ಹಿರೇಕೆರೂರ: ದನದ ಕೊಟ್ಟಿಗೆಯಲ್ಲಿ ಕಟ್ಟಿದ್ದ 1.30 ಲಕ್ಷ ರೂ. ಮೌಲ್ಯದ ಎರಡು ಎತ್ತು, ಒಂದು ಆಕಳನ್ನು ಯಾರೋ ಕಳ್ಳತನ ಮಾಡಿದ ಘಟನೆ ತಾಲೂಕಿನ ಕಳಗೊಂಡ ಗ್ರಾಮದಲ್ಲಿ ನಡೆದಿದೆ. ಸುನೀಲ ಪ್ರಭು ದೊಡ್ಡಮನಿ (26) ಎಂಬುವರ ಎತ್ತುಗಳು ಕಳ್ಳತನ ಆಗಿರುವುದು. ಇವರು ಮನೆ ಹಿಂಭಾಗದ ದನದ ಕೊಟ್ಟಿಗೆಯಲ್ಲಿ ಎತ್ತು ಮತ್ತು ಆಕಳು ಕಟ್ಟಿದ್ದರು. ಯಾರೋ ದುಷ್ಕಮಿರ್ಗಳು ರಾತ್ರಿ ಸಮಯದಲ್ಲಿ ಬಂದು ಅವುಗಳನ್ನು ಕಳ್ಳತನ ಮಾಡಿದ್ದಾರೆ. ಈ ಕುರಿತು ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

