Breaking News

Breaking News

ಧಗಧಗನೆ ಹೊತ್ತಿ ಉರಿದ ಬೆಳಗಾವಿಯ ಪ್ಲಾಸ್ಟಿಕ್‌ ಫ್ಯಾಕ್ಟರಿ, ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

ಬೆಳಗಾವಿಯ ತಾಲೂಕಿನ ಹೊನಗಾ ಗ್ರಾಮದ ಕೈಗಾರಿಕಾ ಪ್ರದೇಶದಲ್ಲಿರುವ ಪ್ಲಾಸ್ಟಿಕ್‌ ಕಾರ್ಖಾನೆಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಡಾಂಗೆ ಪ್ಲಾಸ್ಟಿಕ್‌ ಕಾರ್ಖಾನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಯಂತ್ರೋಪಕರಣಗಳು ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಹಾನಿಯಾಗಿವೆ. ತಡರಾತ್ರಿಯಲ್ಲಿ ಅಗ್ನಿ ಆರಂಭವಾಗಿದೆ. ಶಾರ್ಟ್‌ ಸರ್ಕೀಟ್‌ನಿಂದ ಬೆಂಕಿ ಹೊತ್ತಿರುವ ಶಂಕೆ ವ್ಯಕ್ತವಾಗಿದೆ. ಪ್ಲಾಸ್ಟಿಕ್‌ ವಸ್ತುಗಳು ಧಗಧಗನೆ ಉರಿದು ಇಡೀ ಕಾರ್ಖಾನೆಯೇ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿಕೊಂಡಿದೆ. ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಸರಿಯಾದ ಸಮಯಕ್ಕೆ …

Read More »

ಬೆಂಗಳೂರಲ್ಲಿ ಡ್ರಂಕ್ ಅಂಡ್ ಡ್ರೈವ್‌ಗೆ ಬ್ರೇಕ್..! 575 ಜನರ ವಿರುದ್ಧ ಕೇಸ್

ಬೆಂಗಳೂರು: ನಗರದಲ್ಲಿ ಡ್ರಂಕ್ ಅಂಡ್ ಡ್ರೈವ್‌ ವಿರುದ್ಧ ಬೆಂಗಳೂರು ಸಂಚಾರ ಪೊಲೀಸರು ಕಠಿಣ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಕಳೆದ ಒಂದು ವಾರದ ಅವಧಿಯಲ್ಲಿ ನಗರದ ವಿವಿಧ ಭಾಗಗಳಲ್ಲಿ ವಿಶೇಷ ತಪಾಸಣೆ ನಡೆಸಿದ ಪೊಲೀಸರು, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮೇ 04ರಿಂದ ಮೇ 10ರವರೆಗೆ ನಡೆದ ವಿಶೇಷ ಡ್ರೈವ್‌ನಲ್ಲಿ ಒಟ್ಟು 45 ಸಾವಿರದ 272 ವಾಹನಗಳನ್ನು ಪರಿಶೀಲಿಸಲಾಗಿದೆ. ಕಾರು, ಬೈಕ್ ಸೇರಿದಂತೆ ವಿವಿಧ ಮಾದರಿಯ ವಾಹನಗಳ …

Read More »

ಕ್ಯಾಂಟೀನ್ ಹೆಸರಲ್ಲಿ ವೇಶ್ಯಾವಾಟಿಕೆ… ಪೊಲೀಸರ ದಾಳಿ, ಮೂವರ ಬಂಧನ

ಬೆಳ್ತಂಗಡಿ: ತಾಲೂಕಿನ ಕಸಬಾ ಗ್ರಾಮದ ಕೆಇಬಿ ರಸ್ತೆಯಲ್ಲಿರುವ ‘ಪವನ್ ಕ್ಯಾಂಟೀನ್’ ಮೇಲೆ ಬೆಳ್ತಂಗಡಿ ಪೊಲೀಸರು ದಿಢೀರ್ ದಾಳಿ ನಡೆಸಿದ್ದು, ಅಕ್ರಮವಾಗಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಜಾಲವನ್ನು ಪತ್ತೆಹಚ್ಚಿದ್ದಾರೆ. ದಾಳಿಯ ವೇಳೆ ಕ್ಯಾಂಟಿನ್ ಮಾಲೀಕ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕ್ಯಾಂಟೀನ್ ಮಾಲಕ ಸುಂದರ್ ಶೆಟ್ಟಿ ಹಾಗೂ ಗಿರಾಕಿಗಳಾದ ಉಸ್ಮಾನ್‌, ಹೈದರ್ ಬಂಧಿತರು. ಪವನ್‌ ಕ್ಯಾಂಟೀನ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ‌ ಎನ್ನುವ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿದಾಗ ವೇಶ್ಯಾವಾಟಿಕೆ ನಡೆಯುತ್ತಿರುವುದು …

Read More »

