Breaking News

Breaking News

ದೇವೇಗೌಡ ಅವರಿಗೆ ಕೊರೊನಾ ಪಾಸಿಟಿವ್

ಬೆಂಗಳೂರು : ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಹೆಚ್.ಡಿ.ದೇವೇಗೌಡ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಅವರು ನಗರದ ಮಣಿಪಾಲ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗೌಡರು ನಿನ್ನೆ ಪರೀಕ್ಷೆಗೆ ಒಳಪಟ್ಟಿದ್ದು, ಕೊರೊನಾ ಸೋಂಕು ದೃಢಪಟ್ಟಿದೆ. ಪಾಸಿಟಿವ್ ಬಂದಿದ್ದರೂ ದೇವೇಗೌಡರು ಆರೋಗ್ಯವಾಗಿದ್ದು, ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

Read More »

ಕೊರೋನಾ ಲಕ್ಷಣ ಹೊಂದಿರುವವರಿಗೆ ಮಾತ್ರ ಟೆಸ್ಟ್ : ಸುಧಾಕರ್

ಬೆಂಗಳೂರು:  ರಾಜ್ಯದಲ್ಲಿ ICMR ಮಾರ್ಗಸೂಚಿಯಂತೆ ಕೊರೊನಾ ಲಕ್ಷಣ ಹೊಂದಿರುವವರಿಗೆ ಮಾತ್ರ ಟೆಸ್ಟ್  ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್  ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಆಗಿರುವುದು ಸಮಾಧಾನ ತಂದಿದೆ. ವೈಜ್ಞಾನಿಕವಾಗಿ ಪರಾಮರ್ಶೆ ಮಾಡಿ, ತಜ್ಞರ ಅಭಿಪ್ರಾಯ ಪಡೆದು ಸರ್ಕಾರ ವೀಕೆಂಡ್ ಕರ್ಫ್ಯೂ ರದ್ದು ಮಾಡಿದೆ ಎಂದು ಹೇಳಿದರು.

Read More »

ಧಾರವಾಡದಲ್ಲಿ ಸೋಂಕಿತರ ಮನೆ ಬಾಗಿಲಿಗೆ ಔಷಧಿ ಕಿಟ್ ವಿತರಣೆ

ಧಾರವಾಡ: ಕೋವಿಡ್-19  3ನೇ ಅಲೆ ಆರಂಭವಾಗಿದ್ದು, ಸೋಂಕಿನ ತೀವ್ರತೆ ಕಡಿಮೆ ಇರುವುದರಿಂದ 94% ರಿಂದ 95% ಜನ ಸೋಂಕಿತರು ಹೋಮ್ ಐಸೋಲೇಷನ್ ಆಗುತ್ತಿದ್ದಾರೆ.ಹೋಮ್ ಐಸೋಲೇಷನ್‍ದಲ್ಲಿರುವ ಸೋಂಕಿತರು ಮಾರ್ಗಸೂಚಿಗಳ ಪಾಲನೆಯೊಂದಿಗೆ ಆರೋಗ್ಯವಂತರಾಗಿ, ರೋಗದಿಂದ ಗುಣಮುಖರಾಗಲು ಧಾರವಾಡ ಜಿಲ್ಲಾಡಳಿತ ಮತ್ತು ಮಹಾನಗರಪಾಲಿಕೆ ಹೊಸ ಉಪಾಯ ಹುಡುಕಿ, ಅನುಷ್ಠಾನಗೊಳಿಸಿವೆ. ಅದುವೇ ‘ಸೋಂಕಿತರ ಮನೆ ಬಾಗಿಲಿಗೆ ಔಷಧಿ ಕಿಟ್’ ವಿತರಣೆ. ಕಳೆದ ಮೂರ್ನಾಲ್ಕು ದಿನಗಳಿಂದ ಇದು ಉತ್ತಮ ರೀತಿಯಿಂದ ಅನುಷ್ಠಾನವಾಗುತ್ತಿದೆ.

Read More »
Featured Video Play Icon

ಕೃಷಿಗೆ ಚಟುವಟಿಕೆಗೆ ಭಾರತೀಯ ರೈಲ್ವೆ ಉತ್ತೇಜನ: ಭತ್ತದ ಕೊಯ್ಲು ಯಂತ್ರದ ರವಾನೆ…!

