೀರ ಕಣವಿ ಯವರ ಆರೋಗ್ಯದ ಸ್ಥಿತಿ ಗಂಭೀರವಾಗದೆ . 93 ವರ್ಷದ ನಾಡೋಜ ಚೆನ್ನವೀರ ಕಣವಿ ಕಳೆದ 3-4 ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಧಾರವಾಡದ SDM ಆಸ್ಪತ್ರೆಯ ವೆಂಟಿಲೇಟರ್ನಲ್ಲಿ ನಾಡಿನ ಹಿರಿಯ ಸಾಹಿತಿ, ಕವಿ, ನಾಡೋಜ ಅವರಿಗೆ ಈಗ ಮತ್ತೆ ಆರೋಗ್ಯ ಕ್ಷೀಣಿಸುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಚೆನ್ನವೀರ ಕಣವಿ ಆರೋಗ್ಯ ವಿಚಾರಿಸಿ ಕಣವಿ ಅವರು ಶೀಘ್ರವಾಗಿ ಗುಣಮುಖರಾಗಲೆಂದು ಹಾರೈಸುತ್ತೇನೆ ಎಂದು ಸಿಎಂ ಬೊಮ್ಮಾಯಿ ಟ್ವೀಟ್ ಕೂಡ …

Read More »