Breaking News

Breaking News

ರಸ್ತೆಯಲ್ಲಿ ಹೊತ್ತಿ ಉರಿದ ಖಾಸಗಿ ಬಸ್

ಹಾಸನ: ತಾಲೂಕಿನ ಶಾಂತಿಗ್ರಾಮ ಬಳಿ ಚಲಿಸುತ್ತಿದ್ದ ಖಾಸಗಿ ಬಸ್‌ನ ಟೈಯರ್ ಸ್ಫೋಟಗೊಂಡಿದ್ದರಿಂದ ಬೆಂಕಿ ಹೊತ್ತಿಕೊಂಡು ಇಡೀ ಬಸ್ ಬೆಂಕಿಗೆ ಆಹುತಿಯಾಗಿದೆ. ಅದೃಷ್ಟವಶಾತ್ ಪ್ರಯಾಣಿಕರು ಪಾರಾಗಿದ್ದಾರೆ.ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್‌ನಲ್ಲಿ ಮಕ್ಕಳು ಸೇರಿ ಒಟ್ಟು 36 ಜನ ಪ್ರಯಾಣಿಸುತ್ತಿದ್ದರು.ವೇಗವಾಗಿ ಬಸ್ ಚಲಿಸುತ್ತಿದ್ದಾಗ ಶಾಂತಿ ಗ್ರಾಮದ ಬಳಿ ಶನಿವಾರ ಬೆಳಗಿನ ಜಾವ ಬಸ್‌ನ ಟೈಯರ್ ಸ್ಫೋಟಗೊಂಡಿದೆ. ಬಳಿಕ ಚಕ್ರದ ಘರ್ಷಣೆಯಿಂದ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಕಂಡ ಕೂಡಲೇ ಚಾಲಕ ರಸ್ತೆಯಲ್ಲೇ ಬಸ್ ನಿಲ್ಲಿಸಿ …

Read More »

10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿ ಬಂಧನ

ಶಿವಮೊಗ್ಗ: ಕಳೆದ 10 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಸೊರಬ ಪೊಲೀಸರು ಬೈಂದೂರಿನಲ್ಲಿ ಪತ್ತೆ ಮಾಡಿ ಬಂಧಿಸಿದ್ದಾರೆ. ದತ್ತಗುರು ಬಂಧಿತ ಆರೋಪಿ. ಈತನ ವಿರುದ್ಧ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿತ್ತು. ಆರೋಪಿ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಆತನಿಗೆ ಸೊರಬದ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಶಿಕ್ಷೆ ಪ್ರಕಟಿಸಿತ್ತು. ಆದರೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಬಂಧನದ ವಾರೆಂಟ್ ಜಾರಿಯಾಗಿತ್ತು. ಸೊರಬ ವೃತ್ತ ನಿರೀಕ್ಷಕ ಮತ್ತು ಪಿಎಸ್‌ಐ …

Read More »

ಬಂಧನದ ಬಳಿಕ ಬಾಯ್ಬಿಟ್ಟ ಟಿಎಂಸಿ ನಾಯಕ’ ನೆಲದೊಳಗೆ ಹೂತಿಟ್ಟಿದ್ದ ಹಣದ ಚೀಲ ಪತ್ತೆ!

ಪಶ್ಚಿಮ ಬಂಗಾಳದ ಬದುರಿಯಾ ದಲ್ಲಿರುವ ತೃಣಮೂಲ ಕಾಂಗ್ರೆಸ್‌ ಕಚೇರಿ ಬಳಿ ಭೂಗತವಾಗಿ ಹಲವು ಚೀಲಗಳಲ್ಲಿ ತುಂಬಿಡಲಾಗಿದ್ದ 500 ರು. ಮುಖಬೆಲೆಯ ನೋಟುಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ದೀಪಂಕರ್ ಭಟ್ಟಾಚಾರ್ಯ ಬಂಧನ ಬಳಿಕ ನಡೆದ ಶೋಧಸರ್ಕಾರದ ಪರಿಹಾರ ಯೋಜನೆಯಲ್ಲಿ ಅವ್ಯವಹಾರ ಮತ್ತು ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಟಿಎಂಸಿ ಹಿರಿಯ ನಾಯಕ ಮತ್ತು ಬದುರಿಯಾ ಪುರಸಭೆ ಅಧ್ಯಕ್ಷ ದೀಪಂಕರ್ ಭಟ್ಟಾಚಾರ್ಯ ಬಂಧನ ಬಳಿಕ ನಡೆದ ಶೋಧ ಕಾರ್ಯಾಚರಣೆ ವೇಳೆ …

