Breaking News

Breaking News

ನರ್ಸಿಂಗ್ ಹೋಂನಲ್ಲಿ ಅಗ್ನಿ ಅವಘಡ : 12 ಮಂದಿ ಮೃತ್ಯು

ಪಶ್ಚಿಮ ಶ್ರೀಲಂಕಾದ ಬಟಗೋಡ ಎಂಬಲ್ಲಿ ಬುಧವಾರ ತಡರಾತ್ರಿ ನರ್ಸಿಂಗ್ ಹೋಂನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 12 ಮಂದಿ ಮೃತಪಟ್ಟಿದ್ದು, ಇತರ 7 ಮಂದಿ ಗಾಯಗೊಂಡಿದ್ದಾರೆ. ನರ್ಸಿಂಗ್ ಹೋಂನಿಂದ 51 ಮಂದಿಯನ್ನು ರಕ್ಷಿಸಲಾಗಿದ್ದು ಮ್ಯಾನೇಜರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ. ಅಂಗೂರುವಟೋಟ ನಗರದಲ್ಲಿರುವ `ಮೌಪಿಯ ಸೇವಾನ ಎಲ್ಡರ್ಸ್ ಹೋಮ್’ನಲ್ಲಿ ಬೆಂಕಿ ದುರಂತ ಸಂಭವಿಸಿದೆ. ನರ್ಸಿಂಗ್ ಹೋಂ ಇರುವ ಕಟ್ಟಡದಲ್ಲೇ ಮಾನಸಿಕ ಅಸ್ವಸ್ಥ ಯುವಜನರ ಆರೈಕೆ ಕೇಂದ್ರವೂ ಇದ್ದು ಎರಡೂ …

Read More »

ತುಮಕೂರಿನಲ್ಲಿ ಇನ್ನೋವಾ-ಓಮ್ನಿ ಮುಖಾಮುಖಿ ಡಿಕ್ಕಿ: ಟೆಕ್ಕಿ ರವಿ ಕುಟುಂಬದ ಮೂವರು ಸ್ಥಳದಲ್ಲೇ ದುರ್ಮರಣ!

ತುಮಕೂರು ಜಿಲ್ಲೆಯ ಕೆಂಕೆರೆ ಬಳಿ ಎರಡು ಕಾರುಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಂಧ್ರಪ್ರದೇಶದ ಆದೋನಿ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ರವಿ ಅವರ ತಂದೆ, ತಾಯಿ ಹಾಗೂ ಪತ್ನಿ ದುರ್ಮರಣಕ್ಕೀಡಾಗಿದ್ದಾರೆ. ಹಿರಿಯೂರು ಮಾರ್ಗವಾಗಿ ಹುಳಿಯಾರು ಕಡೆಗೆ ಬರುತ್ತಿದ್ದ ಇನೋವಾ ಕಾರಿಗೆ ಎದುರಿನಿಂದ ಬಂದ ಓಮ್ನಿ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿಯಾಗಿದೆ. ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಮೂವರಿಗೆ ಗಂಭೀರ …

Read More »

ರಾಜ್ಯದಲ್ಲಿ ಘೋರ ದುರಂತ : ಕಾರಿನಲ್ಲಿ ಉಸಿರುಗುಟ್ಟಿ ಮೂರು ವರ್ಷದ ಮಗು ಸಾವು!

ಕಲಬುರ್ಗಿ ಜಿಲ್ಲೆಯ ಶಹಬಾದ್ ತಾಲೂಕಿನ ತೊನಸನಹಳ್ಳಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು, ಕಾರಿನೊಳಗೆ ಆಟವಾಡಲು ಹೋದ ಮೂರು ವರ್ಷದ ಬಾಲಕ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಮೃತ ಮಗುವನ್ನು ಬಸವಪ್ರಭು (3) ಎಂದು ಗುರುತಿಸಲಾಗಿದೆ. ಪೋಷಕರು ಶಾಲೆಯ ಬಳಿ ಕಾರು ನಿಲ್ಲಿಸಿ ತೆರಳಿದ್ದ ವೇಳೆ, ಬಾಲಕ ಕಾರಿನೊಳಗೆ ಹೋಗಿದ್ದಾನೆ. ಈ ವೇಳೆ ಕಾರಿನ ಬಾಗಿಲುಗಳು ಸ್ವಯಂಚಾಲಿತವಾಗಿ ಲಾಕ್ ಆಗಿದ್ದು, ಒಳಗೆ ಸಿಲುಕಿದ ಮಗುವಿಗೆ ಹೊರಬರಲು ಸಾಧ್ಯವಾಗಿಲ್ಲ. ಬಿಸಿಲಿನ ಬೇಗೆ ಮತ್ತು ಗಾಳಿಯ ಕೊರತೆಯಿಂದ …

Read More »

ಬೆಂಗಳೂರಲ್ಲಿ ನಡುರಸ್ತೆಯಲ್ಲೇ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಕಾಮುಕನ ಸೆರೆ

