Breaking News

Breaking News

ಹೊಸ ವರ್ಷಕ್ಕೆ ನಿರ್ಬಂಧ, ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ-ಕ್ರೀಸ್ಮಸ್‌ ಗಿಲ್ಲ ನಿರ್ಬಂಧ

ಬೆಂಗಳೂರು : 2021ಕ್ಕೆ ಬೈ-ಬೈ ಹೇಳಿ 2022ಕ್ಕೆ ಹಾಯ್‌ ಹೇಳುತ್ತಾ ಅದ್ಧೂರಿಯಾಗಿ ಹೊಸ ವರ್ಷವನ್ನು ವೆಲ್‌ಕಮ್‌ ಮಾಡ್ಕೊಳ್ಳೋಕೆ ಸಾಕಷ್ಟು ಮಂದಿ ತುದಿಗಾಲಲ್ಲಿರುವ ಹೊತ್ತಿನಲ್ಲೇ, ಕೊರೊನಾ ಮತ್ತು ಒಮಿಕ್ರಾನ್‌ ವೈರಸ್‌ ತಡೆಗಟ್ಟುವ ಕಾರಣದಿಂದ ಸರ್ಕಾರ ಅದ್ಧೂರಿ ವರ್ಷಾಚರಣೆಗೆ ಬ್ರೇಕ್‌ ಹಾಕಲು ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಜೊತೆಗೆ ಕ್ರೀಸ್ಮಸ್‌ ಹಬ್ಬಕ್ಕೆ ಯಾವುದೇ ನಿರ್ಭಂದ ಹೇರಿಲ್ಲ. ರೆಸ್ಟೋರೆಂಟ್, ಕ್ಲಬ್‌ಗಳಿಗೆ ಶೇಕಡಾ 50ರಷ್ಟು ಜನರಿಗೆ ಪ್ರವೇಶಸೀಮಿತ ಪ್ರಮಾಣದಲ್ಲಿ ಮ್ಯೂಸಿಕ್‌, ಡಿ.ಜೆಗೆ ಅವಕಾಶಎಂಜಿ ರಸ್ತೆ, ಬ್ರಿಗೇಡ್ ರಸ್ತೆ …

Read More »

ರಾಜ್ಯದಲ್ಲಿ ಎಂಇಎಸ್ ಸಂಘಟನೆಯನ್ನು ಬ್ಯಾನ್ ಮಾಡಬೇಕು – ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಒತ್ತಾಯ

ಬೆಂಗಳೂರು : ಮಹಾರಾಷ್ಟ್ರದ ಎಂಇಎಸ್ ಸಂಘಟನೆಯನ್ನು ರದ್ದು ಮಾಡಬೇಕೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಒತ್ತಾಯಿಸಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಂಡಳಿ ಅಧ್ಯಕ್ಷ ಜಯರಾಜ್, ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ, ಬಸವಣ್ಣನ ಪ್ರತಿಮೆಗೆ ಅವಮಾನ ಮಾಡಿರುವ ಕಿಡಿಗೇಡಿಗಳ ಕೃತ್ಯ ಖಂಡನೀಯ. ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಬೇಕು ಎಂದು ಹೇಳಿದರು. ಇನ್ನೂ ನನ್ನ ಚಿಕ್ಕವಯಸ್ಸಿನಿಂದಲೂ ಎಂಇಎಸ್ ಪುಂಡಾಟಿಕೆಯನ್ನು ನೋಡುತ್ತಿದ್ದೇನೆ. ಇವರ ರಾಜ್ಯವಿರೋಧಿ ಧೋರಣೆಗಳನ್ನು …

Read More »