Read More »

ಎರಡು ಎತ್ತು, ಆಕಳು ಕಳ್ಳತನ ಮಾಡಿದ ದುಷ್ಕರ್ಮಿಗಳು

ಹಿರೇಕೆರೂರ: ದನದ ಕೊಟ್ಟಿಗೆಯಲ್ಲಿ ಕಟ್ಟಿದ್ದ 1.30 ಲಕ್ಷ ರೂ. ಮೌಲ್ಯದ ಎರಡು ಎತ್ತು, ಒಂದು ಆಕಳನ್ನು ಯಾರೋ ಕಳ್ಳತನ ಮಾಡಿದ ಘಟನೆ ತಾಲೂಕಿನ ಕಳಗೊಂಡ ಗ್ರಾಮದಲ್ಲಿ ನಡೆದಿದೆ. ಸುನೀಲ ಪ್ರಭು ದೊಡ್ಡಮನಿ (26) ಎಂಬುವರ ಎತ್ತುಗಳು ಕಳ್ಳತನ ಆಗಿರುವುದು. ಇವರು ಮನೆ ಹಿಂಭಾಗದ ದನದ ಕೊಟ್ಟಿಗೆಯಲ್ಲಿ ಎತ್ತು ಮತ್ತು ಆಕಳು ಕಟ್ಟಿದ್ದರು. ಯಾರೋ ದುಷ್ಕಮಿರ್ಗಳು ರಾತ್ರಿ ಸಮಯದಲ್ಲಿ ಬಂದು ಅವುಗಳನ್ನು ಕಳ್ಳತನ ಮಾಡಿದ್ದಾರೆ. ಈ ಕುರಿತು ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ …

Read More »

ಎಸ್‌ಡಿಆರ್‌ಎಫ್ ಸಿಪಿಐ ಶ್ರೀಶೈಲ ಚೌಗಲೆ ಮನೆಯಲ್ಲೇ ನೇಣಿಗೆ ಶರಣು!

ಬೆಳಗಾವಿಯಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಶ್ರೀಶೈಲ ಚೌಗಲೆ (37) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಬೆಳಗಾವಿಯ ಚನ್ನಮ್ಮ ನಗರದಲ್ಲಿ ಗುರುವಾರ ನಡೆದಿದೆ. ಚೌಗಲೆ ಅವರು ಮನೆಯ ಕೊಠಡಿಯ ಬಾಗಿಲು ಹಾಕಿಕೊಂಡಿದ್ದ ವೇಳೆ ಅನುಮಾನಗೊಂಡ ಪತ್ನಿ ತಕ್ಷಣವೇ ಎಸ್‌ಡಿಆರ್‌ಎಫ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಕೊಠಡಿಯ ಬಾಗಿಲು ಮುರಿದು ಅವರನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದರೂ, ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ …

Read More »

