ಹೊಳೆಹೊನ್ನೂರು: ಮನೆಯೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ನಿತ್ಯ ಬಳಕೆ ವಸ್ತುಗಳು ಸುಟ್ಟುಹೋದ ಘಟನೆ ಇಲ್ಲಿಗೆ ಸಮೀಪದ ತಳ್ಳಿಕಟ್ಟೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಹಾಲಪ್ಪ ಸಾರು ಕುದಿಯಲು ಒಲೆ ಮೇಲೆ ಇರಿಸಿ ಪಕ್ಕದ ಮನೆಗೆ ಹೋಗಿದ್ದರು. ಮರಳಿ ಬರುವಷ್ಟರಲ್ಲಿ ಆಕಸ್ಮಿಕವಾಗಿ ಅಡುಗೆ ಅನಿಲ ಸೋರಿಕೆ ಆಗಿ ಸಮೀಪದಲ್ಲಿದ್ದ ಬಟ್ಟೆಗೆ ಬೆಂಕಿ ಹೊತ್ತಿಕೊಂಡು ಮನೆಯಿಡೀ ವ್ಯಾಪಿಸಿತ್ತು. ತತ್‌ಕ್ಷಣ ಸ್ಥಳೀಯರೊಂದಿಗೆ ಬೆಂಕಿ ನಂದಿಸಲು ಪ್ರಯತ್ನಿಸಿದ್ದರೂ ಸಾಧ್ಯವಾಗದೆ ಅಗ್ನಿಶಾಮಕ ದಳಕ್ಕೆ ಕರೆ ಮಾಡಬೇಕಾಯಿತು. ಘಟನೆಯಲ್ಲಿ ಮನೆಯಲ್ಲಿದ್ದ ಹಾಸಿಗೆ, ಮಂಚ, ಬಟ್ಟೆ, 25 ಚೀಲ ಅಡಕೆ, ಟಿವಿ, ಸೋಫಾ, ೪ ತೊಲೆ ಚಿನ್ನದ ಸರ ಸುಟ್ಟಿವೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