ಡಿ-23ಕ್ಕೆ ಆದಿ ಬಣಜಿಗ ಸಮಾಜದ ಬೆಳಗಾವಿ ಚಲೋ

ಹುಬ್ಬಳ್ಳಿ: ಆದಿ ಬಣಜಿಗ ಸಮಾಜವನ್ನು ಜಾತಿ ಗೆಜೆಟ್‌ನಲ್ಲಿ ಸೇರ್ಪಡೆ ಮಾಡಿ ಮೀಸಲಾತಿ ನೀಡುವಂತೆ ಅಖಿಲ ಕರ್ನಾಟಕ ವೀರಶೈವ ಆದಿಬಣಜಿಗ ಸಮಾಜ ಕಲ್ಯಾಣ ಸಮಿತಿ ಒತ್ತಾಯಿಸಿದೆ. ಇದೇ ಡಿಸೆಂಬರ್-23 ರಂದು ಈ ವಿಚಾರವಾಗಿಯೇ ಸಮಿತಿ ಬೆಳಗಾವಿ ಚಲೋ ಹಮ್ಮಿಕೊಂಡಿದೆ ಎಂದು ಸಮಿತಿ ಅಧ್ಯಕ್ಷ ಆದಿ ಬಣಜಿಗ ಸದಾಶಿವ ಸಿ.ಕಾರಡಗಿ ತಿಳಿಸಿದ್ದಾರೆ.

Read More »

26 ರಂದು ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾ ವತಿಯಿಂದ ಧಾರವಾಡದ ನವಲೂರಿನಲ್ಲಿರುವ ಆದಿತ್ಯ ಮಯೂರ ರೆಸಾರ್ಟ್ ನಲ್ಲಿ ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾದ ವತಿಯಿಂದ ೨೦೨೦-೨೧ ನೇ ಸಾಲಿನ ಎಸ್.ಎಸ್.ಎಲ್. ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ೮೦% ಮತ್ತು ೮೦% ಕ್ಕಿಂತ ಅಧಿಕ ಅಂಕ ಪಡೆದು ತೇರ್ಗಡೆಯಾದ ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾದ ಕೋಶಾಧ್ಯಕ್ಷರಾದ ಸುಧೀರ್ ಉಪ್ಪಾರ ತಿಳಿಸಿದರು. …

Read More »

‘ಸಚಿವ ಭೈರತಿ ಬಸವರಾಜ್’ಗೆ ಬಿಗ್ ರಿಲೀಫ್: ‘ಹೈಕೋರ್ಟ್’ನಿಂದ ‘ಸಮನ್ಸ್’ಗೆ ತಡೆ

ಬೆಂಗಳೂರು: ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವಂತ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಕಾಂಗ್ರೆಸ್ ನಿಂದ ಭೂಹಗರಣದ ಆರೋಪ ಹೊತ್ತಿರುವಂತ ಸಚಿವ ಬೈರತಿ ಬಸವರಾಜ ರಾಜೀನಾಮೆ ಒತ್ತಾಯಿಸಲಾಗಿತ್ತು. ಇದರ ನಡುವೆಯೂ ಇಂದು ರಾಜ್ಯ ಹೈಕೋರ್ಟ್ ಪ್ರಕರಣ ಸಂಬಂಧ ಸಚಿವ ಬೈರತಿ ಬಸವರಾಜ್ ಗೆ ನೀಡಿರುವಂತ ಸಮನ್ಸ್ ಗೆ ತಡೆಯಾಜ್ಞೆ ನೀಡಿದೆ. ಈ ಮೂಲಕ ಭೈರತಿ ಬಸವರಾಜ್ ಗೆ ಬಿಗ್ ರಿಲೀಫ್ ನೀಡಿದೆ.

Read More »

ಪೊಲೀಸ್ ವಾಹನದ ಮೇಲೆ ಬರ್ತಾರೆ ಚಿನ್ನದ ಸರ ಕಿತ್ತುಕೊಂಡು ಹೋಗ್ತಾರೆ ಹುಷಾರ್‌

ಧಾರವಾಡ: ಪೊಲೀಸ್ ಎಂದು ಬರೆಯಲಾದ ಬೈಕ್ ತೆಗೆದುಕೊಂಡು ಬಂದ ಖದೀಮರು ಧಾರವಾಡದ ಎರಡು ಕಡೆಗಳಲ್ಲಿ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಇಂದು ಬೆಳ್ಳಂಬೆಳಿಗ್ಗೆ ಧಾರವಾಡದ ಹೊಸಯಲ್ಲಾಪುರ ಹಾಗೂ ಶ್ರೀನಗರದಲ್ಲಿ ಚೈನ್ ಸ್ನ್ಯಾಚಿಂಗ್ ನಡೆದಿದೆ. ಹೊಸಯಲ್ಲಾಪುರದ ವೇದಾ ಬಿಜಾಪೂರ ಎಂಬುವವರು ವಾಯು ವಿಹಾರಕ್ಕೆಂದು ಹೋಗಿದ್ದ ವೇಳೆ ಅವರ ಕೊರಳಲ್ಲಿದ್ದ 350 ಗ್ರಾಂ ತೂಕದ ಚಿನ್ನದ ಸರ ಹಾಗೂ ಶ್ರೀನಗರದಲ್ಲಿ ವಾಯು ವಿಹಾರಕ್ಕೆಂದು ತೆರಳಿದ್ದ ಮಹಿಳೆಯೊಬ್ಬರ ಕೊರಳಲ್ಲಿದ್ದ 450 ಗ್ರಾಂ ತೂಕದ ಚಿನ್ನದ …