ಮುಂಬೈನಿಂದ ಹೈದರಾಬಾದ್‌ಗೆ ₹1.22 ಕೋಟಿ ಹವಾಲಾ ಹಣ ಸಾಗಿಸುತ್ತಿದ್ದ ವ್ಯಕ್ತಿ ಬಂಧನ

ಮುಂಬೈನಿಂದ ಹೈದರಾಬಾದ್‌ಗೆ ಹವಾಲಾ ಹಣವನ್ನು ರೈಲಿನಲ್ಲಿ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಇಲ್ಲಿ ಬಂಧಿಸಲಾಗಿದ್ದು, ಆತನಿಂದ ₹1.22 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ. ಆರ್‌ಪಿಎಫ್‌ ಸಿಬ್ಬಂದಿ ಹಾಗೂ ರೈಲ್ವೆ ಪೊಲೀಸರು ನಡೆಸಿದ್ದ ಜಂಟಿ ಶೋಧ ಕಾರ್ಯಾಚರಣೆ ವೇಳೆ ದೇವಗಿರಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ 40 ವರ್ಷದ ವ್ಯಕ್ತಿಯನ್ನು ಮಂಗಳವಾರ ಬಂಧಿಸಲಾಗಿದೆ ಎಂದು ರೈಲ್ವೆ ಪೊಲೀಸರ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. ಆರೋಪಿಯು ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯವನು ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ. ‘ಮುಂಬೈನಲ್ಲಿರುವ ಆಭರಣ ವ್ಯಾಪಾರಿಯೊಬ್ಬರು ಮೇ …

Read More »

ಅಕ್ರಮ ಅದಿರು ಸಾಗಣೆ ಲಾರಿಗಳು ವಶ

ಬಳ್ಳಾರಿ : ತಾಲೂಕಿನ ಹಲಕುಂದಿ ಗ್ರಾಮದ ವಿಆರ್‌ಕೆಪಿ ಫ್ಯಾಕ್ಟರಿ ಬಳಿ ಅಕ್ರಮವಾಗಿ ಕಬ್ಬಿಣದ ಅದಿರನ್ನು ಸಾಗಿಸುತ್ತಿದ್ದ ಜಾಲವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಎರಡು ಟಿಪ್ಪರ್ ಲಾರಿ ಹಾಗೂ 36 ಮೆಟ್ರಿಕ್ ಟನ್ ಕಬ್ಬಿಣದ ಅದಿರು ಜಪ್ತಿಗೊಳಿಸಿ, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಕೌಲಬಜಾರ್ ಕೆ. ಸತ್ಯನಾರಾಯಣ, ಓಬುಳಾಪುರಂನ ಕೆ.ನಾಗರಾಜ್ ಬಂಧಿತರು. ಮೇ23ರಂದು ಆಂಧ್ರಪ್ರದೇಶದ ಸೋಮಲಾಪುರ ರೈಲ್ವೆ ಸ್ಲೈಡಿಂಗ್ಸ್ ಪ್ರದೇಶದಿಂದ ತಾಲೂಕಿನ ಹಲಕುಂದಿ ಗ್ರಾಮದಲ್ಲಿರುವ ಶ್ರೀತಿರುಪತಿ …

Read More »

ಬೆಂಗಳೂರಲ್ಲಿ ಮತ್ತೊಂದು ಮರ್ಡರ್ : ಹಳೆ ಲವರ್ ಜೊತೆಗೆ ಇರುವಾಗಲೇ, ಆಕೆಯ ಪತಿಯ ಕೈಯಲ್ಲೇ ಕೊಲೆಯಾದ ಯುವಕ!

ಬೆಂಗಳೂರು : ಹಳೇ ಪ್ರೇಮದ ಹಿನ್ನೆಲೆ ಮಾಜಿ ಪ್ರೇಯಸಿಯ ಮನೆಗೆ ತೆರಳಿದ್ದ ಯುವಕನೊಬ್ಬ ಭೀಕರ ಹತ್ಯೆಗೆ ಒಳಗಾದ ಘಟನೆ ನಗರದಲ್ಲಿ ನಡೆದಿದೆ. ಮೃತನನ್ನು ಮೊಹಮ್ಮದ್ ಖಾಸಿಂ ಎಂದು ಗುರುತಿಸಲಾಗಿದೆ. ಯುವತಿಯ ಪತಿ ಹಾಗೂ ಕುಟುಂಬಸ್ಥರು ನಡೆಸಿದ ಮಾರಣಾಂತಿಕ ಹಲ್ಲೆಯಿಂದ ಖಾಸಿಂ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೊಹಮ್ಮದ್ ಖಾಸಿಂ ಈ ಹಿಂದೆ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಕೆಲವು ಕಾರಣಗಳಿಂದ ಇಬ್ಬರ ನಡುವೆ ಬ್ರೇಕಪ್ ಆಗಿತ್ತು. ಬಳಿಕ ಯುವತಿಗೆ ಬೇರೆ ವ್ಯಕ್ತಿಯೊಂದಿಗೆ ಮದುವೆಯಾಗಿತ್ತು. ಆದರೆ …

