Breaking News

Breaking News

ಬ್ಯಾಂಕಾಕ್‌ನಿಂದ ಬೆಂಗಳೂರಿಗೆ 47 ವನ್ಯಜೀವಿಗಳ ಸಾಗಾಟ, ರೆಡ್‌ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆರೋಪಿ

ಚಿಕ್ಕಬಳ್ಳಾಪುರ: ಬ್ಯಾಂಕಾಕ್‌ನಿಂದ ಅಕ್ರಮವಾಗಿ ವನ್ಯಜೀವಿಗಳನ್ನು ಸಾಗಿಸುತ್ತಿದ್ದ 47ವನ್ಯ ಜೀವಿಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬ್ಯಾಂಕಾಕ್‌ ನಿಂದ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಕೆಂಪು ಪಾದದ ಆಮೆಗಳು, ಆಫ್ರಿಕನ್ ಆಮೆಗಳು, ಅರ್ಜೆಂಟಿನಾ ಕಪ್ಪು-ಬಿಳಿ ತೇಗು, ಗೋಲ್ಡೀಸ್‌ ಮಾರ‍್ಮೋಸೆಟ್‌ ಸೇರಿದಂತೆ 47 ವನ್ಯ ಜೀವಿಗಳನ್ನ ವಶಕ್ಕೆ ಪಡೆಯಲಾಗಿದೆ. ಕಸ್ಟಮ್ಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಯನ್ನ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಮುಂದಿನ ಕಾನೂನು ಕ್ರಮಕ್ಕಾಗಿ ಬೆಂಗಳೂರು ಗ್ರಾಮಾಂತರ ಆರ್‌ಎಫ್‌ಇ …

Read More »

ಜೂಜಾಡುತ್ತಿದ್ದ 11 ಜನರ ಬಂಧನ

ಕೊಳ್ಳೇಗಾಲ: ಪಟ್ಟಣ ವ್ಯಾಪ್ತಿಯ ಕುಣಗಳ್ಳಿ ರಸ್ತೆಯಲ್ಲಿರುವ ಶ್ರೀ ಭ್ರಮರಾಂಭ ಸಮೇತ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ಹಿಂಭಾಗ ಹೊನ್ನಹೊಳೆಗೆ ಹೋಗುವ ರಸ್ತೆಯಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಜೂಜಾಟ ಪ್ರಕರಣವನ್ನು ಪೊಲೀಸರು ಭೇದಿಸಿದ್ದು 11 ಜನರ ವಿರುದ್ಧ ದೂರು ದಾಖಲಾಗಿದ್ದು. ಪಣಕ್ಕಿಟ್ಟಿದ್ದ 5.8 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ. ಕೊಳ್ಳೇಗಾಲ ಟೌನ್‌ನ ಕಿರಣ, ನಿಶಾಂತ್ ಪ್ರಭು, ಸಿದ್ದಯ್ಯನಪುರ ಗ್ರಾಮದ ರಾಜೇಂದ್ರ ಪ್ರಸಾದ್, ಮೈಸೂರಿನ ಎಚ್.ಎನ್.ಮಂಜ, ಮಂಜ, ನರಸೀಪುರದ ಉಮೇಶ್, ಕುಣಗಳ್ಳಿ ಗ್ರಾಮದ …

Read More »

ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ; ತಂದೆ ಮತ್ತು ಆತನ ಸ್ನೇಹಿತನಿಂದಲೇ ಅಪ್ರಾಪ್ತ ಮಗಳ ಮೇಲೆ 2 ವರ್ಷ ನಿರಂತರ ಅತ್ಯಾಚಾರ