ಭದ್ರಾವತಿ | ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆ

ಭದ್ರಾವತಿ: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಗೆ ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿದೆ. ಪಟ್ಟಣದ ನಿವಾಸಿಯಾಗಿರುವ 22 ವರ್ಷದ ಯುವಕ 2022ರಲ್ಲಿ 15 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಸಂತ್ರಸ್ತೆಯ ಸಂಬಂಧಿಕರು ನೀಡಿದ ದೂರಿನ ಆಧಾರದಲ್ಲಿ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಆರೋಪ ಸಾಬೀತಾಗಿದ್ದರಿಂದ ನ್ಯಾಯಾಲಯ ಅಪರಾಧಿಗೆ 20 …

Read More »

ಹೂಡಿಕೆ ನೆಪದಲ್ಲಿ ಉಪನ್ಯಾಸಕನಿಗೆ 13. 92 ಲಕ್ಷ ರೂ. ವಂಚನೆ

ದಾವಣಗೆರೆ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಸರ್ಕಾರಿ ಕಾಲೇಜಿನ ಉಪನ್ಯಾಸಕರೊಬ್ಬರಿಂದ ಆನ್ಲೈನ್ ಮೂಲಕ 13.92 ಲಕ್ಷ ರೂಪಾಯಿ ಪಡೆದು ವಂಚಿಸಲಾಗಿದೆ. ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ದಾವಣಗೆರೆಯ ಭೂಮಿಕಾ ನಗರದ 52 ವರ್ಷದ ಉಪನ್ಯಾಸಕ ವಂಚನೆಗೆ ಒಳಗಾಗಿ ದೂರು ನೀಡಿದ್ದಾರೆ. ಉಪನ್ಯಾಸಕರ ಮೊಬೈಲ್ ಸಂಖ್ಯೆಯನ್ನು ಟೆಲಿಗ್ರಾಂ ಗ್ರೂಪ್ ಗೆ ಅಪರಿಚಿತರು ಸೇರಿಸಿದ್ದು, ಟ್ರೇಡಿಂಗ್ ನಲ್ಲಿ ಹಣ ಹೂಡಿಕೆ …

Read More »

ಕೆನಡಾ: ದಂಪತಿ ಹತ್ಯೆ ಕೇಸಲ್ಲಿ ಭಾರತೀಯ ಮೂಲದ ಮೂವರು ದೋಷಿ

ಕೆನಡಾದ ಅಬಾಟ್ಸ್‌ಫೋರ್ಡ್‌ನಲ್ಲಿ 2022ರಲ್ಲಿ ನಡೆದಿದ್ದ ಆರ್ನಾಲ್ಡ್ ಮತ್ತು ಜೋವಾನ್ನೆ ಡಿ ಜೊಂಗ್ ದಂಪತಿಗಳ ಕೊಲೆ ಪ್ರಕರಣದಲ್ಲಿ ಭಾರತೀಯ ಮೂಲದ ಗುರ್ಕರನ್ ಸಿಂಗ್, ಅಭಿಜೀತ್ ಸಿಂಗ್ ಮತ್ತು ಖುಷ್ವೀರ್ ತೂರ್ ಎಂಬುರನ್ನು ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿದೆ. ಹಣದ ಆಸೆಗಾಗಿ ಈ ಮೂವರು ಪೂರ್ವ ಯೋಜನೆಯಂತೆ ದಂಪತಿಯನ್ನು ಕಟ್ಟಿಹಾಕಿ ಬರ್ಬರವಾಗಿ ಕೊಂದಿದ್ದರು. ಈ ದಂಪತಿ ಮನೆಯಲ್ಲಿ ಕ್ಲೀನಿಂಗ್ ಕೆಲಸ ಮಾಡಿಕೊಂಡಿದ್ದ ಆರೋಪಿಗಳು, ಅವರಲ್ಲಿ ಹಣವಿದ್ದಿದ್ದರ ಬಗ್ಗೆ ತಿಳಿದು ಈ ಸಂಚು ರೂಪಿಸಿದ್ದರು. …

Read More »

ಹೊನ್ನಾವರ| ಚಿನ್ನದ ಸರ ಕಳವು: ಪ್ರಕರಣ ದಾಖಲು

ಹೊನ್ನಾವರ: ಗುಣವಂತೆ ಸಮೀಪದ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಅಪರಿಚತ ವ್ಯಕ್ತಿಯೊಬ್ಬ ಕಿತ್ತುಕೊಂಡು ಪರಾರಿಯಾದ ಘಟನೆ ಶುಕ್ರವಾರ ನಡೆಯಿತು. ಗುಣವಂತೆ ಶಿವನಗರ ನಿವಾಸಿ ಹನುಮಿ ಶಂಭು ಗೌಡ ಚಿನ್ನದ ಸರ ಕಳೆದುಕೊಂಡವರು. ಅಪರಿಚಿತ ವ್ಯಕ್ತಿಯೋರ್ವ ಹಿಂದಿನಿಂದ ಬಂದು ಹನುಮಿ ಗೌಡ ಅವರ ಕುತ್ತಿಗೆಗೆ ಕೈ ಹಾಕಿ 15 ಗ್ರಾಂ ತೂಕದ ಚಿನ್ನದ ಸರ ಕಿತ್ತುಕೊಂಡು ನಾಜಗಾರ ಕಡೆಗೆ ಹೋಗಿದ್ದಾನೆ’ ಎಂದು ಹನುಮಿ ಅವರ ಮಗ ದೂರು …