Read More »

ಕುಡುಕರ ಅಡ್ಡೆಯಾದ ಶತಮಾನದ ರೈಲ್ವೆ ಪೊಲೀಸ್ ಕ್ವಾಟರ್ಸ್

ಹುಬ್ಬಳ್ಳಿ : ರಾಜ್ಯ ರೈಲ್ವೆ ಪೊಲೀಸರು ವಾಸಿಸುವಂತಹ ಕ್ವಾಟರ್ಸ್ ಇದೀಗ ಕುಡುಕರ ಅಡ್ಡೆಯಾಗಿದೆ. ಇದರಿಂದ ಕ್ವಾಟರ್ಸ್​ನಲ್ಲಿ ವಾಸಿಸುವಂತಹ 300ಕ್ಕೂ ಅಧಿಕ ಪೊಲೀಸ್ ಕುಟುಂಬಗಳು ಬಾಡಿಗೆ ಮನೆಯಲ್ಲಿ ಕಾಲ ಕಳೆಯುವಂತಾಗಿದೆ. ಕುಡುಕರ ಅಡ್ಡೆಯಾದ ಶತಮಾನದ ರೈಲ್ವೆ ಪೊಲೀಸ್ ಕ್ವಾಟರ್ಸ್.. ಶೀಘ್ರ ಕ್ರಮಕ್ಕೆ ಸ್ಥಳೀಯರ ಆಗ್ರಹಗದಗ ರಸ್ತೆಯ ನೆಹರು ನಗರದ ಪೊಲೀಸ್ ಕ್ವಾಟರ್ಸ್​ನಲ್ಲಿ ಸುಮಾರು 300 ಕುಟುಂಬಗಳು ‌ನಿಶ್ಚಿಂತವಾಗಿ ವಾಸಿಸುತ್ತಿದ್ದವು. ಆದರೆ, ಕಟ್ಟಡ ಬೀಳ್ಳುವ ಸ್ಥಿತಿಯಲ್ಲಿದ್ದರಿಂದ ಎಲ್ಲರೂ ಕ್ವಾಟರ್ಸ್ ಬಿಟ್ಟು ಬಾಡಿಗೆ ಮನೆಯಲ್ಲಿ …

Read More »

ಡೆಲ್ಟಾಗಿಂತ ವ್ಯಾಪಕವಾಗಿ ಹರಡುತ್ತಿದೆ ಒಮಿಕ್ರಾನ್;‌ ಈ ಕುರಿತು ಸಾಕ್ಷ್ಯ ಲಭ್ಯ ಎಂದ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ

ಒಮಿಕ್ರಾನ್ ರೂಪಾಂತರಿ ಕೋವಿಡ್ ಸೋಂಕು ಈಗ ವ್ಯಾಪಕವಾಗಿ ಹರಡುತ್ತಿದ್ದು, ಲಸಿಕೆ ಪಡೆದ ಹಾಗೂ ಸೋಂಕಿನಿಂದ ಚೇತರಿಸಿಕೊಂಡ ಮಂದಿಯಲ್ಲೂ ಸಹ ಕಂಡು ಬರುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ತಿಳಿಸಿದ್ದಾರೆ. “ಡೆಲ್ಟಾ ರೂಪಾಂತರಿಗಿಂತಲೂ ಒಮಿಕ್ರಾನ್‌ ವ್ಯಾಪಕವಾಗಿ ಹರಡುತ್ತಿದೆ ಎಂಬ ಕುರಿತು ಈಗ ಸಾಕಷ್ಟು ಸಾಕ್ಷ್ಯಗಳು ಸಿಕ್ಕಿವೆ,” ಎಂದ ಟೆಡ್ರೋಸ್, “ಮತ್ತು ಲಸಿಕೆ ಪಡೆದ ಮತ್ತು ಚೇತರಿಸಿಕೊಂಡ ಮಂದಿಗೂ ಈ ಸೋಂಕು ತಗುಲುವ ಸಾಧ್ಯತೆ ಇದೆ,” ಎಂದಿದ್ದಾರೆ.