Read More »

ಸಂತೆ, ಜಾತ್ರೆಗಳಲ್ಲಿ ಜನರ ಗಮನ ಬೇರೆಡೆ ಸೆಳೆದು ಮೊಬೈಲ್ ಕಳವು ಮಾಡುತ್ತಿದ್ದ 8 ಮಂದಿ ಅರೆಸ್ಟ್

ರಾಮದುರ್ಗ: ಸಂತೆ, ಜಾತ್ರೆ ನಡೆಯುವ ವಿವಿಧ ಗ್ರಾಮಗಳಲ್ಲಿ ಜನರ ಗಮನ ಬೇರೆಡೆ ಸೆಳೆದು ಮೊಬೈಲ್ ಕಳವು ಮಾಡುತ್ತಿದ್ದ ಎಂಟು ಆರೋಪಿಗಳನ್ನು ಕಟಕೋಳ ಪೋಲಿಸ್ ಠಾಣೆ ಪೋಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ಮೂಲದ ವಿಕಾಸ್ ವೆಂಕಟೇಶ ಭೋವಿ, ಪ್ರವೀಣ ಭೋವಿ, ಸಂತೋಷ್, ಶಿವು, ವೆಂಕಟೇಶ್, ಅಕ್ಷಯ್, ಹುಬ್ಬಳ್ಳಿಯ ಸಚಿನ್ ಲಕ್ಷ್ಮಣ ಕಲ್ಲವಡ್ಡರ ಅವರನ್ನು ಬಂಧಿಸಲಾಗಿದೆ. ಖಚಿತ ಮಾಹಿತಿ ಆಧರಿಸಿ ಪೊಲೀಸರ ವಿಶೇಷ ತಂಡ ರಚಿಸಿ ಎಸ್ಪಿ ಕೆ. ರಾಮರಾಜನ್ ಅವರ …

Read More »

ಗೋ ರಕ್ಷಕರ ಮೇಲೆ ಹಲ್ಲೆ ಮಾಡಿದ ಆರೋಪಿಗಳು ಅಂದರ್

ರಾಣೆಬೆನ್ನೂರು: ಗೋ ರಕ್ಷಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಗೌಸಿಯಾ ಪ್ಲಾಟ್ ನಿವಾಸಿ ಮುಬಾರಕಖಾನ್ ಆಯುಬಖಾನ್ ಕಟ್ಟಿಮನಿ (27) ಹಾಗೂ ಅಲ್ತಾ ನಗರದ ಆರೀ ನನ್ಯಸಾಬ ಮುಲ್ಲಾ (21) ಬಂಧಿತ ಆರೋಪಿತರು. ಇವರು ಗೋ ರಕ್ಷಕ ಹಾಗೂ ಭಜರಂಗದಳದ ಕಾರ್ಯಕರ್ತ ರುದ್ರೇಶ ದಿನೇಶ ಬುಕ್ಕಶೆಟ್ಟಿ (28) ಎಂಬುವನ ಮೇಲೆ ಕಸಾಯಿಖಾನೆ ಕುರಿತು ಪೊಲೀಸರಿಗೆ ಮಾಹಿತಿ ನೀಡುತ್ತಾನೆಂದು ಆರೋಪಿಸಿ ಮಾರಣಾಂತಿಕ ಹಲ್ಲೆ …

Read More »