Read More »

ಪೊಲೀಸರಿಗೆ ತಲೆನೋವಾಗಿದ್ದ ಮನೆಗಳ್ಳ ಕೊನೆಗೂ ಅರೆಸ್ಟ್*

ಬೆಳಗಾವಿ ನಗರದ ಶಹಾಪೂರ ಭಾರತನಗರದಲ್ಲಿ ಮನೆ ಕೀಲಿ ಮುರಿದು ಒಳನುಗ್ಗಿ ಬಂಗಾರದ ಆಭರಣ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಿರುವ ಶಹಾಪೂರ ಪೊಲೀಸರು, 45.56 ಲಕ್ಷ ರೂ.ಮೌಲ್ಯದ ಚಿನ್ನಾಭರಣವನ್ನು ಶನಿವಾರ ವಶಪಡಿಸಿಕೊಂಡಿದ್ದಾರೆ. ದೆಹಲಿಯ ತಿಲಕ ನಗರದ ನಿವಾಸಿ, ಮಿಂಟು ಅಲಿಯಾಸ್ ಚಿಂಟು ಕುಟಿ ವಿಶ್ವಾಸ (52) ಬಂಧಿತ. ಬಂಧಿತನಿಂದ‌ 294.190 ಗ್ರಾಂ ತೂಕದ ಅಂದಾಜು 44,86,390 ರೂ.ಮೌಲ್ಯದ ಗಟ್ಟಿ ಬಂಗಾರ ಹಾಗೂ ಕಳ್ಳತನಕ್ಕೆ ಬಳಸಿದ್ದ 70 ಸಾವಿರ ರೂ.ಮೌಲ್ಯದ ಹೊಂಡಾ ಆಕ್ಟಿವಾ …

Read More »

*ಐಪಿಎಲ್ ಬೆಟ್ಟಿಂಗ್: ದೂರು ದಾಖಲು*

ಬೆಳಗಾವಿ ನಗರದ ತರಕಾರಿ ಮಾರುಕಟ್ಟೆ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಇಬ್ಬರಿಗೆ ಪೊಲೀಸರು ಶಾಕ್ ನೀಡಿದ್ದಾರೆ. ಮಾರ್ಕೆಟ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಜಹೀರ ಅಕ್ಷರಸಾಬ ಮುಜಾವರ(41), ಜಾವೀದ ಉಚಗಾಂವಕರ ಎಂಬ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಮೊಬೈಲ್ ಫೋನ್ ಬಳಸಿಕೊಂಡು ಹಣ ಹಚ್ಚಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್‌ ಆನ್‌ಲೈನ್ ಮೂಲಕ ಆಡುತ್ತಿದ್ದಾಗ ಮಾರ್ಕೆಟ್ ಪಿಎಸ್ ಐ ವಿಠ್ಠಲ ಹಾವನ್ನವರ ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. …

Read More »

*ಗಾಂಜಾ ಮಾರುತ್ತಿದ್ದ ಆರೋಪಿ ಬಂಧನ*

ಬೆಳಗಾವಿ ನಗರದಲ್ಲಿ ಗಾಂಜಾ ಮಾರುತ್ತದ್ದ ಆರೋಪಿಯನ್ನು ಖಡೇಬಜಾರ್ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹರ್ಷಾ ಸುನೀಲ ವರ್ಮಾ(19) ಬಂದಿತ ಆರೋಪಿ. ಬೆಳಗಾವಿ ನಗರದ ಸರ್ದಾರ್ ಗ್ರೌಂಡ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಎಂಬ ಮಾದಕ ವಸ್ತುವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುವಾಗ ಖಡೇಬಜಾರ ಠಾಣೆಯ ಇನ್ಸಪೆಕ್ಟರ್ ಮಹಾಂತೇಶ ದಾಮನ್ನವರ ಹಾಗೂ ಸಿಬ್ಬಂದಿ ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. ಪ್ಲಾಸ್ಟಿಕ್ ಪ್ಯಾಕೆಟ್ ನಲ್ಲಿದ್ದ 272.45 ಗ್ರಾಂ ನಷ್ಟು ಗಾಂಜಾ, ಮೊಬೈಲ್ ವಶಕ್ಕೆ …

Read More »