ಬೆಳಗಿನ ಜಾವ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಹಿಂಬಾಲಿಸಿಕೊಂಡು ಹೋದ ಕಾಮುಕ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿರುವ ಘಟನೆ ವೈಟ್‌ಫೀಲ್ಡ್ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೃತ್ಯವೆಸಗಿ ಪರಾರಿಯಾಗಿದ್ದ ಪಶ್ಚಿಮ ಬಂಗಾಳ ಮೂಲದ ಸೈಫಲ್‌ ಮಂಡಲ್‌ (27) ಬಂಧಿತ ಆರೋಪಿ. ಈತ ಚಿಂದಿ ಆಯುವ ವ್ಯಕ್ತಿ ಎಂದು ಗೊತ್ತಾಗಿದೆ. ಕೇರಳಂ ಮೂಲದ ವಿದ್ಯಾರ್ಥಿನಿ ನಗರದ ಕಾಲೇಜೊಂದರಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದು, ಪಟ್ಟಂದೂರು ಅಗ್ರಹಾರದ ಪಿಜಿಯೊಂದರಲ್ಲಿ ನೆಲೆಸಿದ್ದಾರೆ. ಮೊನ್ನೆ ಬೆಳಗಿನ ಜಾವ 3.30 …

Read More »

ಬೆಳಗಾವಿ | ಬೈಪಾಸ್ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಐವರ ಬಂಧನ

ಬೆಳಗಾವಿ: ತಾಲ್ಲೂಕಿನ ಹಲಗಾ-ಮಚ್ಛೆ ಬೈಪಾಸ್‌ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಐವರನ್ನು ಸಿಸಿಬಿ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ನಾವಗೆಯ ಕೃಷ್ಣಾ ರಾಮನ್ನವರ, ರಣಕುಂಡೆಯ ಪ್ರಮೋದ ಪಾಟೀಲ, ಮಹಾರಾಷ್ಟ್ರದ ಚಂದಗಡದ ರಾಮಕೃಷ್ಣ ಮಾವುರಕರ, ಮಚ್ಛೆಯ ಪರಶುರಾಮ ಬುಗಡಿಕಟ್ಟಿ, ಖಾನಾಪುರ ತಾಲ್ಲೂಕಿನ ಕುಂಬರಗಾದ ಜಾನು ಗಾವಡೆ ಬಂಧಿತರು. ಅವರಿಂದ ₹1.20 ಲಕ್ಷ ಮೌಲ್ಯದ 2.33 ಕೆ.ಜಿ ಗಾಂಜಾ, ಕಾರು, ಬೈಕ್‌, ಮೊಬೈಲ್‌, ₹46 ಸಾವಿರ ನಗದು ಸೇರಿದಂತೆ ₹9.21 ಲಕ್ಷ ಮೌಲ್ಯದ ವಸ್ತುಗಳನ್ನು …

Read More »

ಬೈಕ್‌ನಲ್ಲಿ ತ್ರಿಬಲ್‌ ರೈಡ್‌ ಪ್ರಶ್ನಿಸಿದ ಪೊಲೀಸ್‌ಗೆ ಹಲ್ಲೆ

ಬೆಂಗಳೂರು: ಕರ್ತವ್ಯನಿರತ ಪೊಲೀಸ್‌ ಕಾನ್‌ಸ್ಟೇಬಲ್‌ ಮೇಲೆ ಹಲ್ಲೆ ನಡೆಸಿದ್ದ ಇಬ್ಬರ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜ್ಞಾನಭಾರತಿ ಪೊಲೀಸ್‌ ಠಾಣೆಯ ಕಾನ್‌ಸ್ಟೆàಬಲ್‌ ಲಕ್ಷ್ಮಣ್‌ ನಾಯಕ್‌ ಮೇಲೆ ಹಲ್ಲೆ ನಡೆಸಿದ ಮುಬಾರಕ್‌ ಹಾಗೂ ಶಾಹೀದ್‌ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ. ಜೂನ್‌ 1ರಂದು ಸಂಜೆ ನಮ್ಮೂರ ತಿಂಡಿ ಜಂಕ್ಷನ್‌ ಬಳಿ ಕಾನ್‌ಸ್ಟೇಬಲ್‌ ಲಕ್ಷ್ಮಣ್‌ ನಾಯಕ್‌ ಕರ್ತವ್ಯಕ್ಕೆ …

Read More »

ವಿಜಯಪುರದಲ್ಲಿ 6 ಜನರ ಭೀಕರ ಹತ್ಯಾಕಾಂಡ ಕೇಸ್ : ಪ್ರಮುಖ ಆರೋಪಿ ಸೇರಿ ಮತ್ತೆ 6 ಜನರು ಅರೆಸ್ಟ್!