Read More »

ಬುದ್ದಿ ಹೇಳಿದ ಅಣ್ಣ, ಗುಂಡು ಹಾರಿಸಿದ ತಮ್ಮ, ಗಾಯಗೊಂಡ ಸ್ನೇಹಿತ!

ಬೆಂಗಳೂರು : ಮನೆಗೆ ತಡವಾಗಿ ಬಂದ್ದಿಕ್ಕೆ ಅಣ್ಣ ಬುದ್ಧಿವಾದ ಹೇಳಿದ್ದರಿಂದ ಅಸಮಾಧಾನಗೊಂಡ ತಮ್ಮ ಪಿಸ್ತೂಲಿನಿಂದ ಗುಂಡು ಹಾರಿಸಿದ ಘಟನೆ ಬೆಂಗಳೂರಿನಲ್ಲಿ ಬಿಟಿಎಂ ಲೇಔಟ್ ನಲ್ಲಿ ನಡೆದಿದೆ. ಸಲ್ಮಾನ್ ಎಂಬಾತ ಪಿಸ್ತೂಲ್ ನಿಂದ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತನನ್ನು ರಕ್ಷಿಸುವ ಭರದಲ್ಲಿ ಜೊತೆಗಿದ್ದ ಸ್ನೇಹಿತ ಫಜಲ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ನೇಹಿತ ಫೈಜಲ್ ಜೊತೆ ಮನೆಗೆ ತಡವಾಗಿ ಸಲ್ಮಾನ್ ಬಂದಾ ಅಣ್ಣ ಅಮಿನ್ ದಾದಾ ಬುದ್ಧಿವಾದ ಹೇಳಿದ್ದ. ಇದರಿಂದ ಸಿಡಿಮಿಡಿಗೊಂಡ ತಮ್ಮ ಸಲ್ಮಾನ್ …

Read More »

ಆಕಾಶದಲ್ಲಿ ಸಾಗಿದ ಬೆಳಕಿನ ಚುಕ್ಕಿಗಳು: ಬೆರಗಾದ ಉಡುಪಿ ಜಿಲ್ಲೆಯ ಜನತೆ

ಉಡುಪಿ: ನಿನ್ನೆ ರಾತ್ರಿ ಆಕಾಶದಲ್ಲಿ ಸಾಲುಸಾಲು ಬೆಳಕಿನ ಚುಕ್ಕಿಗಳು ಕಾಣಸಿಕ್ಕಿದ್ದು ಉಡುಪಿ ಜಿಲ್ಲೆಯ ಜನರಲ್ಲಿ ಕೌತುಕ ಮೂಡಿಸಿತು.ಸರಳರೇಖೆಯಲ್ಲಿ ಹಾದುಹೋದ ನೂರಾರು ಬೆಳಕಿನ ಚುಕ್ಕಿಗಳನ್ನ ಜಿಲ್ಲೆಯ ಜನತೆ ಕಂಡು ಬೆರಗಾದರು. ಕುಂದಾಪುರ, ಮಲ್ಪೆ ಉಡುಪಿ ಮೊದಲಾದ ಪ್ರದೇಶದಲ್ಲಿ ಜನರು ಇದನ್ನು ವೀಕ್ಷಣೆ ಮಾಡಿದ್ದು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.ಇದು ಕೃತಕ ಉಪಗ್ರಹಗಳ ಚಲನೆ ಎಂದು ಖಗೋಳತಜ್ಞರು ಈಗಾಗಲೇ ಸ್ಪಷ್ಟಪಡಿಸಿರುವುದರಿಂದ ಜನತೆ ನಿರಾಳರಾದರು.ಸಂಜೆಯ ವೇಳೆ ಕರಾವಳಿ ಭಾಗದಲ್ಲಿ ಕಂಡು ಬಂದಿರುವ ಅಪರೂಪದ ವಿದ್ಯಮಾನ …

Read More »