ಹುಬ್ಬಳ್ಳಿ: ಗಂಗಾವತಿಯ ರೈಲು ನಿಲ್ದಾಣದಲ್ಲಿ ನೂರಾರು ಭತ್ತ ಕೊಯ್ಲು ಯಂತ್ರಗಳನ್ನು ಸಾಲಾಗಿ ನಿಲ್ಲಿಸಿ ರೈಲ್ವೆ ಬೋಗಿಗಳಿಗೆ ಹತ್ತಿಸಲಾಯಿತು. ಗಂಗಾವತಿ ಭಾಗಕ್ಕೆ ರೈಲು ಸೇವೆ ಸಿಕ್ಕ ಬಳಿಕ ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕೊಯ್ಲು ಯಂತ್ರಗಳನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಾಗಿಸಲಾಗುತ್ತಿದೆ.. ಭತ್ತದ ಕಣಜ ಎಂದು ಹೆಸರು ಪಡೆದಿರುವ ಗಂಗಾವತಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಭತ್ತದ ಕೊಯ್ಲು ಬಹುತೇಕ ಪೂರ್ಣಗೊಂಡಿದೆ. ಇದರಿಂದ ನೂರಾರು ಭತ್ತದ ಕೊಯ್ಲು ಯಂತ್ರಗಳು …

Read More »

ಎಸ್‌ಎಸ್‌ಎಲ್’ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಕಡ್ಡಾಯ : ನಾಗೇಶ್

ಬೆಂಗಳೂರು: ಕಳೆದ ವರ್ಷದಂತೆ ಈ ವರ್ಷ ಕೊರೋನಾ ಪಾಸ್ ಇರುವುದಿಲ್ಲ. ಎಲ್ಲಾ ವಿದ್ಯಾರ್ಥಿಗಳು ಎಸ್‌ಎಸ್‌ಎಲ್’ಸಿ ಪರೀಕ್ಷೆಗೆ ಹಾಜರಾಗುತ್ತಾರೆಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಶುಕ್ರವಾರ ಹೇಳಿದ್ದಾರೆ. ಕಳೆದ ವರ್ಷ ಕೋವಿಡ್ ಸಾಂಕ್ರಾಮಿಕ ರೋಗದಿಂದ ವಿದ್ಯಾರ್ಥಿಗಳು ಪರೀಕ್ಷೆಯಿಲ್ಲದೆ ಉತ್ತೀರ್ಣರಾದ ಬಗ್ಗೆ ಉಲ್ಲೇಖಿಸಿ ಪ್ರತಿಕ್ರಿಯೆ ನೀಡಿರುವ ಸಚಿವರು, 2020-21 ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಮತ್ತು ಶಾಲೆಗಳು ತೀವ್ರವಾದ ಕೋವಿಡ್-ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ ಕಳೆದ ವರ್ಷ ಸಮಸ್ಯೆ ವಿಭಿನ್ನವಾಗಿತ್ತು.

Read More »

ಗ್ರಂಥ ಪ್ರಕಟಿಸಿದ್ದಾಗ ಬಾಯಿ ಮುಚ್ಚಿಕೊಂಡಿದ್ದೇಕೆ: ಸಿದ್ದರಾಮಯ್ಯ

ಬೆಂಗಳೂರು: ‘ಜಗದೀಶ ಶೆಟ್ಟರ್‌ ನೇತೃತ್ವದ ಬಿಜೆಪಿ ಸರ್ಕಾರ ಟಿಪ್ಪು ಸುಲ್ತಾನ್‌ ಅವರನ್ನು ಹಾಡಿ, ಹೊಗಳಿ ಗ್ರಂಥ ಪ್ರಕಟಿಸಿದ್ದಾಗ ಬಾಯಿ ಮುಚ್ಚಿಕೊಂಡಿದ್ದೇಕೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್‌ಕುಮಾರ್‌ ಅವರನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ಗೆ ಟಿಪ್ಪು ಸುಲ್ತಾನ್‌ ಸ್ತಬ್ಧಚಿತ್ರ ಕಳುಹಿಸಿದ್ದನ್ನು ಟೀಕಿಸಿರುವ ಸಚಿವರಿಗೆ ಪ್ರತಿಕ್ರಿಯೆ ನೀಡಿರುವ ಅವರು, ‘ಬಿಜೆಪಿ ಸರ್ಕಾರ ಪ್ರಕಟಿಸಿದ್ದ ಟಿಪ್ಪು ಸುಲ್ತಾನ್‌ …

Read More »