ರಾಯಚೂರು: ಕರುಳ ಕುಡಿಯನ್ನು ರಕ್ಷಿಸಬೇಕಾದ ತಂದೆಯೇ ಕಾಮಪಿಶಾಚಿಯಾದ ಘೋರ ಘಟನೆಯೊಂದು ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಕಳೆದ ಎರಡು ವರ್ಷಗಳಿಂದ ತನ್ನ ಅಪ್ರಾಪ್ತ ಮಗಳ ಮೇಲೆ ತಂದೆ ಹಾಗೂ ಆತನ ಸ್ನೇಹಿತ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದು, ಇದೀಗ ಇಬ್ಬರೂ ಕಾಮುಕರು ಪೊಲೀಸರ ಅತಿಥಿಯಾಗಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ತಂದೆ ಹಾಗೂ ಆತನ ಸ್ನೇಹಿತ ಸೇರಿ ಅಪ್ರಾಪ್ತ ಬಾಲಕಿಯ ಮೇಲೆ ಕಳೆದ ಎರಡು ವರ್ಷಗಳಿಂದ …

Read More »

ಬೆಂಕಿ ತಗುಲಿ ನಾಲ್ಕು ಬೈಕ್ ಭಸ್ಮ

ಮುಳಬಾಗಿಲು: ನಗರದ ನೇತಾಜಿ ಕ್ರೀಡಾಂಗಣದ ಬಳಿ ಸಾಲಾಗಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳಿಗೆ ಗುರುವಾರ ಸಂಜೆ ಆಕಸ್ಮಿಕವಾಗಿ ಬೆಂಕಿ ತಗುಲಿ ನಾಲ್ಕು ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿದ್ದು, ಮೂರ್ನಾಲ್ಕು ವಾಹನಗಳಿಗೆ ಬೆಂಕಿಯ ಶಾಖ ತಗುಲಿದೆ. ಮುಳಬಾಗಿಲು ನಗರದಿಂದ ಬೇರೆಡೆಗೆ ನಾನಾ ಕೆಲಸ ಕಾರ್ಯಗಳಿಗೆ ಹೋಗುವ ದ್ವಿಚಕ್ರ ವಾಹನ ಸವಾರರು ಕ್ರೀಡಾಂಗಣದ ಒಂದು ಭಾಗದಲ್ಲಿ ನಿಲ್ಲಿಸುತ್ತಿದ್ದರು. ಅದೇ ರೀತಿ ಗುರುವಾರವೂ ಸುಮಾರು 20ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ನಿಲ್ಲಿಸುತ್ತಿದ್ದರು. ಆದರೆ ಆಕಸ್ಮಿಕ ಬೆಂಕಿಗೆ …

Read More »

ಕೋಣೆಯಲ್ಲಿ ಕೂಡಿಹಾಕಿ ಪಟಾಕಿ ಸ್ಫೋಟ, ಯುವಕ ಗಂಭೀರ

ಕಾಸರಗೋಡು: ಕೊಠಡಿಯೊಳಗೆ ಕೂಡಿ ಹಾಕಿ ಬಳಿಕ ಮಾಲೆ ಪಟಾಕಿ ಸ್ಫೋಟಿಸಲಾಗಿದ್ದು, ಇದರಿಂದ ಯುವಕ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು. ಮಲ್ಲ ಚೋಕೆಮೂಲೆ ನಿವಾಸಿ ಎಂ.ಅಭಿಲಾಷ್​(32) ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಏ.15ರಂದು ರಾತ್ರಿ 10ರಿಂದ 16ರಂದು ಬೆಳಗ್ಗೆ 8ಗಂಟೆ ಮಧ್ಯೆ ಮನೆ ಕೊಠಡಿಯೊಳಗೆ ಕೋಡಿ ಹಾಕಿ, ಬಳಿಕ ಮಾಲೆ ಪಟಾಕಿಗೆ ಬೆಂಕಿ ಹಚ್ಚಿ ಎಸೆದಿರುವುದಾಗಿ ಅಭಿಲಾಷ್​ ನೀಡಿದ ದೂರಿನನ್ವಯ ಸ್ನೇಹಿತನಾದ ಮುಳ್ಳೇರಿಯದ …

Read More »