ಆಸ್ತಿ ವಿವಾದ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ 6 ಜನರ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿ ಸೇರಿ ಆರು ಆರೋಪಿಗಳನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹತ್ಯಾಕಾಂಡ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಇಂದು ಪ್ರಮುಖ ಆರೋಪಿ ಅಪ್ಪುಗೌಡ ಪಾಟೀಲ್ ಸೇರಿದಂತೆ ಆರು ಜನರನ್ನು ಬಂಧಿಸಿದ್ದಾರೆ. ಮೇ 29ರಂದು ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರದಲ್ಲಿ ಈ ಒಂದು ಭೀಕರ ಕೊಲೆ ನಡೆದಿತ್ತು . ಚಂದ್ರಕಾಂತ ನಿರಾಳೆ …

Read More »

ಬಳ್ಳಾರಿಯಲ್ಲಿ ಭೀಕರ ಅಪಘಾತ : ಮೈನಿಂಗ್ ಲಾರಿ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ತಂದೆ-ಮಗ ದುರ್ಮರಣ!

ಬಳ್ಳಾರಿಯಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಮೈನಿಂಗ್ ಲಾರಿ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ತಂದೆ-ಮಗ ಇಬ್ಬರು ಸಾವನ್ನಪ್ಪಿರುವ ಘಟನೆ, ಜಿಲ್ಲೆಯ ಸಂಡೂರು ತಾಲೂಕಿನ ಚಿನ್ನುಬಸಪ್ಪ ಕ್ಯಾಂಪ್ ಬಳಿ ನಡೆದಿದೆ. ಬೈಕ್ ನಲ್ಲಿದ್ದ ಬೆಳ್ಳಿ ನಾಗರಾಜ್ (45) ದುರಗೇಶ (22) ಸಾವನ್ನಪ್ಪಿದ್ದಾರೆ. ಮೈನಿಂಗ್ ಕಂಪನಿಯಲ್ಲಿ ವಾಚ್ ಮೆನ್ ಆಗಿದ್ದ ಬೆಳ್ಳಿ ನಾಗರಾಜ ಪ್ಯಾರಾ ಮೆಡಿಕಲ್ ಓದುತ್ತಿದ್ದ ನಾಗರಾಜ ಪುತ್ರ ದುರಗೇಶ ತಂದೆಯನ್ನು ಕೆಲಸಕ್ಕೆ ಬಿತ್ತು ಬರಲು ಹೊರಟಿದ್ದ ದುರಗೇಶ. ವೇಗವಾಗಿ ಬಂದು ಮೈನಿಂಗ್ …

Read More »

ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಭೀಕರ ರಸ್ತೆ ಅಪಘಾತ: ಮಗು ಸೇರಿದಂತೆ ನಾಲ್ವರ ಸಾವು

ಚಾಮರಾಜನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಗುರುವಾರ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ 7 ತಿಂಗಳ ಹಸುಗೂಸು, ವೃದ್ಧ ದಂಪತಿ ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಲವು ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಾಮರಾಜನಗರ ತಾಲೂಕಿನ ದೊಡ್ಡಮೂಡಹಳ್ಳಿ ಕ್ರಾಸ್ ಬಳಿ ಎರಡು ಕಾರುಗಳು ಡಿಕ್ಕಿ ಹೊಡೆದ ಪರಿಣಾಮ ಮುಬಾರಕ್ (70) ಹಾಗೂ 7 ತಿಂಗಳ ಹಸುಗೂಸು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಚಾಮರಾಜನಗರದ ಸಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. …

Read More »

ಕೋಲಾರ : ನೇಣು ಬಿಗಿದುಕೊಂಡು ಯುವಕ-ಮಹಿಳೆ ಆತಹತ್ಯೆ

ಮರಕ್ಕೆ ನೇಣು ಬಿಗಿದುಕೊಂಡು ಯುವಕ ಹಾಗೂ ಮಹಿಳೆ ಆತಹತ್ಯೆ ಮಾಡಿಕೊಂಡಿರುವ ಘಟನೆ ಬೆಟ್ಟಬೆಣಜೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹೊನ್ನೇನಹಳ್ಳಿ ಗ್ರಾಮದ ಸುಮಿತ್ರ ಹಾಗೂ ಆನಂದ್‌ ಆತಹತ್ಯೆಗೆ ಶರಣಾದವರು. ಆನಂದ್‌ ಹಾಗೂ ಸುಮಿತ್ರ ನಡುವೆ ಅಕ್ರಮ ಸಂಬಂಧವಿತ್ತು ಎಂಬ ಆರೋಪಗಳು ಕೇಳಿಬಂದಿದ್ದು, ಈ ವಿಚಾರ ಮಹಿಳೆ ಮನೆಯಲ್ಲಿ ಪ್ರಸ್ತಾಪವಾದ ಹಿನ್ನೆಲೆಯಲ್ಲಿ ಕಳೆದ ಐದು ದಿನಗಳಿಂದ ಮಹಿಳೆ ನಾಪತ್ತೆಯಾಗಿದ್ದರು. ಆದರೆ ಇಂದು ಬೆಳಿಗ್ಗೆ ಬೆಟ್ಟಬೆಣಜೇನಹಳ್ಳಿ ಗ್ರಾಮದ ಹೊರವಲಯದ ಹುಣಸೆಮರದಲ್ಲಿ ಇಬ್ಬರೂ ನೇಣು ಬಿಗಿದ ಸ್ಥಿತಿಯಲ್ಲಿ …

Read More »