ದೇವೇಗೌಡ ಮನವಿಗೆ ಸೊಪ್ಪು ಹಾಕಬೇಡಿ: ವಿಶ್ವನಾಥ್‌

ಮೈಸೂರು: ‘2011ನೇ ಸಾಲಿನ 362 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನ್ಯಾಯ ಕೊಡಿಸುವಂತೆ ಕೋರಿ ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಸಲ್ಲಿಸಿರುವ ಮನವಿಗೆ ಸೊಪ್ಪು ಹಾಕಬೇಡಿ’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕೋರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಸಂವಿಧಾನಬಾಹಿರವಾಗಿ ಆಯ್ಕೆಯಾದ 362 ಮಂದಿ ಸುಪ್ರೀಂಕೋರ್ಟ್‌ ತೀರ್ಪನ್ನು ಧಿಕ್ಕರಿಸಿ ಒಬ್ಬ ರಾಜಕಾರಣಿಗೆ ಮನವಿ ಸಲ್ಲಿಸುವುದು, ಆ ರಾಜಕಾರಣಿ ಮುಖ್ಯಮಂತ್ರಿಗೆ ಪತ್ರ ಬರೆಯುವುದು, ಅದನ್ನು ಆಧರಿಸಿ …

Read More »

ರಾಜ್ಯದಲ್ಲಿ 48,049 ಕೊರೋನಾ ಪತ್ತೆ

ಬೆಂಗಳೂರು: ರಾಜ್ಯದಲ್ಲಿ ನಿನ್ನೆಯೇ ಕೊರೋನಾ ಸೋಂಕಿನ  ಪ್ರಕರಣಗಳ ಸಂಖ್ಯೆ ಅರ್ಧ ಲಕ್ಷ ಸಮೀಪಿಸಿತ್ತು. ಈಗ ಆ ಸಂಖ್ಯೆ ಮತ್ತೆ ಮುಂದುವರೆದಿದೆ. ಇಂದು ಹೊಸದಾಗಿ 48,049 ಮಂದಿಗೆ ಕೊರೋನಾ ಪಾಸಿಟಿವ್  ಎಂಬುದಾಗಿ ದೃಢಪಟ್ಟಿದೆ.ಅಲ್ಲದೇ ಸೋಂಕಿನಿಂದಾಗಿ 22 ಮಂದಿ ಸಾವನ್ನಪ್ಪಿದ್ದಾರೆ.

Read More »

ದೇಶದಲ್ಲಿ 3,37,704 ಕೋವಿಡ್ ಪತ್ತೆ

ನವದೆಹಲಿ :ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,37,704 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ನಿನ್ನೆಗಿಂತ 9,550 ಕಡಿಮೆ ಆಗಿದೆ. 488 ಸಾವುಗಳು ಆಗಿದ್ದು ಮತ್ತು 2,42,676 ಚೇತರಿಕೆಗಳು ವರದಿಯಾಗಿದೆ. ಸಕ್ರಿಯ ಪ್ರಕರಣ 21,13,365 ಇದೆ.ದೈನಂದಿನ ಧನಾತ್ಮಕ ದರ  17.22% ರಷ್ಟಿದೆ. ಇಲ್ಲಿಯವರೆಗೆ ಒಟ್ಟು 10,050 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ; ನಿನ್ನೆಯಿಂದ 3.69% ಹೆಚ್ಚಳ ಆಗಿದೆ.

Read More »

ಕಂಟೇನರ್ ವಾಹನಕ್ಕೆ‌ ಆಕಸ್ಮಿಕ್ ಬೆಂಕಿ : ಸುಟ್ಟ ಬಸ್ಮವಾದ ಕೊರಿಯರ್

ಧಾರವಾಡ: ಕೊರಿಯರ್ ಸಾಗಿಸುವ ಕಂಟೆನರ್ ವಾಹನಕ್ಕೆ ಆಕಸ್ಮಿಕ ಬೆಂಕಿ ತಗುಲಿ ಹೊತ್ತಿ ಉರಿದಿರುವ ಘಟನೆ ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈಗಷ್ಟೇ ನಡೆದಿದೆ. ಬೆಳಗಾವಿ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಕಂಟೇನರ್ ಲಾರಿ ಹುಬ್ಬಳ್ಳಿಯ ಕಡೆಗೆ ತೆರಳುತಿತ್ತು. ಆದರೆ ಲಾರಿಯ ಹಿಂಬದಿಯ ಕಂಟೆನರ್ ಬಾಕ್ಸ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯಿಂದ ಸುಡುತ್ತಿರುವ ವಾಸನೆ ಗಮನಿಸಿದ ಲಾರಿಯ ಚಾಲಕ ಯರಿಕೊಪ್ಪದ ರಮ್ಯಾ ರೆಸಿಡೆನ್ಸಿ ಬಳಿಯಲ್ಲಿ ಲಾರಿಯ ನಿಲ್ಲಿಸಿ, …

Read More »