ಕೋಲಾರ ಗಡಿಯಲ್ಲಿ ಭಾರಿ ಪ್ರಮಾಣದ ಬುಲೆಟ್ ಪತ್ತೆ; 214 ಗುಂಡುಗಳು ವಶಕ್ಕೆ, ತನಿಖೆ ಆರಂಭ

ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲೂಕಿನ ತಮಿಳುನಾಡು ಗಡಿ ಭಾಗದಲ್ಲಿ ಭಾರಿ ಪ್ರಮಾಣದ ಬುಲೆಟ್‌ಗಳು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಎಸ್‌ಎಲ್‌ಆರ್ ಹಾಗೂ ಮಿಷನ್ ಗನ್‌ಗಳಿಗೆ ಬಳಸುವ ಒಟ್ಟು 214 ಬುಲೆಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಾಹಿತಿಯ ಪ್ರಕಾರ, ಬಂಗಾರಪೇಟೆ ತಾಲೂಕಿನ ದಾಸರಮಲ್ಲ ಬ್ರಿಡ್ಜ್ ಬಳಿ ಅಪರಿಚಿತರು ಈ ಬುಲೆಟ್‌ಗಳನ್ನು ಬಿಸಾಡಿ ಹೋಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಕಾಮಸಮುದ್ರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದಾಗ 135 ಜೀವಂತ ಗುಂಡುಗಳು ಮತ್ತು 85 ಖಾಲಿ …

Read More »

ಅಗ್ನಿ ಅನಾಹುತ: ಮನೆಯಲ್ಲಿದ್ದ ವಸ್ತುಗಳು ಭಸ್ಮ

ಹೊಳೆಹೊನ್ನೂರು: ಮನೆಯೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ನಿತ್ಯ ಬಳಕೆ ವಸ್ತುಗಳು ಸುಟ್ಟುಹೋದ ಘಟನೆ ಇಲ್ಲಿಗೆ ಸಮೀಪದ ತಳ್ಳಿಕಟ್ಟೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಹಾಲಪ್ಪ ಸಾರು ಕುದಿಯಲು ಒಲೆ ಮೇಲೆ ಇರಿಸಿ ಪಕ್ಕದ ಮನೆಗೆ ಹೋಗಿದ್ದರು. ಮರಳಿ ಬರುವಷ್ಟರಲ್ಲಿ ಆಕಸ್ಮಿಕವಾಗಿ ಅಡುಗೆ ಅನಿಲ ಸೋರಿಕೆ ಆಗಿ ಸಮೀಪದಲ್ಲಿದ್ದ ಬಟ್ಟೆಗೆ ಬೆಂಕಿ ಹೊತ್ತಿಕೊಂಡು ಮನೆಯಿಡೀ ವ್ಯಾಪಿಸಿತ್ತು. ತತ್‌ಕ್ಷಣ ಸ್ಥಳೀಯರೊಂದಿಗೆ ಬೆಂಕಿ ನಂದಿಸಲು ಪ್ರಯತ್ನಿಸಿದ್ದರೂ ಸಾಧ್ಯವಾಗದೆ ಅಗ್ನಿಶಾಮಕ ದಳಕ್ಕೆ ಕರೆ ಮಾಡಬೇಕಾಯಿತು. ಘಟನೆಯಲ್ಲಿ …

Read More »

ಜೀವ ಬೆದರಿಕೆ ಪ್ರಕರಣ ದಾಖಲು

ಉಪ್ಪುಂದ: ರಸ್ತೆಗೆ ಜಾಗ ಬಿಟ್ಟು ಕೊಡದಿದ್ದುದಕ್ಕೆ ಜೀವ ಬೆದರಿಕೆ ಹಾಕಿರುವುದಾಗಿ ಬಿಜೂರು ಕಾಡಿನಂತಾರು ನಿವಾಸಿ ಸಂತೋಷ‌ ಪೂಜಾರಿ ನೀಡಿದ ದೂರಿನಂತೆ ರಾಘವೇಂದ್ರ ಗಾಣಿಗ ಎಂಬವರ ಮೇಲೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತೋಷ ಪೂಜಾರಿ ಬೈಂದೂರು ನ್ಯಾಯಾಲಯದಿಂದ ಬಿಜೂರು ಗ್ರಾಮದ ಕಾಡಿನಂತಾರು ಮುಡಾಯಾನ ಮನೆಯ ಗೇಟಿನ ಎದುರು ಹೋಗುತ್ತಿದ್ದಾಗ ಆರೋಪಿ ರಾಘವೇಂದ್ರ ಗಾಣಿಗ ರಸ್ತೆಗೆ ಜಾಗ ಬಿಟ್ಟು ಕೊಡಬೇಕು, ಇಲ್ಲದಿದ್ದರೆ ಮನೆಯಿಂದ ಹೊರಗಡೆ ಬಂದಾಗ ಕೈ ಕಾಲು ಕಡಿಯುವುದಾಗಿ …

Read More »

ಗಾಂಜಾ ಮಾರಾಟ ಯತ್ನ: ಓರ್ವನ ಬಂಧನ

ಮಂಗಳೂರು: ಮೇರಿಹಿಲ್ ಹೆಲಿಪ್ಯಾಡ್ ಬಳಿ ಸಾರ್ವಜನಿಕ ರಸ್ತೆಯಲ್ಲಿ ನಿಂತು ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಯುವಕನನ್ನು ಕಾವೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲ ಮುಕ್ಕಚೇರಿ ನಿವಾಸಿ ಹಿಲರಿಯ ನಗರ ನಿವಾಸಿ ಇರ್ಷಾದ್ ಅಲಿಯಾಸ್ ಇರ್ಷಾ (26) ಬಂಧಿತ ಆರೋಪಿ. ಕಾವೂರು ಠಾಣೆ ಪೊಲೀಸರು ಬುಧವಾರ ಮಧ್ಯಾಹ್ನ ಬಳಿಕ ಗಸ್ತು ಸಂಚಾರದಲ್ಲಿರುವಾಗ ಹೆಲಿಪ್ಯಾಡ್ ನ ಬಳಿ ಮೇರಿಹಿಲ್ ಜಂಕ್ಷನ್ ಕಡೆಗೆ ಹೊಗುವ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ಯುವಕನ್ನು ವಿಚಾರಣೆ …

Read More »

ಉಡುಪಿ: ತಲೆಗೆ ಕಲ್ಲಿನಿಂದ ಹೊಡೆದು ಸರ ಅಪಹರಣ

ಉಡುಪಿ: ಮಣಿಪಾಲದ ಶಾಂತಿನಗರದ ಬಳಿ ರೂಮ್‌ನಲ್ಲಿ ವಾಸವಾಗಿದ್ದ ಮಹಿಳೆಯ ತಲೆಗೆ ಕಲ್ಲಿನಿಂದ ಹೊಡೆದು ಸರ ಅಪಹರಿಸಿರುವ ಕುರಿತು ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯೋಗಿತಾ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೂವರು ಸ್ನೇಹಿತೆಯರೊಂದಿಗೆ ಯೋಗಿತಾ ಅವರು ರೂಮ್‌ನಲ್ಲಿ ವಾಸವಾಗಿದ್ದು, ಉಳಿದ ಮೂವರು ರಾತ್ರಿ ಪಾಳಿಯ ಕೆಲಸಕ್ಕೆ ತೆರಳಿ ಬೆಳಿಗ್ಗೆ ಮರಳಿದಾಗ ಯೋಗಿತಾ ಅವರು ರೂಮ್‌ನಲ್ಲಿ ನೆಲದ ಮೇಲೆ ಮಲಗಿದ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದರು. ಪಕ್ಕದಲ್ಲೇ ತುಂಡಾದ ಸಿಮೆಂಟ್‌ ಕಲ್ಲುಗಳು …

Read More »